Homeಅಂತರಾಷ್ಟ್ರೀಯಕಾಶ್ಮೀರದಲ್ಲಿ ಇಂದು ಕರ್ಫ್ಯೂ ಸರಾಗ: ಸ್ವಲ್ಪಮಟ್ಟಿಗೆ ಫೋನ್, ನೆಟ್ ಸೇವೆ ಆರಂಭ

ಕಾಶ್ಮೀರದಲ್ಲಿ ಇಂದು ಕರ್ಫ್ಯೂ ಸರಾಗ: ಸ್ವಲ್ಪಮಟ್ಟಿಗೆ ಫೋನ್, ನೆಟ್ ಸೇವೆ ಆರಂಭ

- Advertisement -
- Advertisement -

ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಐದು ದಿನಗಳ ನಂತರ, ಡಿಜಿಪಿ ಎಸ್ಪಿ ವೈದ್ ಕಾಶ್ಮೀರದ ಕಣಿವೆಯಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಕರ್ಫ್ಯೂ ಸರಾಗಗೊಳಿಸುವಂತೆ ಹೇಳಿದ್ದಾರೆ. ಫೋನ್ ಸೇವೆಗಳು ಮತ್ತು ಇಂಟರ್ನೆಟ್ ಅನ್ನು ಈದ್ ಹಬ್ಬಕ್ಕಾಗಿ ಸ್ವಲ್ಪ ಮಟ್ಟಿಗೆ ಪುನಃಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಎಲ್ಲ ಸರ್ಕಾರಿ ನೌಕರರು ತಮ್ಮ ಕರ್ತವ್ಯಕ್ಕೆ ತಕ್ಷಣ ಜಾರಿಗೆ ಬರುವಂತೆ ಹಾಜರಾಗಿ ವರದಿ ನೀಡುವಂತೆ ಗುರುವಾರ ಸೂಚಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರೂ ಕರ್ತಾರ್‌ಪುರ ಕಾರಿಡಾರ್‌ನ ಕೆಲಸ ಮುಂದುವರಿಯಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.

ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದಿಂದಾಗಿ  ಇದುವರೆಗೂ ಜಮ್ಮು ಕಾಶ್ಮೀರದ ಸುಮಾರು 500 ಕ್ಕೂ ಹೆಚ್ಚು ರಾಜಕೀಯ ಕಾರ್ಯಕರ್ತರು ಮತ್ತು ನಾಯಕರನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ಆಗಸ್ಟ್ 8 ರ ಶುಕ್ರವಾರದಂದು ಚೀನಾಗೆ ತೆರಳಿದ್ದಾರೆ. ಇಂಡೋ-ಪಾಕ್ ಉದ್ವಿಗ್ನತೆಯ ಕುರಿತು, ಚೀನಾದ ನಡೆಯ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ಭಾರತವು ತನ್ನ ಅಸಂವಿಧಾನಿಕ ಕ್ರಮಗಳಿಂದ ಪ್ರಾದೇಶಿಕ ಶಾಂತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವು ಚೀನಾದ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂದು ಚೀನಾ ಭೇಟಿಯನ್ನು ಪ್ರಾರಂಭಿಸುವ ಮೊದಲು ಖುರೇಷಿ ಮಾಧ್ಯಮಗಳಿಗೆ ತಿಳಿಸಿದರು ಎಂದು ಕ್ವಿಂಟ್ ವರದಿ ಮಾಡಿದೆ.

“ಚೀನಾ ಪಾಕಿಸ್ತಾನಕ್ಕೆ ಸ್ನೇಹಿತ ಮಾತ್ರವಲ್ಲ, ಈ ಪ್ರದೇಶದ ಪ್ರಮುಖ ದೇಶವೂ ಆಗಿದೆ … ಕಾಶ್ಮೀರದಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಅಸಂವಿಧಾನಿಕ ಕ್ರಮಗಳ ಬಗ್ಗೆ ನಾನು ಚೀನಾದ ನಾಯಕರಿಗೆ ತಿಳಿಸುತ್ತೇನೆ. ಒಟ್ಟು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ನಾನು ಅವರಿಗೆ ತಿಳಿಸುತ್ತೇನೆ …, “ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...