Homeಮುಖಪುಟರಾಜಕೀಯ ಪ್ರಚಾರಕ್ಕೆ ಸೇನೆಯ ದುರ್ಬಳಕೆ: ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

ರಾಜಕೀಯ ಪ್ರಚಾರಕ್ಕೆ ಸೇನೆಯ ದುರ್ಬಳಕೆ: ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇನೆಯನ್ನು “ರಾಜಕೀಯವಾಗಿ” ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆಡಳಿತ ಪಕ್ಷವು “ಸೈನಿಕರ ಜನಪ್ರಿಯತೆಯ ಮೇಲೆ ಬಂಡವಾಳ ಹೂಡುವ” ಮೂಲಕ ಸೇನೆಯ ಘನತೆಗೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರವು ದೇಶಾದ್ಯಂತ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಸೇನೆಯನ್ನು ಕೇಳಿದೆ, ಅಲ್ಲಿ ಸೈನಿಕರ ಶೌರ್ಯಕ್ಕೆ ಬದಲಾಗಿ ಅದರ ಯೋಜನೆಗಳನ್ನು ಪ್ರಚಾರ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸೇನೆಯ ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಧಾನಿ ಮೋದಿ ರಾಜಕೀಯ ಪುಚಾರ ಮಾಡುತ್ತಿದ್ದಾರೆ. ರಾಜಕೀಯ ಪ್ರಚಾರಕ್ಕಾಗಿ ಭಾರತೀಯ ಸೇನೆಯನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಕಳೆದ 75 ವರ್ಷಗಳಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡಲು ದೇಶದಾದ್ಯಂತ 882 ಸೆಲ್ಸಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಸೇನೆಗೆ ತಿಳಿಸಿದೆ. ಅಲ್ಲಿ ಧೀರ ಯೋಧರ ಬದಲು ಮೋದಿಯ ಪ್ರಚಾರ ನಡೆಯಲಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಹೆಚ್‌ಡಿಕೆ, ನಿಖಿಲ್‌ರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಉಚ್ಚಾಟಿಸಿದ್ದಾರೆ ಎಂಬುದು ಸುಳ್ಳು

ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗದ ಬಗ್ಗೆ, ಕಾಂಗ್ರೆಸ್‌ ಬಹಳ ಹೆಮ್ಮಪಡುತ್ತದೆ. ರಾಷ್ಟ್ರೀಯತೆಯ ಪಾಠಗಳನ್ನು ಉಪದೇಶಿಸುವ ಬಿಜೆಪಿಯು ಭಾರತೀಯ ಸೇನೆಯ ಘನತೆಗೆ ಧಕ್ಕೆ ತಂಬದ ಎಂದು ಖರ್ಗೆ ಹೇಳಿದ್ದಾರೆ.

”ದೇಶವನ್ನು ರಕ್ಷಿಸುವ ನಮ್ಮ ಭಾರತೀಯ ಸೇನೆಯ ವೀರ ಸೈನಿಕರ ಜನಪ್ರಿಯತೆಯನ್ನು ಬಂಡವಾಳವಾಗಿಟ್ಟುಕೊಂಡು, ಮೋದಿಜೀ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಸೇನೆಯನ್ನು ಚುನಾವಣೆಗೆ ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ, ಮೋದಿ ಸರ್ಕಾರವು ಕಳೆದ 75 ವರ್ಷಗಳಲ್ಲಿ ಎಂದಿಗೂ ಮಾಡದ ಕೆಲಸವನ್ನು ಮಾಡಿದೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...