Homeಅಂತರಾಷ್ಟ್ರೀಯಚೆಂಗ್ಡುವಿನ ಅಮೇರಿಕಾದ ರಾಯಭಾರಿಯ ಕಛೇರಿ ಮುಚ್ಚಿಸಿದ ಚೀನಾ!

ಚೆಂಗ್ಡುವಿನ ಅಮೇರಿಕಾದ ರಾಯಭಾರಿಯ ಕಛೇರಿ ಮುಚ್ಚಿಸಿದ ಚೀನಾ!

ಬೀಜಿಂಗ್ ಅಮೇರಿಕಾ ಅಧಿಕಾರಿಗಳಿಗೆ 72 ಗಂಟೆಗಳ ಒಳಗೆ ತನ್ನ ಆವರಣವನ್ನು ಖಾಲಿ ಮಾಡುವಂತೆ ಆದೇಶಿಸಿದ ನಂತರ ಇದು ಸಂಭವಿಸಿದೆ.

- Advertisement -
- Advertisement -

ಚೀನಾದ ಚೆಂಗ್ಡುನಲ್ಲಿರುವ ಅಮೇರಿಕಾದ ರಾಯಭಾರ ಕಛೇರಿಯನ್ನು ಸೋಮವಾರ ಬೆಳಿಗ್ಗೆ ಮುಚ್ಚಲಾಗಿದ್ದು, ಅಮೆರಿಕಾ ಧ್ವಜವನ್ನು ಕೆಳಕ್ಕೆ ಇಳಿಸಲಾಯಿತು ಎಂದು ಎಪಿ ವರದಿ ಮಾಡಿದೆ.

ಬೀಜಿಂಗ್ ಅಮೇರಿಕಾ ಅಧಿಕಾರಿಗಳಿಗೆ 72 ಗಂಟೆಗಳ ಒಳಗೆ ತನ್ನ ಆವರಣವನ್ನು ಖಾಲಿ ಮಾಡುವಂತೆ ಆದೇಶಿಸಿದ ನಂತರ ಇದು ಸಂಭವಿಸಿದೆ. ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಚೀನೀ ರಾಯಭಾರ ಕಛೇರಿಯನ್ನು ಮುಚ್ಚಿಸಿದ ಅಮೆರಿಕದ ಆದೇಶಕ್ಕೆ ಪ್ರತೀಕಾರವಾಗಿ ಚೀನಾ ಈ ಕ್ರಮ ಕೈಗೊಂಡಿದೆ.

ಅಮೆರಿಕದ ಧ್ವಜವನ್ನು ಸ್ಥಳೀಯ ಸಮಯ ಸೋಮವಾರ ಬೆಳಿಗ್ಗೆ 6.24 ಕ್ಕೆ (ಭಾರತೀಯ ಪ್ರಮಾಣಿತ ಸಮಯ ಬೆಳಿಗ್ಗೆ 3.54) ಇಳಿಸಲಾಯಿತು.

ಅಮೆರಿಕದ ಅಧಿಕಾರಿಗಳಿಗೆ ಹೊರಹೋಗುವಂತೆ ಬೀಜಿಂಗ್ ಆದೇಶ ಹೊರಡಿಸಿದ ಕೂಡಲೇ ಕಛೇರಿಯ ಹೊರಗೆ ಹಬ್ಬದ ವಾತಾವರಣವಿತ್ತು. ಫೋಟೋಗಳು, ವೀಡಿಯೊಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ಜನರು ಚೀನಾದ ದೂರದ ಸ್ಥಳಗಳಿಂದ ಬಂದಿದ್ದರು.

ಕಛೇರಿ ಬಳಿಯ ಐಸ್ ಜೆಲ್ಲಿ ಸ್ಟಾಲ್ ಮಾಲೀಕರೊಬ್ಬರು ಮಾರಾಟ ದ್ವಿಗುಣಗೊಂಡಿದೆ ಎಂದು ಹೇಳಿದರು. ನಾನು ಈಗ ಸುಮಾರು 300 ಬೌಲ್ ಐಸ್ ಜೆಲ್ಲಿಯನ್ನು ಮಾರಾಟ ಮಾಡಬಹುದು ಎಂದು ಟ್ಯಾಂಗ್ ಹೇಳಿದರು. ಜನರು ಈ ಘಟನೆಯ ಭಾಗವಾಗಲು ಕ್ಸಿಯಾನ್ [ವಾಯುವ್ಯದಲ್ಲಿ] ಅಥವಾ ಹೈನಾನ್ [ಚೀನಾದ ದಕ್ಷಿಣದ ದ್ವೀಪ] ದಿಂದ ಬಂದಿದ್ದಾರೆ.

ವಾಷಿಂಗ್ಟನ್ ಮತ್ತು ಬೀಜಿಂಗ್ ಕಳೆದ ಕೆಲವು ವರ್ಷಗಳಿಂದ ‘ವ್ಯಾಪಾರ ಯುದ್ಧದಲ್ಲಿ’ ತೊಡಗಿವೆ. ಕೊರೊನಾ ಸಾಂಕ್ರಾಮಿಕದ ಮಧ್ಯೆ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹದಗೆಡುತ್ತಲೇ ಇದೆ. ಏಕೆಂದರೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈರಸ್ ಹರಡಲು ಬೀಜಿಂಗ್ ಕಾರಣ ಎಂದು ಆರೋಪಿಸಿದ್ದಾರೆ. ಅರೆ ಸ್ವಾಯತ್ತ ಹಾಂಕಾಂಗ್‌ನಲ್ಲಿ ಕಠಿಣ ನಿಯಂತ್ರಣಗಳನ್ನು ಜಾರಿಗೆ ತರಲು ಬೀಜಿಂಗ್ ನಡೆಸುತ್ತಿರುವ ಕ್ರಮದ ಬಗ್ಗೆ ಯುಎಸ್ ಮತ್ತು ಚೀನಾ ಕೂಡ ಘರ್ಷಣೆ ನಡೆಸಿವೆ.

ಜುಲೈ 24 ರಂದು ಚೀನಾ, ಚೆಂಗ್ಡು ನಲ್ಲಿರುವ ರಾಯಭಾರ ಕಛೇರಿಯನ್ನು ಮುಚ್ಚುವುದು ಅಗತ್ಯ ಎಂದು ಹೇಳಿದೆ. “ಚೀನೀ-ಯುಎಸ್ ಸಂಬಂಧಗಳಲ್ಲಿನ ಪ್ರಸ್ತುತ ಪರಿಸ್ಥಿತಿ ನೋಡಲು ಇಚ್ಛೆಯಿಲ್ಲ” ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. “ಈ ಎಲ್ಲದಕ್ಕೂ ಅಮೇರಿಕಾ ಕಾರಣವಾಗಿದೆ. ಅಮೇರಿಕಾ ತನ್ನ ತಪ್ಪು ನಿರ್ಧಾರವನ್ನು [ಹೂಸ್ಟನ್ ಕಛೇರಿಯನ್ನು ಮುಚ್ಚಿದ] ತಕ್ಷಣ ಹಿಂತೆಗೆದುಕೊಳ್ಳುವಂತೆ ನಾವು ಮತ್ತೊಮ್ಮೆ ಒತ್ತಾಯಿಸುತ್ತೇವೆ. ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಅದು ತಿಳಿಸಿದೆ.

ಅಮೆರಿಕಾದ ಬೌದ್ಧಿಕ ಆಸ್ತಿ ಮತ್ತು ಮಾಹಿತಿಯನ್ನು ರಕ್ಷಿಸಲು ಹೂಸ್ಟನ್‌ನಲ್ಲಿರುವ ಚೀನೀ ರಾಯಭಾರ ಕಛೇರಿಯನ್ನು ಮುಚ್ಚಿರುವುದಾಗಿ ಅಲ್ಲಿನ ಸರ್ಕಾರ ಹೇಳಿದ್ದು, ಈ ಕಟ್ಟಡವನ್ನು ಟೆಕ್ಸಾಸ್‌ನ ಸೌಲಭ್ಯಗಳಿಂದ ಡೇಟಾವನ್ನು ಕದಿಯಲು ಪ್ರಯತ್ನಿಸಿದ “ಗೂಢಾಚಾರರ ಗೂಡು” ಎಂದು ಕರೆದಿದೆ.


ಇದನ್ನೂ ಓದಿ: ಭಾರತದ ಕೊರೊನಾ ಸಾವಿನ ಪ್ರಮಾಣ ವಿಶ್ವಕ್ಕಿಂತ ಕಡಿಮೆ; 8.8 ಲಕ್ಷ ಸೋಂಕಿತರು ಗುಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...