Homeಕಥೆಕ್ವಾರಂಟೈನ್‌ ಸಮಯದಲ್ಲಿ ‘ಕತೆ ಕೇಳೋಣ ಬನ್ನಿ’: ಬುಕ್‌ ಬ್ರಹ್ಮದ ವಿಭಿನ್ನ ಪ್ರಯೋಗ

ಕ್ವಾರಂಟೈನ್‌ ಸಮಯದಲ್ಲಿ ‘ಕತೆ ಕೇಳೋಣ ಬನ್ನಿ’: ಬುಕ್‌ ಬ್ರಹ್ಮದ ವಿಭಿನ್ನ ಪ್ರಯೋಗ

- Advertisement -
- Advertisement -

ಮನೆ ಹಿರಿಯರಾದ ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳುತ್ತಿದ್ದ ಕಾಲವೊಂದಿತ್ತು. ದೂರದ ಬೆಟ್ಟದತ್ರ ಒಂದು ಪುಟ್ಟ ಊರಿತ್ತು. ಆ ಊರಿನಲ್ಲಿ ರಾಜಕುಮಾರಿಯೊಬ್ಬಳಿದ್ದಳು…. ಅಂತ ಕತೆ ಆರಂಭವಾಗುತ್ತಿತ್ತು. ಮಧ್ಯೆ ಮಧ್ಯೆ ಅಬ್ಬಾ ಹೀಗೆಲ್ಲಾ ಇತ್ತಾ? ಎನ್ನುವಷ್ಟು ಆಶ್ಚರ್ಯಪಡುವ ಸಂಗತಿಗಳನ್ನು ಅಜ್ಜಿ ಹೇಳುವಾಗ ಕಣ್ಣರಳಿಸಿ ಕೇಳುತ್ತದ್ದೆವು. ಅಲ್ಲಿ ರಾಜಕುಮಾರಿಯೇ ನಾಯಕಿಯಾಗಬೇಕಿರಲಿಲ್ಲ. ಕಾಗೆ, ಗುಬ್ಬಿ, ಬಡವ, ಕಸ ಗುಡಿಸೊ ಹುಡುಗಿ ಹೀಗೆ ಎಲ್ಲರೂ ಕತಾನಾಯಕರಾಗಿರುತ್ತಿದ್ದರು. ಕತೆಯಲ್ಲೊಂದು ಮೌಲ್ಯವಿರುತ್ತಿತ್ತು.

ಕಾಲ ಬದಲಾದಂತೆ ತಂತ್ರಜ್ಞಾನ ಎಲ್ಲವನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಅಜ್ಜಿ ಕತೆ ಹೇಳುವ-ಕೇಳುವ ವ್ಯವಧಾನ ಇಲ್ಲವಾಗಿದೆ. ದಿನವಿಡೀ ಓಡೂ, ಓಡೂ… ಎನ್ನುವಂತಾಗಿದೆ. ಇವತ್ತಿಗೆ ಅಜ್ಜಿ ಕತೆ ಹೇಳುತ್ತಿದ್ದ ಕಾಲವೊಂದಿತ್ತು ಅನ್ನೋದು ಮಾತ್ರ ಅಚ್ಚಳಿಯದ ನೆನಪಾಗಿ ಉಳಿದಿದೆ.

ಕೊರೊನಾ ಪಿಡುಗಿನಿಂದ ಬಿಡುವಿಲ್ಲದ ಕೆಲಸಗಳಿಗೆ ಬ್ರೇಕ್‌ ಹಾಕಿ ಮನೆಯಲ್ಲಿಯೇ ಇರುವಂತಾಗಿದೆ. ಮನೆಯವರೊಂದಿಗೆ ಮಾತನಾಡುತ್ತಾ, ಇಡೀ ಸಮಾಜದ ಆಗೂ ಹೋಗುಗಳ ಬಗ್ಗೆ ತಿಳಿಯುತ್ತಿರುವ ‘ಹೋಮ್‌ ಕ್ವಾರಂಟೈನ್‌’ ಸಂದರ್ಭದಲ್ಲಿ ಅಜ್ಜಿ ಕತೆಗಳ ಹಚ್ಚ ಹಸಿರಾದ ನೆನಪು ಮರುಕಳಿಸಿದ್ದು ‘ಕತೆ ಕೇಳೋಣ ಬನ್ನಿ’ ಕಾರ್ಯಕ್ರಮದಿಂದ. ಇಲ್ಲಿ ಅಜ್ಜಿ ಕತೆ ಹೇಳುವುದಿಲ್ಲ ಬದಲಾಗಿ ಕನ್ನಡದ ಹೆಸರಾಂತ ಕತೆಗಾರರು ತಾವು ಬರೆದ ಕತೆಗಳನ್ನು ಓದುತ್ತಾರೆ.

ಕನ್ನಡ ಸಾಹಿತ್ಯದ ಕುರಿತು ಮಾಹಿತಿ ನೀಡುವ ಇ-ತಾಣ ಬುಕ್‌ ಬ್ರಹ್ಮ ಕತೆ ಕೇಳುವ ಆಸಕ್ತರಿಗಾಗಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನ ಸಂಜೆ 6.30ಕ್ಕೆ ’ಕತೆ ಕೇಳೋಣ ಬನ್ನಿ’ ಫೇಸ್‌ಬುಕ್‌ ಲೈವ್‌ ಅನ್ನು ನಡೆಸುತ್ತಿದೆ. ಮುವತ್ತು ಮಂದಿ ಕತೆಗಾರರು, ವಿವಿಧ ಭಾಷಾ ಶೈಲಿಯ ಕತೆಗಳನ್ನು ಈ ಲೈವ್‌ನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಈವರೆಗೂ ವಿಕಾಸ್‌ ನೇಗಿಲೋಣಿ, ಗೀತಾ ವಸಂತ, ಹನುಮಂತ ಹಾಲಗೇರಿ, ದಯಾನಂದ, ಚಿದಾನಂದ ಸಾಲಿ, ಶ್ರೀಧರ ಬಳಗಾರ, ಕಪಿಲ ಹುಮನಬಾದೆ, ಮಹಂತೇಶ ನವಲಕಲ್‌, ಅಮರೇಶ ನುಗಡೋಣಿ ಸೇರಿದಂತೆ ಸುಮಾರು ಹದಿನೈದು ಕತೆಗಾರರು ಕತೆಯನ್ನು ಓದಿದ್ದಾರೆ.

ಮೂರನೇ ವಾರ ಅಂದರೆ ನಾಳೆಯಿಂದ ಕೇಶವ ಮಳಗಿ, ಕಲಿಗಣನಾಥ ಗುಡದೂರು, ಡಿ.ಎಸ್. ಚೌಗಲೆ, ಟಿ.ಎಸ್. ಗೊರವರ, ಶಿವಕುಮಾರ ಮಾವಲಿ, ಪದ್ಮಿನಿ ನಾಗರಾಜು ಅವರು ಕತೆ ಓದಲಿದ್ದಾರೆ. ಓದುಗರು ಕತೆಯೊಳಗೊಕ್ಕು ಪಾತ್ರವಾಗಿ ಓದುವುದು ಈ ಕಾರ್ಯಕ್ರಮದ ವಿಶೇಷ. ಇಲ್ಲಿನ ಪ್ರತಿ ಕತೆಯು ಭಿನ್ನವಾಗಿದೆ. ಚಿದಾನಂದ ಸಾಲಿಯವರ ಕತೆ ಹಳ್ಳಿ ಮುಗ್ದ ಜನರ ಬದುಕಿನ ಕುರಿತು ವಿವರಿಸಿದ್ದರೆ ದಯಾನಂದ ಅವರು ಇಂದಿನ ಕಾರ್ಪೊರೇಟ್‌ ಕಂಪನಿಗಳ ಉದ್ಯೋಗಿಗಳು ಕೆಲಸದ ಮೇಲೆ ಬೇರೆ ಕಡೆ ಹೋದಾಗ ಅಲ್ಲಿನ ಜೀವನ ಹೇಗಿರುತ್ತದೆ ಎಂಬುದರ ಕುರಿತು ಹೆಣೆಯಲಾಗಿದೆ.

ಇನ್ನು ಬರವಣಿಗೆಯ ಮೂಲಕ ನಮ್ಮನ್ನೆಲ್ಲಾ ಆಳವಾಗಿ ಚಿಂತಿಸುವಂತೆ ಮಾಡಿರುವ ಹನುಮಂತ ಹಾಲಗೇರಿಯವರು ಓದಿದ ಕತೆ ಸುಡುಗಾಡು ಸಿದ್ದರ ಬದುಕಿನ ಕುರಿತಾಗಿತ್ತು. ನಗರೀಕರಣ ಪ್ರಕ್ರಿಯೆಯಲ್ಲಿ ಮನುಷ್ಯರ ಕೆಲಸವನ್ನು ಯಂತ್ರಗಳು ಕಸಿದುಕೊಂಡದ್ದೇಗೆ ಎಂಬುದನ್ನು ಈ ಕತೆ ಚಿತ್ರಿಸಿದೆ. ಉತ್ತರ ಕರ್ನಾಟಕ ಶೈಲಿ, ಬಯಲು ಸೀಮೆ, ಪಕ್ಕ ಮಂಡ್ಯ ಭಾಷೆ ಕುಂದಾಪುರ ಕನ್ನಡ ಹೀಗೆ ವಿವಿಧ ಬಗೆಯ ಭಾಷಾ ಶೈಲಿ ಇಲ್ಲಿನ ಕತೆಗಳಲ್ಲಿವೆ.

ಕಾರ್ಯಕ್ರಮದ ಕುರಿತು ವಿವರಣೆ ನೀಡಿರುವ ಬುಕ್‌ ಬ್ರಹ್ಮ ‘ಇಂದು ಎಲ್ಲರಿಗೂ ಸಂಕಷ್ಟದ ದಿನಗಳು. ಒಂಟಿಯಾಗಿ ಕಾಲ ಕಳೆಯಬೇಕಾದ ಪರೀಕ್ಷೆಯ ದಿನಗಳಿವು. ಆತಂಕ ಎದುರಾದಾಗ ಸಾಹಿತ್ಯ ಸಾಂತ್ವನ ಹೇಳುವ ಕೆಲಸ ಮಾಡಬಲ್ಲದು. ಸಾಹಿತ್ಯದ ಸಾಂಗತ್ಯ ಮತ್ತು ಕತೆಯ ಒಡನಾಟವು ಈಗ ಎದುರಿಸುತ್ತಿರುವ ಸವಾಲನ್ನು ಇಲ್ಲವಾಗಿಸುವುದಿಲ್ಲ. ಆದರೆ, ಹತಾಶೆಗೆ ಸಮಾಧಾನ ಹೇಳಬಲ್ಲದು. ಆದ್ದರಿಂದ ’ಬುಕ್‌ ಬ್ರಹ್ಮ ವಾಚನ’ದ ಅಡಿಯಲ್ಲಿ ’ಕತೆ ಕೇಳೋಣ ಬನ್ನಿ’ ಎಂಬ ಕತೆಗಾರರು ಕತೆ ಓದುವ ಸರಣಿ ಆರಂಭಿಸಿದ್ದೇವೆ’ ಎಂದಿದ್ದಾರೆ.

ಪ್ರತಿದಿನ ಇಂಟರ್‌ನೆಟ್‌ ಬಳಸುತ್ತಾ, ಟಿ.ವಿ. ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಪುಸ್ತಕವನ್ನು ತಿರುವಿ ಹಾಕುವ ಕೆಲಸದ ನಡುವೆಯೂ ಸ್ವಲ್ಪ ಬಿಡುವಿಟ್ಟುಕೊಂಡು ಕತೆ ಕೇಳಿ, ನೋಡಿ. ಅಚ್ಚಳಿಯದೇ ಉಳಿದಿರುವ ಅಜ್ಜಿ ಕತೆಗಳನ್ನು ನೆನಪಿಸಿಕೊಳ್ಳಿ.

ಕತೆ ಕೇಳಲು ಫೇಸ್‌ಬುಕ್‌ನ ಪೇಜ್‌ ನೋಡಿ: Book Brahma

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...