ಬೃಹತ್‌ ಗಾತ್ರ ಕಾರೋಂದು ಅಪಾರ್ಟ್‌ಮೆಂಟ್‌ನ ಹೊಂಡಕ್ಕೆ  ಬಿದ್ದ ಘಟನೆ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನಡೆದಿದೆ. ಹೊಂಡಕ್ಕೆ ಬಿದ್ದ ಕಾರನ್ನು ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಿ ಮೇಲೆತ್ತಲಾಗಿದೆ.

ಕಾರ್‌ ಅಪಾರ್ಟ್‌ಮೆಂಟ್‌ ಮೂಲೆಯಲ್ಲಿದ್ದ ಗುಂಡಿಯಲ್ಲಿ ಮುಳುಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಅಪಾರ್ಟ್‌ಮೆಂಟ್‌ ಮೇಂಟೆನೆನ್ಸ್‌ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ ನಗರದ ಘಾಟ್ಕೊಪರ್‌ ಪ್ರದೇಶದ ರಾಮ್‌ನಿವಾಸ್‌ ಆಪಾರ್ಟ್‌ಮೆಂಟ್‌ ಆವರಣದಲ್ಲಿ  ನಿಲ್ಲಿಸಿದ್ದ ಕಾರು ಕ್ಷಣಾರ್ಧದಲ್ಲಿ ಸಿಂಕ್‌ಹೋಲ್‌ಗೆ ಬಿದ್ದಿದೆ. ನಂತರ ಕ್ರೇನ್‌ ಮೂಲಕ ಹರಸಾಹಸ ಪಟ್ಟು ಕಾರನ್ನು ಮೇಲೆತ್ತಲಾಗಿದೆ.

ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಹಿಂದೆ 50 ಅಡಿ ಆಳದ ಬಾವಿಯೊಂದು ಇತ್ತು. ಅಪಾರ್ಟ್‌ಮೆಂಟ್‌ ನಿರ್ಮಾಣದ ವೇಳೆ ಬಾವಿಯ ಮೇಲೆಯೇ ಪಾರ್ಕಿಂಗ್‌ ಲಾಟ್ಅನ್ನು ನಿರ್ಮಿಸಲಾಗಿತ್ತು. ಭಾರಿ ಮಳೆಯ ಕಾರಣ ಬಾವಿಯನ್ನು ಮುಚ್ಚಿದ್ದ ಕಾಂಕ್ರೀಟ್‌ ಟಾಪಿಂಗ್‌ ಕೊಚ್ಚಿಹೋಗಿದೆ. ಆ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಬಾವಿಯೊಳಗೆ ಬಿದ್ದಿದೆ ಎಂದು ಸ್ಥಳೀಯರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಕೊರೊನಾ ನಿರ್ವಹಣೆ ಟೀಕೆಗಳಿಂದ ಬಚಾವಾಗಲು ಬಿಜೆಪಿಯ ಹೊಸ ಯೋಜನೆ

LEAVE A REPLY

Please enter your comment!
Please enter your name here