Homeಮುಖಪುಟಸಿಎಂ ನಿವಾಸ ನವೀಕರಣದ ವಿವಾದ: ಸುಳ್ಳು ತನಿಖೆ ನಡೆಸಿದ್ದಕ್ಕಾಗಿ ಪ್ರಧಾನಿ ರಾಜೀನಾಮೆ ನೀಡುತ್ತಾರಾ?; ಕೇಜ್ರಿವಾಲ್

ಸಿಎಂ ನಿವಾಸ ನವೀಕರಣದ ವಿವಾದ: ಸುಳ್ಳು ತನಿಖೆ ನಡೆಸಿದ್ದಕ್ಕಾಗಿ ಪ್ರಧಾನಿ ರಾಜೀನಾಮೆ ನೀಡುತ್ತಾರಾ?; ಕೇಜ್ರಿವಾಲ್

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ನವೀಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ಆರೋಪಗಳು ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಸಲು ಸಿಬಿಐಗೆ ಆದೇಶಿಸಲಾಗಿತ್ತು. ಇದೀಗ ಪ್ರಾಥಮಿಕ ತನಿಖೆ ಹೊರಬಂದಿದೆ.

ಸಿಬಿಐನ (CBI) ಪ್ರಾಥಮಿಕ ತನಿಖೆಯನ್ನು ಕೇಜ್ರಿವಾಲ್ ಅವರು ಸ್ವಾಗತಿಸಿದ್ದಾರೆ. ಇಂತಹ ಆರೋಪಗಳೆಲ್ಲ ಆಧಾರ ರಹಿತವಾಗಿರುವುದರಿಂದ ತನಿಖೆಯಲ್ಲಿ ಯಾವುದೇ ಅಕ್ರಮ ಪತ್ತೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ ಕೇಜ್ರಿವಾಲ್, ‘ನಾಲ್ಕನೇ ಕ್ಲಾಸ್ ಪಾಸ್ ರಾಜ’ನಿಂದ ಇನ್ನೇನು ನಿರೀಕ್ಷಿಸಬಹುದು? ಎಂದು ಕೇಳಿದ್ದಾರೆ.

”ಈ ಅಂತ್ಯವಿಲ್ಲದ ವಿಚಾರಣೆಗಳ ಆಟದಲ್ಲಿ ತೊಡಗಿಸಿಕೊಳ್ಳುವುದನ್ನು ಅಥವಾ ದಿನದ 24 ಗಂಟೆಗಳ ಕಾಲ ಭಾಷಣಗಳನ್ನು ಮಾಡುವುದನ್ನು ಮುಂದುವರಿಸಿ. ಅವರ ಮುಂದೆ ನಮಸ್ಕರಿಸುವಂತೆ ನನ್ನನ್ನು ಒತ್ತಾಯಿಸುವುದು ಅವರ ಗುರಿ ಆದರೆ ನಾನು ಮಾಡು೭ವುದಿಲ್ಲ. ಅವರು ಎಷ್ಟೇ ನಕಲಿ ತನಿಖೆ ಅಥವಾ ಪ್ರಕರಣಗಳನ್ನು ಮುಂದುವರಿಸಿದರೂ ನಾನು ಅವರ ಮುಂದೆ ತಲೆಬಾಗುವುದಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

”ಹಿಂದಿನ ಎಲ್ಲಾ ತನಿಖೆಗಳಲ್ಲಿ ಏನೂ ಕಂಡುಬಂದಿಲ್ಲ. ಈ ಪ್ರಸ್ತುತ ತನಿಖೆ ಯಾವುದೇ ತಪ್ಪನ್ನು ಬಹಿರಂಗಪಡಿಸಲು ವಿಫಲವಾದರೆ, ಅವರು ಸುಳ್ಳು ವಿಚಾರಣೆ ನಡೆಸಿದ್ದಕ್ಕಾಗಿ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುತ್ತಾರೆಯೇ? ಎಂದು ಕೇಳಿದ್ದಾರೆ.

ಪ್ರಕರಣದ ವಿವರ:

ಮುಖ್ಯಮಂತ್ರಿಗಾಗಿ ಹೊಸ ಅಧಿಕೃತ ನಿವಾಸವನ್ನು ನಿರ್ಮಿಸುವ ಕುರಿತು ದೆಹಲಿ ಸರ್ಕಾರದಿಂದ ಗುರುತಿಸಲಾಗದ ಸಾರ್ವಜನಿಕ ಸೇವಕರನ್ನು ಒಳಗೊಂಡ ಸಂಭಾವ್ಯ ಅಕ್ರಮಗಳು ಮತ್ತು ದುಷ್ಕೃತ್ಯಗಳನ್ನು ಪರಿಶೀಲಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಾಥಮಿಕ ತನಿಖೆಯನ್ನು (ಪಿಇ) ಪ್ರಾರಂಭಿಸಿದೆ.

ದೆಹಲಿ ಸರ್ಕಾರದ ಅಜ್ಞಾತ ಸಾರ್ವಜನಿಕ ಸೇವಕರ ವಿರುದ್ಧ ಸಿಬಿಐ ಔಪಚಾರಿಕವಾಗಿ ಈ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ. ಪ್ರಾಥಮಿಕ ವಿಚಾರಣೆಯು ಪೂರ್ಣ ಪ್ರಮಾಣದ ಎಫ್‌ಐಆರ್‌ನ್ನು ಪ್ರಾರಂಭಿಸಲು ಸಮರ್ಥಿಸಲು ಸಾಕಷ್ಟು ಪ್ರಾಥಮಿಕ ಸಾಕ್ಷ್ಯವನ್ನು ಹೊಂದಿದೆಯೇ ಎಂದು ನಿರ್ಣಯಿಸುವ ಆರಂಭಿಕ ಹಂತವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಬಟ್ಟೆಯಿಂದ ಪ್ರಜೆಗಳನ್ನು ವಿಭಜಿಸುವವರು ಈ ಬಾಲಕನಿಂದ ಪಾಠ ಕಲಿಯುತ್ತಾರಾ?: ಮೋದಿ ವಿರುದ್ಧ ನಟ ಕಿಶೋರ್‌ ಪರೋಕ್ಷ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...