Homeಮುಖಪುಟಕೊರೋನಾ ಭೀತಿ: ರಾಜ್ಯ ಲಾಕ್‌ಡೌನ್ ಆದ್ರೆ ನಮ್ ಜೀವನ ಹೆಂಗೆ? ಆಟೋ ಚಾಲಕರ ಪ್ರಶ್ನೆ

ಕೊರೋನಾ ಭೀತಿ: ರಾಜ್ಯ ಲಾಕ್‌ಡೌನ್ ಆದ್ರೆ ನಮ್ ಜೀವನ ಹೆಂಗೆ? ಆಟೋ ಚಾಲಕರ ಪ್ರಶ್ನೆ

ಕೇರಳದಲ್ಲಿ ಎಲ್ಲರಿಗೂ ಅನುಕೂಲ ಮಾಡಿಕೊಟ್ಟೌರೆ. ಆಟೋದೋರು ಸಾಲ ಮಾಡಿದ್ರೆ ಸಾಲದ ಮೇಲಿನ ಸೇವಾ ಶುಲ್ಕ ರದ್ದು ಮಾಡಿದೆ. ಆದರೆ ನಮ್ಮ ರಾಜ್ಯದಲ್ಲಿ?

- Advertisement -
- Advertisement -

ಸರ್, ನಿಲ್ಲಿ ಅಂದ್ರು ಒಬ್ಬರು ಆಟೋ ಚಾಲಕರು. ಅವರು ನನಗೆ ಹಲವು ವರ್ಷಗಳಿಂದ ಪರಿಚಯಸ್ಥರು. ನೀವೇನೋ ಹೆಂಗೋ ಜೀವನ ನಡೆಸ್ತೀರ. ನಾವ್ ಹೆಂಗ್ ಮಾಡೋದೋ ಗೊತ್ತಾಗುತ್ತಿಲ್ಲ. ಒಂದಲ್ಲ, ಎರಡಲ್ಲ ಒಂದು ವಾರ್ ರಾಜ್ಯ ಲಾಕ್ ಡೌನ್ ಆಗುತ್ತಂತೆ. ನಮ್ಮ ದುಡಿಮೆಗೆ ಪೆಟ್ಟು ಬಿತ್ತು. ಅವೊತ್ತಿನ ದುಡಿಮೆಯಿಂದ ಅಂದು ಜೀವನ ನಡೆಸುತ್ತಿದ್ವಿ. ಈಗ ಮುಖ್ಯಮಂತ್ರಿ ನಾವೇನೂ ಮಾಡೋಕಾಗಲ್ಲ. ಲಾಕ್ ಡೌನ್ ಮಾಡ್ತೀವಿ ಅಂತಿದ್ದಾರೆ ಎಂದು ಅಳಲು ತೋಡಿಕೊಂಡರು. ಅವರ ಮುಖದಲ್ಲಿ ಆತಂಕ ಮನೆ ಮಾಡಿತ್ತು. ನೋವು ತೋಡಿಕೊಳ್ಳಲು ಅವರಿಗೆ ಒಬ್ಬರು ಬೇಕಿತ್ತು. ಅದೇ ಕಾರಣಕ್ಕೆ ನನ್ನ ಬಳಿ ಅಳಲು ತೋಡಿಕೊಂಡರು.

ನೋಡಿ ಸರ್, ಕೇರಳದಲ್ಲಿ ಎಲ್ಲರಿಗೂ ಅನುಕೂಲ ಮಾಡಿಕೊಟ್ಟೌರೆ. ಆಟೋದೋರು ಸಾಲ ಮಾಡಿದ್ರೆ ಸಾಲದ ಮೇಲಿನ ಸೇವಾ ಶುಲ್ಕ ರದ್ದು ಮಾಡಿದೆ. ಅಲ್ಲಿನ ಮುಖ್ಯಮಂತ್ರಿಗಳು ಬಡವರಿಗೆ ಎರಡು ತಿಂಗಳು ಮೊದಲೇ ದವಸ ಧಾನ್ಯ ಕೊಟ್ಟಿದ್ದಾರೆ. ಬಡವರಿಗೆ ಊಟ ಕೊಡ್ತಾರೆ. ನಮ್ಮಲ್ಲಿ ಮುಖ್ಯಮಂತ್ರಿಗಳು ಅಂತ ಕ್ರಮಗಳನ್ನು ಕೈಗೊಂಡಿಲ್ಲ. ಲಾಕ್ ಡೌನ್ ಅಂದ್ರ ಸುಮ್ನೆನೇ. ಆಟೋದವ್ರು ದುಡಿಮೆ ನಿಮಗೆ ಗೊತ್ತಲ್ಲ. ಮನೆ ಬಾಡಿಗೆ ಏನು ಮಾಡ್ಬೇಕು. ಸರ್, ಮನೆ ಓನರ್ ಎರಡು ತಿಂಗಳ ಬಾಡಿಗೆ ಮೊದ್ಲೇ ಹಾಕಿ ಅಂದ್ರು. ಹಾಕಿದೆ. ನಾನು ಮರು ಮಾತಾಡಲಿಲ್ಲ.ನಮ್ ಜೀವನ ನಡೆಯೋದು ಹೆಂಗೆ, ಏನೋ ನಮ್ ಗ್ರಹಚಾರ ಸರಿಯಿಲ್ಲ ಅಂದ್ರು.

ಇದು ಕೇವಲ ಒಬ್ಬ ಆಟೋ ಚಾಲಕರ ಪ್ರಶ್ನೆಯಲ್ಲ. ಎಲ್ಲಾ ಆಟೋ ಚಾಲಕರ ನೋವು ಆಗಿದೆ.  ನಗರದ ಜೀವ ದಂತೆ ಕೆಲಸ ಮಾಡುತ್ತಿದ್ದ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ ಎಂಬ ಮಾತು ಕೇಳಿಬರುತ್ತಿರುವುದರಿಂದ ಆಟೋ ಚಾಲಕರ ಬದುಕು ಸಂಪೂರ್ಣ ಸ್ಥಬ್ದವಾಗಲಿದೆ. ದುಡಿಯುವವರು ಮನೆಯಲ್ಲಿ ಕೂತರೆ ಉಣ್ಣುವ ಕೈ ಏನು ಮಾಡಬೇಕು. ಮಕ್ಕಳ ಖರ್ಚು ವೆಚ್ಚ, ಮನೆ ಬಾಡಿಗೆ ಹೊಂದಿಸುವುದು ಹೇಗೆಂಬ ಪ್ರಶ್ನೆ ಬೃಹದಾಕಾರವಾಗಿ ಕಾಡತೊಡಗಿದೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಸಿಪಿಎಂ ಮುಖಂಡ ಕೆ.ಎನ್.ಉಮೇಶ್, ಕೊರೊನ ವೈರಸ್ ಹರಡುತ್ತಿರುವುದರಿಂದ ಆಟೋಚಾಲಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಬದುಕು ದುಸ್ಥರ ವಾಗಲಿದೆ. ಹೀಗಾಗಿ ಆಟೋ ಚಾಲಕರ ಪ್ರತಿಯೊಬ್ಬರ ಖಾತೆಗೆ 6 ಸಾವಿರ ಹಣ ಹಾಕಬೇಕು. ಕಟ್ಟಬೇಕಾದ ಇಎಂಐಗಳನ್ನು ಮುಂದೂಡಬೇಕು. ಆಟೋಚಾಲಕರ ಬಡ್ಡಿ ಮನ್ನಾ ಮಾಡಬೇಕು. ಇದೆಲ್ಲವನ್ನೂ ಅಸಂಘಟಿತ ವಲಯದ ಭದ್ರತ ಮಂಡಳಿಯಿಂದ ಕೊಡಬೇಕು. ಆಟೋಚಾಲಕರು ಸೇರಿದಂತೆ ಎಲ್ಲಾ ಅಸಂಘಟಿತರಿಗೆ ಉಚಿತ ರೇಷನ್ ಕೊಡಬೇಕು. ಯುವಕರಿಗೆ ನಿರುದ್ಯೋಗ ಭತ್ಯ ಕೊಡಬೇಕು ಎಂದು ಒತ್ತಾಯಿಸಿದರು.

ಕೊರೊನ ರೋಗ ಹರಡುತ್ತಿರುವುದರಿಂದ ಅಸಂಘಟಿತ ಕಾರ್ಮಿಕರ ಬದುಕು ದಿಕ್ಕಾಪಾಲಾಗಿದೆ. ಬೀದಿಬದಿ ವ್ಯಾಪಾರಿಗಳು ಮೀಟರ್ ಬಡ್ಡಿಗೆ ಸಾಲ ತಂದು ವ್ಯಾಪಾರ ಮಾಡುತ್ತಾರೆ. ಆಟೋ ಚಾಲಕರು ಬಾಡಿಗೆ ಮೇಲೆ ಆಟೋವನ್ನು ರಸ್ತೆಗೆ ಇಳಿಸಿರುತ್ತಾರೆ. ಆಟೋ ರಸ್ತೆಗೆ ಇಳಿಯದಿದ್ದರೆ ಬಾಡಿಗೆ ಪಡೆಯುತ್ತಿದ್ದ ಚಾಲಕರು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಟೋಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಬೇರೆ ದುಡಿಯುವ ಮಾರ್ಗವಿಲ್ಲ. ಬೆಳಗಿನಿಂದ ಸಂಜೆಯವರೆಗೂ ಆಟೋ ಓಡಿಸಿಯೇ ಬದುಕಿನ ಬಂಡಿ ನಡೆಸಬೇಕು. ಇಲ್ಲದಿದ್ದರೆ ಅವರ ಪಾಡು ಹೇಳತೀರದು.

ಸಾಮಾನ್ಯ ಸಂದರ್ಭದಲ್ಲಿ ಒಂದು ದಿನ ನಡೆಯುವ ಮುಷ್ಕರ, ಬಂದ್‌ ಸಮಯದಲ್ಲೇ ಆಟೋ ಓಡಿಸದಿದ್ದರೆ ಸಂಕಷ್ಟಗಳನ್ನು ಎದುರಿಸುತ್ತೇವೆ. ಇನ್ನು ಒಂದು ವಾರ ಆಟೋಗಳನ್ನು ರಸ್ತೆಗೆ ಇಳಿಸದಿದ್ದರೆ ಬದುಕು ನಡೆಸುವುದು ಕಷ್ಟಕರ. ಕುಟುಂಬ ನಿರ್ವಹಣೆಗೆ ತೊಂದರೆಯಾಗಲಿದೆ. ನಗರಗಳಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ವಸ್ತುವನ್ನು ಕೊಳ್ಳಲೇಬೇಕು. ಅದಕ್ಕೆ ಹಣ ಬೇಕು. ದುಡಿಮೆ ಇಲ್ಲದಿದ್ದರೆ ದಿನಸಿ ವಸ್ತುಗಳನ್ನು ಖರೀದಿಸುವುದು ಹೇಗೆ? ಒಂದು ವಾರ ಆಟೋ ಇಳಿಯದಿದ್ದರೆ ಆಟೋಗಳು ಕೆಡುತ್ತವೆ ಎಂದು ಆಟೋಚಾಲಕ ಗಿರೀಶ್ ನೋವು ತೋಡಿಕೊಂಡರು.

ಸರ್ಕಾರಗಳು ಆರಂಭದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿತ್ತು. ವಿದೇಶಗಳಿಂದ ಬರುತ್ತಿರುವವರನ್ನು ಮೊದಲೇ ಪ್ರತ್ಯೇಕವಾಗಿ ಇಡುವಂತಹ ವ್ಯವಸ್ಥೆ ಮಾಡಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಊರು ಹಾಳಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ದೇಶದಲ್ಲಿ ಕೊರೊನ ರೋಗ ಹರಡಿದ ಮೇಲೆ ಕ್ರಮ ಕೈಗೊಂಡರೆ ರೋಗವನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...