Homeಅಂಕಣಗಳು2019ರಲ್ಲಿ ಏನಾಗಬಹುದು?

2019ರಲ್ಲಿ ಏನಾಗಬಹುದು?

- Advertisement -
- Advertisement -

‘ಹಾಗಾದರೆ, ಏನನಿಸುತ್ತೆ ನಿಮಗೆ?’ ಈ ಪ್ರಶ್ನೆ ಕೇಳುವುದಕ್ಕಿಂತ ಮುಂಚೆಯೇ ನನಗೆ ಗೊತ್ತಾಗಿಬಿಡುತ್ತೆ, ಈ ಪ್ರಶ್ನೆ ಬರ್ತಾ ಇದೆ ಎಂದು. 2019ರ ಚುನಾವಣೆಗಳ ಭವಿಷ್ಯ ಏನು ಎನ್ನುವುದನ್ನು ನಾನು ನನ್ನ ಜೇಬಿನಲ್ಲಿಯೇ ಇಟ್ಟುಕೊಳ್ಳಬೇಕೆಂದು ಅನೇಕರು ಅಪೇಕ್ಷಿಸುತ್ತಾರೆ ಎನ್ನುವ ಅರಿವಿದೆ. ಒಂದು ಸಾಲಿನ ಉತ್ತರ ಹೇಳಿ ಆ ಪ್ರಶ್ನೆಯನ್ನು ತಳ್ಳಿಹಾಕುತ್ತೆÃನೆ “ಮುಂಚೆ ಭವಿಷ್ಯ ಹೇಳ್ತಿದ್ದೆ, ಈಗ ಭವಿಷ್ಯವನ್ನು ರೂಪಿಸುತಿದ್ದೆÃನೆ”. ಆದರೆ ಈ ಉತ್ತರ ಕೆಲಸ ಮಾಡಲ್ಲ. ನಂತರ ಒಂದು ತರ್ಕವನ್ನು ಮುಂದಿಡುತ್ತೆÃನೆ “ನೋಡಿ, ಈಗ ನನಗಿಷ್ಟವಾದ ಸರ್ವೇ ಮಾಹಿತಿ ನನ್ನ ಹತ್ತಿರ ಇಲ್ಲ”. ಆಗ ಅವರು ಆ ತರ್ಕವನ್ನು ಒಪ್ಪಿಕೊಳ್ಳುತ್ತಾರೆ, ಆದರೆ ಅಷ್ಟಕ್ಕೆ ಬಿಡುವುದಿಲ್ಲ. ತದನಂತರ ಪ್ರಶ್ನೆಯಿಂದ ಕೊಡವಿಕೊಳ್ಳಲು ನಾನು ಹೇಳುವುದು, “ಒಬ್ಬ ರಾಜಕಾರಣಿಯ ದುರಂತವೇನೆಂದರೆ, ಜನರು ನಾನು ಏನನ್ನು ಕೇಳಬಯಸುತ್ತೆÃನೋ ಅದನ್ನು ಮಾತ್ರ ಹೇಳುತ್ತಾರೆ, ಹಾಗಾಗಿ, ನಿಮಗೇ ನನಗಿಂತ ಹೆಚ್ಚು ಗೊತ್ತು” ಇದನ್ನೂ ಅವರು ನಂಬುವುದಿಲ್ಲ ಎಂದು ಅವರನ್ನು ನೋಡಿದ ತಕ್ಷಣ ನನಗೆ ಗೊತ್ತಾಗುತ್ತೆ.
ಆಯ್ತು, ಹಾಗಾದರೆ ಹೀಗಿದೆ ಸನ್ನಿವೇಶ. ನೀವು ತಿಳಿಯಬೇಕೆಂದು ಬಯಸಿದ್ದು 2019ರ ಚುನಾವಣೆಯ ಪರಿಣಾಮದ ಬಗ್ಗೆ, ಆದರೆ ಬೇರೆ ಯಾರನ್ನು ಕೇಳಬೇಕು ಎಂದು ನಿಮಗೆ ಗೊತ್ತಾಗುತ್ತಿಲ್ಲ. ನೆನಪಿಡಿ, ಇದು ಒಂದು ಶಾಸನಬದ್ಧ ಎಚ್ಚರಿಕೆಯೊಂದಿಗೆ ಬರುತ್ತದೆ : ಈ ಲೇಖನದ ಬರಹಗಾರ ಒಬ್ಬ ರಾಜಕೀಯ ಕಾರ್ಯಕರ್ತನಾಗಿದ್ದು, ಅವನು ಯಾವುದೇ ರೀತಿಯಲ್ಲೂ ತಟಸ್ಥನಾಗಿರುವುದಿಲ್ಲ; ಬದಲಾಗಿ ಸತ್ಯದ ಪರವಾಗಿರಲು ಪ್ರಯತ್ನಿಸುತ್ತಿರುತ್ತಾನೆ.
ವಾಸ್ತವವೇನೆಂದರೆ, 2019 ರ ಯುದ್ಧದ ಚಿತ್ರಣವನ್ನು ತಿಳಿಯಲು ಯಾರೂ ಸೆಫಾಲಜಿಸ್ಟ್ (ಚುನಾವಣಾತಜ್ಞ) ಆಗಿರಬೇಕಿಲ್ಲ. ರಾಜಕೀಯ ಕಾಮನ್ ಸೆನ್ಸ್ ಇದ್ದರೆ ಸಾಕು. ಈ ಹಿಂದಿನ ಚುನಾವಣೆಗಳನ್ನು ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತವೆ, ಅದರಲ್ಲೂ 2014 ರ ಲೋಕಸಭಾ ಚುನಾವಣೆಗಳು.
ಜನಾಭಿಪ್ರಾಯದ ಒಲವನ್ನು ತಿಳಿಯಬೇಕಾದರೆ ಇಂಡಿಯಾ ಟುಡೆ ಆರು ತಿಂಗಳಿಗೊಂದು ಸಲ ನಡೆಸುವ ‘ಮೂಡ್ ಆಫ್ ದ ನೇಷನ್’ ಅಥವಾ ಏಬಿಪಿ-ಸಿಎಸ್‌ಡಿಎಸ್‌ನ ‘ಮೂಡ್ ಆಫ್ ದ ನೇಷನ್’ ಸರಣಿಗಳನ್ನು ನೋಡಬಹುದು. ಸಿಎಸ್‌ಡಿಎಸ್-ಲೋಕನೀತಿ ತಂಡದ ವಿವರವಾದ ವರದಿಯನ್ನು ನಾನು ವೈಯಕ್ತಿಕವಾಗಿ ಇಷ್ಟಪಡುತ್ತೆÃನೆ. (ಸ್ಪಷ್ಟನೆ- ಸಿಎಸ್‌ಡಿಎಸ್-ಲೋಕನೀತಿ ತಂಡದ ಸ್ಥಾಪಕ ಸದಸ್ಯರಲ್ಲಿ ನಾನೂ ಒಬ್ಬ, ಆದರೆ, ಈಗ ಅದರ ಸರ್ವೇ ಮತ್ತು ವರದಿಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, ನಾನು ಅಲ್ಲಿಂದ ಹೊರಗೆ ಬಂದಾಗಿನಿಂದ ಅದರ ವರದಿಗಳು ಇನ್ನಷ್ಟು ವೈಜ್ಞಾನಿಕವಾಗಿವೆ). ಕಳೆದ ಕೆಲವು ವಾರಗಳಲ್ಲಿ ಆದ ಬದಲಾವಣೆಗಳನ್ನು ಪತ್ತೆ ಹಚ್ಚಬೇಕೆಂದರೆ, ಇಂಡಿಯಾ ಟುಡೇ ಪ್ರತಿವಾರ ನಡೆಸುವ ಪಾಲಿಟಿಕಲ್ ಸ್ಟಾಕ್ ಎಕ್ಸೆ÷್ಚÃಂಜ್ ಅನ್ನು ನೋಡಬಹುದು; ಅದರೊಂದಿಗೆ ಸಿ-ವೋಟರ್ ಫಾರ್ ಏಬಿಪಿಯ ಇತ್ತಿÃಚಿನ ಆಲ್ ಇಂಡಿಯಾ ಸರ್ವೇ ನೋಡಬಹುದು. ಈ ಎರಡೂ ಸರ್ವೇಗಳಲ್ಲಿ ನನಗೆ ಅನೇಕ ಸಮಸ್ಯೆಗಳು ಕಂಡಿವೆ, ಆದರೆ ಮನೆಯಲ್ಲಿ ಕುಳಿತು ಹೊಡೆಯುವ ಹರಟೆಗಿಂತ ಈ ಸರ್ವೇಗಳು ಎಷ್ಟೊÃ ವಾಸಿ.
ಭಾರತವನ್ನು ಐದು ವಿಭಾಗಗಳನ್ನಾಗಿ, ಪ್ರತಿಯೊಂದು ವಿಭಾಗವೂ ಬೇರೆ ತರಹದ ಯುದ್ಧಭೂಮಿಯನ್ನು ಪ್ರತಿನಿಧಿಸುವಂತೆ ವಿಂಗಡಿಸೋಣ. ಸದ್ಯಕ್ಕೆ ಬಿಜೆಪಿಯ ಗೆಲುವಿನ ಬಗ್ಗೆಯೇ ನಮ್ಮ ಗಮನವನ್ನು ಕೇಂದ್ರಿÃಕರಿಸೋಣ. ಅದೃಷ್ಟವಶಾತ್, ಈ ಚುನಾವಣೆಗೆ ಸಂಬಂಧಪಟ್ಟಂತೆ ಈ ಎಲ್ಲಾ ಯುದ್ಧಭೂಮಿಗಳಿಗೂ ನಮ್ಮ ಗಮನವನ್ನು ಹರಿಸುವ ಅಗತ್ಯವಿಲ್ಲ. 2019ರ ವೋಟುಗಳ ಯುದ್ಧದ ಪರಿಣಾಮ ಈ ಐದರಲ್ಲಿ ಒಂದು ಯುದ್ಧಭೂಮಿಯಲ್ಲಿಯೇ ನಿರ್ಣಯವಾಗಲಿದೆ. ಅದು ‘ಹಿಂದಿ ಹೃದಯಭೂಮಿ’ (ಹಿಂದಿ ಭಾಷಿಕರ ಹೃದಯಭೂಮಿಯೇ ಹೊರತು ಭಾರತದ ಹೃದಯಭೂಮಿಯಲ್ಲ). ತರ್ಕ ಸರಳವಾಗಿದೆ. 2014ಕ್ಕೆ ಹೋಲಿಸಿದರೆ ಪೂರ್ವದಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗಳಿಸಲಿದೆ. ಹಾಗೂ ಈ ಗಳಿಕೆಯಿಂದಾಗುವ ಸಂಖ್ಯಾಬಲವನ್ನು ಪಶ್ಚಿಮ, ದಕ್ಷಿಣ ಮತ್ತು ಉತ್ತರದಲ್ಲಾಗಬಹುದಾದ ಸಣ್ಣ ಸಣ್ಣ ಸೋಲುಗಳು ತಲೆಕೆಳಗಾಗಿಸಲಿವೆ. ಹಾಗಾಗಿ ಹಿಂದಿ ಹೃದಯಭೂಮಿಯ ಪ್ರದೇಶದ ಮೇಲೆಯೇ ಎಲ್ಲಾ ಸಮತೋಲನ ನಿಂತಿದೆ. ಈ ಹಿಂದಿ ವಿಭಾಗದಲ್ಲಿ ಏನಾಗುವುದು ಎಂದು ನಿಮಗೆ ಗೊತ್ತಿದ್ದರೆ, 2019 ರಲ್ಲಿ ಏನಾಗುವುದು ಎನ್ನುವುದೂ ನಿಮಗೆ ಗೊತ್ತಿದ್ದ ಹಾಗೆ.
ಈಗ ಈ ಐದು ಯುದ್ಧಭೂಮಿಗಳನ್ನು ಕೂಲಂಕುಷವಾಗಿ ಪರಿಶೀಲಿಸುವ ಹಾಗೂ ಭವ್ಯ ತೋರಿಕೆಯ ಹೊರತಾಗಿಯೂ ಬಿಜೆಪಿ ಏಕೆ ಗಾಬರಿಗೊಂಡಿದೆ ಎನ್ನುವುದನ್ನು ತಿಳಿಯುವ.
ಪೂರ್ವ (88 ಸೀಟುಗಳು)
2014 ಕ್ಕೆ ಹೋಲಿಸಿದರೆ ಬಿಜೆಪಿಗೆ ಪೂರ್ವದ ರಾಜ್ಯಗಳು ತನ್ನ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಅವಕಾಶ ನೀಡುತ್ತವೆ. 2014ರಲ್ಲಿ ಬಿಜೆಪಿ 11 ಸೀಟುಗಳನ್ನು ಗೆದ್ದಿತ್ತು. ಹಾಗಾಗಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಎಲ್ಲಾ ವಿಶ್ವಾಸಾರ್ಹ ಸರ್ವೇಗಳು ಹೇಳುವುದೇನೆಂದರೆ ಒರಿಸ್ಸಾದಲ್ಲಿ ಕಾಂಗ್ರೆಸ್ ಕಳೆದುಕೊಳ್ಳುತ್ತಿರುವ ನೆಲೆಯನ್ನು ಬಿಜೆಪಿ ವಿಸ್ತರಿಸಿಕೊಳ್ಳುತ್ತಿದೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ನೆಲೆಯನ್ನು ತನ್ನದಾಗಿಸಿಕೊಳ್ಳುತ್ತಿದೆ. ಈಶಾನ್ಯ ಭಾರತದಲ್ಲಿ, ಕಾಂಗ್ರೆಸ್ಸಿನ ಹಳೆ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುತ್ತ ಬಿಜೆಪಿ ಇತರೆ ಪಕ್ಷಗಳೊಂದಿಗೆ ಸಮ್ಮಿಲನ ಮತ್ತು ಕೆಲವು ಪಕ್ಷಗಳನ್ನು ಸ್ವಾಧಿನಗೊಳಿಸಿ ಹಿಂದೆಂದೂ ಕಾಣದಂತಹ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಹೆಚ್ಚಿನ ಮತಗಳು, ಸಂಖ್ಯೆಗಳು ಹೆಚ್ಚಿನ ಸೀಟುಗಳಾಗಿ ಮಾರ್ಪಾಡಾಗುತ್ತವೋ ಇಲ್ಲವೋ ಎನ್ನುವುದೊಂದೇ ಪ್ರಶ್ನೆ. ಒರಿಸ್ಸಾದಲ್ಲಿ ಆ ಸಾಧ್ಯತೆ ಸ್ಪಷ್ಟ. ಆದರೆ ಬೆಂಗಾಳದಲ್ಲಿ ಇನ್ನೂ ಸ್ಪಷ್ಟವಾಗಿಲ್ಲ. ಬಂಗಾಳದಲ್ಲಿ ಬಿಜೆಪಿ ಎಡಪಕ್ಷಗಳನ್ನು ಹಿಂದಿಕ್ಕಿ ರನರ್ ಅಪ್ ಆಗುವ ಸಾಧ್ಯತೆಯಿದೆಯಾದರೂ ಮಮತಾ ಬ್ಯಾನರ್ಜೀಯ ಆಧಿಪತ್ಯಕ್ಕೆ ಸವಾಲೆಸೆಯುವ ಶಕ್ತಿ ಇನ್ನೂ ಬಂದಿಲ್ಲ. ಅಸ್ಸಾಂನಲ್ಲಿ ಇನ್ನೂ ಬೆಳೆಯುವ ಸಾಧ್ಯತೆಗಳಿಲ್ಲವಾದರೂ ಈಶಾನ್ಯ ಭಾಗದ ಇತರೆ ರಾಜ್ಯಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಎಲ್ಲಾ ಸೇರಿ ಈ ಪ್ರದೇಶಗಳಲ್ಲಿ ಬಿಜೆಪಿ 2014ಕ್ಕಿಂತ 20 ಹೆಚ್ಚಿನ ಸೀಟುಗಳನ್ನು ಗೆಲ್ಲಬಹುದು.
ಪಶ್ಚಿಮ (78 ಸೀಟುಗಳು)
ಪಶ್ಚಿಮದಲ್ಲಿ ಈ ಸಲದ ಚುನಾವಣೆಗಳ ಫಲಿತಾಂಶ ಎಂದಿನಂತೆ ಇರುವ ಸಾಧ್ಯತೆಗಳಿದ್ದರೂ ಸೀಟುಗಳ ಸಂಖ್ಯೆಯಲ್ಲಿ ಬಿಜೆಪಿ ಸಣ್ಣ ಕಡಿತವನ್ನು ಅನುಭವಿಸಬಹುದು. ಈ ಪ್ರದೇಶದಲ್ಲಿ ಬರೀ 6 ಸೀಟುಗಳನ್ನು ಬಿಟ್ಟು ಎಲ್ಲಾ ಸೀಟುಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಅಲ್ಲಿಂದೀಚೆಗೆ ಈ ಮೂರೂ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಬೀಸಿದೆ. ಗುಜರಾತಿನಲ್ಲಿ ಗ್ರಾಮೀಣ ಭಾಗದ ಅಶಾಂತಿ, ಮಹಾರಾಷ್ಟçದಲ್ಲಿ ರೈತರ ಆಂದೋಲನಗಳು, ಶಿವಸೇನೆಯೊಂದಿಗೆ ಹೆಚ್ಚಾಗಿರುವ ಬಿಕ್ಕಟ್ಟುಗಳು, ಗೋವಾದಲ್ಲಿಯ ಅಪವಿತ್ರ ಪ್ರಾಕ್ಸಿ ಸರಕಾರ, ಇವೆಲ್ಲವುಗಳಿಂದ ಬಿಜೆಪಿ ವಿರುದ್ಧದ ವೇದಿಕೆ ಸಜ್ಜಾಗಿದೆ. ಆದರೆ ಸರ್ವೇಗಳ ಪ್ರಕಾರ ಬಿಜೆಪಿ ತನ್ನ ಸೋಲುಗಳ ಸಂಖ್ಯೆಯನ್ನು ಕನಿಷ್ಠವಾಗಿಡುವ ಸಾಧ್ಯತೆಯಿದೆ. ಗುಜರಾತಿನಲ್ಲಿ ಒಬ್ಬ ಗುಜರಾತೀ ಪ್ರಧಾನಿ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಆದ ಹಿನ್ನೆಡೆಯನ್ನು ಇಲ್ಲವಾಗಿಸುವಲ್ಲಿ ಸಹಕಾರಿಯಾಗಬಹುದು. ಮಹಾರಾಷ್ಟçದಲ್ಲಿ ಶಿವಸೇನೆ ಬಿಜೆಪಿ ತೆಕ್ಕೆಗೆ ಮತ್ತೆ ಹೋದಲ್ಲಿ ಎನ್‌ಸಿಪಿ-ಕಾಂಗ್ರೆಸ್‌ನ ಒಟ್ಟಾರೆ ಶಕ್ತಿಯನ್ನು ಮೀರಿಸಬಹುದು. ಸಾರಾಂಶದಲ್ಲಿ : ಈ ಪ್ರದೇಶದಲ್ಲಿ ಬಿಜೆಪಿ ತನ್ನ ಸೋಲುಗಳನ್ನು 15-20 ಸೀಟಿಗೆ ಸೀಮಿತಗೊಳಿಸಬಹುದು.
ದಕ್ಷಿಣ (132 ಸೀಟುಗಳು)
ದಕ್ಷಿಣವು, ಈ ರಾಜ್ಯಗಳ ರಾಜಕೀಯ ಭವಿಷ್ಯವನ್ನು ರೂಪಿಸಬಹುದಾದಂತಹ ನಿರ್ಣಾಯಕ ಚುನಾವಣೆಗಳಿಗೆ ಸಾಕ್ಷಿಯಾಗಲಿದೆ. ಆದರೆ, ಇದೇ ಕಾರಣದಿಂದ ಈ ಸಲದ ಲೋಕಸಭೆ ಚುನಾವಣೆ ಪ್ರಾದೇಶಿಕ ಸಮಸ್ಯೆಗಳು ಮತ್ತು ವ್ಯಕ್ತಿಗಳ ಮೇಲೆಯೇ ಕೇಂದ್ರಿÃಕೃತವಾಗುವ ಸಾಧ್ಯತೆಯಿದೆ. ಮೋದಿ ವರ್ಸಸ್ ರಾಹುಲ್ ಎನ್ನುವಂತಹ ಅಧ್ಯಕ್ಷಿÃಯ ಮಾದರಿಯ ಸ್ಪರ್ಧೆಗೆ ಇಲ್ಲಿ ಯಾವುದೇ ಅರ್ಥವಿಲ್ಲ. ಬಿಜೆಪಿಗೆ ಈ ಪ್ರದೇಶದಲ್ಲಿ ಹೆಚ್ಚಿನ ಪಾಲಿಲ್ಲ; ಕಳೆದ ಚುನಾವಣೆಯಲ್ಲಿ ಬರೀ 22 ಸೀಟುಗಳನ್ನು ಗೆದ್ದಿತ್ತು, ಆ 22 ಸೀಟುಗಳಲ್ಲಿ ಕರ್ನಾಟಕದಿಂದಲೇ 17 ಸೀಟುಗಳು ಬಂದಿದ್ದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸದ್ಯಕ್ಕೆ ಬಂದಿರುವ ಎಲ್ಲಾ ಸೂಚನೆಗಳ ಪ್ರಕಾರ, ಬಿಜೆಪಿ ಈ ಪ್ರದೇಶದಲ್ಲಿ ಕಿರಿಯ ಆಟಗಾರನಾಗಿಯೇ ಉಳಿಯಲಿದೆ. ಎಐಎಡಿಎಂಕೆ ಅನ್ನು ಸ್ವಾಧೀನಪಡಿಸಿಕೊಳ್ಳುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ಕರುಣಾನಿಧಿ ಮತ್ತು ಜಯಲಲಿತಾ, ಇವರಿಬ್ಬರ ನಿರ್ಗಮನದ ನಂತರ ಈ ನಿರ್ಣಾಯಕ ಚುನಾವಣೆಗಳಲ್ಲಿ ಬಿಜೆಪಿಯನ್ನು ಹಿಂದಕ್ಕೆ ತಳ್ಳಿ ಡಿಎಂಕೆ ಮುಂಚೂಣಿಯಲ್ಲಿದೆ ಎಂದು ತೋರುತ್ತಿದೆ. ಶಬರಿಮಲೆಯಲ್ಲಿ ಕೋಮುವಾದಿ ಭಾವನೆಗಳನ್ನು ಕೆರಳಿಸುವಂತಹ ಬಿಜೆಪಿ ಲಜ್ಜೆಗಟ್ಟ ತಂತ್ರಗಾರಿಕೆಯಿಂದ ಕೇರಳದಲ್ಲಿ ತನ್ನ ಹೆಜ್ಜೆಗಳನ್ನಿಡಲು ಸಾಧ್ಯವಾಗಿರಬಹುದು. ತನ್ನ ಅಸ್ತಿತ್ವವನ್ನು ತೋರಿಸಿದರೂ ಅದರಿಂದ ಸೀಟುಗಳ ಸಂಖ್ಯೆಯಲ್ಲಿ ಬದಲಾವಣೆ ಆಗುವ ಸಾಧ್ಯತೆಯಿಲ್ಲ. ಆಂಧ್ರ ಮತ್ತು ತೆಲಂಗಾಣ, ಈ ಎರಡೂ ರಾಜ್ಯಗಳಲ್ಲಿ ಪ್ರಾದೇಶಿಕ ಯುದ್ಧಗಳೇ ನಡೆಯಲಿದ್ದು, ಚಂದ್ರಬಾಬು ನಾಯ್ಡು ಬಿಜೆಪಿಯೊಂದಿಗಿದ್ದ ತನ್ನ ಸಂಬಂಧವನ್ನು ಕಳಚಿಕೊಂಡದ್ದರಿಂದ ಬಿಜೆಪಿ ಮತ್ತು ಎನ್‌ಡಿಎಗೆ ಯಾವುದೇ ಅವಕಾಶಗಳು ಕಾಣುತ್ತಿಲ್ಲ. ಕರ್ನಾಟಕದಲ್ಲಿ ಇತ್ತಿÃಚಿಗೆ ಆದ ಉಪಚುನಾವಣೆಗಳಿಂದ ಕಂಡುಬಂದಿದ್ದೆÃನೆಂದರೆ, ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಬಗ್ಗೆ ಜನರಿಗೆ ಇರುವ ಅಸಮಾಧಾನವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಬಲವಂತದ ಹೊಂದಾಣಿಕೆಯಿಂದ ಬಂದಿರುವ ಶಕ್ತಿಯು ಹಿಮ್ಮೆಟ್ಟಿಸಬಹುದು. ತಮಿಳುನಾಡು ಅಥವಾ ಆಂಧ್ರಪ್ರದೇಶದಲ್ಲಿ ಯಾವುದಾದರೂ ಶಕ್ತಿ ಮೈತ್ರಿ ಮಾಡಿಕೊಳ್ಳಬಹುದಾ ಇಲ್ಲವಾ ನಮಗಿನ್ನೂ ಗೊತ್ತಿಲ್ಲ, ಆದರೆ ಸದ್ಯಕ್ಕೆ ಈ ಪ್ರದೇಶದಲ್ಲಿ ಬಿಜೆಪಿ 5ರಿಂದ 10 ಸೀಟುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಉತ್ತರ (19 ಸೀಟುಗಳು)
ಉತ್ತರವನ್ನು ಸಂಪೂರ್ಣವಾಗಿ ಒಂದು ಬೇರೆಯೇ ಪ್ರದೇಶವೆಂದು ಹೇಳಲಾಗುವುದಿಲ್ಲ. ಆದರೆ, ಪಂಜಾಬ್ ಮತ್ತು ಜಮ್ಮು & ಕಾಶ್ಮಿÃರದ ರಾಜಕೀಯವು, ಹಿಂದಿ ಭಾಷಿಕ ರಾಜ್ಯಗಳ ರಾಜಕೀಯದ ಮಾದರಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ದಾಖಲೆಗಳನ್ನು ಹಾಗೂ ಆಮ್ ಆದ್ಮಿ ಪಕ್ಷದೊಳಗೆ ಆದ ಒಳಸ್ಫೊÃಟವನ್ನು ನೋಡಿದರೆ, ಕಾಂಗ್ರೆಸ್ ಪಂಜಾಬಿನಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಪಂಜಾಬಿನ ಅಥವಾ ಜಮ್ಮು & ಕಾಶ್ಮಿÃರದ ವಿಭಜಿತ ಫಲಿತಾಂಶದಿಂದ ರಾಷ್ಟಿçÃಯ ಲೆಕ್ಕದಲ್ಲಿ ಯಾವುದೇ ಬದಲಾವಣೆ ಬರುವುದಿಲ್ಲ. ಎಲ್ಲಾ ಸೇರಿ ಬಿಜೆಪಿ 3-4 ಸೀಟುಗಳ ನಷ್ಟ ಅನುಭವಿಸಬಹುದು.
ಈಗ ನಾವು ನೋಡಿದ ಎಲ್ಲಾ 317 ಸೀಟುಗಳ ಲೆಕ್ಕ ಹಾಕೋಣ. 2014 ರಲ್ಲಿ ಬಿಜೆಪಿ ಇದರಲ್ಲಿ 91 ಸೀಟುಗಳನ್ನು ಗೆದ್ದಿತ್ತು. ಈ ಬಾರಿಯ ಚಿತ್ರಣದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಕಡಿಮೆಯೆಂದು ತೋರುತ್ತಿದೆ. ದಕ್ಷಿಣದಲ್ಲಿ ಬಿಜೆಪಿಯ ನಷ್ಟ, ಮುಖ್ಯವಾಗಿ ಕರ್ನಾಟಕದಲ್ಲಿಯ ನಷ್ಟ, ಈ ಎಲ್ಲಾ ಪ್ರದೇಶಗಳನ್ನು ಒಟ್ಟುಗೂಡಿಸಿದರೆ ಆಗುವ ನಷ್ಟದಷ್ಟಿರಬಹುದು. ಸಮಗ್ರವಾಗಿ ನೋಡಿದಲ್ಲಿ, ಹಿಂದಿಯೇತರ ಪ್ರದೇಶಗಳಲ್ಲಿ ಬಿಜೆಪಿ 80 ರಿಂದ 90 ಸೀಟುಗಳನ್ನು ಗೆಲ್ಲಬಹುದೆಂದು ತೋರುತ್ತಿದೆ. 91 ಎಂದಾದರೆ, ಬಿಜೆಪಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಸ್ವಲ್ಪ ಚಿತ್ರಣವನ್ನು ಸರಳಗೊಳಿಸುವುದಾದರೆ, ನಾವು 2019ರ ಲೆಕ್ಕಾಚಾರಕ್ಕಾಗಿ ಹಿಂದಿಯೇತರ ಪ್ರದೇಶಗಳನ್ನು ಮರೆತುಬಿಡಬಹುದು. ಬಿಜೇಪಿ ಹಿಂದಿ ಹೃದಯಭಾಗದಲ್ಲಿ ತನ್ನ ಸಂಖ್ಯೆಯನ್ನು ಕಾಪಾಡಿಕೊಳ್ಳುವುದೋ ಇಲ್ಲವೋ ಎನ್ನುವುದರ ಮೇಲೆಯೇ ಅಂತಿಮ ಪರಿಣಾಮ ಅವಲಂಬಿಸಿರುವುದು ಸ್ಪಷ್ಟ. ಹಾಗಾಗಿ ಈಗ ಅದನ್ನೆÃ ನೋಡುವ.
ಹಿಂದಿ ಹೃದಯಭೂಮಿ (226 ಸೀಟುಗಳು)
2019ರ ಯುದ್ಧದಲ್ಲಿ ಗೆಲುವೋ, ಸೋಲೋ ಎನ್ನುವುದು ಹಿಂದಿ ಹೃದಯಭೂಮಿಯೇ ನಿರ್ಣಯಿಸಲಿದೆ. ಈ ಪ್ರದೇಶದಲ್ಲಿ ಬಿಜೆಪಿ 192 ಸೀಟುಗಳನ್ನು ಗೆದ್ದು ವಿಜಯಶಾಲಿಯಾಗಿತ್ತು. (ಬಿಹಾರ ಮತ್ತು ಉತ್ತರಪ್ರದೇಶದ ಎನ್‌ಡಿಎ ಮೈತ್ರಿಗಳನ್ನೂ ಲೆಕ್ಕಹಾಕಿದರೆ 203). ಹಾಗಾಗಿ ಇದೇ ಬಿಜೆಪಿಯ ಸಮಸ್ಯೆಯಾಗಿದೆ. 2014 ರಲ್ಲಿ ಬಿಜೆಪಿ ತಾನು ತಲುಪಿದ ಶಿಖರದಿಂದ ಕೆಳಗಿಳಿಯಲೇಬೇಕಿದೆ. ಎಲ್ಲಾ ಸೂಚನೆಗಳು ಬಿಜೆಪಿ ಈ ಪ್ರದೇಶದ ಎಲ್ಲೆಡೆಯಲ್ಲಿ ಕೆಳಗಿಳಿಯಲಿದೆ ಎಂತಲೇ ಹೇಳುತ್ತಿವೆ. ಇದಕ್ಕೆ ಬಿಹಾರ ಒಂದು ಮಾತ್ರ ಅಪವಾದವಾಗಬಹುದು. ಏಕೆಂದರೆ, ಬಿಜೆಪಿ ಜೆಡಿ(ಯು) ನೊಂದಿಗಿದ್ದ ಮೈತ್ರಿಯನ್ನು ಮತ್ತೆ ಸ್ಥಾಪಿಸಿದೆ. ಹಾಗಾಗಿ, ಈ ಮೈತ್ರಿಕೂಟ ಈಗ ಒಂದಾಗಿ ತಲೆಯತ್ತಿ ನಿಂತಿರುವ ವಿರೋಧಿಪಡೆಯನ್ನು ಸಶಕ್ತವಾಗಿ ಎದುರಿಸಬಲ್ಲದು ಮತ್ತು ತನ್ನ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಲ್ಲದು. ಸರ್ವೇಗಳು ಹೇಳುತ್ತಿರುವುದೇನೆಂದರೆ, ಝಾರ್ಖಂಡ್, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿಯ ಬಿಜೆಪಿ ಆಡಳಿತಗಳು ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿದ್ದು, ಈ ಮೂರೂ ರಾಜ್ಯಗಳಲ್ಲಿ ತಲಾ ಹತ್ತು ಸೀಟುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಗಟ್ಟಿಯಾಗಿದೆ. ದೆಹಲಿಯಲ್ಲೂ ತಾನು ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದನ್ನು ಮರುಕಳಿಸುವಂತೆ ಮಾಡುವುದೂ ಬಿಜೆಪಿಗೆ ಸಾಧ್ಯವಿಲ್ಲ. ಈ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗಳ ಸಮಯದಲ್ಲಿ ಮತದಾರರ ಮನಃಸ್ಥಿತಿಯ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದರೂ, ರಾಜಸ್ಥಾನದಲ್ಲಿ ಸೋಲುವುದು ನಿಶ್ಚಿತ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ ಹಾಗೂ ಮಧ್ಯಪ್ರದೇಶ ಮತ್ತು ಛತ್ತಿಸಗಢದಲ್ಲಿ ಗಂಭೀರವಾದ ಸವಾಲನ್ನು ಎದುರಿಸುತ್ತಿರುವುದೂ ಸ್ಪಷ್ಟ. ಈ ರಾಜ್ಯಗಳ ಈ ಮುಂಚಿನ ದಾಖಲೆಗಳು ಹೇಳುವುದೇನೆಂದರೆ, ಲೋಕಸಭೆ ಚುನಾವಣೆಗಳ ಫಲಿತಾಂಶಗಳು ವಿಧಾನಸಭೆಯ ಫಲಿತಾಂಶಗಳಿಗೆ ಪೂರಕವಾಗಿರುತ್ತವೆ. ಹಾಗೇನಾದರೂ ಆದರೆ, ಈ ರಾಜ್ಯಗಳಲ್ಲಿ ಬಿಜೆಪಿ 30 ಸೀಟುಗಳನ್ನು ಕಳೆದುಕೊಳ್ಳಬಹುದು. ಎಲ್ಲಾ ಸೇರಿ, ಈ ಹಿಂದಿಭಾಷಿಕ ರಾಜ್ಯಗಳಲ್ಲಿ ಬಿಜೇಪಿ 50 ಸೀಟುಗಳನ್ನು ಕಳೆದುಕೊಳ್ಳಬಹುದು.
ಈಗ ಉಳಿಯುವುದು ಉತ್ತರಪ್ರದೇಶ. ಇಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿ, ಇವೆರಡೂ ಒಂದು ಮೈತ್ರಿಕೂಟವನ್ನು ರಚಿಸುತ್ತಿವೆ ಹಾಗೂ ಈ ಕೂಟ ಸದ್ಯಕ್ಕೆ ಗಟ್ಟಿಗೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಇದೇ ರೀತಿ ಮುಂದುವರೆದರೆ 2014ರ ಫಲಿತಾಂಶವನ್ನು ತಲೆಕೆಳಗು ಮಾಡುವ ಶಕ್ತಿಯನ್ನು ಈ ಮೈತ್ರಿಕೂಟ ಹೊಂದಿದೆ ಎಂದು ಯಾರಾದರೂ ಹೇಳಬಹುದು. ಸುಮಾರು 50 ಸೀಟುಗಳಲ್ಲಿ ಈ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಬಹುದು. ಆಡಳಿತ ಪಕ್ಷಕ್ಕಿರುವ ಇನ್ನೊಂದು ಕೆಟ್ಟ ಸುದ್ದಿಯೇನೆಂದರೆ, ತನ್ನ ಐತಿಹಾಸಿಕ ಗೆಲುವಿನ ಎರಡು ವರ್ಷಗಳಲ್ಲೆÃ ಯೋಗಿ ಆದಿತ್ಯನಾಥ ಸರಕಾರ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ ಎಂದು ಸರ್ವೇಗಳು ಹೇಳುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ, ಉ.ಪ್ರ ಒಂದು ರಾಜ್ಯದಲ್ಲೆÃ ಬಿಜೆಪಿ 50 ಸೀಟುಗಳನ್ನು ಹಾಗೂ ಹಿಂದಿ ಹೃದಯಭೂಮಿಯ ಇತರೆ ರಾಜ್ಯಗಳಲ್ಲಿ ಇನ್ನೂ 50 ಸೀಟುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಹಿಂದಿ ಹೃದಯಭೂಮಿಯಲ್ಲಿ ಈ ಮಹತ್ವದ ಚುನಾವಣೆಗಳು ಇದೇ ರೀತಿಯಲ್ಲಿ ನಡೆಯಬಹುದೇ? ಖಚಿತವಾಗಿ ನಾವೇನನ್ನೂ ಹೇಳಲಾಗುವುದಿಲ್ಲ. ಈ ಪ್ರದೇಶಗಳಲ್ಲಿ ಬರೀ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯದೇ ಇರಬಹುದು. ಈ ಪ್ರದೇಶಗಳಲ್ಲಿಯೇ ಬಿಜೆಪಿ ಚುನಾವಣೆಗಳನ್ನು ಅಧ್ಯಕ್ಷಿÃಯ ಮಾದರಿಯಲ್ಲಿ, ನರೇಂದ್ರ ಮೋದಿ ವರ್ಸಸ್ ರಾಹುಲ್ ಗಾಂಧಿ ಎನ್ನುವ ರೀತಿಯಲ್ಲಿ ಬದಲಿಸಲು ಪ್ರಯತ್ನಿಸಲಿದೆ. ಮಿ.ಮೋದಿಯವರ ಜನಪ್ರಿಯತೆ ಈ ಭಾಗದಲ್ಲಿ ರಾಹುಲ್ ಗಾಂಧಿಗಿಂತ ಬಹಳ ಹೆಚ್ಚಿಗಿದೆ. ಬಿಜೆಪಿಯ ರಾಜ್ಯ ಸರಕಾರಗಳಿಗಿಂತಲೂ ಕೇಂದ್ರ ಸರಕಾರದೊಂದಿಗೆ ಜನರ ಸಂತೃಪ್ತಿ ಹೆಚ್ಚಿರುವುದು ಸ್ಪಷ್ಟ. ರಾಮಮಂದಿರದ ಪ್ರಚಾರ (ಪ್ರೊಪಗಾಂಡಾ) ಮತ್ತು ದ್ವೆÃಷದ ದಳ್ಳುರಿಗೆ ಈ ಪ್ರದೇಶಗಳಲ್ಲಿ ನೆಲೆ ಮಾಡಲು ಹೆಚ್ಚಿನ ಅವಕಾಶವಿದೆ ಹಾಗೂ ಬಿಜೆಪಿ ಅದನ್ನು ಮಾಡಲು ಪ್ರಾರಂಭಿಸಿದೆ. ಅದೇ ಸಮಯದಲ್ಲಿ, ಮೋದಿ ಅವರು ಭರವಸೆ ನೀಡಿದ ‘ವಿಕಾಸ’ ಈ ಪ್ರದೇಶಗಳಲ್ಲಿ ಕಂಡಿದ್ದು ತುಂಬಾ ಕಡಿಮೆ, ಉದ್ಯೊÃಗಗಳು ಕಾಣೆಯಾಗಿರುವುದರಿಂದ ಈ ಪ್ರದೇಶಗಳು ಅನುಭವಿಸಿದ್ದು ಹೆಚ್ಚು ಹಾಗೂ ಕೃಷಿ ಬಿಕ್ಕಟ್ಟಿನಿಂದ ಇಲ್ಲಿಯ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಪಟ್ಟಿದ್ದಿದೆ. ಹಿಂದಿ ಹೃದಯಭೂಮಿಯ ಯುದ್ಧಭೂಮಿಯಲ್ಲಿ ಭಾರತದ ಭವಿಷ್ಯಕ್ಕಾಗಿ ನಡೆಯುವ ಯುದ್ಧ ಜವಾನ್-ಕಿಸಾನ್ ವರ್ಸಸ್ ಹಿಂದು-ಮುಸಲ್ಮಾನ್ ಆಗಿ ನಡೆಯಲಿದೆ.
ಇಂದಿನ ಪರಿಸ್ಥಿತಿಯಲ್ಲಿ, ಬಿಜೆಪಿ ತಾನು 2014ರಲ್ಲಿ ಮುಟ್ಟಿದ ತುದಿಯಿಂದ 100 ಸೀಟುಗಳನ್ನು ಕಳೆದುಕೊಳ್ಳುವ ಸ್ಥಿತಿಯನ್ನು ಎದುರಿಸುತ್ತಿದೆ. ಅತ್ಯಂತ ನಾಟಕೀಯವಾದದ್ದೆÃನಾದರೂ ಆಗದಿದ್ದಲ್ಲಿ ಬಹುಮತಕ್ಕಾಗಿ ಬೇಕಿರುವ ಸೀಟುಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಅಂದರೆ, ಮಿ. ಮೋದಿಯವರು ಮರು ಆಯ್ಕೆಯಾಗುವುದು ಕಷ್ಟಸಾಧ್ಯ. ಆದರೆ ಚುನಾವಣೆಗೆ ಇನ್ನೂ ಸಮಯವಿದೆ, ಈ ಸಮಯದಲ್ಲಿ ಏನಾದರೂ ಆಗಬಹುದು. ಅದೇನಿದ್ದರೂ ಪರಿಸ್ಥಿತಿ ಕಾಣುತ್ತಿರುವುದು ಹೀಗೆ, ಸದ್ಯಕ್ಕೆ.

ಅನುವಾದ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...