HomeUncategorizedಮುಂದಿನ ವಾರ ಸಂಸತ್‌ನಲ್ಲಿ ವಿವಾದಿತ ದೆಹಲಿ ಸೇವಾ ಮಸೂದೆ ಮಂಡನೆ; ಪ್ರತಿಪಕ್ಷಗಳ ವಿರೋಧದ ಮಧ್ಯೆ ಅಂಗಿಕಾರ...

ಮುಂದಿನ ವಾರ ಸಂಸತ್‌ನಲ್ಲಿ ವಿವಾದಿತ ದೆಹಲಿ ಸೇವಾ ಮಸೂದೆ ಮಂಡನೆ; ಪ್ರತಿಪಕ್ಷಗಳ ವಿರೋಧದ ಮಧ್ಯೆ ಅಂಗಿಕಾರ ಸಾಧ್ಯತೆ

- Advertisement -
- Advertisement -

ವಿವಾದಿತ ದೆಹಲಿ ಸೇವಾ ವಿಷಯಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಈ ಬೆಳವಣಿಗೆಯು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮತ್ತು ವಿರೋಧ ಪಕ್ಷ I.N.D.I.A ಒಕ್ಕೂಟದ ನಡುವಿನ ತಿಕ್ಕಾಟಕ್ಕೆ ವೇದಿಕೆಯಾಗಿದೆ. ಸಂಸತ್ತಿನಲ್ಲಿ ಈ ಶಾಸನವನ್ನು ಅಂಗೀಕರಿಸಿದರೆ I.N.D.I.Aದ 26 ಪಕ್ಷಗಳಲ್ಲಿ ಒಂದಾದ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ನೇರವಾಗಿ ಪರಿಣಾಮ ಬೀರುತ್ತದೆ. ಪ್ರತಿಪಕ್ಷಗಳು ಈ ಮಸೂದೆಯನ್ನು ಭಾರತದ ಒಕ್ಕೂಟ ರಚನೆಯ ಮೇಲಿನ ‘ದಾಳಿ ಎಂದು ಪದೇ ಪದೇ ಬಣ್ಣಿಸುತ್ತಿವೆ.

ಈ ವಿಚಾರವನ್ನು ಘೋಷಣೆ ಮಾಡಿದ ಕ್ಷಣದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಂಸತ್ತಿನಲ್ಲಿ ಮಸೂದೆ ಅಂಗಿಕಾರವಾಗುವ ಸಾಧ್ಯತೆ

ವೈಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಆಂಧ್ರ ಪ್ರದೇಶದ ಸಿಎಂ ಜಗನ್‌ಮೋಹನ್ ರೆಡ್ಡಿಯವರು ತಮ್ಮ ಪಕ್ಷ NDA ಒಕ್ಕೂಟಕ್ಕೆ ಬೆಂಬಲ ನೀಡುತ್ತದೆ ಎಂದು ಗುರುವಾರವಷ್ಟೇ ಘೋಷಿಸಿದ್ದಾರೆ.

ದೆಹಲಿಯಲ್ಲಿನ ಸೇವೆ ಮತ್ತು ವರ್ಗಾವಣೆಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಂಡಿಸಲು ಹೊರಟಿರುವ ವಿವಾದಾತ್ಮಕ ಮಸೂದೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದರು ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಮಣಿಪುರದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಪೂರ್ಣ ವಿವರ ನೀಡಬೇಕೆದು ಪಟ್ಟು ಹಿಡಿದು ಅವಿಶ್ವಾಸ ನಿರ್ಣಯ ಘೋಷಿಸಿರುವ ಹಿನ್ನೆಲೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮೋದಿ ಸರ್ಕಾರದ ಪರ ಮತ ಹಾಕಲು ನಿರ್ಧರಿಸಿದೆ.

ದೆಹಲಿ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಬಹುಮತ ದೊರೆಯದಂತೆ ನೋಡಿಕೊಳ್ಳಲು ಆಪ್ ತೀವ್ರ ಪ್ರಯತ್ನ ನಡೆಸಿತ್ತು. ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಲ್ಲದೇ INDIA ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಈ ಬೆನ್ನಲ್ಲೆ NDA ಒಕ್ಕೂಟವು ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಗಾಳ ಹಾಕಿ ಯಶಸ್ವಿಯಾಗಿದೆ. ರಾಜ್ಯಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಒಂಬತ್ತು ಸದಸ್ಯರಿದ್ದು, ಅವರ ಬೆಂಬಲವು ಮಸೂದೆ ಅಂಗೀಕಾರಕ್ಕೆ ನಿರ್ಣಾಯಕವಾಗಿತ್ತು. ಅದೀಗ ಮೋದಿ ಸರ್ಕಾರದ ಪರ ವಹಿಸಿದೆ.

ದೆಹಲಿ ಸೇವಾ ಮಸೂದೆ

2023ರ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ, ಅಥವಾ, ಸರಳವಾಗಿ ಇದನ್ನು ಸೇವೆಗಳ ಮಸೂದೆ ಎಂದು ಹೇಳಲಾಗುತ್ತದೆ. ಈ ಒಂದು ಸುಗ್ರೀವಾಜ್ಞೆಯನ್ನು ಬದಲಿಸಲು ಮತ್ತು ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರಿಗಳ ಮೇಲೆ ಕೇಂದ್ರದ ನಿಯಂತ್ರಣವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...