Homeಕರೋನಾ ತಲ್ಲಣಭಾರತದಲ್ಲಿ ಕೊರೊನಾ: ಸೋಂಕಿತರ ಚೇತರಿಕೆಯ ಪ್ರಮಾಣ ಏರಿಕೆ

ಭಾರತದಲ್ಲಿ ಕೊರೊನಾ: ಸೋಂಕಿತರ ಚೇತರಿಕೆಯ ಪ್ರಮಾಣ ಏರಿಕೆ

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 20.88 ಲಕ್ಷಕ್ಕಿಂತ ಹೆಚ್ಚಿದ್ದರೆ, ಇವುಗಳಲ್ಲಿ ಕೇವಲ 6.19 ಲಕ್ಷ ಮಾತ್ರ ಸಕ್ರಿಯ ಪ್ರಕರಣಗಳಿವೆ. ಉಳಿದವರು ಚೇತರಿಸಿಕೊಂಡಿದ್ದರೆ, ಶೇಕಡಾ 2 ರಷ್ಟು ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ.

- Advertisement -
- Advertisement -

ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಚೇತರಿಕೆಯ ಪ್ರಮಾಣ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 20.88 ಲಕ್ಷಕ್ಕಿಂತ ಹೆಚ್ಚಿದ್ದರೆ, ಇವುಗಳಲ್ಲಿ ಕೇವಲ 6.19 ಲಕ್ಷ ಮಾತ್ರ ಸಕ್ರಿಯ ಪ್ರಕರಣಗಳಿವೆ. 14,27,005 ಜನರು ಚೇತರಿಸಿಕೊಂಡಿದ್ದರೆ, 42,518  ಜನರು ಸಾವನ್ನಪ್ಪಿದ್ದಾರೆ.

ಹೊಸ ಸೋಂಕುಗಳು ಸ್ಥಿರ ವೇಗದಲ್ಲಿ ಏರುತ್ತಿದ್ದರೆ, ಒಟ್ಟು ಸೋಂಕಿತ ಪ್ರಕರಣಗಳ ಬೆಳವಣಿಗೆಯು ಕಳೆದ ಹತ್ತು ದಿನಗಳಿಂದ ಕುಸಿಯುತ್ತಿದೆ. ಮತ್ತು ಸಕ್ರಿಯ ಪ್ರಕರಣಗಳ ಬೆಳವಣಿಗೆ ಇನ್ನೂ ವೇಗವಾಗಿ ಕುಸಿಯುತ್ತಿದೆ.

ದಿನಕ್ಕೆ ಶೇಕಡಾ 3.03 ರಂತೆ, ಒಟ್ಟು ದೃಢಪಡಿಸಿದ ಪ್ರಕರಣಗಳ ಪ್ರಸ್ತುತ ಬೆಳವಣಿಗೆಯ ಪ್ರಮಾಣವು ಈಗಾಗಲೇ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಸಕ್ರಿಯ ಪ್ರಕರಣಗಳ ಬೆಳವಣಿಗೆಯ ದರವು ಶೇಕಡಾ 1.31 ಕ್ಕೆ ಇಳಿದಿದೆ.

ಈಗ ದೃಢಪಡಿಸಿದ ಎಲ್ಲಾ ಪ್ರಕರಣಗಳಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ 68.32 ರಷ್ಟಿದ್ದರೆ, 2.04 ರಷ್ಟು ಸೋಂಕಿತ ಜನರು ಸಾವನ್ನಪ್ಪಿದ್ದಾರೆ.

ಸಾಂಕ್ರಾಮಿಕ ರೋಗವು ಹೆಚ್ಚಾದಂತೆ, ಒಟ್ಟು ದೃಢಪಡಿಸಿದ ಪ್ರಕರಣಗಳ ಅನುಪಾತವಾಗಿ ಸಕ್ರಿಯ ಪ್ರಕರಣಗಳು ಕ್ರಮೇಣ ಕುಸಿಯುತ್ತವೆ. ಸಾಂಕ್ರಾಮಿಕ ರೋಗವು ಕೊನೆಗೊಳ್ಳುವ ಹೊತ್ತಿಗೆ ಅದು ಶೂನ್ಯಕ್ಕೆ ತಲುಪುತ್ತದೆ ಎನ್ನಲಾಗಿದೆ.

ಹೆಚ್ಚು ಜನರು ಚೇತರಿಸಿಕೊಂಡಿರುವುದರಿಂದ ಆರೋಗ್ಯ ಮೂಲಸೌಕರ್ಯ ಮತ್ತು ವೈದ್ಯಕೀಯ ವೃತ್ತಿಪರರ ಮೇಲೆ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಸಕ್ರಿಯ ರೋಗಿಗಳು ಮಾತ್ರ ರೋಗವನ್ನು ಇತರರಿಗೆ ಹರಡುವುದರಿಂದ ಸೋಂಕಿನ ಪ್ರಮಾಣವು ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿದೆ.

ಶುಕ್ರವಾರ ಸತತ ಎರಡನೇ ದಿನ ಭಾರತ 60,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ತಲಾ 10,000 ಪ್ರಕರಣಗಳನ್ನು ವರದಿ ಮಾಡಿದರೆ, ತಮಿಳುನಾಡು ಮತ್ತು ಕರ್ನಾಟಕ ತಲಾ 6,000 ಪ್ರಕರಣಗಳನ್ನು ವರದಿ ಮಾಡಿದೆ.


ಇದನ್ನೂ ಓದಿ: ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್‌.ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...