Homeಮುಖಪುಟಪುನೀತ್‌ ರಾಜ್‌ಕುಮಾರ್‌ರನ್ನು ಅವಮಾನಿಸಿದ ಚಕ್ರವರ್ತಿ ಸೂಲಿಬೆಲೆ: ಅಭಿಮಾನಿಗಳ ಆಕ್ರೋಶದ ನಂತರ ಕ್ಷಮೆಯಾಚನೆ

ಪುನೀತ್‌ ರಾಜ್‌ಕುಮಾರ್‌ರನ್ನು ಅವಮಾನಿಸಿದ ಚಕ್ರವರ್ತಿ ಸೂಲಿಬೆಲೆ: ಅಭಿಮಾನಿಗಳ ಆಕ್ರೋಶದ ನಂತರ ಕ್ಷಮೆಯಾಚನೆ

- Advertisement -
- Advertisement -

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್‌ ಕೊಲೆ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಟೀಕಿಸುವ ಭರದಲ್ಲಿ ಚಕ್ರವರ್ತಿ ಸೂಲಿಬೆಲೆ ಪುನೀತ್‌ ರಾಜ್‌ಕುಮಾರ್‌ರನ್ನು ಅವಮಾನಿಸಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತದನಂತರ ಸೂಲಿಬೆಲೆ ಕ್ಷಮೆಯಾಚಿಸಿರುವ ಪ್ರಸಂಗ ಜರುಗಿದೆ.

ಶಾಸಕ ಕೆ.ಎಸ್ ಈಶ್ವರಪ್ಪ ಮತ್ತು ಸಂಸದ ಜಿ.ಎಂ ಸಿದ್ದೇಶ್ವರರವರು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ಕೊಟ್ಟರೆ ತೊಂದರೆಯಿಲ್ಲ, ಬೇಕಾದಷ್ಟು ಜನರಿದ್ದಾರೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ ಚಕ್ರವರ್ತಿ ಸೂಲಿಬೆಲೆ ರಾಜ್ಯ ಬಿಜೆಪಿ ಸರ್ಕಾರ ಮತ್ತು ಸಿಎಂ ಬಸವರಾಜ ಬೊಮ್ಮಾಯಿಯವರ ವಿರುದ್ಧ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ ಅಪ್ಪು ಸಾವಿನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೂರು ದಿನ ಸಮಯ ಏಕೆ ನೀಡಬೇಕಿತ್ತು ಎಂಬರ್ಥದಲ್ಲಿ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ.

“ನಮ್ಮ ಫೈಲ್‌ಗಳಿಗೆ ಸಹಿ ಹಾಕುವಷ್ಟು ಸಿಎಂಗೆ ಸಮಯವಿಲ್ಲವೆ ಎಂದು ಕೆಲ ಶಾಸಕರು ದೂರುತ್ತಿದ್ದಾರೆ. ಆದರೆ ಪ್ರೀಮಿಯರ್ ಸಿನಿಮಾಗಳನ್ನು ನೋಡಿ ಕಣ್ಣೀರು ಹಾಕಲು ಅವರಿಗೆ ಸಮಯವಿದೆ. ಸಿನಿಮಾ ನಟರೊಬ್ಬರ ಸಾವಿನ ಸಂದರ್ಭದಲ್ಲಿ ಅದರಲ್ಲಿ ತೊಡಗಿಸಿಕೊಳ್ಳಲು ಮೂರು ದಿನ ಸಮಯ ನೀಡಿದ್ದರು. ಈಗಲೂ ಸಾಕಷ್ಟು ಪ್ರತಿರೋಧ ಬಾರದಿದ್ದರೆ ಅವರು ಖಂಡಿತ ವಿಕ್ರಾಂತ್ ರೋಣ ಸಿನಿಮಾ ನೋಡುತ್ತಿದ್ದರು” ಎಂದು ಸೂಲಿಬೆಲೆ ಟ್ವೀಟ್ ಮಾಡಿದ್ದರು.

ಇದಕ್ಕೆ ಅಲ್ಲಿಯೇ ಬಹಳಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೀರ್ತನ್ ಕೃಷ್ಣ ಎಂಬುವವರು, “ಆ ಸಿನಿಮಾ ನಟ ನೀನು ಸಪೋರ್ಟ್ ಮಾಡೋ ರಾಜಕೀಯ ವ್ಯಕ್ತಿ ಹಾಗು ಪಕ್ಷಕ್ಕಿಂತ ಹೆಚ್ಚು ಸೇವೆ ಜನರಿಗೆ ಸಲ್ಲಿಸಿದ್ದಾರೆ. ನಿನ್ನ ರೀತಿ ಜನರ ಮದ್ಯೆ ದ್ವೇಷ ತಂದಿಡುವ ಕೆಲಸ ಯಾವತ್ತು ಮಾಡಿಲ್ಲಾ. ಅಪ್ಪು ಹೆಸರೆತ್ತೋ ಯೋಗ್ಯತೆ ನಿನಗಿಲ್ಲ” ಎಂದು ಕಿಡಿಕಾರಿದ್ದಾರೆ.

“ಬೇಕಾದ್ರೆ ಅಯೋಗ್ಯ ಸಿಎಂನ ಏನಾದ್ರೂ ಬೈದುಕೊ. ಆದ್ರೆ ಪುನೀತ್ ರಾಜ್ಕುಮಾರ್ ಅವರನ್ನು ಕೇವಲ ಒಬ್ಬ ನಟ ಅನ್ನಬೇಡ ಮೂರ್ಖ. ಅವರು ನಮ್ಮ ರಾಜ್ಯದ ಸಾಂಸ್ಕೃತಿಕ ರಾಯಭಾರಿ. ನಿಮ್ಮ ಧರ್ಮಾಂಧತೆ ವಿಷಯಕ್ಕೆ ಅವರು ಯಾವತ್ತೂ ಸೊಪ್ಪು ಹಾಕಿಲ್ಲ. ಅಮಾಯಕರು ಸಾಯ್ತಾ ಇರೋದು ನಿನ್ನಂಥ ಅಯೋಗ್ಯರಿಂದ. ಜನರನ್ನು ಕೊಂದು ಉಳಿಸುವ ಧರ್ಮ ಯಾವುದು ಇಲ್ಲ” ಎಂದು ಜೀವಪ್ಪ ಕನ್ನಡಿಗ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪ್ಪು ಅಭಿಮಾನಿಗಳು ತಿರುಗಿಬಿದ್ದಾಗ ಎಚ್ಚೆತ್ತುಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಕ್ಷಮೆ ಯಾಚಿಸಿದ್ದಾರೆ. “ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು” ಎಂದು ಎರಡೆರಡು ಬಾರಿ ಕ್ಷಮೆ ಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಕ್ರಾಂತ್‌ ರೋಣ: ದಲಿತರನ್ನು ‘ಪಾತಕಿ’ಗಳಂತೆ ತೋರಿಸಿದ್ದು ಏತಕ್ಕಾಗಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...