Homeಮುಖಪುಟಮುಂಬೈಯನ್ನು ಪಿಒಕೆಗೆ ಹೋಲಿಕೆ ವಿಚಾರ: ಟ್ವಿಟ್ಟರ್‌ನಲ್ಲಿ ಕಂಗನಾ ವಿರುದ್ಧ ಆಕ್ರೋಶ

ಮುಂಬೈಯನ್ನು ಪಿಒಕೆಗೆ ಹೋಲಿಕೆ ವಿಚಾರ: ಟ್ವಿಟ್ಟರ್‌ನಲ್ಲಿ ಕಂಗನಾ ವಿರುದ್ಧ ಆಕ್ರೋಶ

ಹಲವರು ನನಗೆ ಮುಂಬೈಗೆ ಬಾರದಂತೆ ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ ನಾನು ಸೆ.9ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೇನೆ. ಧೈರ್ಯವಿದ್ದರೆ ತಡೆಯಲಿ ನೋಡೋಣ ಎಂದಿದ್ದಾರೆ ಕಂಗನಾ.

- Advertisement -
- Advertisement -

ಬಾಲಿವುಡ್ ನಟಿ ಕಂಗನಾ ರಾಣಾವತ್ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಟ್ವಿಟ್ಟರ್‌ನಲ್ಲಿ ಸಾರ್ವಜನಿಕರು, ರಾಜಕಾರಣಿಗಳು ಸೇರಿದಂತೆ ನಟ, ನಟಿಯರು ರಾಣಾವತ್ ಪರ-ವಿರುದ್ಧ ಮುಗಿಬಿದ್ದಿದ್ದಾರೆ.

ಮರಾಠಿ ಚಲನಚಿತ್ರೋದ್ಯಮ ಮತ್ತು ಬಾಲಿವುಡ್ ಚಿತ್ರರಂಗದವರು ಕೂಡ ನಟಿಯ ಹೇಳಿಕೆಗೆ ಬಲವಾದ ಪ್ರತಿರೋಧ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಮಹಾರಾಷ್ಟ್ರದ ಸಾರ್ವಜನಿಕರು ಮತ್ತು ಮಹಾ ವಿಕಾಸ್ ಅಘಾಡಿ ಬೆಂಬಲಿಗರು ಸೇರಿ ರಾಣಾವತ್ ಹೇಳಿಕೆ ಉಲ್ಲೇಖಿಸಿ #AmchiMumbai ಮತ್ತು #ILoveMumbai ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಟ್ರೆಂಡಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಇತ್ತ ಉದ್ಧವ್ ಠಾಕ್ರೆ ಸಂಪುಟದಲ್ಲಿ ಕೆಲವು ಹಿರಿಯ ಮಂತ್ರಿಗಳು, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಸೇರಿ ಹಲವರು ಕಂಗನಾ ಟ್ವೀಟ್‌ಗಳನ್ನು ಟೀಕಿಸಿದ್ದಾರೆ.

ಇಂದು ಮುಂಬೈ ಮತ್ತು ಮಹಾರಾಷ್ಟ್ರ ನಮ್ಮ ಪೊಲೀಸರಿಂದ ಸುರಕ್ಷಿತವಾಗಿದೆ. ಇದು ಸುರಕ್ಷಿತವಲ್ಲ ಎಂದು ಭಾವಿಸುವವರಿಗೆ ಇಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಅನಿಲ್ ದೇಶ್ಮುಖ್ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ಹಲವರು ನನಗೆ ಮುಂಬೈಗೆ ಬಾರದಂತೆ ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ ನಾನು ಸೆಪ್ಟಂಬರ್ 9 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೇನೆ. ಧೈರ್ಯವಿದ್ದರೆ ತಡೆಯಲಿ ನೋಡೋಣ. ಮತ್ತು ನಾನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯವನ್ನು ಪೋಸ್ಟ್ ಮಾಡುತ್ತೇನೆ ಎಂದು ಕಂಗನಾ ಸವಾಲು ಹಾಕಿದ್ದಾರೆ.

ಮುಂಬೈ ಮತ್ತು ಮಹಾರಾಷ್ಟ್ರದ ಬಗ್ಗೆ ಕಂಗನಾ ರನೌತ್ ಅವರ ಹೇಳಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ. ಕಂಗನಾ ರಾಣಾವತ್ ಮಹಾರಾಷ್ಟ್ರಕ್ಕೆ ಏನನ್ನೂ ಕಲಿಸಲು ಪ್ರಯತ್ನಿಸಬಾರದು. ಅಲ್ಲದೆ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕಂಗನಾ ಮೂಲಕ ಬಿಜೆಪಿಯನ್ನು ಆಕ್ರಮಣ ಮಾಡಲು ಯಾರೂ ಪ್ರಯತ್ನಿಸಬಾರದು ಎಂದು ಬಿಜೆಪಿಯ ಹಿರಿಯ ಮುಖಂಡ ಆಶಿಶ್ ಶೆಲಾರ್ ಟ್ವೀಟ್ ಮಾಡಿದ್ದಾರೆ. ಆದರೆ ಈ ಎಲ್ಲಾ ಘಟನೆಗಳಿಂದ, ಕಾಮೆಂಟ್‌ಗಳಿಂದ ಬಿಜೆಪಿ ದೂರವೇ ಉಳಿದಿದೆ.

ಇತ್ತ ನಟಿ ರಾಣಾವತ್ ಬೆಂಬಲಿಗರು ಸಹ ಅವರ ಪರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಕಂಗನಾ ನಿಜ ಹೇಳಿದ್ದಾರೆ. ಭಾರತ ಸುರಕ್ಷಿತವಲ್ಲ ಎಂದು ಶಾರುಖ್ ಖಾನ್, ಅಮೀರ್ ಖಾನ್ ಹೇಳಿದರೆ ಸುಮ್ಮನಿರುತ್ತೀರಿ, ಕಂಗನಾ ಮುಂಬೈ ಸೇಫ್ ಅಲ್ಲ ಎಂದರೆ ಹೀಗೆ ಆಕ್ರಮಣ ಮಾಡುತ್ತೀರಿ ಎಂದಿದ್ದಾರೆ.

ರಾಣಾವತ್ ಅಭಿಮಾನಿಗಳು #KanganaVsSena ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಮಾಡಿದ್ದಾರೆ. ಮರಾಠಿ ಸಂಸ್ಕೃತಿ ಮತ್ತು ಶಿವಾಜಿ ಮಹಾರಾಜರನ್ನು ಕಂಗನಾ ಎಲ್ಲಿ ಅವಮಾನಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮುಗಿಬಿದ್ದು, ಮುಂಬೈ ಬಗ್ಗೆ ಕಂಗನಾ ಮಾಡಿದ ಟ್ವೀಟ್ ಮರಾಠಿ, ಬಾಲಿವುಡ್, ಮಹಾರಾಷ್ಟ್ರದಲ್ಲಿ ಕಿಡಿ ಹಚ್ಚಿರುವುದಂತೂ ಸುಳ್ಳಲ್ಲ. ಈಗಲೂ ನಟಿಯ ಹೇಳಿಕೆ ವಿರುದ್ಧ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಸೆ.9ರಂದು ಮುಂಬೈಗೆ ಬರುತ್ತೇನೆ ಎಂದು ಕಂಗನಾ ಹೇಳಿದ್ದಾರೆ. ಅವರು ವಿರುದ್ಧ ಅಂದು ಏನೇನು ಘಟನೆಗಳು ನಡೆಯುತ್ತವೆಯೋ ಎಂಬುದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.


ಇದನ್ನೂ ಓದಿ: ಕಂಗನಾಗೆ ನಮ್ಮ ರಾಜ್ಯದಲ್ಲಿ ವಾಸಿಸುವ ಹಕ್ಕಿಲ್ಲ: ಮಹಾರಾಷ್ಟ್ರ ಗೃಹ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...