Homeಮುಖಪುಟಸಾಮೂಹಿಕ ಆಧಾರ್ ನಿಷ್ಕ್ರಿಯ; ಪ್ರಧಾನಿ ಮೋದಿಗೆ ಪತ್ರ ಬರೆದ ಪಶ್ಚಿಮ ಬಂಗಾಳ ಸಿಎಂ

ಸಾಮೂಹಿಕ ಆಧಾರ್ ನಿಷ್ಕ್ರಿಯ; ಪ್ರಧಾನಿ ಮೋದಿಗೆ ಪತ್ರ ಬರೆದ ಪಶ್ಚಿಮ ಬಂಗಾಳ ಸಿಎಂ

- Advertisement -
- Advertisement -

ರಾಜ್ಯದಲ್ಲಿ ಆಧಾರ್ ಕಾರ್ಡ್‌ಗಳ ‘ಸಾಮೂಹಿಕ ನಿಷ್ಕ್ರಿಯಗೊಳಿಸುವಿಕೆ’ ಕುರಿತು ಕಳವಳ ವ್ಯಕ್ತಪಡಿಸಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಆಧಾರ್ ಸಂಬಂಧಿಸಿದ ನಾಗರಿಕರ ದೂರುಗಳನ್ನು ದಾಖಲಿಸಲು ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು; ಅಗತ್ಯವಿದ್ದರೆ ರಾಜ್ಯ ಸರ್ಕಾರವು ಸಂತ್ರಸ್ತ ವ್ಯಕ್ತಿಗಳಿಗೆ ಪ್ರತ್ಯೇಕ ಕಾರ್ಡ್‌ಗಳನ್ನು ವಿತರಿಸುತ್ತದೆ, ಇದರಿಂದ ಯಾರೂ ಕಲ್ಯಾಣ ಯೋಜನೆಗಳಿಂದ ವಂಚಿತರಾಗುವುದಿಲ್ಲ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಸಿಎಂ ಬ್ಯಾನರ್ಜಿ ಅವರು ಆಧಾರ್ ನಿಷ್ಕ್ರಿಯ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿ,  ತಾಂತ್ರಿಕ ಸಮಸ್ಯೆಯಿಂದ ನಿಷ್ಕ್ರಿಯಗೊಂಡಿರುವ ಆಧಾರ್ ಅನ್ನು ಮರು-ಸಕ್ರಿಯಗೊಳಿಸಲು ನಿರ್ಧರಿಸಿದರು. ಕೇಂದ್ರದ ಕಿರಿಯ ಸಚಿವ ಶಾಂತನು ಠಾಕೂರ್ ಅವರು ‘ತಾಂತ್ರಿಕ ಸಮಸ್ಯೆಯಿಂದಾಗಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡಿರುವ ನಿರಾಶ್ರಿತರಿಂದ ಕ್ಷಮೆಯಾಚಿಸಬೇಕು’ ಎಂದು ಕೋರಿದರು. ‘ಕೆಲವೇ ದಿನಗಳಲ್ಲಿ ಕಾರ್ಡ್‌ಗಳನ್ನು ಮರು-ಸಕ್ರಿಯಗೊಳಿಸಲಾಗುವುದು’ ಎಂದು ಅವರು ಎಲ್ಲರಿಗೂ ಭರವಸೆ ನೀಡಿದರು.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಪ್ರಕಟಣೆಯಲ್ಲಿ, ‘ಆಧಾರ್ ಡೇಟಾಬೇಸ್ ಅನ್ನು ನವೀಕರಿಸಲು ಕೈಗೊಂಡ ಚಟುವಟಿಕೆಗಳ ಸಂದರ್ಭದಲ್ಲಿ, ಸೂಚನೆಗಳು ಆಧಾರ್ ಸಂಖ್ಯೆ ಹೊಂದಿರುವವರಿಗೆ ಕಾಲಕಾಲಕ್ಕೆ ನೀಡಲಾಗುತ್ತದೆ. ಈ ಸಂಬಂಧ, ಯಾವುದೇ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಈ ಬೆಳವಣಿಗೆಗಳ ನಡುವೆಯೇ, ‘ಆಧಾರ್ ಕುಂದುಕೊರತೆಗಳ ಪೋರ್ಟಲ್ ಮಂಗಳವಾರದಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ’ ಎಂದು ಪಶ್ಚಿಮ ಬಂಗಾಳ ಸರ್ಕಾರದ ಸಿಎಂ ಹೇಳಿದ್ದಾರೆ.

‘ವಿಶೇಷವಾಗಿ ಬಂಗಾಳದ ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಜನರ ಆಧಾರ್ ನಿಷ್ಕ್ರಿಯಗೊಳಿಸುವಿಕೆಯು, ಕೇಂದ್ರ ಸರ್ಕಾರದ ವಿವೇಚನಾರಹಿತ ಕಾನೂನುಬಾಹಿರ ಕ್ರಮವಾಗಿದೆ ಎಂದು’ ಮಮತಾ ಬ್ಯಾನರ್ಜಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

‘ಕಾರ್ಡ್ ಹೊಂದಿರುವವರನ್ನೂ ಎಂದಿಗೂ ಕೇಳದೆ, ಯಾವುದೇ ವಿಚಾರಣೆ ನಡೆಸಲಿಲ್ಲ ಮತ್ತು ಆಧಾರ್ ಪರಿಶೀಲನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿಲ್ಲ. ಕಾರಣಗಳನ್ನು ನೀಡದೆ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಇಂತಹ ಹಠಾತ್ ಕ್ರಮಕ್ಕೆ ಕಾರಣಗಳ ಬಗ್ಗೆ ನಾನು ನಿಮ್ಮಿಂದ ತಿಳಿಯಲು ಬಯಸುತ್ತೇನೆ. ಇದು ಕೇವಲ ಅರ್ಹ ಫಲಾನುಭವಿಗಳನ್ನು ಪ್ರಯೋಜನಗಳಿಂದ ವಂಚಿತಗೊಳಿಸುವ ಸಲುವಾಗಿಯೇ ಅಥವಾ ಲೋಕಸಭೆಯ ಮೊದಲು ಚುನಾವಣೆಗೂ ಮೊದಲು ಭೀತಿಯ ಪರಿಸ್ಥಿತಿಯನ್ನು ಸೃಷ್ಟಿಸುವುದಕ್ಕಾಗಿಯೇ’ ಎಂದು ಅವರು ಕೇಂದ್ರವನ್ನು ಪ್ರಶ್ನಿಸಿದ್ದಾರೆ.

ಕೇಂದ್ರದ ಸಹಾಯಕ ಸಚಿವ ಶಾಂತನು ಠಾಕೂರ್ ಅವರು ಗೃಹ ಸಚಿವ ಅಮಿತ್ ಶಾ, ಐಟಿ ಸಚಿವ ಅಶ್ವಿನಿ ವೈಷ್ಣವ್ ಮತ್ತು ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಸುಕಾಂತ ಮಜುಂದಾರ್ ಅವರೊಂದಿಗೆ ಈ ವಿಷಯದ ಕುರಿತು ದೆಹಲಿಯಲ್ಲಿ ಸಭೆ ನಡೆಸಿದರು. ನಂತರ, ‘ತಾಂತ್ರಿಕ ಸಮಸ್ಯೆಯಿಂದ ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡಿರುವ ನಿರಾಶ್ರಿತರಿಂದ ನಾನು ಕ್ಷಮೆಯಾಚಿಸುತ್ತೇನೆ. ಕೆಲವೇ ದಿನಗಳಲ್ಲಿ ಅವುಗಳನ್ನು ಮರುಸ್ಥಾಪಿಸಲಾಗುವುದು’ ಎಂದು ಅವರು ಹೇಳಿದರು.

ಸಂತ್ರಸ್ಥ ಜನರು ತಮ್ಮ ಕುಂದುಕೊರತೆಗಳನ್ನು ತಿಳಿಸಲು ಮತ್ತು ಆಧಾರ್ ಮರುಸ್ಥಾಪನೆಗಾಗಿ ಅರ್ಜಿ ಸಲ್ಲಿಸಲು ಇಮೇಲ್ ಖಾತೆ – [email protected] ಮತ್ತು WhatsApp ಸಂಖ್ಯೆ – 9647534453 ಅನ್ನು ಬಳಸುವಂತೆ ಸಹ ಸಲಹೆ ನೀಡಿದ್ದಾರೆ. ‘ಆಧಾರ್ ಮರು ಪರಿಶಿಲನೆಗೆ ಯಾವುದೇ ದಾಖಲೆಯ ಅಗತ್ಯವಿಲ್ಲ. ನೀವು ಅರ್ಜಿಯಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಬೇಕಾಗಿರುವುದು’ ಎಂದು ಠಾಕೂರ್ ಹೇಳಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ, ‘ಈ ಮೂಲಕ ಜನರು  ಬ್ಯಾಂಕ್‌ ಪ್ರಯೋಜನಗಳಿಂದ ವಂಚಿತರಾಗುತ್ತಾರೆ. ಬಿಜೆಪಿಯು ಚುನಾವಣೆಗೆ ಮುಂಚಿತವಾಗಿ ಎನ್‌ಆರ್‌ಸಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆಯೇ? ಬಿಜೆಪಿ ಮೊದಲು ಆಧಾರ್‌ಗಳನ್ನು ಕಸಿದುಕೊಂಡು ನಂತರ ಸಿಎಎ ನೀಡಲು ಯೋಜಿಸುತ್ತಿದೆಯೇ? ಈ ಜನರು ಸರಿಯಾದ ವಿಧಾನಗಳ ಮೂಲಕ ತಮ್ಮ ಆಧಾರ್‌ಗಳನ್ನು ಪಡೆದಿದ್ದಾರೆ’ ಎಂದಿದ್ದಾರೆ.

‘ನಾವು ಯುಐಡಿಎಐ ರಾಜ್ಯ ಕಚೇರಿ ಕೋಲ್ಕತ್ತಾ (ಪಶ್ಚಿಮ ಬಂಗಾಳ) ಸುಭೋದೀಪ್ ಚೌಧರಿ ಅವರನ್ನು ಭೇಟಿ ಮಾಡಿದ್ದೇವೆ. ದೆಹಲಿ ಮತ್ತು ಬೆಂಗಳೂರಿನಿಂದ ಆಧಾರ್ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಹೇಳಿದರು’ ಎಂದು ಬಂಗಾಳದ ಮುಖ್ಯ ಕಾರ್ಯದರ್ಶಿ ಬಿ.ಪಿ. ಗೋಪಾಲಿಕಾ ಹೇಳಿದ್ದಾರೆ.

‘ಸುಮಾರು 900-1,000 ಜನರು ತಮ್ಮ ವೆಬ್‌ಸೈಟ್ ಮೂಲಕ ಅಥವಾ ನೇರವಾಗಿ ಅವರ ಕಚೇರಿಗೆ ಬರುವ ಮೂಲಕ  ಸಂಪರ್ಕಿಸಿದ್ದಾರೆ. ನಾವು ನಿಯಮಗಳ ಬಗ್ಗೆ ಅವರನ್ನು ಕೇಳಿದಾಗ, ಇದು ಆಧಾರ್ ನಿಯಂತ್ರಣದ 28-ಎ ಪ್ರಕಾರ ಮಾಡಲಾಗಿದೆ ಎಂದು ಹೇಳಿದರು. ಆದರೆ, ಯಾವುದೇ ನಿಷ್ಕ್ರಿಯಗೊಳಿಸುವಿಕೆಗೆ ಮುಂಚಿತವಾಗಿ, ಕ್ಷೇತ್ರ ವಿಚಾರಣೆ ಮತ್ತು ವೈಯಕ್ತಿಕ ವಿಚಾರಣೆಯನ್ನು ಹೊಂದಿರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ನಿಯಮಗಳನ್ನು ಅನುಸರಿಸಿಲ್ಲ…. ಹಾಗೇನಾದರೂ ಮತ್ತೆ ಸಂಭವಿಸಿದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ನಾವು ಬಂಗಾಳದಲ್ಲಿ ಎನ್‌ಆರ್‌ಸಿಯನ್ನು ಅನುಮತಿಸುವುದಿಲ್ಲ. ನಾವು ರಕ್ತವನ್ನು ಚೆಲ್ಲುತ್ತೇವೆ; ಆದರೆ ಬಂಗಾಳದಿಂದ ಒಬ್ಬ ವ್ಯಕ್ತಿಯನ್ನು ಹೊರಗಿಡಲು ಅನುಮತಿಸುವುದಿಲ್ಲ…. ನಾವು ಬಂಗಾಳದಲ್ಲಿ ಬಂಧನ ಶಿಬಿರಗಳನ್ನು ಅನುಮತಿಸುವುದಿಲ್ಲ. ಜನರು ಪೌರತ್ವದ ಭರವಸೆ ನೀಡಿದ ಮತುವಾ ಸಮುದಾಯವನ್ನು ಈಗ ವಿದೇಶಿಯರೆಂದು ಕರೆಯಲಾಗುತ್ತಿದೆ, ಇದು ಅವರಿಗೆ ಅಗೌರವವಲ್ಲವೇ’ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

‘ಆಧಾರ್‌ನೊಂದಿಗೆ ಆಟವಾಡುತ್ತಿರುವವರನ್ನು ಜನರು ಅಂಧಾರ್ (ಕತ್ತಲೆ)ಗೆ ಎಸೆಯುವ ಸಮಯ ಬರುತ್ತದೆ. ಪರ್ಯಾಯ ಕಾರ್ಡ್ ನಿಮ್ಮ ಗುರುತನ್ನು ರಕ್ಷಿಸಲು ಮಾತ್ರವಲ್ಲದೆ ನಮ್ಮ ಕಲ್ಯಾಣ ಯೋಜನೆಗಳನ್ನು ಪಡೆದುಕೊಳ್ಳಲು ನಿಮಗೆ ಅವಕಾಶ ನೀಡುತ್ತದೆ. ನಾವು ಜಮೀನ್ದಾರರಲ್ಲ, ನೀವು ಪಹರಾದಾರರು; ಭಯಪಡಬೇಡಿ. ಇಲ್ಲಿ ಯಾವುದೇ ಎನ್‌ಆರ್‌ಸಿ ಇರುವುದಿಲ್ಲ. ಇದು ಅಸ್ಸಾಂ, ಉತ್ತರ ಪ್ರದೇಶ, ಬಿಹಾರ ಅಥವಾ ರಾಜಸ್ಥಾನ ಅಲ್ಲ. ಇದು ಕವಿಗುರುವಿನ ಬಂಗಾಳ’ ಎಂದು ಕೇಂದ್ರದಕ್ಕೆ ತಿರುಗೇಟು ಕೊಟ್ಟರು.

ಇದನ್ನೂ ಓದಿ; ಇಂಡಿಯಾ ಬ್ಲಾಕ್ ಸೇರಿಲ್ಲ; ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವರಿಗೆ ನಮ್ಮ ಬೆಂಬಲ: ಕಮಲ್ ಹಾಸನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...