Homeಮುಖಪುಟಅಕ್ಕಿ ಕದ್ದನೆಂದು ಆದಿವಾಸಿಯ ಹತ್ಯೆ ಪ್ರಕರಣ; 14 ಮಂದಿ ಮೇಲೆ ಆರೋಪ ಸಾಬೀತು

ಅಕ್ಕಿ ಕದ್ದನೆಂದು ಆದಿವಾಸಿಯ ಹತ್ಯೆ ಪ್ರಕರಣ; 14 ಮಂದಿ ಮೇಲೆ ಆರೋಪ ಸಾಬೀತು

- Advertisement -
- Advertisement -

2018ರಲ್ಲಿ ಪಾಲಕ್ಕಾಡ್ ಜಿಲ್ಲೆಯ ಅತ್ತಪ್ಪಾಡಿ ತಾಲೂಕಿನಲ್ಲಿ ಆದಿವಾಸಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ತಪ್ಪಿತಸ್ಥರೆಂದು ಕೇರಳದ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 5 ರಂದು ಪ್ರಕಟಿಸಲಿದೆ ಎಂದು ‘ಬಾರ್‌ ಅಂಡ್‌ ಬೆಂಚ್’ ವರದಿ ಮಾಡಿದೆ.

ಸ್ಥಳೀಯ ಅಂಗಡಿಗಳಿಂದ ಅಕ್ಕಿ ಮತ್ತು ಕರಿಬೇವು ಕಳ್ಳತನ ಮಾಡಿದ್ದಾರೆ ಎಂಬ ಶಂಕೆಯ ಮೇರೆಗೆ 2018ರ ಫೆಬ್ರವರಿ 22 ರಂದು ಗುಂಪೊಂದು ಆದಿವಾಸಿ ಯುವಕ ಮಧು ಅವರನ್ನು ಹತ್ಯೆ ಮಾಡಿತ್ತು. ಆರೋಪಿಗಳು ಹತ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.

ಈ ಪ್ರಕರಣದಲ್ಲಿ ಕೇರಳ ಪೊಲೀಸರು 16 ಮಂದಿಯನ್ನು ಬಂಧಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅವರ ವಿರುದ್ಧ ಕೊಲೆ, ಅಪಹರಣ, ಹಲ್ಲೆ, ಆಯುಧಗಳಿಂದ ಗಾಯಗೊಳಿಸುವಿಕೆ, ಕಾನೂನುಬಾಹಿರ ಸಭೆ ಮತ್ತು ಆಯುಧಗಳಿಂದ ಗಲಭೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರದ ತೀರ್ಪಿನಲ್ಲಿ, ನ್ಯಾಯಾಲಯವು ಅನೀಶ್ ಮತ್ತು ಅಬ್ದುಲ್ ಕರೀಂ ಎಂಬ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದೆ. ಹಲ್ಲೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪ ಆರೋಪ ಅನೀಶ್ ಮೇಲಿದ್ದರೆ, ಮಧು ಅವರನ್ನು ಕಳ್ಳ ಎಂದು ಅಬ್ದುಲ್ ಆರೋಪಿಸಿದ್ದಾರೆ.

ಹುಸೇನ್, ಮರಕ್ಕರ್, ಶಂಶುದ್ದೀನ್, ರಾಧಾಕೃಷ್ಣನ್, ಅಬೂಬಕರ್, ಸಿದ್ದಿಕ್, ಉಬೈದ್, ನಜೀಬ್, ಜೈಜುಮೋನ್, ಸಜೀವ್, ಸತೀಶ್, ಹರೀಶ್, ಬಿಜು ಮತ್ತು ಮುನೀರ್ ಶಿಕ್ಷೆಗೊಳಗಾದವರು.

ಮೂವರು ಪ್ರಾಸಿಕ್ಯೂಷನ್ ವಕೀಲರು ಪ್ರಕರಣದಿಂದ ಹಿಂದೆ ಸರಿದಿದ್ದರಿಂದ ಪ್ರಕರಣದ ವಿಚಾರಣೆ ವಿಳಂಬವಾಯಿತು. ಪ್ರಾಸಿಕ್ಯೂಷನ್ ಮಂಡಿಸಿದ 27 ಸಾಕ್ಷಿಗಳಲ್ಲಿ ಕನಿಷ್ಠ 22 ಮಂದಿ ಪ್ರತಿಕೂಲವಾಗಿ ಮಾರ್ಪಟ್ಟಿದ್ದರು.

ನಾಲ್ಕು ವರ್ಷಗಳ ನಂತರ ವಿಚಾರಣೆ ಆರೋಪ

2018ರಲ್ಲಿ ನಡೆದ ಘಟನೆಯ ವಿಚಾರಣೆ ನಾಲ್ಕು ವರ್ಷಗಳಾದರೂ ಆರಂಭವಾಗಿಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು. “ನನ್ನ ಮಗ ಗುಂಪು ಹತ್ಯೆಗೀಡಾಗಿ ನಾಲ್ಕು ವರ್ಷಗಳಾಗಿವೆ. ಆದರೆ ವಿಚಾರಣೆ ಏಕೆ ಆರಂಭವಾಗಿಲ್ಲ ಎಂಬುದು ನಮಗೆ ತಿಳಿದಿಲ್ಲ. ನಮಗೆ ನ್ಯಾಯ ಬೇಕು” ಎಂದು ಮಧು ಅವರ ತಾಯಿ ಮಲ್ಲಿ ಹತಾಶೆಯಿಂದ ಮಾತನಾಡಿದ್ದರು.

ವಿಶೇಷ ತನಿಖಾ ತಂಡವು ಮೇ 2018ರಲ್ಲಿ 3,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. 16 ವ್ಯಕ್ತಿಗಳನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. 2022ರ ಫೆಬ್ರವರಿ 22ಕ್ಕೆ ಮಧು ಅವರನ್ನು ಬರ್ಬರವಾಗಿ ಕೊಂದು ನಾಲ್ಕು ವರ್ಷವಾಗುತ್ತದೆ. ಆದರೆ ಇನ್ನೂ ಏಕೆ ವಿಚಾರಣೆ ಆರಂಭವಾಗಿಲ್ಲ ಎಂದು ತಾಯಿ ಮಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದರು.

ಆರೋಪಿಗಳಲ್ಲಿ ಒಬ್ಬರು ಸೆಪ್ಟೆಂಬರ್ 2021ರಲ್ಲಿ ಸಿಪಿಐ(ಎಂ) ಶಾಖೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆದರೆ ಹೆಚ್ಚಿನ ವಿರೋಧಗಳು ಬಂದಿದ್ದರಿಂದ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಿಪಿಐ(ಎಂ) ನಾಯಕರು ಘಟನೆಯನ್ನು ಖಂಡಿಸಿದರೂ, ಹತ್ಯೆಯಾದ ಆದಿವಾಸಿಗೆ ನ್ಯಾಯ ದೊರಕಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹಲವರು ಟೀಕಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಪಿಎ ಹಲ್ಲೆ ಪ್ರಕರಣ: ಸ್ವಾತಿ ಮುಖದ ಮೇಲೆ ಆಂತರಿಕ ಗಾಯ; ಹೇಳಿಕೆ ಪಡೆದ...

0
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್‌ನಿಂದ ಹಲ್ಲೆಗೆ ಒಳಗಾಗಿರುವ, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮುಖದ ಮೇಲೆ ಆಂತರಿಕ ಗಾಯಗಳಾಗಿರುವುದು ವೈದ್ಯಕೀಯ...