Homeಕರ್ನಾಟಕಚಿತ್ರದುರ್ಗ: ಸಂತ್ರಸ್ತ ‘ಮಕ್ಕಳೊಡನೆ ನಾವು’ ಬೃಹತ್‌ ಜಾಥಾ ನಾಳೆ

ಚಿತ್ರದುರ್ಗ: ಸಂತ್ರಸ್ತ ‘ಮಕ್ಕಳೊಡನೆ ನಾವು’ ಬೃಹತ್‌ ಜಾಥಾ ನಾಳೆ

- Advertisement -
- Advertisement -

ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ನೀಡಬೇಕೆಂದು ಆಗ್ರಹಿಸಿ ಹಾಗೂ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್‌‌ 10ರಂದು (ನಾಳೆ) ‘ಮಕ್ಕಳೊಡನೆ ನಾವು’ ಬೃಹತ್ ಜಾಥಾವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಈ ಕಾಲದ ಮಕ್ಕಳಿಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವ ಪ್ರಶ್ನೆ ಕಾಡುವಂತಾಗಿದೆ. ಇದರಿಂದ ಸುಮಾರು ಹೆಣ್ಣು ಮಕ್ಕಳು ನೊಂದು ಕಣ್ಣೀರಿಡುವಂತಾಗಿದೆ. ಈ ರೀತಿ ಬಲಿಷ್ಠರ ಮುಷ್ಟಿಗೆ ಸಿಕ್ಕಿ, ನೊಂದು, ಉಸಿರುಗಟ್ಟಿ ಬದುಕುತ್ತಿರುವ ಎಳೆಯ ಜೀವಿಗಳಿಗೆ ಸಾಂತ್ವನ, ದೈರ್ಯ ಹಾಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮೈಸೂರಿನ ಒಡನಾಡಿ ಸಂಸ್ಥೆ ಚಿತ್ರದುರ್ಗದಲ್ಲಿ “ಮಕ್ಕಳೊಡನೆ ನಾವು” ಎನ್ನುವ ಬೃಹತ್ ಜಾಥಾ ಆಯೋಜಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಕ್ಕಳೊಡನೆ ನಾವು” ಎಂಬ ಬೈಕ್‌ ಮೆರವಣಿಗೆಯನ್ನು ಶನಿವಾರ ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಕನಕ ಸರ್ಕಲ್‌, ಬರಗೇರಮ್ಮ ದೇವಸ್ಥಾನದ ಹತ್ತಿರ, ಹೊಳಲ್ಕೆರೆ ರಸ್ತೆಯಿಂದ ಆರಂಭಗೊಂಡು ಚಿತ್ರದುರ್ಗದ ಮುಖ್ಯ ರಸ್ತೆಯ ಮೂಲಕ ಬಾಲ ಭವನ (CWC) ತಲುಪಲಿದೆ.

ಮೈಸೂರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಅವರ ಸಮ್ಮುಖದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಿಂದ ಸಂವೇದನಶೀಲ ಮನಸುಳ್ಳವರು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಎಲ್ಲರೂ ಸ್ವಯಂಪ್ರೇರಿತರಾಗಿ ಭಾಗವಹಿಸುವಂತೆ ಅವರು ಕೋರಿದ್ದಾರೆ.

ಪರಶು ಹಾಗೂ ಸ್ಟ್ಯಾನ್ಲಿಯವರ ಪತ್ರಿಕಾ ಹೇಳಿಕೆ

ಆತ್ಮೀಯ ಮಿತ್ರರೇ ಹಾಗೂ ಸಮಾನ ಮನಸ್ಕ ಪ್ರಗತಿಪರ, ಸಾಮಾಜಿಕ ಬದಲಾವಣೆಯಲ್ಲಿ ತೊಡಗಿಸಿಕೊಂಡ ಸಂಘ ಸಂಸ್ಥೆಗಳ, ಜನಪರ ಸಂಘಟನೆಗಳ ಪದಾಧಿಕಾರಿಗಳೇ, ತಮಗೆಲ್ಲರಿಗೂ ಒಡನಾಡಿಯ ನಮಸ್ಕಾರಗಳು.ಇತ್ತೀಚೆಗೆ ತಳಮಟ್ಟದ, ದುರ್ಬಲ ಕುಟುಂಬಗಳಿಗೆ ಸೇರಿದ ಇಬ್ಬರು ಮುಗ್ಧ ಬಾಲಕಿಯರ ಮೇಲೆ ಎಸಗಲಾಗಿದ್ದ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆದು ಅದನ್ನು ಕಾನೂನಿನ ಚೌಕಟ್ಟಿಗೆ ತರುವಲ್ಲಿ ನಿಮ್ಮೆಲ್ಲರಂತೆಯೇ ಮಕ್ಕಳ ಘನತೆಯುಕ್ತ ಬಾಳ್ವೆಗೆ ಹಂಬಲಿಸುವ ಒಡನಾಡಿಯು ಪ್ರಾಮಾಣಿಕವಾಗಿ ಶ್ರಮಿಸಿರುವುದನ್ನು ತಾವೆಲ್ಲರೂ ಗಮನಿಸಿ, ತಾರ್ಕಿಕವಾಗಿ ಚಿಂತಿಸಿ, ಸಕಾಲಿಕವಾಗಿ ನಮಗೂ, ನೊಂದ ಮಕ್ಕಳಿಗೂ ಬೆಂಬಲವನ್ನು ನೀಡಿರುತ್ತೀರಿ. ಅದಕ್ಕಾಗಿ ಅನಂತಾನಂತ ವಂದನೆಗಳು.

ಸ್ನೇಹಿತರೇ, ಈ ಒಂದು ಪ್ರಕರಣವು ಹಿಂದೆ ಘಟಿಸಿರುವ ನೂರಾರು ಭಯಾನಕ ಹಾಗೂ ಭೀಭತ್ಸ್ಯಕರವಾದ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಪ್ರಕರಣಗಳ ಗೋರಿಯನ್ನು ಬಗೆದು ತೆಗೆದು ಸಮಾಜದ ಮುಂದಿಟ್ಟಿದೆ. ನೂರಾರು ಹೆಂಗಳೆಯರು ಕರೆ ಮಾಡಿ, ನಮನ್ನು ಹಾರೈಸಿ, ಕಣ್ಣೀರು ಹಾಕಿ ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನೊಂದ ಬಾಲಕಿಯರು ತಮ್ಮಂತೆಯೇ ಬಹಳಷ್ಟು ಮಕ್ಕಳಿಗೆ ಈ ದುರ್ಗತಿಯಾಗಿರುವುದನ್ನು ಹೇಳಿಕೊಂಡಿರುತ್ತಾರೆ. ಹಾಗಾಗಿ ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಆತ್ಮೀಯರೇ, ಈ ಪ್ರಕರಣಕ್ಕೆ ಮಿಡಿದು ರಾಜ್ಯ ಹಾಗೂ ದೇಶದ ಬಹಳಷ್ಟು ಮಾನವೀಯ ಮನಸುಗಳು ಹಾಗೂ ನಿಜವಾದ ಧಾರ್ಮಿಕರು ಸ್ಪಂದಿಸುತ್ತಿದ್ದಾರೆ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಬದಲಾವಣೆಯನ್ನು ಉಂಟು ಮಾಡಿ, ನಿಜ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪರ್ವಕಾಲ.

ಇದನ್ನೂ ಓದಿರಿ:ಒಡನಾಡಿ’ ಮತಾಂತರ ಮಾಡುತ್ತಿದೆಯೇ? ಮುರುಘಾ ಮಠದ ಸಮಿತಿ ಸದಸ್ಯನ ಆರೋಪಕ್ಕೆ ಒಡನಾಡಿ ಮಡಿಲಲ್ಲಿ ಬೆಳೆದವರು ಹೇಳಿದ್ದೇನು?

ಬಲಿಷ್ಠರ ಮುಷ್ಟಿಗೆ ಸಿಕ್ಕಿ, ನೊಂದು, ಉಸಿರುಗಟ್ಟಿ ಬದುಕುತ್ತಿರುವ ಎಳೆಯ ಜೀವಿಗಳಿಗೆ ಸಾಂತ್ವನ ಹಾಗೂ ನ್ಯಾಯ ದೊರಕಿಸುವ ಸಕಾಲ! ಹಾಗಾಗಿ ನಾವೆಲ್ಲರೂ ಒಟ್ಟಾಗಿ ಒಂದೇ ಧ್ವನಿಯಾಗಿ ನಿಲ್ಲಬೇಕಾಗಿದೆ. ನ್ಯಾಯ, ಸತ್ಯ ಹಾಗೂ ಮಕ್ಕಳ ಪರನಿಂತ ಸಾರ್ಥಕತೆಯನ್ನು ತಂದುಕೊಳ್ಳಬೇಕಾಗಿದೆ. ಆದುದರಿಂದ ನೊಂದ ಬಾಲಕಿಯರಿಗೆ ಸಾಂತ್ವನ ಹಾಗೂ ಅಭಯ ನೀಡಲು ಹಾಗೂ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹಿಸಲು ರಾಜ್ಯದ ನಾನಾ ಕಡೆಗಳಿಂದ ಪ್ರಜ್ಞಾವಂತ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಸ್ವಜವಾಬ್ದಾರಿಯಿಂದ ದಿನಾಂಕ 10.9.2022 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ಕನಕ ವೃತದಲ್ಲಿ ಸಮಾವೇಶ ಗೊಳ್ಳುತ್ತಿರುವ ಸಂದರ್ಭದಲ್ಲಿ ತಾವು ಹಾಗೂ ತಮ್ಮ ಸಂಗಡಿಗರೆಲ್ಲರೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹರಿದು ಬಂದು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂಬುದು ನಮ್ಮ ಹಂಬಲವಾಗಿದೆ.

ದಯಮಾಡಿ ಈ ವಿಚಾರವನ್ನು ಆದಷ್ಟು ಜನರಿಗೆ ತಿಳಿಸಿ. ಮಕ್ಕಳ ಪರವಾದ ಸಾಮಾಜಿಕ ಧ್ವನಿಯೊಂದು ಇತಿಹಾಸದಲ್ಲಿ ದಾಖಲಾಗಲಿ. ತಮ್ಮ ಮೂಲಕ ಮೌಲ್ಯಾಧಾರಿತ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳವಳಿಯೊಂದು ಉದಯಿಸುವಂತಾಗಲಿ. ಅದರ ಯಶಸ್ಸಿನ ಕೃತಾರ್ಥ ಭಾವನೆ ನಮ್ಮೆಲ್ಲರದಾಗಲಿ ಎಂದು ಆಶಿಸುತ್ತಾ ಕಾರ್ಯ ಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.

  • ಸ್ಟ್ಯಾನ್ಲಿ-ಪರಶು, ಒಡನಾಡಿ ಸೇವಾ ಸಂಸ್ಥೆ, ಮೈಸೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಈ ಮೆರವಣಿಗೆ ಯಶಸ್ವಿಯಾಗಲಿ. ಮಕ್ಕಳ ಮೇಲಿನ ದೌರ್ಜನ್ಯ ಕೊನೆಕೊಳ್ಳಲಿ.

  2. ಸ್ಟ್ಯಾನ್ಲಿ ಹಾಗೂ ಪರಶು ಸರ್, ನಿಮ್ಮ ಕೆಲಸ ದೇವರು ಮೆಚ್ಚುವಂತಹದು. ವಿಶೇಷವಾಗಿ ಟಿವಿ ಕಾರ್ಯಕ್ರಮಗಳಲ್ಲಿ ಪರಶು ಸರ್ ಮಾತುಗಳನ್ನು ಕೇಳಿದ್ದೇನೆ. ಕಲ್ಲು ಹೃದಯಗಳನ್ನೂ ಕರಗಿಸಬಲ್ಲುದು ನಿಮ್ಮ ಮಾತುಗಳು. ಹೃದಯಕ್ಕೆ ತಟ್ಟುವಂತಹದು. ಭಗವಂತ ನಿಮ್ಮೊಂದಿಗಿದ್ನಾನೆ. ನಿಮ್ಮ ಕಾರ್ಯಕ್ಕೆ ಸದಾ ಜಯವಾಗಲಿ.

  3. I am with this campaign. TV & PRESS medias are restrained from judiciary, through this network work only we have to advance towards the justice for innocent children.

    Mruthyunjaya EX-ARMY Retd. Principal,
    Ex-CEO of Murugharajendra Vidyapeetha & Anatha Sevashrama, Malladihalli.
    9980895885-9448372888
    msm. [email protected]

  4. Your comment is awaiting moderation
    I am with this campaign. TV & PRESS medias are restrained from judiciary, through this network work only we have to advance towards the justice for innocent children.

    Mruthyunjaya EX-ARMY Retd. Principal,
    Ex-CEO of Murugharajendra Vidyapeetha & Anatha Sevashrama, Malladihalli.
    9980895885-9448372888
    msm. [email protected]

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...