ಕೊರೊನಾ ಬಗ್ಗೆ ಸಲಹೆ; ಮನಮೋಹನ್ ಸಿಂಗ್‌ ಅವರನ್ನು ಟ್ರೋಲ್ ಮಾಡಿ ಕೇಂದ್ರ ಸರ್ಕಾರ! | NaanuGauri

ಕೊರೊನಾ ಬಿಕ್ಕಟ್ಟಿನ ವಿರುದ್ಧ ಹೋರಾಡುವ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಐದು ಅಂಶಗಳ ಸಲಹೆಯಿರುವ ಪತ್ರ ಬರೆದಿದ್ದರು. ಈ ಪತ್ರಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಸೋಮವಾರ ಪ್ರತಿಕ್ರಿಯಿಸಿದ್ದು, ನಿಮ್ಮ ಸಲಹೆಯನ್ನು ಕಾಂಗ್ರೆಸ್‌ನ ನಾಯಕರು ಅನುಸರಿಸಿದರೆ ಇತಿಹಾಸವು ನಿಮಗೆ ಋಣಿ ಆಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಮನಮೋಹನ್ ಸಿಂಗ್ ಅವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ತಾವು ಬರೆದಿರುವ ಪತ್ರವನ್ನು ಆರೋಗ್ಯ ಸಚಿವ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ ಅವರು, “ಇಂತಹ ಅಸಾಧಾರಣ ಕಾಲದಲ್ಲಿ ನೀವು ಹೇಳಿರುವ ರಚನಾತ್ಮಕ ಸಹಕಾರ ಮತ್ತು ಮೌಲ್ಯಯುತ ಸಲಹೆಯನ್ನು ನಿಮ್ಮ ಪಕ್ಷವಾದ ಕಾಂಗ್ರೆಸ್‌ನ ನಾಯಕರು ಅನುಸರಿಸಿದರೆ ಇತಿಹಾಸವು ನಿಮಗೆ ಋಣಿಯಾಗಿರುತ್ತದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರು ಚುನಾವಣೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ, ಆಡಳಿತದ ಬಗ್ಗೆ ಅಲ್ಲ: ಸಿದ್ದರಾಮಯ್ಯ ಆಕ್ರೋಶ

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಎರಡು ಪುಟಗಳ ಪತ್ರವನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಹರ್ಷ್ ವರ್ಧನ್‌, ಅವರ ಸಲಹೆಯನ್ನು ಅವರ ಪಕ್ಷ ಅನುಸರಿಸಲು ಕೇಳಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

ಪತ್ರದಲ್ಲಿ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಸೂಚಿಸಿ ಅವರು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಮನಮೋಹನ್ ಸಿಂಗ್ ಅವರು ಲಸಿಕೆ ಕಂಡು ಹಿಡಿದ ವಿಜ್ಞಾನಿಗಳು ಮತ್ತು ತಯಾರಕರಿಗೆ ಕೃತಜ್ಞತೆಯನ್ನು ಹೇಳದೆ ಇರುವುದಕ್ಕೆ ಪತ್ರದಲ್ಲಿ ಅಘಾತ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಪತ್ರಕ್ಕೆ ಆರೋಗ್ಯ ಸಚಿವ ಹರ್ಷ್‌ವರ್ಧನ್‌ ನೀಡಿರುವ ವ್ಯಂಗ್ಯ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೇ ಕೇಂದ್ರ ವಂಚಿಸುತ್ತಿದೆ: ಕೇಜ್ರಿವಾಲ್ ಹೇಳಿಕೆ

ಗೌರವ್ ದೋಗ್ರ ಅವರು, “ನಾಚಿಕೆಗೇಡು ಮತ್ತು ಭಾವಶೂನ್ಯ ಪ್ರತಿಕ್ರಿಯೆ. ಡಾ. ಸಿಂಗ್ ನೀಡಿದ ಬೌದ್ಧಿಕ ಸಲಹೆಯನ್ನು ವಿರೋಧಿಸುವುದನ್ನು ಬಿಟ್ಟು, ಕೊರೊನಾ ಭೀತಿಯಿಂದ ಹೊರಬರುವ ಒಂದು ತಂತ್ರವನ್ನು ಮಾಡಲು ಸಾಧ್ಯವಾದರೆ ಇತಿಹಾಸವು ನಿಮಗೆ ಋಣಿಯಾಗಿರುತ್ತದೆ. ನೀವು ನಿಮ್ಮ ಅರೆಕಾಲಿಕ ವೃತ್ತಿಯಿಂದ ಹೊರಬಂದು ಆರೋಗ್ಯ ಸಚಿವರಂತೆ ವರ್ತಿಸಬಹುದೆಂದು ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿಗೆ ಪ್ರಧಾನಿಯೇ ಕಾರಣ: ‘ಮೋದಿ ರಾಜೀನಾಮೆ ನೀಡಿ’ ಟ್ವಿಟರ್‌ ಟ್ರೆಂಡಿಂಗ್‌

ಅಭಿಜಿತ್ ಅವರು, “ನೀವು ಯಾರು? ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಸಾಮರ್ಥ್ಯ ಇಲ್ಲ ಎಂದು ನಮಗೆ ತಿಳಿದಿದೆ. ನೀವು ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ ಸರ್. ಟ್ರೋಲ್‌ ಮಾಡುವುದನ್ನು ಸರ್‌ ಗೋಯಲ್ ಮತ್ತು ಮೇಡಮ್ ಇರಾನಿ ನೋಡಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಶಿವಂ ಅವರು, “ಈ ಸರ್ಕಾರದ ಸಮಸ್ಯೆ ದುರಹಂಕಾರ ಮತ್ತು ಪ್ರತಿ ಟೀಕೆಗಳನ್ನು ಎದುರಿಸುವ ಮನೋಭಾವ ಹಾಗೂ ವಿಮರ್ಶಕನನ್ನು ಅಪಖ್ಯಾತಿಗೊಳಿಸುವ ಮನೋಭಾವ. ಆದ್ದರಿಂದಲೇ ಆರ್ಥಿಕ ಮತ್ತು ಆರೋಗ್ಯದ ವಿಷಯಗಳಲ್ಲಿ ದೇಶವು ಇಂತಹ ವಿನಾಶಕಾರಿ ಸಮಯವನ್ನು ಎದುರಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ನರೇಂದ್ರ ಮೋದಿ ಯಾವುದೇ ಹೊಣೆಗಾರಿಕೆ ಇಲ್ಲದೆ ಅಧಿಕಾರವನ್ನು ಬಯಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಉಲ್ಬಣ: ದೆಹಲಿಯಲ್ಲಿ ಇಂದಿನಿಂದ ಒಂದು ವಾರ ಕರ್ಫ್ಯೂ

ವಿಡಿಯೋ ನೋಡಿ: ಮಾಧ್ಯಮಗಳು ಸೃಷ್ಟಿಸಿರುವ ಸಾವಿನ ಬಾವಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here