Homeಮುಖಪುಟಮಣಿಪುರ: ಸಿಎಂ ಕುಟುಂಬದ ಮನೆ ಮೇಲೆ ದಾಳಿಗೆ ಯತ್ನ

ಮಣಿಪುರ: ಸಿಎಂ ಕುಟುಂಬದ ಮನೆ ಮೇಲೆ ದಾಳಿಗೆ ಯತ್ನ

- Advertisement -
- Advertisement -

ಮಣಿಪುರದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಕರ್ಫ್ಯೂ ಉಲ್ಲಂಘನೆ ಮಾಡಿ ಸಿಎಂ ಮನೆ ಮೇಲೆ ದಾಳಿಗೆ ಗುಂಪೊಂದು ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಇಂಫಾಲದಲ್ಲಿರುವ ಸಿಎಂ ಬಿರೇನ್ ಸಿಂಗ್ ಅವರ ಪೂರ್ವಜರ ಮನೆ ಮೇಲೆ ದಾಳಿ ಯತ್ನ ನಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಧಿಕಾರಿಗಳು ಯತ್ನವನ್ನು ವಿಫಲಗೊಳಿಸಿದ್ದಾರೆ.

ಕಣಿವೆ ಪ್ರದೇಶದಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಿದ್ದರೂ, ರಾಜ್ಯ ರಾಜಧಾನಿ ಇಂಫಾಲದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಗುಂಪನ್ನು ಚದುರಿಸಲು ರಾಜ್ಯ ಪೊಲೀಸ್ ಸಿಬ್ಬಂದಿ ಹಾಗೂ ಆರ್ ಎಫ್ ಅಶ್ರುವಾಯುವನ್ನು ಪ್ರಯೋಗಿಸಿದ್ದಾರೆ.  ಅಧಿಕಾರಿಗಳು ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರು. ಮನೆಯ ಬಳಿ ಹಿಂದಿನ ಬ್ಯಾರಿಕೇಡ್‌ಗಳಿಗೆ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ನಿಯೋಜಿಸಲಾಯಿತು. ಪ್ರತಿಭಟನಾಕಾರರು ರಸ್ತೆಯ ಮಧ್ಯದಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಕುಟುಂಬದ ಮನೆ ಮೇಲೆ ಗುಂಪು ದಾಳಿ ನಡೆದಿದೆ ಎಂಬ ವದಂತಿಗಳು ಸುಳ್ಳು ಹಾಗೂ ತಪ್ಪು ದಾರಿಗೆ ಎಳೆಯುವಂಥದ್ದು ಎಂದು ಮಣಿಪುರ ಪೊಲೀಸರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಂಗ್ ಅವರು ಇಂಫಾಲದ ಕೇಂದ್ರಭಾಗದಲ್ಲಿ ಬಿಗಿ ಭದ್ರತೆ ಇರುವ ಪ್ರತ್ಯೇಕ ಅಧಿಕೃತ ನಿವಾಸದಲ್ಲಿ ವಾಸವಿದ್ದಾರೆ.

”ಇಂಫಾಲದ ಹೀಂಗಾಂಗ್ ಪ್ರದೇಶದಲ್ಲಿರುವ ಮುಖ್ಯಮಂತ್ರಿಯವರ ಪೂರ್ವಜರ ಮನೆ ಮೇಲೆ ಗುಂಪು ದಾಳಿ ನಡೆಸುವ ಪ್ರಯತ್ನ ನಡೆದಿತ್ತು. ಮನೆಯಿಂದ ಸುಮಾರು 100-150 ಮೀಟರ್ ದೂರದಲ್ಲೇ ಭದ್ರತಾ ಪಡೆಗಳು ಈ ಗುಂಪನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮನೆಯಲ್ಲಿ ಯಾರೂ ವಾಸವಿಲ್ಲದಿದ್ದರೂ, ಹಗಲು ರಾತ್ರಿ ಕಾವಲು ವ್ಯವಸ್ಥೆ ಮಾಡಲಾಗಿದೆ. ಎರಡು ಗುಂಪುಗಳಲ್ಲಿ ಜನ ಭಿನ್ನ ದಿಕ್ಕುಗಳಿಂದ ಬಂದು ಮುಖ್ಯಮಂತ್ರಿಯವರ ಪೂರ್ವಜರ ಮನೆ ಸಮೀಪಕ್ಕೆ ಬಂದಿದ್ದರು. ಆದರೆ ಅವರನ್ನು ತಡೆಯಲಾಯಿತು ಎಂದು ವಿವರಿಸಿದ್ದಾರೆ.

ಗುಂಪನ್ನು ಚದುರಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆ ಪೊಲೀಸರು ಹಲವು ಸುತ್ತುಗಳ ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು. ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿ, ಪ್ರತಿಭಟನಾಕಾರರು ಮುಂದುವರಿಯದಂತೆ ತಡೆದರು. ಮನೆಯ ಬಳಿ ಹೆಚ್ಚುವರಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಯಿತು. ಪಕ್ಕದ ರಸ್ತೆಯಲ್ಲಿ ಪ್ರತಿಭಟನಾಕಾರರು ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಗಾಯಗಳಾದ ಬಗ್ಗೆ ಅಧಿಕೃತ ವರದಿ ಬಂದಿಲ್ಲವಾದರೂ, ಆ್ಯಂಬುಲೆನ್ಸ್ ಗಳ ಓಡಾಟ ಕಂಡುಬಂತು.

ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ತೋವ್ರಗೊಂಡಿದೆ. ಇದಕ್ಕೂ ಮುನ್ನ ಇಂಫಾಲದ ಪಶ್ಚಿಮ ಜಿಲ್ಲೆಯಲ್ಲಿ ಡಿಸಿ ಕಚೇರಿಯನ್ನು ಪ್ರತಿಭಟನಾನಿರತರು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮೈತಿ ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಪ್ರತಿಭಟನೆ: ಮಣಿಪುರದಲ್ಲಿ ಪುನಃ ಇಂಟರ್‌ನೆಟ್‌ ನಿಷೇಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read