Homeಮುಖಪುಟಚಂಡೀಗಢ: ಭ್ರಷ್ಟಾಚಾರ ವಿರೋಧಿ ರೈಡ್‌ ವೇಳೆ ಗುಂಡೇಟು; ಬಂಧಿತ ಐಎಎಸ್ ಅಧಿಕಾರಿ ಪುತ್ರ ನಿಧನ

ಚಂಡೀಗಢ: ಭ್ರಷ್ಟಾಚಾರ ವಿರೋಧಿ ರೈಡ್‌ ವೇಳೆ ಗುಂಡೇಟು; ಬಂಧಿತ ಐಎಎಸ್ ಅಧಿಕಾರಿ ಪುತ್ರ ನಿಧನ

- Advertisement -
- Advertisement -

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್‌‌ ಅಧಿಕಾರಿಯ ಪುತ್ರ ಶನಿವಾರ ಚಂಡೀಗಢದಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ.

ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸಂಜಯ್ ಪೊಪ್ಲಿ ಅವರ ಪುತ್ರ ಕಾರ್ತಿಕ್ ಪೊಪ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದು, ಅವರ ಕುಟುಂಬ ಇದನ್ನು ಅಲ್ಲಗಳೆದಿದೆ. ಕಾರ್ತಿಕ್‌ ಪೊಪ್ಲಿಯವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ವಿಜಿಲೆನ್ಸ್ ತಂಡವು ಸಂಜಯ್ ಪೊಪ್ಲಿ ಅವರ ನಿವಾಸದಲ್ಲಿದ್ದು, ಅವರ ಮಗ ಕಾರ್ತಿಕ್ ಪೊಪ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಚಂಡೀಗಢದ ಎಸ್‌ಎಸ್‌ಪಿ ಕುಲದೀಪ್ ಚಾಹಲ್ ಮಾಹಿತಿ ನೀಡಿದ್ದಾರೆ. ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ 27 ವರ್ಷದ ಯುವಕ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಚಹಾಲ್ ತಿಳಿಸಿದ್ದಾರೆ.

“ವಿಜಿಲೆನ್ಸ್ ತಂಡವು ವಿಚಾರಣೆಗಾಗಿ ಇಲ್ಲಿಗೆ (ಐಎಎಸ್ ಸಂಜಯ್ ಪೊಪ್ಲಿ ಅವರ ಮನೆ) ಭೇಟಿ ನೀಡಿತು. ಈ ವೇಳೆ ಗುಂಡೇಟಿನ ಶಬ್ದ ಕೇಳಿಸಿತು. ಸಂಜಯ್‌ ಮಗ ತನ್ನ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪರಿಶೀಲನೆಯ ನಂತರ ತಿಳಿಯಿತು” ಎಂದಿದ್ದಾರೆ.

ನಮಗಿದ್ದ ಒಬ್ಬ ಮಗನನ್ನು ವಿಜಿಲೆನ್ಸ್ ತಂಡ ಕೊಲೆ ಮಾಡಿದೆ ಎಂದು ಪೊಪ್ಲಿ ಅವರ ಪತ್ನಿ ದೂರಿದ್ದಾರೆ.

“ಪಂಜಾಬ್‌ ಸಿಎಂ ಭಗವಂತ್ ಮಾನ್ ನಮ್ಮ ಮಗನನ್ನು ಕೊಂದಿದ್ದಾರೆ. ವಿಜಿಲೆನ್ಸ್ ತಂಡವು ನಮ್ಮ ನಿವಾಸದಲ್ಲಿತ್ತು. ಅವರು ನನ್ನ ಮಗನನ್ನು ಕೊಂದಿದ್ದಾರೆ” ಎಂದು ಆರೋಪಿಸಿದ್ದಾರೆ.

ವಿಜಿಲೆನ್ಸ್ ತಂಡವು ಬಂಧಿತ ಅಧಿಕಾರಿಯ ಮನೆಗೆ ದಾಳಿ ನಡೆಸಿ ಹಲವಾರು ಚಿನ್ನ, ಬೆಳ್ಳಿ ನಾಣ್ಯಗಳು, ನಗದು, ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.

‘‘ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ ಮನೆಯಲ್ಲಿ 12 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಚಿನ್ನದ ಇಟ್ಟಿಗೆಗಳು, ಬಿಸ್ಕತ್ತುಗಳು, 12 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಅವರ ಮನೆಯಲ್ಲಿ ತಲಾ ಒಂದು ಕೆಜಿಯ ಮೂರು ಇಟ್ಟಿಗೆಗಳು ಪತ್ತೆಯಾಗಿವೆ. ತಲಾ 10 ಗ್ರಾಂ ತೂಕದ ಬೆಳ್ಳಿ ನಾಣ್ಯಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸ್ಟೋರ್ ರೂಮ್‌ನೊಳಗೆ ಬಚ್ಚಿಟ್ಟಿದ್ದ ಬ್ಯಾಗ್‌ನಲ್ಲಿ ಹಲವಾರು ಫೋನ್‌ಗಳು ಪತ್ತೆಯಾಗಿವೆ. ಬ್ಯಾಗ್ ವಶಪಡಿಸಿಕೊಳ್ಳುವಾಗ ಕಾರ್ತಿಕ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಸ್ಟೋರ್ ರೂಮ್‌ನಲ್ಲಿ ಬಚ್ಚಿಟ್ಟಿದ್ದ ಕಪ್ಪು ಲೆದರ್ ಬ್ಯಾಗ್‌ನಿಂದ ₹ 3.50 ಲಕ್ಷ ಮೌಲ್ಯದ 4 ಐಫೋನ್‌ಗಳು, ಸ್ಯಾಮ್‌ಸಂಗ್ ಫೋಲ್ಡರ್ ಫೋನ್, ಎರಡು ಸ್ಮಾರ್ಟ್ ವಾಚ್‌ಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

“ಕಾರ್ತೀಕ್ ಅವರ ಸಾವಿಗೂ ತಮ್ಮ ತಂಡಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ವಿಜಿಲೆನ್ಸ್‌ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಹತ್ಯೆಯಲ್ಲಿ ನಮ್ಮ ಕೈವಾಡವಿಲ್ಲ. ದೊಡ್ಡ ಪ್ರಮಾಣದಲ್ಲಿ ರೈಡ್‌ ನಡೆದಿದ್ದರಿಂದ ಅವರು ಒತ್ತಡದಲ್ಲಿದ್ದರು. ನಾವು ನಮ್ಮ ಕಚೇರಿಗೆ ಮರಳಿದ ನಂತರವೇ ಸಾವಿನ ಬಗ್ಗೆ ನಮಗೆ ತಿಳಿಯಿತು” ಎಂದು ವಿಜಿಲೆನ್ಸ್‌ನ ಡಿಎಸ್ಪಿ ಅಜಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿರಿ: ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಕಾರ್ತಿಕ್ ಸಾವಿನ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಆಘಾತಕಾರಿ! ತಮ್ಮ ಮಗನನ್ನು ದುರಂತದ ಸಂದರ್ಭದಲ್ಲಿ ಸಂಜಯ್ ಪೊಪ್ಲಿ ಕಳೆದುಕೊಂಡಿದ್ದಾರೆ. ಸಂತಾಪಗಳು. ಘಟನೆಯನ್ನು ಕ್ಷಮಿಸಲಾಗದು” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪಂಜಾಬ್‌ನ ನವನ್‌ಶಹರ್‌ನಲ್ಲಿ ಒಳಚರಂಡಿ ಪೈಪ್‌ಲೈನ್ ಹಾಕುವ ಟೆಂಡರ್‌ಗಳನ್ನು ತೆರವುಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಂಜಯ್ ಪೊಪ್ಲಿ ಅವರನ್ನು ಬಂಧಿಸಲಾಯಿತು. ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...