Homeಮುಖಪುಟಸಂಸದ, ಶಾಸಕರ ಭ್ರಷ್ಟಾಚಾರ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಪಡಿಸುತ್ತದೆ: ಸುಪ್ರೀಂ ಕೋರ್ಟ್

ಸಂಸದ, ಶಾಸಕರ ಭ್ರಷ್ಟಾಚಾರ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಪಡಿಸುತ್ತದೆ: ಸುಪ್ರೀಂ ಕೋರ್ಟ್

- Advertisement -
- Advertisement -

ಸಂಸತ್ತಿನಲ್ಲಿ ಭಾಷಣ ಮಾಡಲು ಮತ್ತು ಮತಗಳಿಗಾಗಿ ಲಂಚ ಪಡೆಯುವ ಪ್ರಕರಣಗಳಲ್ಲಿ ಸಂಸದರು, ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಈ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಇಂದು(ಮಾ.4) ರದ್ದುಗೊಳಿಸಿದೆ. ಮೂಲಕ ಮತ್ತೊಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಸಂಸತ್‌ನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಸಂಸದರು, ಶಾಸಕರು ಲಂಚ ಪಡೆಯುವ ಪ್ರಕರಣಗಳಲ್ಲಿ ಕಾನೂನು ಕ್ರಮದ ವಿನಾಯಿತಿ ಒದಗಿಸಿದ್ದ ಐವರು ಸದಸ್ಯರ ಸಂವಿಧಾನ ಪೀಠದ 1998ರ ತೀರ್ಪನ್ನು ಇಂದಿನ ತೀರ್ಪು ರದ್ದುಗೊಳಿಸಿದೆ.

“ಲಂಚ ಪಡೆಯುದನ್ನು ಸಂಸದೀಯ ಸವಲತ್ತುಗಳಿಂದ ರಕ್ಷಿಸಲಾಗಿಲ್ಲ ಮತ್ತು 1998ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ”. ಈ ಎರಡು ವಿಧಿಗಳು ಚುನಾಯಿತ ಪ್ರತಿನಿಧಿಗಳಿಗೆ ಭಯವಿಲ್ಲದೆ ಕೆಲಸ ಮಾಡಲು ಅನುವು ಮಾಡಿಕೊಡಲು ಕಾನೂನು ಕ್ರಮದಿಂದ ವಿನಾಯಿತಿಯನ್ನು ಒದಗಿಸುತ್ತವೆ.

“ಪಿವಿ ನರಸಿಂಹ ರಾವ್ ಪ್ರಕರಣದ 1998ರ ತೀರ್ಪನ್ನು ನಾವು ಒಪ್ಪುವುದಿಲ್ಲ. ಮತ ಚಲಾಯಿಸಲು ಅಥವಾ ಭಾಷಣ ಮಾಡಲು ಲಂಚ ಪಡೆಯುವ ಪ್ರಕರಣಗಳಲ್ಲಿ ಸಂಸದ, ಶಾಸಕರಿಗೆ ವಿನಾಯಿತಿ ನೀಡುವ ಈ ತೀರ್ಪು ವ್ಯಾಪಕ ಪರಿಣಾಮಗಳನ್ನು ಬೀರುತ್ತವೆ” ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.

1998ರಲ್ಲಿ, ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಪಿವಿ ನರಸಿಂಹ ರಾವ್ ವಿರುದ್ಧ ಸಿಬಿಐ ಪ್ರಕರಣದಲ್ಲಿ ನೀಡಿದ ಬಹುಮತದ ತೀರ್ಪಿನಲ್ಲಿ, 105 (2) ನೇ ವಿಧಿಯ ಅಡಿಯಲ್ಲಿ ಸದನದ ಒಳಗೆ ಮಾಡಿದ ಯಾವುದೇ ಭಾಷಣ ಮತ್ತು ಮತಕ್ಕಾಗಿ ಕ್ರಿಮಿನಲ್ ಮೊಕದ್ದಮೆಯ ವಿರುದ್ಧ ಸಂಸದರಿಗೆ ವಿನಾಯಿತಿ ಇದೆ ಎಂದು ಹೇಳಿದೆ.

“ಲಂಚವನ್ನು ಸಂಸತ್ತಿನ ಸವಲತ್ತುಗಳಿಂದ ರಕ್ಷಿಸಲಾಗಿಲ್ಲ. ಭ್ರಷ್ಟಾಚಾರ ಅಥವಾ ಸಂಸದರು ಲಂಚ ಪಡೆಯುವುದು ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯನ್ನು ನಾಶಪಡಿಸುತ್ತದೆ. ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಲಂಚ ಪಡೆಯುವ ಶಾಸಕರೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಹೊಣೆಗಾರರಾಗಿದ್ದಾರೆ” ಎಂದು ಪೀಠ ಹೇಳಿದೆ.

ಪಿವಿ ನರಸಿಂಹ ರಾವ್ ಪ್ರಕರಣದ ತೀರ್ಪು, ಲಂಚ ಸ್ವೀಕರಿಸಿ ಅದರಂತೆ ಮತ ಚಲಾಯಿಸುವ ಶಾಸಕರನ್ನು ರಕ್ಷಿಸಿದರೆ, ಲಂಚ ಪಡೆದರೂ ಸ್ವತಂತ್ರವಾಗಿ ಮತ ಚಲಾಯಿಸುವ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ‘ವಿರೋಧಾಭಾಸದ ಪರಿಸ್ಥಿತಿ’ ಉಂಟಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಇದನ್ನೂ ಓದಿ: ಸುಪ್ರೀಂನಿಂದ ಮತ್ತೊಂದು ಮಹತ್ವದ ತೀರ್ಪು; ಲಂಚ ಪ್ರಕರಣಗಳಲ್ಲಿ ಶಾಸಕರು ಮತ್ತು ಸಂಸದರಿಗಿಲ್ಲ ವಿನಾಯಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...