Homeಮುಖಪುಟಕೇಂದ್ರ ಸರ್ಕಾರದಿಂದ "ಇಮೇಜ್ ತಿದ್ದುಪಡಿ" ಅಭಿಯಾನ ಪ್ರಾರಂಭ

ಕೇಂದ್ರ ಸರ್ಕಾರದಿಂದ “ಇಮೇಜ್ ತಿದ್ದುಪಡಿ” ಅಭಿಯಾನ ಪ್ರಾರಂಭ

- Advertisement -
- Advertisement -

ವಲಸೆ ಕಾರ್ಮಿಕರ ವಿರೋಧಿ ಹಣೆಪಟ್ಟಿಯಿಂದ ಹೊರಬರಲು ಕೇಂದ್ರ ಸರ್ಕಾರ “ಇಮೇಜ್ ತಿದ್ದುಪಡಿ” ಪ್ರಯತ್ನವನ್ನು ಪ್ರಾರಂಭಿಸುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಲಾಕ್ಡೌನ್ ಮಧ್ಯೆ ಸಿಕ್ಕಿಬಿದ್ದ ಮತ್ತು ಹಸಿದ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡುತ್ತಿಲ್ಲ ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ಕೂಡಾ ಕೇಂದ್ರದ ವಿರುದ್ದ ಭಾರೀ ಟೀಕೆಗಳನ್ನು ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷವಾದ ಬಿಜೆಪಿ  2019 ರಲ್ಲಿ ಎರಡನೇ ಅವಧಿಗೆ ಜಯಗಳಿಸಿ ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ “ಇಮೇಜ್ ತಿದ್ದುಪಡಿ” ಪ್ರಯತ್ನವನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

“ಸರ್ಕಾರವು ವಿವಿಧ ವಲಯದ ಸಾಧನೆಗಳನ್ನು ಸಂಗ್ರಹಿಸುತ್ತಿದೆ … ಸಾಧನೆಗಳನ್ನು ಪ್ರಚಾರ ಮಾಡಲು ಕಿರುಪುಸ್ತಕವನ್ನು ವಿತರಿಸಲಾಗುವುದು. ಅದು ಎಲ್ಲಾ ಸಚಿವಾಲಯಗಳ ಸಾಧನೆಗಳನ್ನು ವಿಶೇಷವಾಗಿ ಬಡವರು, ಮಹಿಳೆಯರು, ರೈತರು ಮತ್ತು ಯುವಜನರಿಗೆ ಅನುಕೂಲವಾಗುವ ಪ್ರಯತ್ನಗಳನ್ನು ಎತ್ತಿ ತೋರಿಸಬೇಕು” ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ವಿಶೇಷವಾಗಿ ವಲಸಿಗರಿಗೆ ಕೇಂದ್ರವು ಏನು ಮಾಡಿದೆ ಎಂಬುದನ್ನು ಒಳಗೊಂಡಿರುವ ಕಿರುಪುಸ್ತಕವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ಮಾಡಿ ಸಾರಿಗೆಯನ್ನು ನಿಷೇಧಿಸಿರುವುದರಿಂದ, ಲಾಕ್‌ಡೌನ್‌ ಮಧ್ಯೆ ಸಾವಿರಾರು ಕಿಲೋಮೀಟರ್ ದೂರದ ತಮ್ಮ ಊರಿಗೆ ಕಾಲ್ನಡಿಗೆಯಿಂದಲೇ ಲಕ್ಷಾಂತರ ಕಾರ್ಮಿಕರು ನಡೆಯಲು ಪ್ರಾರಂಭಿಸಿದ ನಂತರ ಮೋದಿ ಸರ್ಕಾರವು ಪ್ರತಿಪಕ್ಷಗಳಿಂದ ಹೆಚ್ಚು ಟೀಕೆಗೆ ಒಳಗಾಗಿದೆ. ಅನೇಕ ಕಾರ್ಮಿಕರು ತಮ್ಮ ಊರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

 


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...