Homeಮುಖಪುಟಇಂಡಿಯಾ ಬ್ಲಾಕ್ ಸೇರಿಲ್ಲ; ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವರಿಗೆ ನಮ್ಮ ಬೆಂಬಲ: ಕಮಲ್ ಹಾಸನ್

ಇಂಡಿಯಾ ಬ್ಲಾಕ್ ಸೇರಿಲ್ಲ; ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವರಿಗೆ ನಮ್ಮ ಬೆಂಬಲ: ಕಮಲ್ ಹಾಸನ್

- Advertisement -
- Advertisement -

‘ನಮ್ಮ ಪಕ್ಷದ ರಾಜಕೀಯ ಮೈತ್ರಿ ಕುರಿತು ಚರ್ಚೆಗಳು ನಡೆಯುತ್ತಿವೆ; ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ. ಜತೆಗೆ, ಊಳಿಗಮಾನ್ಯ ರಾಜಕೀಯದ ಭಾಗವಾಗುವುದನ್ನು ಬಿಟ್ಟುಬಿಡುವ ಯಾವುದೇ ಬಣವನ್ನು ಬೆಂಬಲಿಸುತ್ತೇವೆ’ ಎಂದು ನಟ, ಎಂಎನ್‌ಎಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಹೇಳಿದರು.

ತಮ್ಮ ಮಕ್ಕಳ್ ನೀದಿ ಮೈಯಂನ 7 ನೇ ವಾರ್ಷಿಕೋತ್ಸವದ ಆಚರಣೆ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ತಮಿಳು ನಟ ವಿಜಯ್ ಅವರ ಇತ್ತೀಚಿನ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದರು.

ಬಹುಪಕ್ಷೀಯ ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್‌ಗೆ ಎಂಎನ್‌ಎಂ ಸೇರುತ್ತದೆಯೇ ಎಂಬ ಪ್ರಶ್ನೆಗೆ, ‘ನಾನು ಈಗಾಗಲೇ ಹೇಳಿದ್ದೇನೆ, ನೀವು ಪಕ್ಷ ರಾಜಕಾರಣವನ್ನು ಮಸುಕುಗೊಳಿಸಬೇಕು ಮತ್ತು ರಾಷ್ಟ್ರದ ಬಗ್ಗೆ ಯೋಚಿಸಬೇಕಾದ ಸಮಯ ಇದು. ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾರಾದರೂ, ನನ್ನ ಎಂಎನ್‌ಎಂ ಮಾಡುತ್ತದೆ’ ಎಂದರು.

‘ಆದರೆ, ಸ್ಥಳೀಯ ಊಳಿಗಮಾನ್ಯ ರಾಜಕೀಯ ಮಾಡುವವರೊಂದಿಗೆ’ ಎಂಎನ್‌ಎಂ ಕೈಜೋಡಿಸುವುದಿಲ್ಲ ಎಂದು ಅವರು ಹೇಳಿದರು.

ತಮ್ಮ ಪಕ್ಷದ ಸಂಭವನೀಯ ರಾಜಕೀಯ ಮೈತ್ರಿ ಕುರಿತು, ‘ಚರ್ಚೆಗಳು ನಡೆಯುತ್ತಿವೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ಒಳ್ಳೆಯ ಸುದ್ದಿ ಬಂದರೂ ಮಾಧ್ಯಮಗಳಿಗೆ ತಿಳಿಸಲಾಗುವುದು’ ಎಂದರು. ಮುಂಬರುವ ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಜತೆ ಕಮಲ್ ಹಾಸನ್ ಪಕ್ಷ ಮೈತ್ರಿ ಮಾತುಕತೆಯಲ್ಲಿ ತೊಡಗಿದೆ ಎಂಬ ಊಹಾಪೋಹಗಳು ಎದ್ದಿವೆ.

ಎಂಎನ್‌ಎಂ ಈ ಹಿಂದೆ 2019 ರ ಲೋಕಸಭೆ ಚುನಾವಣೆ ಮತ್ತು 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗಳನ್ನು ಎದುರಿಸಿತ್ತು. ಆದರೆ, ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ.

ಇದನ್ನೂ ಓದಿ; ನನ್ನ ವಿರುದ್ಧ ಪ್ರತಿಭಟಿಸಲು ಆಡಳಿತ ಪಕ್ಷವು ಪಿಎಫ್‌ಐ ಸದಸ್ಯರನ್ನು ನೇಮಿಸಿಕೊಂಡಿದೆ: ಕೇರಳ ರಾಜ್ಯಪಾಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read