Homeಮುಖಪುಟಕಾಂಗ್ರೆಸ್ ಬ್ಯಾಂಕ್ ಖಾತೆಗಳಿಂದ ₹65 ಕೋಟಿ ಕಡಿತಗೊಳಿಸಲು ಐಟಿ ಇಲಾಖೆ ಸೂಚನೆ: ಅಜಯ್ ಮಾಕನ್

ಕಾಂಗ್ರೆಸ್ ಬ್ಯಾಂಕ್ ಖಾತೆಗಳಿಂದ ₹65 ಕೋಟಿ ಕಡಿತಗೊಳಿಸಲು ಐಟಿ ಇಲಾಖೆ ಸೂಚನೆ: ಅಜಯ್ ಮಾಕನ್

- Advertisement -
- Advertisement -

ಹಿಂದಿನ ವರ್ಷಗಳ ತೆರಿಗೆ ಪಾವತಿಗೆ ಸಂಬಂಧಿಸಿದ ಪ್ರಕರಣವು ವಿಚಾರಣೆ ಹಂತದಲ್ಲಿರುವಾಗಲೇ ಪಕ್ಷದ ವಿವಿಧ ಬ್ಯಾಂಕ್ ಖಾತೆಗಳಿಂದ ₹65 ಕೋಟಿ ಕಡಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಆದಾಯ ತೆರಿಗೆ (ಐಟಿ) ಇಲಾಖೆಯ ಕ್ರಮ ಪ್ರಜಾಸತ್ತಾತ್ಮಕವಾಗಿ ಸರಿಯಲ್ಲ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.

ತೆರಿಗೆ ಪಾವತಿ ವಿಳಂಬದ ಕಾರಣ ನೀಡಿ ಕಳೆದ ಶುಕ್ರವಾರ ಕಾಂಗ್ರೆಸ್ ಪಕ್ಷದ ವಿವಿಧ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಐಟಿ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿತ್ತು. ಪ್ರಾಧಿಕಾರವು ಮುಂದಿನ ವಿಚಾರಣೆಯವರೆಗೆ ಬ್ಯಾಂಕ್ ಖಾತೆ ಬಳಸಲು ಕಾಂಗ್ರೆಸ್‌ಗೆ ಅನುವು ಮಾಡಿಕೊಟ್ಟಿತ್ತು. ಇದರಿಂದ ಪಕ್ಷ ತಾತ್ಕಾಲಿಕ ನಿರಾಳವಾಗಿತ್ತು.

“ತನಿಖಾ ಸಂಸ್ಥೆಗಳ ಕ್ರಮ ಅನಿಯಂತ್ರಿವಾದರೆ ಪ್ರಜಾಪ್ರಭುತ್ವ ಕೊನೆಗೊಳ್ಳಲಿದೆ. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಕಾಂಗ್ರೆಸ್ ಕೋಶಾಧಿಕಾರಿ (ಖಜಾಂಚಿ) ಅಜಯ್ ಮಾಕೆನ್ ಹೇಳಿದ್ದಾರೆ.

“ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಪ್ರಕರಣ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ
ಕಾಂಗ್ರೆಸ್ ಮತ್ತು ಭಾರತೀಯ ಯುವ ಕಾಂಗ್ರೆಸ್‌ನ ವಿವಿಧ ಬ್ಯಾಂಕ್ ಖಾತೆಗಳಿಂದ ₹65 ಕೋಟಿ ಕಡಿತಗೊಳಿಸಲು ಆದಾಯ ತೆರಿಗೆ ಇಲಾಖೆ ವಿವಿಧ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ” ಎಂದು ಮಾಕನ್ ಹೇಳಿದ್ದಾರೆ.

“ಕಾಂಗ್ರೆಸ್‌ನ ಆದಾಯ ತೆರಿಗೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದಿದ್ದ ಆದಾಯ ತೆರಿಗೆ ಇಲಾಖೆಯು ₹210 ಕೋಟಿ ವಸೂಲು ಮಾಡಲು ಮುಂದಾಗಿತ್ತು. ಈ ಕುರಿತು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಪ್ರಾಧಿಕಾರವು ತಡೆ ನೀಡಿದೆ. ಹೀಗಿದ್ದರೂ, ಪಕ್ಷದ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಲು ಮುಂದಾಗಿರುವುದು ಪ್ರಜಾಸತ್ತಾತ್ಮಕವಾದ ನಡೆಯಲ್ಲ” ಎಂದಿದ್ದಾರೆ.

ಆದಾಯ ತೆರಿಗೆ ಇಲಾಖೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಅಜಯ್ ಮಾಕನ್ ಪ್ರಕರಣ ಐಟಿ ಮೇಲ್ಮನವಿ ಪ್ರಾಧಿಕಾರದಲ್ಲಿ ಇರುವುದರಿಂದ ಹಣವನ್ನು ಯಾವುದೇ ಕಾರಣಕ್ಕೂ ತೆಗೆಯದಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

“ಆತಂಕಕಾರಿ ಬೆಳವಣಿಗೆ, ಕೇಂದ್ರ ಸರ್ಕಾರದ ಏಜೆನ್ಸಿಗಳ ಕ್ರಮಗಳ ಬಗ್ಗೆ ಕಳವಳ ಹೆಚ್ಚುತ್ತಿದೆ. ಭಾರತದಲ್ಲಿ ಬಹು ಪಕ್ಷ ವ್ಯವಸ್ಥೆಗೆ ಸಂಭಾವ್ಯ ಅಪಾಯವಿದೆ. ಇದನ್ನು ತಡೆಯದಿದ್ದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳಲಿದೆ. ನ್ಯಾಯಾಂಗದ ಮಧ್ಯಪ್ರವೇಶ ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳೇ ನಾಶವಾಗಲಿವೆ” ಎಂದು ಮಾಕನ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಆಧಾರ್ ನಿಷ್ಕ್ರಿಯ; ಪ್ರಧಾನಿ ಮೋದಿಗೆ ಪತ್ರ ಬರೆದ ಪಶ್ಚಿಮ ಬಂಗಾಳ ಸಿಎಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಬಿಟ್ಟು ರಿಲಯನ್ಸ್ ರಿಫೈನರಿ ಇರುವ ಜಾಮ್‌ನಗರಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಮುಂಬರುವ ಭಾರತ ಭೇಟಿ ಹಾಗೂ ವಿದೇಶಾಂಗ ಸಚಿವಾಲಯದ ನಿರ್ಧಾರಗಳ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ...

ದೆಹಲಿ ಪ್ರತಿಭಟನೆ: ‘ತಿರಂಗ ಹಾರಿಸಿದ್ದಕ್ಕೆ ಜೈಲಿಗೆ ಹೋಗಲೂ ಸಿದ್ಧ’: ಮೋದಿ ಸರ್ಕಾರದ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ

ನವದೆಹಲಿ: ರಾಷ್ಟ್ರಧ್ವಜ ಹಾರಿಸುವುದನ್ನೇ ಅಪರಾಧವೆಂದು ಪರಿಗಣಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ತಿರಂಗ ಹಾರಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾದರೂ ಸಿದ್ಧ ಎಂದು ಘೋಷಿಸಿದ್ದಾರೆ....

“ಅಮೆರಿಕ-ಪಾಕಿಸ್ತಾನ್ ಯುದ್ಧವಾದರೆ ನಾವು ಪಾಕ್ ಪರ ನಿಲ್ಲುತ್ತೇವೆ”: ರಾಜಸ್ಥಾನ ಬಿಜೆಪಿ ಅಧ್ಯಕ್ಷರಿಂದ ವಿವಾದಾತ್ಮಕ ಹೇಳಿಕೆ!

"ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಹೊರೆಯ ದೇಶವಾಗಿರುವುದರಿಂದ ನಾವು ಅದರ ಜೊತೆ ಇರುತ್ತೇವೆ" ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ...

ಗ್ಯಾನೇಶ್ ಕುಮಾರ್ ರಕ್ಷಣೆಗಾಗಿ ದೆಹಲಿಯನ್ನೇ ಭಾರತ-ಪಾಕ್ ಗಡಿಯನ್ನಾಗಿ ಪರಿವರ್ತಿಸಿದ ಮೋದಿ: ಅಭಿಜೀತ್ ದಿಪ್ಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ನಡೆದಿರುವ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ಸಂಘಟನೆಗಳು,...

ಸಹಪಾಠಿಗಳ ಜಾತಿ, ಪ್ರವೇಶದ ವರ್ಗ, ರ‍್ಯಾಂಕ್ ಕೇಳಬೇಡಿ: ದರ್ಶನ್, ಸಾಹಿಲ್ ಸಾವುಗಳ ಬೆನ್ನಲ್ಲೇ ತಾರತಮ್ಯ ವಿರೋಧಿ ನಿಯಮ ನೆನಪಿಸಿದ ಐಐಟಿ ಬಾಂಬೆ

ಮುಂಬೈ: ಸಹಪಾಠಿಗಳ ಜಾತಿ, ಪ್ರವೇಶದ ವರ್ಗ ಅಥವಾ ಪ್ರವೇಶ ಪರೀಕ್ಷೆಯ ರ‍್ಯಾಂಕ್‌ಗಳ ಬಗ್ಗೆ ಪ್ರಶ್ನಿಸುವುದು ತಾರತಮ್ಯಕ್ಕೆ ಕಾರಣವಾಗಬಹುದು. ಇಂತಹ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ತನ್ನ ವಿದ್ಯಾರ್ಥಿಗಳಿಗೆ...

ಲೈಂಗಿಕ ಕಿರುಕುಳದ ಆರೋಪ ಮಾಡಿದ ಪತ್ರಕರ್ತೆಯ ವಿರುದ್ಧ ಜಾತಿ ನಿಂದನೆ ಪ್ರಕರಣ: ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುವಾಗ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಮಹಿಳಾ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ...

ಸಿಇಸಿ ವಿರೋಧಿ ಪ್ರತಿಭಟನೆ: ಮೆಟ್ರೋ ನಿರ್ಬಂಧ, ಇಂಟರ್ನೆಟ್ ಸ್ಥಗಿತ ಪ್ರಕರಣ: ಸುಪ್ರೀಂ ಕೋರ್ಟ್ ಗೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಕಾರ್ಯದರ್ಶಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳ ಮೇಲೆ ನಿರ್ಬಂಧ ವಿಧಿಸಿದ ಹಾಗೂ ಇಂಟರ್ನೆಟ್...

‘ಯಾರೂ ನಮ್ಮನ್ನು ಬೆದರಿಸಿ ಮಣಿಸಲು ಸಾಧ್ಯವಿಲ್ಲ’: ವಿಪಕ್ಷಗಳ ಸುಪ್ರೀಂ ಕೋರ್ಟ್ ಮಾರ್ಚ್ ಕುರಿತು ಸಿಜೆಐ ಹೇಳಿಕೆ

ನ್ಯಾಯಾಲಯ ಸಂಕೀರ್ಣಗಳ ಸಮೀಪ ಪ್ರತಿಭಟನೆಗಳು ಮತ್ತು ಮೆರವಣಿಗೆಗಳಿಗೆ ನಿಯಂತ್ರಕ ಚೌಕಟ್ಟೊಂದನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಇಂದು (ಅ.15) ನೋಟಿಸ್ ಜಾರಿ ಮಾಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...