Homeಮುಖಪುಟಕ್ಲಬ್‌ಹೌಸ್‌ನಲ್ಲಿ ಮಹಿಳೆಯರ ವಿರುದ್ಧ ದ್ವೇಷ ಪ್ರಕರಣ: ಮೂವರಲ್ಲಿ ಒಬ್ಬ ಆರೋಪಿಗೆ ಜಾಮೀನು

ಕ್ಲಬ್‌ಹೌಸ್‌ನಲ್ಲಿ ಮಹಿಳೆಯರ ವಿರುದ್ಧ ದ್ವೇಷ ಪ್ರಕರಣ: ಮೂವರಲ್ಲಿ ಒಬ್ಬ ಆರೋಪಿಗೆ ಜಾಮೀನು

- Advertisement -
- Advertisement -

ಆಡಿಯೋ ಚಾಟ್ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ, ದ್ವೇಷದ ಮಾತುಗಳನ್ನಾಡಿದ ಕ್ಲಬ್‌ಹೌಸ್ ಆ್ಯಪ್ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರಾಂಚ್‌ನ ಸೈಬರ್ ಪೊಲೀಸ್ ವಿಭಾಗವು ಬಂಧಿಸಿದ್ದ ಮೂವರು ಆರೋಪಿಗಳಲ್ಲಿ ಒಬ್ಬರಿಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ.

22 ವರ್ಷದ ಕಾನೂನು ವಿದ್ಯಾರ್ಥಿ ಯಶ್‌ಕುಮಾರ್ ಪರಾಶರ್‌ಗೆ 15 ದಿನಗಳ ಕಡ್ಡಾಯ ಬಿಹೇವಿಯರಲ್‌ ಕೌನ್ಸಲಿಂಗ್ ಸೇರಿದಂತೆ ಹಲವು ಷರತ್ತುಗಳ ಮೇಲೆ ಜಾಮೀನು ನೀಡಲಾಗಿದೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿರುವ ಇತರ ಆರೋಪಿಗಳೆಂದರೆ ಆಕಾಶ್ ಸುಯಲ್ (19) ಮತ್ತು ಜೈಷ್ಣವ್ ಕಕ್ಕರ್ (21).

ಆರೋಪಿ ಯಶ್‌ಕುಮಾರ್ ಪರ ವಕೀಲರಾದ ಅಕ್ಷಯ್ ಬಾಫ್ನಾ ಮತ್ತು ಗಾಯತ್ರಿ ಗೋಖಲೆ ವಾದ ಮಂಡಿಸಿದ್ದರು. ಯಶ್ ಪರಾಶರ್ ಮತ್ತು ನನ್ನ ಕಕ್ಷಿದಾರ ಯಶ್‌ಕುಮಾರ್ ಪರಾಶರ್‌ ಒಬ್ಬರೆ ಎಂದು ಸೈಬರ್ ಪೊಲೀಸರಿಗೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಬಫ್ನಾ ವಾದಿಸಿದ್ದಾರೆ. ನನ್ನ ಕಕ್ಷಿದಾರನ ಫೋಟೋಗಳನ್ನು ನಕಲಿ ಖಾತೆಗಳಿಗೆ ಬಳಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಕುಂದಾಪುರ ಕಾಲೇಜಿನಲ್ಲೂ ‘ಹಿಜಾಬ್ ವಿವಾದ’; ಹಿಜಾಬ್‌ ಧರಿಸಿ ಬರದಂತೆ ಪ್ರಿನ್ಸಿಪಾಲ್‌ ಹೇಳಿದ್ದಾರೆಂದು ಪೋಷಕರ ಆರೋಪ

ಇತರ ಇಬ್ಬರು ಆರೋಪಿಗಳಾದ ಎಚ್‌ಎಸ್‌ಸಿ ವಿದ್ಯಾರ್ಥಿ ಆಕಾಶ್ ಸುಯಲ್ ಮತ್ತು ಬಿಕಾಂ ವಿದ್ಯಾರ್ಥಿ ಜೈಷ್ಣವ್ ಕಕ್ಕರ್ (20) ಇಬ್ಬರಿಗೂ ಕೊರೊನಾ ಸೋಂಕು ತಗುಲಿರುವುದರಿಂದ ಕೆಲವು ದಿನಗಳ ನಂತರ ಜಾಮೀನು ಅರ್ಜಿಗಳ ಬಗ್ಗೆ ನ್ಯಾಯಾಲಯ ನಿರ್ಧರಿಸುತ್ತದೆ. ಇಬ್ಬರು ಆರೋಪಿಗಳ ಪರ ವಕೀಲರಾದ ಶ್ಯಾಮ್ ರಿಷಿ ಪಾಠಕ್ ಮತ್ತು ರಾಹುಲ್ ಯಾದವ್ ವಾದ ಮಂಡಿಸಿದ್ದರು.

ಈ ಎಲ್ಲಾ ಮೂವರು ಆರೋಪಿಗಳನ್ನು ಜನವರಿ 21 ರಂದು ಹರಿಯಾಣದಿಂದ ಬಂಧಿಸಲಾಗಿತ್ತು. ಮೂವರು ಕ್ಲಬ್‌ಹೌಸ್‌ ಆ್ಯಪ್‌ನಲ್ಲಿ Kira XD, @jaishav ಮತ್ತು pradhan@haryana_alla ಎಂಬ ಹೆಸರಿನಲ್ಲಿ ಖಾತೆಯನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಕಾಶ್ ಸುಯಲ್ ಮತ್ತುಜೈಷ್ಣವ್ ಕಕ್ಕರ್ ಜನವರಿ 16 ಮತ್ತು 19 ರಂದು ಕ್ಲಬ್‌ಹೌಸ್‌ನಲ್ಲಿ ಎರಡು ಚಾಟ್ ರೂಮ್‌ಗಳನ್ನು ರಚಿಸಿದ್ದರು. ಇದರಲ್ಲಿ 300 ಕ್ಕೂ ಹೆಚ್ಚು ಭಾಗವಹಿಸುವವರು ಇದ್ದರು. ಇಲ್ಲಿ ಮಹಿಳೆಯರ ಬಗ್ಗೆ ಅಶ್ಲಿಲ ಕಾಮೆಂಟ್ ಮಾಡಲಾಗಿತ್ತು. ಇನ್ನು, 2021 ರ ಅಕ್ಟೋಬರ್ 27 ಮತ್ತು ನವೆಂಬರ್ 27 ರಂದು, ಯಶ್‌ಕುಮಾರ್‌ ಪರಾಶರ್ ರಚಿಸಿದ ಚಾಟ್ ರೂಮ್‌ನಲ್ಲಿಯೂ ಮಹಿಳೆಯರ ಬಗ್ಗೆ ಮತ್ತು ಅವರ ದೇಹದ ಭಾಗಗಳ ಬಗ್ಗೆ ಕೆಟ್ಟ ಕಾಮೆಂಟ್ ಮಾಡಲಾಗಿತ್ತು ಎಂದು ದೂರು ದಾಖಲಾಗಿತ್ತು.

ಆರೋಪಿಗಳ ವಿರುದ್ಧ ಸೆಕ್ಷನ್ 153 (ಎ) (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) 295 (ಎ) (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳು) 354 (ಎ) ಲೈಂಗಿಕ ಕಿರುಕುಳ, 354 (ಡಿ) (ಹಿಂಬಾಲಿಸುವಿಕೆ), 500 (ಮಾನನಷ್ಟ), 509 (ಮಹಿಳೆಯರ ಘನತೆಯನ್ನು ಅವಮಾನಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.


ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ದ್ವೇಷ ಭಾಷಣ: ಮುಂಬೈನಲ್ಲಿ ಮೂರು ಜನರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...