Homeನಿಜವೋ ಸುಳ್ಳೋFact check: ಇಟಲಿಯ ಉದ್ಯಮಿ ತನ್ನ ಹೋಟೆಲ್‌ನಿಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ?

Fact check: ಇಟಲಿಯ ಉದ್ಯಮಿ ತನ್ನ ಹೋಟೆಲ್‌ನಿಂದು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ?

- Advertisement -
- Advertisement -

“ಇಟಲಿಯ ಕೋಟ್ಯಾಧಿಪತಿ ಹೋಟೆಲ್ ಮಾಲೀಕನೊಬ್ಬನ ಕುಟುಂಬಿಕರೆಲ್ಲರೂ ಕೊರೊನಾ ವೈರಸ್ ನಿಂದ ಸಾವಿಗೀಡಾಗಿದ್ದಕ್ಕೆ ಹತಾಶನಾಗಿ ತನ್ನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಲೆ ಬರಹ ಬರೆದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ಇದರ ಬಗ್ಗೆ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ನಡೆಸಿದೆ.

ಕನ್ನಡದ ಶೀರ್ಷಿಕೆಯೊಂದಿಗೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವಾರು ಜನರು ಫೇಸ್ಬುಕ್ಕಿನಲ್ಲಿ ಈ ವಿಡಿಯೊವನ್ನು #Coronaeffect ಹ್ಯಾಶ್ ಟ್ಯಾಗ್ ನೊಂದಿಗೆ ಶೇರ್ ಮಾಡಿದ್ದಾರೆ.

ಎಂಟರ್ಟೈನ್ಮೆಂಟ್ ಎಂಬ ಪೇಜ್ “ಇಟಲಿಯ ಕೋಟ್ಯಾಧಿಪತಿ ಹೋಟೆಲ್ ಮಾಲೀಕ, ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕೊರೋನಾ ವೈರಸ್ ನಿಂದ ಕಳೆದುಕೊಂಡು ಹತಾಶನಾಗಿ ತನ್ನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು…” ಎಂಬ ಬರಹದೊಂದಿಗೆ ಈ ವಿಡಿಯೋ ಪ್ರಸಾರ ಮಾಡಿದೆ.

#Coronaeffect ?????

ಇಟಲಿಯ ಕೋಟ್ಯಾಧಿಪತಿ ಹೋಟೆಲ್ ಮಾಲೀಕ, ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕೊರೋನಾ ವೈರಸ್ ನಿಂದ ಕಳೆದುಕೊಂಡು ಹತಾಶನಾಗಿ ತನ್ನ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು…

Posted by Entertainment on Sunday, April 5, 2020

1 ನಿಮಿಷ 59 ಸೆಕೆಂಡುಗಳ ವೀಡಿಯೊವು ಸೈರನ್ ಮತ್ತು ಜನರು ಎತ್ತರದ ಕಟ್ಟಡವನ್ನು ನೋಡುತ್ತಾ ಗದ್ದಲ ಮಾಡುವ ಹಾಗೂ ವ್ಯಕ್ತಿಯೊಬ್ಬ ಕಟ್ಟಡದಿಂದ ಜಿಗಿಯುವುದನ್ನು ತೋರಿಸುತ್ತದೆ. ಅಲ್ಲದೆ ಬೇರೆ ಪೇಜ್ ಗಳಲ್ಲೂ ಇದೇ ವಿಡಿಯೊ ಅದೇ ತಲೆಬರಹದಲ್ಲಿ ಹಂಚಿಕೊಳ್ಳಲಾಗಿದೆ.

ಅದಲ್ಲದೆ ಬೇರೆ ಹಲವು ಜನರೂ ಈ ವಿಡಿಯೋವನ್ನು ಅದೇ ತಲೆ ಬರಹದಲ್ಲಿ ಹಂಚಿದ್ದಾರೆ.

ಫ್ಯಾಕ್ಟ್ ಚೆಕ್:

ಈ ವೀಡಿಯೋ 2015 ರ ವಿಡಿಯೊವಾಗಿದ್ದು, ಅಮೆರಿಕದ ಫಿಲಡೆಲ್ಫಿಯಾದಲ್ಲಿನ ಎತ್ತರದ ಹೋಟೆಲ್‌ನಿಂದ ಉದ್ಯಮಿಯೊಬ್ಬರು ಹಾರಿದ್ದಾಗಿದೆ ಎಂದು ಭೂಮ್ ಲೈವ್ ಇದರ ಮೂಲವನ್ನು ಕಂಡು ಹಿಡಿದು ಹೇಳಿದೆ. ಇದೇ ವೀಡಿಯೊವನ್ನು ಇತರ ಸುಳ್ಳುಗಳಿಗೆ ಕೂಡಾ ಬಳಸಿಕೊಳ್ಳಲಾಗಿತ್ತು.

ಆಗಸ್ಟ್ 2015 ರಲ್ಲಿ Ọmọ Oòdua ಎಂಬ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ದೀರ್ಘ ಆವೃತ್ತಿಯ ವೀಡಿಯೋ ಇದಾಗಿದ್ದು, ವೀಡಿಯೊದಲ್ಲಿನ ಶೀರ್ಷಿಕೆ ಸುಳ್ಳಾಗಿದ್ದರೂ ‘ಗ್ರಾಫಿಕ್: ಗರ್ಭಿಣಿ ಘಾನಿಯನ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡುವ ಆಘಾತಕಾರಿ ವಿಡಿಯೋ…” ಎಂದು ಬರೆಯಲಾಗಿದೆ.

Graphic: Pregnant Ghanaian Woman jumps off the Cliff

Suicide Pregnant Ghanaian Jumps BuildingShocking VideoGhanaian Woman jumps off the Cliff as Hubby sleeps with Her Mom. Pregnant Ghanaian Woman Jumps From 40 Storey Building Because Her Husband Was Sleeping With Her Mom and was carrying her husbands child,40 Storey Building jumpingMust she commit suicide?Comment your opinion and share

Posted by Ọmọ Oòdua on Monday, August 10, 2015

ವೀಡಿಯೊದಲ್ಲಿ ವ್ಯಕ್ತಿಯೂ ಕಟ್ಟಡದಿಂದ ಜಿಗಿದ ನಂತರ 49 ಸೆಕೆಂಡುಗಳಲ್ಲಿ, “215-232-2000” ನಂಬರ್ ಇರುವ ಕಾರನ್ನು ನೋಡಬಹುದು.

ಈ ಸಂಖ್ಯೆಯ ಕಾರು ಫಿಲಡೆಲ್ಫಿಯಾ ಪ್ರದೇಶದ್ದಾಗಿದ್ದು, ಈ ಕಾರು ಬಾಡಿಗೆ ಕ್ಯಾಬಿನ ಕಾರಾಗಿದೆ. ( ಕಾರುಗಳ ಬಗ್ಗೆ ಇಲ್ಲಿ ನೋಡಿ PHLcabs )

ನಂತರ ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ – ಎಂಬಸಿ ಸೂಟ್ಸ್ ಹೋಟೆಲಿನ 25 ನೇ ಮಹಡಿಯಿಂದ ಹಾರಿ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿದ ಬಗೆಗಿನ ಪ್ರಕರಣದ ಬಗ್ಗೆ 2015 ಸುದ್ದಿಯರುವ ವರದಿ ಲಭಿಸಿದೆ.

ಸ್ಥಳೀಯ ಮಾಧ್ಯಮವಾದ “ಫಿಲ್ಲಿ ವಾಯ್ಸ್‌”ನಲ್ಲಿ ಮೇ 2, 2015 ರಂದು ಪ್ರಕಟವಾದ ವರದಿಯೊಂದು ಈ ಘಟನೆಯನ್ನು ವಿವರಿಸಿದೆ ಹಾಗೂ ಮೇ 6, 2015 ರಂದು ಪ್ರಕಟವಾದ ಅದರ ಬಗ್ಗೆ ಮುಂದುವರೆದ ವರದಿಯೂ ಹಾರಿದ ವ್ಯಕ್ತಿಯನ್ನು ಉದ್ಯಮಿ ಎಂದು ಗುರುತಿಸಿದೆ.

ವೈರಲ್ ವೀಡಿಯೊದಲ್ಲಿ ಇರುವ ಸ್ಥಳವು ಸರಿಯಾಗಿದೆಯೇ ಎಂದು ಪರಿಶೀಲಿಸಿದಾಗ, ಅದು ಸೆಂಟರ್ ನಗರದಲ್ಲಿರುವ ಎಂಬೆಸಿ ಸೂಟ್ಸ್ ಹೋಟೆಲ್ ಎಂದು ದೃಡಪಟ್ಟಿದೆ.

ಭೂಮ್ ಲೈವ್ ಎಂಬೆಸಿ ಸೂಟ್ಸ್ ಹೋಟೆಲ್ ಅನ್ನು ಸಂಪರ್ಕಿಸಿ, ಘಟನೆ ನಡೆದಿರುವ ಬಗ್ಗೆ ದೃಡಪಡಿಸಿದೆ ಎಂದು ಹೇಳಿದೆ.

ಕೊರೊನಾ ವೈರಸ್ ಬಗ್ಗೆ ದೇಶದಾದ್ಯಂತ ಹಲವಾರು ಸುಳ್ಳುಗಳು ಹರಡುತ್ತಿದೆ. ಸರಿಯಾಗಿ ಗಮನಿಸಿದರೆ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವಲ್ಲಿ ಹೆಚ್ಚಿನವರು ಬಲಪಂಥೀಯರಾಗಿದ್ದಾರೆ ಅಥವಾ ಬಲಪಂಥೀಯ ಗುಂಪಿನಲ್ಲಿ ಗುರುತಿಸಿ ಕೊಂಡವರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...