Homeಮುಖಪುಟಛತ್ತೀಸ್‌ಗಢ: ಶಂಕಿತ ಮಾವೋವಾದಿಗಳಿಂದ ಬಿಜೆಪಿ ಮುಖಂಡನ ಹತ್ಯೆ

ಛತ್ತೀಸ್‌ಗಢ: ಶಂಕಿತ ಮಾವೋವಾದಿಗಳಿಂದ ಬಿಜೆಪಿ ಮುಖಂಡನ ಹತ್ಯೆ

- Advertisement -
- Advertisement -

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಶಂಕಿತ ಮಾವೋವಾದಿಗಳು ಶುಕ್ರವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ನಾರಾಯಣಪುರ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಗರ್ ಸಾಹು ಅವರ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಛೋಟೆಡೊಂಗರ್ ಗ್ರಾಮದ ಸಾಹು ಅವರ ಮನೆಯಲ್ಲಿ ಗುಂಡು ಹಾರಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ನಂತರ ನಾರಾಯಣಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾಹು ಮೃತಪಟ್ಟಿದ್ದಾರೆ.

ಒಂದು ವಾರದ ಅಂತರದಲ್ಲಿ ರಾಜ್ಯದಲ್ಲಿ ಬಿಜೆಪಿ ಮುಖಂಡರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಅವಪಲ್ಲಿ ಪ್ರದೇಶದ ಬಿಜೆಪಿ ವಿಭಾಗೀಯ ಮುಖ್ಯಸ್ಥ ನೀಲಕಂಠ ಕಾಕೆಮ್ ಅವರನ್ನು ಮೂವರು ಮಾವೋವಾದಿಗಳು ಫೆಬ್ರವರಿ 5ರಂದು ಕೊಂದಿದ್ದರು.

ಸಾಹು ಹತ್ಯೆಯ ಹಿಂದೆ ಮಾವೋವಾದಿಗಳ ಸಣ್ಣ ಗುಂಪೊಂದು ಇರುವ ಶಂಕೆ ಇದೆ ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ.

“ನಾವು ಎಲ್ಲಾ ದೃಷ್ಟಿಕೋನಗಳಿಂದ ಹತ್ಯೆಯನ್ನು ತನಿಖೆ ಮಾಡುತ್ತಿದ್ದೇವೆ. ಸಮೀಪದ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ” ಎಂದು ಇನ್ಸ್‌ಪೆಕ್ಟರ್ ಜನರಲ್ (ಬಸ್ತರ್ ರೇಂಜ್) ಸುಂದರರಾಜ್ ಪಿ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಭಯವನ್ನು ಸೃಷ್ಟಿಸಲು ಮಾವೋವಾದಿಗಳು ಈ ರೀತಿ ಪ್ರಯತ್ನಿಸುತ್ತಿದ್ದಾರೆ ಎಂದು ಸುಂದರರಾಜ್ ಆರೋಪಿಸಿದ್ದಾರೆ.

ಇದನ್ನೂ ಓದಿರಿ: ಸಂವಿಧಾನ ಶಿಲ್ಪಿಗೆ ಅವಹೇಳನ; ಸಮಾಜ ಕಲ್ಯಾಣ ಇಲಾಖೆ ದೂರಿನನ್ವಯ ಜೈನ್ ಕಾಲೇಜಿನ ವಿರುದ್ಧ ಎಫ್‌ಐಆರ್‌

“ಈ ಘಟನೆಯು ದುರದೃಷ್ಟಕರವಾಗಿದೆ, ಆದರೆ ನಾವು ಮೊಯಿಸ್ಟ್‌ಗಳ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಬೇಕು. ಮಾವೋವಾದಿಗಳ ಹಿನ್ನೆಲೆಯನ್ನು ನೋಡಿದರೆ ಅವರು ಭಯದ ಮನೋವಿಕಾರವನ್ನು ಸೃಷ್ಟಿಸಲು ಇಂತಹ ಘಟನೆಗಳಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುತ್ತಾರೆ. ಇದು ಶಕ್ತಿ ಪ್ರದರ್ಶನದ ಕೆಲಸವಲ್ಲ. ಆದರೆ ತಮ್ಮ ಸೋಲನ್ನು ಮುಚ್ಚಿಕೊಳ್ಳುವ ಕ್ರಿಯೆ ಇದಾಗಿದೆ” ಎಂದು ಹೇಳಿದ್ದಾರೆ.

ಇದರ ನಡುವೆ ಬಸ್ತಾರ್‌ಗೆ ಒಂದು ದಿನದ ಪ್ರವಾಸ ಬಂದಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ಸಾಹು ಅವರ ಮನೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬವನ್ನು ಸಂತೈಸಿದರು.

“ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ನಕ್ಸಲ್ ದಾಳಿಗಳು ನಿರಂತರವಾಗಿ ಹೆಚ್ಚುತ್ತಿವೆ. ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮಾವೋವಾದಿಗಳೊಂದಿಗೆ ಪ್ರಜಾಸತ್ತಾತ್ಮಕವಾಗಿ ಸೈದ್ಧಾಂತಿಕ ಯುದ್ಧವನ್ನು ಬಿಜೆಪಿ ನಡೆಸುತ್ತಿದೆ. ಅದರಲ್ಲಿ ಬಿಜೆಪಿ ಗೆಲ್ಲಲಿದೆ” ಎಂದಿದ್ದಾರೆ.

ಈ ವರ್ಷದ ಕೊನೆಯಲ್ಲಿ ಛತ್ತೀಸ್‌ಗಢದಲ್ಲಿ ಚುನಾವಣೆ ನಡೆಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...