Homeಮುಖಪುಟಛತ್ತೀಸ್‌ಗಢದಲ್ಲಿ ಮತದಾನ: 2 ಕಡೆಗಳಲ್ಲಿ ಐಇಡಿ ಸ್ಪೋಟ; ಚುನಾವಣಾ ಸಿಬ್ಬಂದಿಗಳಿಗೆ ಗಾಯ

ಛತ್ತೀಸ್‌ಗಢದಲ್ಲಿ ಮತದಾನ: 2 ಕಡೆಗಳಲ್ಲಿ ಐಇಡಿ ಸ್ಪೋಟ; ಚುನಾವಣಾ ಸಿಬ್ಬಂದಿಗಳಿಗೆ ಗಾಯ

- Advertisement -
- Advertisement -

ಛತ್ತೀಸ್‌ಗಢದಲ್ಲಿ ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, 2 ದಿನಗಳಲ್ಲಿ ಎರಡು ಕಡೆಗಳಲ್ಲಿ ಸ್ಪೋಟ ಸಂಭವಿಸಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಮತದಾನ ಆರಂಭವಾದ ಬೆನ್ನಲ್ಲೇ ಸುಧಾರಿತ ಸ್ಫೋಟಕ ಸಾಧನ ಐಇಡಿ ಸ್ಫೋಟ ಸಂಭವಿಸಿದ್ದು ಚುನಾವಣಾ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದಾರೆ.

ಸುಕ್ಮಾದ ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಚವಾಣ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಸ್ಪೋಟದಲ್ಲಿ ಗಾಯಗೊಂಡ ಯೋಧನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಅವರು ಪ್ರಥಮ ಚಿಕಿತ್ಸೆ ಪಡೆದು ಸುರಕ್ಷಿತವಾಗಿದ್ದಾರೆ. ಜವಾನ ಕೋಬ್ರಾ ಬೆಟಾಲಿಯನ್‌ನವರಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ.

ಕೋಬ್ರಾ 206 ಮತ್ತು ಸಿಆರ್‌ಪಿಎಫ್ ಸಿಬ್ಬಂದಿ  ತೊಂಡಮಾರ್ಕಾದಿಂದ ಎಲ್ಮಗುಂದ ಗ್ರಾಮಕ್ಕೆ ಗಸ್ತು ತಿರುಗುತ್ತಿದ್ದಾಗ ನಕ್ಸಲರು ಅಳವಡಿಸಿದ್ದ ಐಇಡಿಯನ್ನು ತುಳಿದು ಕಾಲಿಗೆ ಗಾಯವಾಗಿದೆ. ಎರಡು ದಿನಗಳಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಎರಡನೇ ಐಇಡಿ ಸ್ಫೋಟ ಇದಾಗಿದೆ.

ನಿನ್ನೆ ಕಂಕೇರ್‌ನಲ್ಲಿ ಐಇಡಿ ಸ್ಫೋಟದಲ್ಲಿ ಬಿಎಸ್‌ಎಫ್ ಪೇದೆ ಮತ್ತು ಚುನಾವಣಾ ಕರ್ತವ್ಯ ನಿರತ ತಂಡದ ಸದಸ್ಯರು ಗಾಯಗೊಂಡಿದ್ದರು. ಗಾಯಗೊಂಡ ಪೇದೆಯನ್ನು ಪ್ರಕಾಶ್ ಚಂದ್ ಎಂದು ಗುರುತಿಸಲಾಗಿದ್ದು, ಅವರ ಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಛೋಟೆಪೇಥಿಯಾಗೆ ರವಾನಿಸಲಾಗಿದೆ.

ಛತ್ತೀಸ್‌ಗಢದಲ್ಲಿ ಅತಿ ಸೂಕ್ಷ್ಮವೆಂದು ಪರಿಗಣಿತ ಬಸ್ತಾರ್ ಕ್ಷೇತ್ರ ಸೇರಿದಂತೆ 20 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಸುಗಮ ಮತದಾನಕ್ಕೆ 20 ಕ್ಷೇತ್ರಗಳ ಸೂಕ್ಷ್ಮ ಪ್ರದೇಶಗಳಲ್ಲಿನ 600ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನ. 17 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಡಿ. 3 ರಂದು ಇತರ ನಾಲ್ಕು ರಾಜ್ಯಗಳೊಂದಿಗೆ ಮತ ಎಣಿಕೆ ನಡೆಯಲಿದೆ.

ಇದನ್ನು ಓದಿ: ಪ್ರಶ್ನೆಗಾಗಿ ನಗದು ಪ್ರಕರಣ: ನ.9ಕ್ಕೆ ಮಹುವಾ ಮೊಯಿತ್ರಾ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read