Homeಕರ್ನಾಟಕಬಿಜೆಪಿಯ ಅದೃಷ್ಟ ಸಂಖ್ಯೆ ‘40’ ಇರಬಹುದೇನೋ; ಯತ್ನಾಳ್ ಆರೋಪಕ್ಕೆ ಕಾಂಗ್ರೆಸ್ ವ್ಯಂಗ್ಯ

ಬಿಜೆಪಿಯ ಅದೃಷ್ಟ ಸಂಖ್ಯೆ ‘40’ ಇರಬಹುದೇನೋ; ಯತ್ನಾಳ್ ಆರೋಪಕ್ಕೆ ಕಾಂಗ್ರೆಸ್ ವ್ಯಂಗ್ಯ

- Advertisement -
- Advertisement -

‘ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ನಿರ್ವಹಣೆಯಲ್ಲಿ ₹40 ಸಾವಿರ ಕೋಟಿ ಹಗರಣ ನಡೆದಿದೆ’ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ವ್ಯಂಗ್ಯ ಮಾಡಿರುವ ರಾಜ್ಯ ಕಾಂಗ್ರೆಸ್, ‘40 ಬಿಜೆಪಿಯ ಅದೃಷ್ಟ ಸಂಖ್ಯೆ ಇರಬಹುದೇನೋ! ಕಮಿಷನ್ – 40%, ಕೋವಿಡ್ ಹಗರಣ – 40 ಸಾವಿರ ಕೋಟಿ’ ಎಂದು ಹೇಳಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ’40 ಬಿಜೆಪಿಯ ಅದೃಷ್ಟ ಸಂಖ್ಯೆ ಇರಬಹುದೇನೋ! ಕಮಿಷನ್ – 40%, ಕೋವಿಡ್ ಹಗರಣ – 40 ಸಾವಿರ ಕೋಟಿ. ಸ್ವತಃ ಬಿಜೆಪಿಯ ಹಿರಿಯ ನಾಯಕರಿಂದಲೇ ಹೊರಬಿದ್ದ 40 ಸಾವಿರ ಕೋಟಿ ರೂಪಾಯಿಯ ಕೋವಿಡ್ ಹಗರಣದ ಬಗ್ಗೆ ಬಿ.ವೈ. ವಿಜಯೇಂದ್ರ ಜನತೆಗೆ ಉತ್ತರಿಸದೆ ಮೌನವಾಗಿರುವುದೇಕೆ? ಈ ₹40 ಸಾವಿರ ಕೋಟಿಯಲ್ಲಿ ಹೈಕಮಾಂಡ್ ನಾಯಕರ ಪಾಲೆಷ್ಟು’ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

‘ಸ್ವತಃ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರೂ, ಬಿಎಸ್‌ವೈ ಮತ್ತು ಮಕ್ಕಳ ವಿರುದ್ಧ ಇಷ್ಟೆಲ್ಲಾ ಮಾತಾಡಿದರೂ ಯತ್ನಾಳ್ ವಿರುದ್ಧ ಬಿಜೆಪಿ ಪಕ್ಷ ಕಠಿಣ ಕ್ರಮ ಕೈಗೊಳ್ಳದಿರುವುದು ನೋಡಿದರೆ 40 ಸಾವಿರ ಕೋಟಿಯ ಹಗರಣದ ಕಬಂದ ಬಾಹುಗಳು ವಿಸ್ತಾರವಾಗಿ ಹಬ್ಬಿರುವುದು ಸ್ಪಷ್ಟ. ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, ಕೋವಿಡ್ ಹಗರಣದ ಬಗ್ಗೆ ಮೌನಕ್ಕೆ ಜಾರಿರುವುದೇಕೆ? ತಮ್ಮಲ್ಲಿ ಸಾಚಾತನವಿದ್ದರೆ ಈ ಹಗರಣದ ತನಿಖೆಗೆ ಒತ್ತಾಯಿಸುತ್ತಿಲ್ಲವೇಕೆ’ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

‘ಕರ್ನಾಟಕದ ಜನರನ್ನು ಕಾಡಿದ ಅತಿ ದೊಡ್ಡ ವೈರಸ್ ಭ್ರಷ್ಟ ಬಿಜೆಪಿಯೇ ಹೊರತು ಕರೋನವಲ್ಲ! ಸಾವಿನ ಮನೆಯಲ್ಲಿ ಭ್ರಷ್ಟಾಚಾರದ ಸಂಭ್ರಮಾಚರಣೆ ಮಾಡಿದ ಬಿಜೆಪಿ ಸರ್ಕಾರದ ಹಗರಣಗಳು ಬಿಜೆಪಿಗರಿಂದಲೇ ಬಯಲಾಗುತ್ತಿದೆ. ವಿಜಯೇಂದ್ರ ಅವರೇ, ಅಂದು ಶ್ಯಾಡೋ ಸಿಎಂ ಆಗಿ ಇಡೀ ಆಡಳಿತವನ್ನು ನಿಯಂತ್ರಿಸಿದ್ದು ನೀವೇ ಅಲ್ಲವೇ? ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ (VijayendraServiceTax) ಜಾರಿಗೊಳಿದ್ದು ನೀವೇ ಅಲ್ಲವೇ? 40 ಸಾವಿರ ಕೋಟಿ ಯಾರ ಜೇಬಿಗೆ ಇಳಿಯಿತು’ ಎಂದು ಪ್ರಶ್ನಿಸಿದೆ.

’40 ಸಾವಿರ ಕೋಟಿ ಹಗರಣದ ಆರೋಪವನ್ನು ಸ್ವತಃ ಬಿಜೆಪಿಯ ಹಿರಿಯ ನಾಯಕರೇ ಮಾಡಿದ್ದಾರೆ. ಈ ಬಗ್ಗೆ ಉತ್ತರಿಸುವ ಹೊಣೆಗಾರಿಕೆ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರದ್ದು. 40 ಸಾವಿರ ಕೋಟಿಯಲ್ಲಿ ಯಾರ ಪಾಲೆಷ್ಟು? ಹೆಣದ ಮೇಲೆ ಹಣ ಮಾಡುವ ದುರ್ಬುದ್ಧಿ ಬಂದಿದ್ದೇಕೆ’ ಎಂದು ಪೋಸ್ಟ್‌ ಮಾಡಿದೆ.

ಯತ್ನಾಳ್ ಆರೋಪವೇನು?

ಸ್ವಪಕ್ಷೀಯ ನಾಯಕರ ವಿರುದ್ಧ, ಅದರಲ್ಲೂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗಿ ಕತ್ತಿ ಮಸೆಯುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಅವರು, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ್ರೆ ಕೋವಿಡ್ ಸಂದರ್ಭದಲ್ಲಿ ನಡೆದಿರುವ ₹40 ಸಾವಿರ ಕೋಟಿ ರೂಪಾಯಿ ಅವ್ಯವಹಾರದ ದಾಖಲೆ ರಿಲೀಸ್ ಮಾಡುತ್ತೇನೆ’ ಎಂದು ಮಂಗಳವಾರ ಸ್ಪೋಟಕ ಹೇಳಿಕೆ ನೀಡಿದ್ದರು.

‘ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ನಿರ್ವಹಣೆಯಲ್ಲಿ 40 ಸಾವಿರ ಕೋಟಿ ರೂಪಾಯಿಯ ಅವ್ಯವಹಾರ ನಡೆದಿದೆ. ನಾನು ಪ್ರಧಾನಿ ಮೋದಿ ಅವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನನಗೆ ನೋಟಿಸ್ ಕೊಟ್ಟು ಪಕ್ಷದಿಂದ ಉಚ್ಚಾಟಿಸಿ ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ’ ಎಂದು ಯತ್ನಾಳ್ ಸವಾಲು ಹಾಕಿದ್ದರು.

‘45 ರೂಪಾಯಿ ಮಾಸ್ಕ್ ಗೆ 485 ರೂಪಾಯಿ ಬಿಲ್ ಹಾಕಿದ್ದಾರೆ. ಬೆಡ್ಗಳಿಗೆ ಒಂದು ದಿನಕ್ಕೆ 10 ಸಾವಿರ ರೂಪಾಯಿ ಬಾಡಿಗೆ ನೀಡಿದ್ದಾರೆ. ಖರೀದಿ ಮಾಡಿದ್ರೆ ಒಂದು ದಿನದ ಬಿಲ್ ನಲ್ಲಿ ಎರಡು ಬೆಡ್ ಬರ್ತಿದ್ದವು. ಮಾಸ್ಕ್, ಬೆಡ್ಗಳಲ್ಲೂ ಭ್ರಷ್ಟಾಚಾರ ನಡೆದಿದೆ. ನಮ್ಮ ಸರ್ಕಾರ ಆದ್ರೆ ಏನಂತೆ? ಕಳ್ಳರು ಕಳ್ಳರೇ ಅಲ್ವಾ? ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ನನಗೇ ₹5 ಲಕ್ಷ ಬಿಲ್ ಹಾಕಿದ್ದರು. ಇನ್ನು ಬಡವರು ಏನು ಮಾಡಬೇಕು. ಕೊರೋನಾ ವೇಳೆ ಕೋಟಿ ಕೋಟಿ ಲೂಟಿ ಆಗಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ; ‘ದೇಶದ ಸಂಸತ್ತು ಗಾಢ ಕತ್ತಲೆ ಕೋಣೆಯಾಗಿ ಮಾರ್ಪಟ್ಟಿದೆ’; ಮೋದಿ-ಅಮಿತ್ ಶಾ ವಿರುದ್ಧ ಒಬ್ರಿಯಾನ್ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...