Homeಮುಖಪುಟನರ್ಸಿಂಗ್ ಎಂದರೆ ಹೆಚ್ಚು ಕೌಶಲದ, ಕಡಿಮೆ ಸಂಬಳದ ಕೆಲಸ: ಪಾಂಚಾಲಿ ರೇ

ನರ್ಸಿಂಗ್ ಎಂದರೆ ಹೆಚ್ಚು ಕೌಶಲದ, ಕಡಿಮೆ ಸಂಬಳದ ಕೆಲಸ: ಪಾಂಚಾಲಿ ರೇ

ಅತ್ಯಂತ ಹೆಚ್ಚಿನ ಕೌಶಲ, ಸಹನೆ ಮತ್ತು ಅನುಕಂಪ ಅಗತ್ಯವಿರುವ ಉದ್ಯೋಗವಾಗಿದ್ದರೂ ಕೂಡಾ ಇಂದು ನರ್ಸಿಂಗ್ ಎಂಬುದು ಕಡಿಮೆ ಸಂಬಳದ, ಕಳಂಕ ಹಚ್ಚಲಾಗಿರುವ ಉದ್ಯೋಗವಾಗಿದೆ. ನರ್ಸಿಂಗ್ ಉದ್ಯೋಗ ಕ್ಷೇತ್ರಕ್ಕೆ ಇಂದು ಅಂಟಿರುವ ಲಿಂಗ ಮತ್ತು ಜಾತಿ ರಾಜಕೀಯದ ಮೇಲೆ ಒಂದು ನೋಟ ಇಲ್ಲಿದೆ.

- Advertisement -
- Advertisement -

ಇಂದು ಆರೋಗ್ಯ ಸೇವೆಯ ಮುಂಚೂಣಿ ಕಾರ್ಯಕರ್ತರು ಕೊರೋನ ಪಿಡುಗಿನ ಬಹಳಷ್ಟು ಹೊರೆಯನ್ನು ಹೊರುತ್ತಿರುವಾಲೇ, ಅತ್ಯಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೆ ಮತ್ತು ಸಾರ್ವಜನಿಕ ಗಮನದಿಂದ ಹೊರಗೆಯೇ ಉಳಿದಿದ್ದಾರೆ. “ಪಾಲಿಟಿಕ್ಸ್ ಆಫ್ ಪ್ರಿಕ್ಯಾರಿಟಿ” ಎಂಬ ಪುಸ್ತಕವು ಕಾರ್ಮಿಕ ರಾಜಕಾರಣ ಮತ್ತು ಲಿಂಗತ್ವದ ದೃಷ್ಟಿಯಿಂದ ನರ್ಸಿಂಗ್ ಕುರಿತು ಅಧ್ಯಯನ ನಡೆಸುತ್ತದೆ. ಆರೋಗ್ಯ ಸೇವೆಗೆ ಅನಿವಾರ್ಯ ಎನಿಸಿರುವುದರ ಹೊರತಾಗಿಯೂ, ಮಹಿಳೆಯರೇ ಮುಖ್ಯವಾಗಿ ಇರುವ ಒಂದು ಕಾಯಕವು ಹೇಗೆ “ಗೌರವಾರ್ಹತೆ”ಯ ಅಂಚಿನಲ್ಲಿಯೇ ಏಕೆ ಹೆಣಗಾಡುತ್ತಿದೆ ಎಂಬುದರ ಕುರಿತು ಈ ಪುಸ್ತಕವು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ. ಈ ವಿಷಯದ ಕುರಿತು ಚರ್ಚೆ ನಡೆಸುತ್ತಾ, ದಿಲ್ಲಿಯಲ್ಲಿ ಸ್ವತಂತ್ರ ಸಂಶೋಧಕಿಯಾಗಿರುವ ಲೇಖಕಿ ಪಾಂಚಾಲಿ ರೇ ಅವರು ನರ್ಸಿಂಗ್ ವೃತ್ತಿಯು ಎರಡೂ ಲಿಂಗಗಳನ್ನು ಸಮಾನವಾಗಿ ಗೌರವಿಸುವ ಮಿಶ್ರ ವೃತ್ತಿಯಾಗಲು ಸಾಧ್ಯವಿಲ್ಲವೇ ಎನ್ನುತ್ತಾರೆ. ಕೆಲವು ಪ್ರಶ್ನೆಗಳ ಮೂಲಕ ಪುಸ್ತಕವು ಏನನ್ನು ಚರ್ಚಿಸುತ್ತದೆ ನೋಡೋಣ ಬನ್ನಿ.

ನರ್ಸಿಂಗ್ ವೃತ್ತಿಯು ವಸಾಹತುಶಾಹಿ ಬೇರುಗಳನ್ನು ಹೊಂದಿದೆ. ನರ್ಸಿಂಗ್ ವೃತ್ತಿಯ “ನೈಟಿಂಗೇಲ್” ಪರಿಕಲ್ಪನೆಗೆ ಬ್ರಿಟಿಷ್ ರಾಜ್ ಹೇಗೆ “ದಾಯಿ” ಅಥವಾ “ದಾದಿ”ಯ ಪಾತ್ರವನ್ನು ಸೇರಿಸಿತು?

ವಸಾಹತುಶಾಹಿ ಭಾರತದಲ್ಲಿ ಪಾಶ್ಚಾತ್ಯ ವೈದ್ಯಕೀಯ ಪದ್ಧತಿ ಬೆಳೆಯುತ್ತಿದ್ದಂತೆ ತರಬೇತಿ ಹೊಂದಿದ ನರ್ಸ್‌ಗಳಿಗೆ ಬೇಡಿಕೆ ಹೆಚ್ಚಿತು. ಮಧ್ಯಮ ವರ್ಗದ, ಮೇಲ್ಜಾತಿಯ ಪುರುಷರು ಮತ್ತು ಕೆಲವು ಮಹಿಳೆಯರು ಪಾಶ್ಚಾತ್ಯ ಜೌಷಧಿ ಪದ್ಧತಿಯಲ್ಲಿ ತರಬೇತಿ ಪಡೆದು ವೈದ್ಯರಾಗಲು ಮುಂದೆ ಬಂದರೂ, ನರ್ಸಿಂಗ್ ಕ್ಷೇತ್ರವನ್ನು ಕೇಳುವವರೇ ಇರಲಿಲ್ಲ. ಐತಿಹಾಸಿಕವಾಗಿ ಭಾರತೀಯ ವೈದ್ಯಕೀಯದಲ್ಲಿ ಹೆಚ್ಚಿನ ಮಹಿಳೆಯರು ವಂಶಪಾರಂಪರ್ಯವಾಗಿ ಕೆಳಜಾತಿಯಿಂದ ಬಂದವರಾಗಿದ್ದು, ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಹೆರಿಗೆ, ಹೆರಿಗೆ ನಂತರದ ಶುಶ್ರೂಷೆ, ಗರ್ಭಪಾತ, ಗರ್ಭಧಾರಣೆಯ ಸಮಸ್ಯೆಗಳ ಜೊತೆ ಸಂಬಂಧ ಹೊಂದಿದ್ದಾರೆ (ಸೂಲಗಿತ್ತಿ, ದಾದಿ ಇತ್ಯಾದಿ). ತರಬೇತಿ ಹೊಂದಿದ ಶುಶ್ರೂಷಕಿಯರು ಭಾರತೀಯರಾಗಿರಲಿ, ಐರೋಪ್ಯರೇ ಇರಲಿ, ರೋಗಿಯ ಬದಿಯಲ್ಲಿದ್ದು ಸೇವೆ ಮಾಡಲು ನಿರಾಕರಿಸಿದರು; ಏಕೆಂದರೆ ಅದು ಅವರನ್ನು ದಾದಿಯರಿಗೆ ಸಮನಾಗಿಸುತ್ತದೆ ಎಂಬ ಭಾವನೆ. ಆದುದರಿಂದ ಪಾರಂಪರಿಕ ದಾದಿಯರ ಜ್ಞಾನವನ್ನು ಕೂಡಾ ಹಳೆ ಕಾಲದ ಅನಾಗರಿಕ ಪದ್ಧತಿಗಳೆಂದು ಹಣೆಪಟ್ಟಿ ಹಚ್ಚಿ ಹೀಗೆಳೆಯಲಾಯಿತು. ಆದುದರಿಂದ ಇಂತಹಾ “ದಾದಿ”ಯರನ್ನು ವಸಾಹತುಶಾಹಿ ಆಸ್ಪತ್ರೆಗಳಲ್ಲಿ ತರಬೇತಿ ಹೊಂದಿದ ಶುಶ್ರೂಷಕಿಯರಿಗೆ, ಕೆಳಮಟ್ಟದ ಸಹಾಯಕಿಯರಾಗಿ, ಅವರು ಮಾಡಲು ನಿರಾಕರಿಸುವ ಕೆಲಸಗಳನ್ನು ಮಾಡುವ ಸಲುವಾಗಿ ಸೇರಿಸಿಕೊಳ್ಳಲಾಯಿತು.

ವೈದ್ಯಕೀಯ ವೃತ್ತಿಯಲ್ಲಿ ಲಿಂಗಾಧರಿತ ದ್ವಂದ್ವತೆಯು ಹೇಗೆ ಕೆಲಸ ಮಾಡುತ್ತಿದೆ ಎಂದು ಹೇಳಬಲ್ಲಿರಾ?

2019ರ ವಿಶ್ವಸಂಸ್ಥೆಯ ವರದಿಯೊಂದು ಪ್ರಪಂಚದಾದ್ಯಂತದ ದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿರುವ ಲಿಂಗ ಅಸಮಾನತೆಯನ್ನು ದಾಖಲಿಸಿದೆ. ಹೆಚ್ಚಿನ ಫಿಸಿಶಿಯನ್‌ಗಳು, ದಂತವೈದ್ಯರು ಮತ್ತು ಫಾರ್ಮಾಸಿಸ್ಟ್‌ಗಳು ಪುರುಷರಾಗಿದ್ದರೆ, ಶುಶ್ರೂಷಕಿಯರು ಮತ್ತು ಸೂಲಗಿತ್ತಿಯರಲ್ಲಿ ಮಹಿಳೆಯರು ಮಿತಿಮೀರಿದ ಪ್ರಾತಿನಿಧ್ಯ ಹೊಂದಿದ್ದಾರೆ. ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಪುರುಷರಿಗಿಂತ ಸರಾಸರಿಯಾಗಿ 28 ಶೇಕಡಾದಷ್ಟು ಕಡಿಮೆ ಗಳಿಕೆ ಮಾಡುತ್ತಾರೆ. ಆರೋಗ್ಯ ಸೇವಾ ಕ್ಷೇತ್ರದ ಲಿಂಗ ಸಂರಚನೆಯು ಪುರುಷ/ ಸ್ತ್ರೀ, ಉಪಶಮನ/ ಶುಶ್ರೂಷೆ, ವಿಜ್ಞಾನ/ ಪರಿಣಾಮ ಹೀಗೆ ಹಲವು ಯುಗಳ ಅಥವಾ ದ್ವಂದ್ವಗಳನ್ನು ಹೊಂದಿದೆ ಮತ್ತು ಇದು ವೃತ್ತಿ ಪ್ರತ್ಯೇಕತೆಗಳಿಗೆ ಕಾರಣವಾಗಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕಿಯರ ಸ್ಥಾನವನ್ನು ವೈದ್ಯರಿಗಿಂತ ಕೆಳಗಿನ ಮಟ್ಟದಲ್ಲಿ ಸ್ಥಿರಗೊಳಿಸುವ ತಾರತಮ್ಯದ ವ್ಯವಸ್ಥೆಗೆ ಕಾರಣವಾಗಿದೆ.

ಶುಶ್ರೂಷಕಿಯರ ಕೆಲಸವನ್ನು ಗುಣಪಡಿಸುವುದಕ್ಕಿಂತ ಹೆಚ್ಚಾಗಿ, ಸೇವೆ ಮಾಡುವುದು ಅಥವಾ ಸ್ತ್ರೀ ಗುಣಸ್ವಭಾವಗಳ ಮಾಮೂಲಿ ಕಲ್ಪನೆಯ ವಿಸ್ತರಣೆ ಎಂಬಂತೆ ಕಾಣಲಾಗುತ್ತಿದೆ. ಆದುದರಿಂದಲೇ ವೈದ್ಯರು ಮತ್ತು ಶುಶ್ರೂಷಕಿಯರ ಸಂಬಂಧಗಳನ್ನು ಪರಸ್ಪರ ಸಹಕಾರಿಗಳು ಅಥವಾ ಸಮಾನರು ಎಂದು ಪರಿಗಣಿಸುವುದಕ್ಕೆ ಬರಲಾಗಿ ಮೇಲಿನವರು ಮತ್ತು ಅಧೀನರು ಎಂದು ಪರಿಗಣಿಸುವಂತಾಗಿದೆ. ಇದು ಲಿಂಗಾಧರಿತ ವೇತನ ತಾರತಮ್ಯ ಮತ್ತು ವಿಷಮ ಕೆಲಸದ ಪರಿಸ್ಥಿತಿಯಲ್ಲಿ ಕಂಡುಬರುತ್ತದೆ.

ಭಾರತದಲ್ಲಿ ನರ್ಸಿಂಗ್ ವೃತ್ತಿಯನ್ನು ಉದಾತ್ತ, ಆಧ್ಯಾತ್ಮಿಕ ವೃತ್ತಿ ಎಂದು ಬಿಂಬಿಸುವ ಯತ್ನಗಳ ಹೊರತಾಗಿಯೂ, ಭಾರತದಲ್ಲಿ ಅದು ಕೆಳಮಟ್ಟದ, ಹೆಂಗಸರು ಮಾಡುವ, ಮನೆಗೆಲಸ ಎಂಬಂತೆ ಉಳಿದುಬಿಟ್ಟಿದೆ. ಅದು ಏಕೆ?

ಸಾಂಪ್ರದಾಯಿಕವಾಗಿ ಹಿಂದೂ ಬ್ರಾಹ್ಮಣವಾದಿ ಸಮಾಜದಲ್ಲಿ ನರ್ಸಿಂಗನ್ನು ಮನೆಗೆಲಸದಾಳಿಗೆ ಸಮಾನ ಎಂದು ಪರಿಗಣಿಸಲಾಗಿದೆ. ಏಕೆಂದರೆ, ದಾದಿಯರ ಉದ್ಯೋಗವು ಜಾತ್ಯಾಧರಿತವಾಗಿದ್ದು, ಇದಕ್ಕೆ ಭಾಗಶಃ ಕಾರಣವೆಂದರೆ, ಅದು ರಕ್ತ ಇತ್ಯಾದಿ ದ್ರವಗಳು ಮತ್ತು ದೇಹ ತ್ಯಾಜ್ಯಗಳೊಂದಿಗೆ ಸಂಬಂಧ ಹೊಂದಿರುವುದು. ಇನ್ನೊಂದು ಕಾರಣವೆಂದರೆ, ಈ ವೃತ್ತಿಯ ಲಿಂಗಾಧರಿತ ವಿಭಜನೆಯು ನರ್ಸಿಂಗನ್ನು ಮಹಿಳೆಯರ ಕೆಲಸ ಎಂಬಂತೆ ಬಿಂಬಿಸಿರುವುದು.

ಲಿಂಗ ಮತ್ತು ಜಾತಿ ಎರಡೂ ನರ್ಸಿಂಗ್ ವೃತ್ತಿಯ ಅಪಮೌಲ್ಯೀಕರಣಕ್ಕೆ ಕಾರಣಗಳಾಗಿವೆ. ಈ ಕ್ಷೇತ್ರವು ವೃತ್ತಿಪರವಾಗಿರುವುದಕ್ಕೆ ಹೊರತಾಗಿಯೂ ಅದಕ್ಕಂಟಿದ ಜಾತಿ ಕಳಂಕದ ನಿವಾರಣೆಯಾಗಿಲ್ಲ. ಬದಲಾಗಿ ಅದು ಇನ್ನಷ್ಟು ಶ್ರೇಣೀಕರಣವನ್ನು ಉಂಟುಮಾಡಿದೆ. ತರಬೇತಿಹೊಂದಿದ ಶುಶ್ರೂಷಕಿಯರು ದೈಹಿಕ ಕೆಲಸಕ್ಕೆ ಅಂಟಿದ ಕಳಂಕದಿದ ಪಾರಾಗಲು ವೈದ್ಯಕೀಯ ಆಡಳಿತ ಮತ್ತು ಮೇಲುಸ್ತುವಾರಿಗೆ ಅಂಟಿಕೊಂಡಿದ್ದು, ರೋಗಿಯ ಶುಶ್ರೂಷೆಯ ದೈಹಿಕ ಕೆಲಸವನ್ನು “ಆಯಾ”ಗಳೆಂದು ಕರೆಯಲಾಗುವ ಸಹಾಯಕ ಶುಶ್ರೂಷಕಿಯರಿಗೆ ಬಿಟ್ಟುಬಿಟ್ಟಿದ್ದಾರೆ.

ಆರೋಗ್ಯ ಸೇವೆಯ ಕಾರ್ಪೋರೇಟೀಕರಣ ಆಗುತ್ತಿರುವಂತೆಯೇ ನರ್ಸಿಂಗ್ ಕೂಡಾ ಹೆಚ್ಚು ವೃತ್ತಿಪರತೆ, ಕಡಿಮೆ ತಾರತಮ್ಯ ಮತ್ತು ಹೆಚ್ಚು ಸಂಘಟಿತವಾಗಬೇಕಿತ್ತು. ಆದರೆ, ಅದು ಯಾಕೆ ಆಗಿಲ್ಲ? 

ಆರೋಗ್ಯ ಸೇವೆಗಳ ಕಾರ್ಪೋರೇಟೀಕರಣ ಮತ್ತು ಖಾಸಗೀಕರಣವು ಶುಶ್ರೂಷಕಿಯರುಯರು ಮತ್ತು ಸಹಾಯಕಿಯರ ಇನ್ನಷ್ಟು ಶೋಷಣೆಗೆ ಕಾರಣವಾಗಿದೆ. ಅಂತರರಾಷ್ಟ್ರೀಯ ವಲಸೆಯ ಕಾರಣದಿಂದ ಶುಶ್ರೂಷಕಿಯರ ಪೂರೈಕೆಯಲ್ಲಿ ಬಿಕ್ಕಟ್ಟು ಉಂಟಾಗಿದ್ದು, ನೋಂದಾಯಿತ ಶುಶ್ರೂಷಕಿಯರ ಕೊರತೆ ಉಂಟಾಗಿದೆ. ಇದು ನೋಂದಾಯಿತರಲ್ಲದ ಶುಶ್ರೂಷಕಿಯರು, ಸಹಾಯಕಿಯರ, ಪರಿಚಾರಕರ ನೇಮಕಕ್ಕೆ ಕಾರಣವಾಗಿದೆ. ಸರಕಾರಿಯಾಗಿರಲಿ, ಖಾಸಗಿಯಾಗಿರಲಿ, ಅತ್ಯಂತ ಅನೌಪಚಾರಿಕ ಮತ್ತು ತಳಮಟ್ಟದ್ದೆನಿಸಿಕೊಳ್ಳುವ ಕೆಲಸಗಳಿಗೆ ಅರೆ ತರಬೇತಿ ಹೊಂದಿದ ಅಥವಾ ತರಬೇತಿಯಿಲ್ಲದ ಕಾರ್ಮಿಕ ವರ್ಗದ ಮೇಲೆ ಅವಲಂಬನೆ ಹೆಚ್ಚಿದೆ. ನರ್ಸಿಂಗ್ ಮಾರುಕಟ್ಟೆಯು ಪಿರಮಿಡ್ ಸ್ವರೂಪದಲ್ಲಿದ್ದು, ತಳಹಂತದಲ್ಲಿ ಮಹಿಳೆಯರ ಸಂಖ್ಯೆಯೇ ಮಿತಿಮೀರಿ ಇದೆ. ಇವರೆಲ್ಲರೂ ಕಡಿಮೆ ವೇತನ, ಕೆಳಮಟ್ಟದ ಸ್ಥಾನಮಾನ, ಕಳಂಕ, ಕಾರ್ಮಿಕ ಹಕ್ಕುಗಳು ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳ ಜೊತೆಗೆ ಒದ್ದಾಡುತ್ತಿದ್ದಾರೆ. ನಾವೀಗ ನೋಡುತ್ತಿರುವುದು ಆರೋಗ್ಯ ಕ್ಷೇತ್ರದ ಮುಂಚೂಣಿ ಕಾರ್ಮಿಕರ ದಯನೀಯ ಸ್ಥಿತಿಯನ್ನು.

ಭಾರತದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣವು ಎಲ್ಲಾ ಗಮನವನ್ನು ವೈದ್ಯರ ಮೇಲೆ ಕೇಂದ್ರೀಕರಿಸಿದ್ದು, ವೈದ್ಯಕೀಯ ಸೇವೆಯ ಇತರ ಕ್ಷೇತ್ರಗಳನ್ನು ಕಡೆಗಣಿಸಿದೆ. ಈಗ ಈ ಪಿಡುಗಿನ ಕಾಲದಲ್ಲಿ ನಾವು ಈ ದೂರದೃಷ್ಟಿಯಿಲ್ಲದ ನೀತಿಯ ಪರಿಣಾಮಗಳನ್ನು ಕಾಣುತ್ತಿದ್ದೇವೆಯೆ?

ತಕ್ಕಡಿಯು ಯಾವತ್ತೂ ಶುಶ್ರೂಷಕಿಯರ ವಿರುದ್ಧವೇ ತೂಗುತ್ತಿದೆ. ನರ್ಸಿಂಗ್ ಎಂಬುದು ಉನ್ನತ ಮಟ್ಟದ ಕೌಶಲ, ಶಿಕ್ಷಣ ಮತ್ತು ತರಬೇತಿಯ ಅಗತ್ಯವಿರುವ ವೃತ್ತಿಯಾದರೂ, ಯಾವತ್ತೂ ಕಡಿಮೆ ಸಂಬಳದ ಕಳಂಕಿತ ವೃತ್ತಿಯಾಗಿಯೇ ಉಳಿದುಕೊಂಡುಬಂದಿದೆ. ಇದು ದೈಹಿಕವಾದ, ಕೌಶಲ ಅಗತ್ಯವಿಲ್ಲದ ವೃತ್ತಿ ಎಂಬ ಭಾವನೆ ಸಾಮಾನ್ಯವಾಗಿ ಹರಡಿದೆ. ಉದಾಹರಣೆಗೆ, ಮೂರೂವರೆ ವರ್ಷ ಕಲಿಯಬೇಕಾದ ಜಿಎನ್‌ಎಂ (ಜನರಲ್ ನರ್ಸಿಂಗ್ ಎಂಡ್ ಮಿಡ್‌ವೈಫರಿ) ಒಂದು ಡಿಪ್ಲೊಮಾ ಆಗಿ ಪರಿಗಣಿತವಾಗಿದೆಯೇ ಹೊರತು, ಒಂದು ಪದವಿಯಾಗಿ ಅಲ್ಲ.

ಶುಶ್ರೂಷಕಿಯರು ಮತ್ತು ನರ್ಸಿಂಗ್ ತರಬೇತಿಯ ಅಪಮೌಲ್ಯೀಕರಣವು ದೊಡ್ಡ ಪ್ರಮಾಣದ ವಲಸೆಗೆ ಕಾರಣವಾಗಿದೆ. ನೀತಿನಿರೂಪಕರು ಮತ್ತು ಅಧಿಕಾರಿಗಳು ನರ್ಸಿಂಗ್ ಶಿಕ್ಷಣವನ್ನು ಬಲಪಡಿಸುವ ಬದಲು ಅರೆ ತರಬೇತಿ ಪಡೆದ, ರೋಗಿಯ ಸೇವೆ ಮಾಡಬಲ್ಲ ಗುತ್ತಿಗೆ ಕೆಲಸಗಾರರ ನೇಮಕಾತಿಗೆ ಪ್ರೋತ್ಸಾಹ ನೀಡುತ್ತಾ, ವೃತ್ತಿಪರತೆಯನ್ನು ಇನ್ನೂ ಕೆಳಗಿಳಿಸುತ್ತಿದ್ದಾರೆ‌. ಹಾಗಾಗಿ ಪ್ರಸ್ತುತ ಇರುವಂತಹ ಪಿಡುಗುಗಳು ಏಕಾಏಕಿ ಕಾಣಿಸಿಕೊಂಡಾಗ ತರಬೇತಿ ಪಡೆದ ಶುಶ್ರೂಷಕಿಯರ ಕೊರತೆಯನ್ನು ನಾವು ಕಾಣುತ್ತೇವೆ.

ಗ್ಲೌಸ್, ಮಾಸ್ಕ್ ಇತ್ಯಾದಿ ಸಾಧನಗಳನ್ನು ಕೊಡುವುದರಿಂದ, ಪ್ರತ್ಯೇಕ, ಸ್ವಚ್ಛ ಶೌಚಾಲಯಗಳು, ವಿಶ್ರಾಂತಿ ಕೊಠಡಿ ಒದಗಿಸುವುದರಿಂದ ಮಾತ್ರವೇ ಅವರ ವೃತ್ತಿಗೆ ಘನತೆಯನ್ನು ಒದಗಿಸಲು ಸಾಧ್ಯವಿದೆಯೇ?

ನಾವು ಜಾತೀಯತೆಯು ಆಳವಾಗಿ ಬೇರೂರಿರುವ ಸಮಾಜದಲ್ಲಿ ಬದುಕುತ್ತಿದ್ದು, ನೇರವಾಗಿ ದೇಹ ಅಥವಾ ತ್ಯಾಜ್ಯಗಳ ಜೊತೆಗೆ ಸಂಪರ್ಕಕ್ಕೆ ಬರಬೇಕಾದ ಯಾವುದೇ ಶ್ರಮವನ್ನು ಮಲಿನ ಎಂದು ಭಾವಿಸಲಾಗುತ್ತದೆ. ಇದು ನಾವು ಮನೆಗೆಲಸದವರನ್ನು, ನರ್ಸಿಂಗ್ ಸಹಾಯಕಿಯರನ್ನು, ಸ್ವಚ್ಛತಾ ಕಾರ್ಮಿಕರನ್ನು ನೋಡುವ ದೃಷ್ಟಿಯನ್ನೇ ಇದು ಪ್ರತಿಬಿಂಬಿಸುತ್ತದೆ. ಕೆಲಸವು ಕೆಲಸಗಾರರ ವ್ಯಾಖ್ಯಾನ ಮಾಡುತ್ತಿದ್ದು, ನಮ್ಮ ಸಮಾಜದಲ್ಲಿರುವ ಜಾತಿ ಆಧರಿತ ಶ್ರಮದ ವಿಭಜನೆಯು ಸಂತಾನೋತ್ಪತ್ತಿ ಮತ್ತು ಜೀವದ ಮುಂದುವರಿಕೆಗೆ ನೆರವಾಗುವವರನ್ನೇ ಕಳಂಕಿತರಂತೆ ಕಾಣುತ್ತದೆ. ಕಾರ್ಮಿಕರ ಕೆಲಸದ ಪರಿಸ್ಥಿತಿಯ ಸುಧಾರಣೆಯು ಅವರ ವೃತ್ತಿಗೆ ಸ್ಥಾನಮಾನ, ಘನತೆ, ಗೌರವಗಳ ಸುಧಾರಣೆಗೆ ಬಹಳಷ್ಟನ್ನು ಮಾಡಬಲ್ಲದು.

ಸಮಾನತೆಯುಳ್ಳ ನೌಕರ ವರ್ಗವು ಇನ್ನಷ್ಟು ಉತ್ತಮ ಕೆಲಸದ ವಾತಾವರಣವನ್ನು ಕೇಳಬಹುದಿತ್ತು. ಆದರೆ, ಆಸ್ಪತ್ರೆಗಳು ಉದ್ದೇಶಪೂರ್ವಕವಾಗಿ ಶ್ರೇಣೀಕೃತ ಮತ್ತು ತಾರತಮ್ಯದ ವ್ಯವಸ್ಥೆಗಳನ್ನು ಅನುಷ್ಟಾನಗೊಳಿಸುತ್ತಿವೆ. ಇದನ್ನು ಬದಲಾಯಿಸುವುದು ಹೇಗೆ?

ಸಾಮಾನ್ಯ ತಿಳುವಳಿಕೆಗೆ ವ್ಯತಿರಿಕ್ತವಾಗಿ ನರ್ಸಿಂಗ್ ಸೇವೆಯು ಏಕರೂಪವಾಗಿಲ್ಲ. ಬದಲಾಗಿ, ಐತಿಹಾಸಿಕವಾಗಿ ಮತ್ತು ಸಾಮಾಜಿಕವಾಗಿ ಹುಟ್ಟಿಕೊಂಡ ಸಾಂಸ್ಥಿಕ ಅಸಮಾನತೆಯಿರುವ ಆಳವಾಗಿ ಛಿದ್ರಗೊಂಡ ಕ್ಷೇತ್ರವಾಗಿದೆ. ಇದು “ಪ್ರತಿಷ್ಟಿತ” ಮತ್ತು “ಕೊಳಕು” ಕೆಲಸ ಎಂಬ ನೆಲೆಯಲ್ಲಿ ಆಳವಾಗಿ ಬೇರೂರಿದೆ. ಹೊಸ ತಂತ್ರಜ್ಞಾನ ಮತ್ತು ದಾಖಲೀಕರಣಕ್ಕೆ ಒತ್ತು ನೀಡಲಾಗುತ್ತಿರುವ ಈ ಹೊತ್ತಿನಲ್ಲಿ ತರಬೇತಿ ಹೊಂದಿರುವ ಶುಶ್ರೂಷಕಿಯರು ಹೆಚ್ಚುಹೆಚ್ಚಾಗಿ ಆಡಳಿತಾತ್ಮಕ ಮತ್ತು ಮೇಲುಸ್ತುವಾರಿಯಲ್ಲಿ ತೊಡಗಿಕೊಂಡರೆ, ದಿನನಿತ್ಯದ ರೋಗಿಗಳ ಆರೈಕೆಯ ದೈಹಿಕ ಕೆಲಸ ಕಡಿಮೆ ತರಬೇತಿಯಿರುವ ಸಹಾಯಕರ ಪಾಲಿಗೆ ಬರುತ್ತಿದೆ.

ಈಗ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಕೆಲಸದ ಬಹುಪಾಲು ಹೊರೆಯನ್ನು ಅನೌಪಚಾರಿಕವಾಗಿ ನೇಮಕಗೊಂಡ, ಕನಿಷ್ಟ ಕೂಲಿಗಿಂತಲೂ ಕಡಿಮೆ ವೇತನ ಪಡೆಯುವ, ಬೇಡಿಕೆ ಇಲ್ಲದಾಗ ಸಂಬಳವಿಲ್ಲದೇ ಮನೆಗೆ ಕಳುಹಿಸಬಹುದಾದ ಕಾರ್ಮಿಕರ ಮೇಲೆ ಹೇರಲಾಗುತ್ತಿದೆ. ಇಂದಿನ ಅಗತ್ಯವೆಂದರೆ, ವಾಸ್ತವದಲ್ಲಿ ರೋಗಿಯ ಬಳಿಯಿದ್ದು ಚಿಕಿತ್ಸೆ ನೀಡುವ ಈ ಮಹಿಳೆಯರನ್ನು ಗುರುತಿಸಿ, ದಾಖಲೆ ಮತ್ತು ಅಂಕಿಅಂಶಗಳಲ್ಲಿ ಅವರು ಕಾಣುವಂತೆ ಮಾಡುವುದು ಮತ್ತು ಮುಂಚೂಣಿ ಕಾರ್ಯಕರ್ತರಾಗಿ ಅವರ ಹಕ್ಕುಗಳಿಗಾಗಿ ಒತ್ತಾಯ ಮಾಡುವುದು.

ಪುರುಷ ಪ್ರಧಾನವಾದ ಕಾರ್ಮಿಕ ಮಾರುಕಟ್ಟೆಯಲ್ಲಿ ಮಾನಸಿಕ ಒತ್ತಡವಿರುವ ಭಾವನಾತ್ಮಕವಾದ ನರ್ಸಿಂಗ್ ವೃತ್ತಿಯು ಯಾವತ್ತೂ ಅವಗಣನೆಗೆ ಒಳಗಾಗಿದೆ. ಈ ಕ್ಷೇತ್ರಕ್ಕೆ ಪುರುಷರ ಪ್ರವೇಶದಿಂದ ಈ ವೃತ್ತಿಯ ಘನತೆ ಹೆಚ್ಚಿ, ವೇತನದಲ್ಲೂ ನಿಧಾನವಾಗಿ ಸುಧಾರಣೆ ಆಗಬಹುದೆ?

ಪುರುಷರ ಪ್ರವೇಶದಿಂದ ಸಂಘಟನೆಯೂ ಬಲವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದುದರಿಂದ ಕಡಿಮೆ ವೇತನ ಮತ್ತು ಶೋಷಕ ಕೆಲಸದ ವಾತಾವರಣ ಇತ್ಯಾದಿಗಳನ್ನು ಪ್ರತಿಭಟಿಸಿ ನರ್ಸಿಂಗ್ ಸಿಬ್ಬಂದಿ ಹೆಚ್ಚುಹೆಚ್ಚಾಗಿ ಮುಷ್ಕರ ನಡೆಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಆದರೆ, ಪುರುಷ ನರ್ಸ್‌ಗಳು ಹೆಚ್ಚಾಗಿ ಹೆಚ್ಚು ಪ್ರತಿಷ್ಟಿತವಾದ ಮನಶ್ಶಾಸ್ತ್ರೀಯ ನರ್ಸಿಂಗ್ ಮುಂತಾದ ವಿಭಾಗಗಳ ಕುರಿತೇ ಒಲವು ತೋರಿಸುತ್ತಾರೆ. ವೃತ್ತಿಯೊಳಗಿನ ಆಂತರಿಕ ಮನತೃಪ್ತಿಯನ್ನು ಪರಿಗಣಿಸಿದಲ್ಲಿ, ಇದು ವೃತ್ತಿಯ ಲಿಂಗ ಸಂರಚನೆ ಅಥವಾ ಸ್ವರೂಪವನ್ನು ಹೇಗೆ ಬದಲಾಯಿಸಲು ಸಾಧ್ಯ? ನರ್ಸಿಂಗ್ ಕ್ಷೇತ್ರವು ಪುರುಷ ಪ್ರಧಾನವಾಗುವುದನ್ನು ತಡೆದು, ಎರಡೂ ಲಿಂಗಗಳ ಜನರು ಸಮಾನವಾಗಿ ಕೆಲಸ ಮಾಡಬಲ್ಲಂತಹ ಕ್ಷೇತ್ರವಾಗಿಸಲು ಸಾಧ್ಯವೆ? ಅಥವಾ ಆಗ ಲಿಂಗಾಧರಿತ ಶ್ರಮ ವಿಭಜನೆಗೆ ಅನುಗುಣವಾಗಿ ಅಲ್ಲಿಯೂ “ಪ್ರತಿಷ್ಟಿತ” ಮತ್ತು “ಕೊಳಕು” ಕೆಲಸ ಎಂಬ ವಿಭಜನೆ ಬರುವುದೇ? ದೊಡ್ಡ ಸಂಖ್ಯೆಯಲ್ಲಿ ಪುರುಷರ ಪ್ರವೇಶದಿಂದ ಬದಲಾವಣೆಯ ಸಾಧ್ಯತೆಯಿದ್ದರೂ, ಮಹಿಳೆಯರು ಅದೇ ದಯನೀಯ ದೈಹಿಕ ಶ್ರಮದ, ಕೀಳೆಂದು ಪರಿಗಣಿಸಲಾಗುವ ಕೆಲಸಗಳಲ್ಲಿಯೇ ಮುಂದುವರಿಯಬೇಕಾಗಿ ಬರಬಹುದೆ ಮತ್ತು ವೈದ್ಯಕೀಯ ಆಡಳಿತ ಮತ್ತು ಮೇಲುಸ್ತುವಾರಿ ಪಾತ್ರಗಳು ಪುರುಷರ ಪಾಲಾಗಬಹುದೆ? ಆದುದರಿಂದ ವೇತನ ಮತ್ತು ವೃತ್ತಿ ಘನತೆ ಸುಧಾರಿಸಿದರೂ, ಮಹಿಳೆಯರು ನರ್ಸಿಂಗ್ ಸೇವೆಯ ಮೇಲು ಸ್ತರದಿಂದ ಕೆಳಗಿನ ಸ್ತರಕ್ಕೆ ತಳ್ಳಲ್ಪಡುವ ಸಾಧ್ಯತೆಗಳೂ ಇವೆ.

ಕೃಪೆ: ವೈಶ್ಣ ರಾಯ್ (ದಿ ಹಿಂದೂ)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಇನ್ಮುಂದೆ ಖಾಯಂ ಕೆಲಸ ಎಂಬುದು ಕನಸು ಮಾತ್ರ: ಗುತ್ತಿಗೆ ನೌಕರರು ಏನು ಮಾಡಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...