Homeಮುಖಪುಟರಸ್ತೆ ಅಪಘಾತದ ಸಾವುಗಳಿಗೆ ಸಂಜೀವಿನಿಯಾಗಿ ಸಾವಿರಾರು ಪ್ರಾಣಗಳನ್ನು ಉಳಿಸಿದ ಡಿ.ರಂಗಸ್ವಾಮಿ..

ರಸ್ತೆ ಅಪಘಾತದ ಸಾವುಗಳಿಗೆ ಸಂಜೀವಿನಿಯಾಗಿ ಸಾವಿರಾರು ಪ್ರಾಣಗಳನ್ನು ಉಳಿಸಿದ ಡಿ.ರಂಗಸ್ವಾಮಿ..

ಮೇಲುಜಾತಿಗಳಿಂದ ಮುಟ್ಟಿಸಿಕೊಳ್ಳದ ದಲಿತ ಸಮುದಾಯಕ್ಕೆ ಸೇರಿದ ರಂಗಸ್ವಾಮಿ ಸ್ವತಃ ಸಾವಿರಾರು ಜನರನ್ನು ಮುಟ್ಟಿ ಅವರುಗಳ ಜೀವ ಉಳಿಸಲು ಶ್ರಮಿಸುತ್ತಿರುವುದು ಜಾತಿವಾದಿ ರೋಗಿಷ್ಠ ಸಮಾಜಕ್ಕೆ ಮದ್ದಿನಂತೆ ಕಾಣುತ್ತದೆ.

- Advertisement -
- Advertisement -

ಎಲೆಮರೆ-18

-ಅರುಣ್ ಜೋಳದ ಕೂಡ್ಲಿಗಿ

ಆಗಿನ್ನೂ ಬಾಲಕ. ಊರಿಗೆ ಎದುರಾಗಿ ಹೈವೆ. ದಿನ ಬೆಳಗಾದರೆ ವಾಹನಗಳ ಓಡಾಟದ ಗದ್ದಲ, ರಾತ್ರಿಯ ಕನಸಿಗೆ ಹಿನ್ನೆಲೆ ಸಂಗೀತದಂತೆ ಹೈವೆಯ ಸದ್ದು. ಹೀಗಿರುವಾಗ `ಆಕ್ಸಿಡೆಂಟ್’ ಎಂಬ ಶಬ್ದ ಕಿವಿಗೆ ಬಿದ್ದಾಕ್ಷಣ ಊರವರು ರನ್ನಿಂಗ್ ರೇಸ್‌ನ ಸ್ಪರ್ಧಿಗಳಂತೆ ಓಡುತ್ತಿದ್ದರು. ಬಾಲಕನೂ ದಮ್ಮಿಡಿದು ಆಕ್ಸಿಡೆಂಟ್ ಸ್ಥಳಕ್ಕೆ ಧಾವಿಸುತ್ತಿದ್ದ. ಅದೊಂದು ಭಯಾನಕ ಆಕ್ಸಿಡೆಂಟ್. ಎರಡು ಲಾರಿಗಳು ಎದುರಾಬದುರು ಗುದ್ದಿಕೊಂಡು ನುಜ್ಜಾಗಿವೆ. ಒಂದು ಲಾರಿಯಲ್ಲಿ ಟ್ಯಾಂಕರ್ ಹೊಡೆದು ಹಾಲು ಸೋರುತ್ತಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಡ್ರೈವರ್ ಕ್ಲೀನರುಗಳನ್ನು ಕಣ್ಣೆತ್ತಿಯೂ ನೋಡದ ಜನರು, ಟ್ಯಾಂಕರಿನಿಂದ ಸುರಿಯುತ್ತಿದ್ದ ಹಾಲನ್ನು ಕ್ಯಾನು ಪಾತ್ರೆ ಚೆಂಬುಗಳಲ್ಲಿ ತುಂಬಿಸಿಕೊಳ್ಳುವುದರಲ್ಲಿ ಬ್ಯುಜಿಯಾಗಿದ್ದರು.

ಈ ಹುಡುಗ ರಕ್ತದ ಮಡುವಲ್ಲಿ ಸಾವಿನ ಕದ ತಟ್ಟುತ್ತಿದ್ದ ಡ್ರೈವರನನ್ನು ನೋಡುತ್ತಾ ಬಿಕ್ಕಳಿಸಿ ಅಳುತ್ತಿದ್ದ… ಇಂತಹದ್ದೇ ನೂರಾರು ಘಟನೆಗಳಿಗೆ ಸಾಕ್ಷಿಯಾದ ಈ ಹುಡುಗನ ಮನಸ್ಸಲ್ಲಿ ಒಂದು ಪ್ರಶ್ನೆ ಮೊಳೆಯಿತು. `ಆಕ್ಸಿಡೆಂಟ್ ಆದಾಗ ಸಾವಿನೊಂದಿಗೆ ಹೋರಾಡುತ್ತಿರುವ ಜೀವಗಳ ಉಳಿಸಲು ಯಾಕೆ ಜನರು ಮುಂದಾಗುವುದಿಲ್ಲ?’ ಈ ಹುಡುಗ ಹೈಸ್ಕೂಲ್ ದಾಟಿ ಪಿಯುಗೆ ಬರುತ್ತಾನೆ. ತನ್ನೊಳಗೆ ಮೊಳೆತ ಪ್ರಶ್ನೆ ಗಿಡದಿಂದ ಮರವಾಗುತ್ತದೆ. ಕೊನೆಗೆ ಈ ಪ್ರಶ್ನೆಗೆ ತಾನೆ ಉತ್ತರವಾಗಲು ಅಣಿಯಾಗುತ್ತಾನೆ. ಆ ಹುಡುಗನೆ ಚಿತ್ರದುರ್ಗ ತಾಲೂಕಿನ ಇಂಗಳದಾಳು ಎಂಬ ಹಳ್ಳಿಯ ಜಂಗ್ಲಿ ರಂಗಪ್ಪರ ದೇವೇಂದ್ರಪ್ಪ ಮತ್ತು ಸರೋಜಮ್ಮನ ಮಗ ರಾಮಸ್ವಾಮಿ. ಇದೀಗ ಬಿಇಡಿ ಮುಗಿಸಿ ಸ್ನಾತಕೋತ್ತರ ಪದವಿ ಮಾಡುವ ಕನಸೊತ್ತಿದ್ದಾನೆ.

ರಸ್ತೆ ಅಪಘಾತಗಳು ಸಂಭವಿಸಿದ ಸ್ಥಳಗಳಿಗೆ ತತ್‌ಕ್ಷಣಕ್ಕೆ ಭೇಟಿ ನೀಡಿ ಅಪಘಾತಕ್ಕೆ ಒಳಗಾದವರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ, ಸಾಧ್ಯವಾದಷ್ಟು ಜೀವ ಉಳಿಸಲು ಪ್ರಯತ್ನಿಸುವ ಕೆಲಸವನ್ನು ರಂಗಸ್ವಾಮಿ 2013 ರಿಂದ ಮಾಡುತ್ತಾ ಬಂದಿದ್ದಾನೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಇಂಗಳದಾಳುವಿನ ಈ ಹುಡುಗನ ಕೆಲಸ ಆರಂಭಕ್ಕೆ ಅಪಾಯಕಾರಿಯಾಗಿ ಕಂಡಿತು. ಪೊಲೀಸರು ಈ ಹುಡುಗನನ್ನು ಸಾಕ್ಷಿಯಾಗಿಸಿದರೆ ಕೋರ್ಟಿಗೆ ಅಲೆಯಬೇಕಾಗುತ್ತದೆ ಎಂದು ಊರವರು ಬುದ್ಧಿವಾದ ಹೇಳಿದರು. ಯಾರು ಯಾರದೋ ರಕ್ತಕ ಕಲೆ ಮಾಡಿಕೊಂಡು ಬರುವ ಈತನನ್ನು ಮನೆಯವರು ಬೈದರು. ಆರಂಭಕ್ಕೆ ಬಣ್ಣದ ಡಬ್ಬಿ ಹಿಡಿದು ಹಸಿಕಡ್ಡಿಯ ತುದಿ ಜಜ್ಜಿಕೊಂಡು ಅಪಘಾತ ವಲಯಗಳಿರುವೆಡೆ ’ಎಚ್ಚರಿಕೆ ಅಪಘಾತ ವಲಯ ನಿಧಾನಕ್ಕೆ ಚಲಿಸಿ’ ಎಂದು ರಸ್ತೆಬದಿಯ ಗೋಡೆಗಳಿಗೆ ಬರೆಯುತ್ತಿದ್ದ ಈ ಯುವಕ ಜನರಿಗೆ ತಲೆಕೆಟ್ಟವನಂತೆ ಕಂಡಿದ್ದ. ಇದೀಗ ಚಿತ್ರದುರ್ಗ ಜಿಲ್ಲೆಯಾದ್ಯಂತ ತಿರುಗಾಡಿ ರಂಗಸ್ವಾಮಿ ಗೆಳೆಯರ ನೆರವಿನೊಂದಿಗೆ ಇಂತಹ 400 ಕ್ಕಿಂತ ಹೆಚ್ಚಿನ ಸೂಚನಾಫಕಲಗಳನ್ನು ಬರೆದಿದ್ದಾನೆ. ನಂತರದಲ್ಲಿ ಕೆಲವು ಕಲಾವಿದರು ರಂಗಸ್ವಾಮಿಯ ಕೆಲಸಕ್ಕೆ ಜೊತೆಯಾಗಿದ್ದಾರೆ.

ನಿಧಾನಕ್ಕೆ ಜೀವ ಉಳಿಸುವ ಈ ಕೆಲಸಕ್ಕೆ ಆಡಿಕೊಂಡ ಜನರಿಂದಲೆ ಮೆಚ್ಚುಗೆ ಬರತೊಡಗಿತು. ರಂಗಸ್ವಾಮಿಯ ಸ್ನೇಹಿತರೂ ತನ್ನ ಕೆಲಸಕ್ಕೆ ಜೊತೆಯಾಗತೊಡಗಿದರು. ಈ ಸಂಖ್ಯೆ ಹೆಚ್ಚಾದಂತೆ `ಸಂಜೀವಿನಿ’ ಎಂಬ ವಾಟ್ಸಪ್ ಗ್ರೂಪ್ ರಚನೆಯಾಯಿತು. ಇದೀಗ ಮೂರು ವಾಟ್ಸಪ್ ಗ್ರೂಪಲ್ಲಿ ಏಳುನೂರ ಐವತ್ತು ಜನರು ಸಂಜೀವಿನಿಯ ಜತೆ ಗುರುತಿಸಿಕೊಳ್ಳುತ್ತಾರೆ. ನೂರಕ್ಕಿಂತ ಹೆಚ್ಚಿನ ಮಹಿಳೆಯರದೇ ಒಂದು ಪ್ರತ್ಯೇಕ ಗುಂಪಿದೆ. ಅದರಲ್ಲಿ ಶಾಲಾ ಶಿಕ್ಷಕಿಯರು ಹೆಚ್ಚಿದ್ದಾರೆ. ಅವರೆಲ್ಲಾ ಶಾಲೆಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯ ಯಾವುದೇ ರಸ್ತೆಯಲ್ಲಿ ಅಪಘಾತವಾದರೂ ತತ್‌ಕ್ಷಣಕ್ಕೆ ವಾಟ್ಸಪ್ ಗ್ರೂಪಲ್ಲಿ ಫೋಟೋ ಮಾಹಿತಿ ಹಂಚಿಕೆಯಾಗುತ್ತದೆ. ರಂಗಸ್ವಾಮಿ ಆಯಾ ಭಾಗದ ಸಂಜೀವಿನಿ ಸದಸ್ಯರಿಗೆ ಫೋನಾಯಿಸಿ ವಿಚಾರಿಸುತ್ತಾರೆ. ಆಗ ಆ ಭಾಗದ ಸಂಜೀವಿನಿ ಸಂಗಾತಿಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೆ ಒಳಗಾದವರ ರಕ್ಷಿಸಿ ಮೊದಲು ಆಂಬುಲೆನ್ಸ್‌ಗೆ ಫೋನಾಯಿಸುತ್ತಾರೆ. ಅಂಬುಲೆನ್ಸ್ ಅಲಭ್ಯವಾದಲ್ಲಿ ಬೈಕ್, ಆಟೋ, ಟೆಂಪೋ ಯಾವುದನ್ನಾದರೂ ಹಿಡಿದು ಮೊದಲು ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಗೆ ಅಣಿ ಮಾಡುತ್ತಾರೆ. ನಂತರ ಅಪಘಾತಕ್ಕೆ ಒಳಗಾದವರ ಮನೆಯವರಿಗೆ ಮಾಹಿತಿ ಮುಟ್ಟಿಸಿ, ತದನಂತರ ಪೊಲೀಸ್ ಮತ್ತು ಮಾಧ್ಯಮದವರಿಗೆ ಹೇಳುತ್ತಾರೆ. ಇದು ಸಂಜೀವಿನಿಯ ಕೆಲಸದ ಸ್ವರೂಪ.

ಇದೀಗ ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಸಂಜೀವಿನಿ ಬಳಗ ನೆರವಾಗಿದೆ. ಪೊಲಿಸ್ ಇಲಾಖೆಯೂ ಸಂಜೀವಿನಿ ಬಳಗದ ಸದಸ್ಯರನ್ನು ಅಪಘಾತಕ್ಕೆ ಸಾಕ್ಷಿಯಾಗಿಸದೆ ಬೆಂಬಲಿಸಿದ್ದಾರೆ. ಅಪಘಾತಕ್ಕೆ ಒಳಗಾಗಿ ಸಂಜೀವಿನಿ ನೆರವಿನಿಂದ ಬದುಕುಳಿದವರೂ ಈ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾರೆ. ಸಂಜೀವಿನಿ ಬಳಗದ ಬಗ್ಗೆ ಪತ್ರಿಕೆ ಟಿವಿಗಳಲ್ಲಿ ಪ್ರಚಾರ ನೋಡಿ ಕೆಲವರು ಸ್ವಆಸಕ್ತಿಯಿಂದ ಸಂಜೀವಿನಿ ಬಳಗಕ್ಕೆ ಸ್ಪಂದಿಸಿದ್ದಾರೆ. ಇದೀಗ ಸಾರಿಗೆ ಇಲಾಖೆಯು ತನ್ನ ರಸ್ತೆ ಸಪ್ತಾಹದಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ರಂಗಸ್ವಾಮಿಯನ್ನು ಅತಿಥಿಯಾಗಿ ಕರೆದು, ತನ್ನ ಅನುಭವ ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿದೆ. 2018 ರಲ್ಲಿ ಚಿತ್ರದುರ್ಗದ ಬಿಇಓ ನಾಗಭೂಷಣ ಅವರು ಶಾಲೆಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರಂಗಸ್ವಾಮಿ ಮತ್ತವರ ತಂಡಕ್ಕೆ ಅನುಮತಿ ನೀಡಿದ್ದರು. ಹಾಗಾಗಿ ಪ್ರಾಥಮಿಕ ಶಾಲೆಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಈತನಕ ಎಂಬತ್ತು ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಇದೀಗ ರಂಗಸ್ವಾಮಿಯನ್ನು ಚಿತ್ರದುರ್ಗ ಜಿಲ್ಲೆಯ ರಸ್ತೆ ಸುರಕ್ಷತೆಯ ಪ್ರಚಾರದ ರಾಯಭಾರಿಯಾಗಿಯನ್ನಾಗಿ ಆಯ್ಕೆ ಮಾಡಲು ಆರ್.ಟಿ.ಓ ಮತ್ತು ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. 2019 ರ ಆರ್.ಟಿ.ಓ ವರದಿಯ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದರೂ, ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇದು ಸಂಜೀವಿನಿ ಬಳಗದ ಪರಿಣಾಮ ಎಂದು ರಂಗಸ್ವಾಮಿ ಹೇಳುತ್ತಾರೆ. ರಸ್ತೆಗಳಲ್ಲಿ ಜನರು ಓಡಾಡಿದ ಕಾಲುದಾರಿಗಳಿರುತ್ತವೆ. ಹೈವೆ ರಸ್ತೆಗಳನ್ನು ಮಾಡುವಾಗ ಹೀಗೆ ಜನರು ಓಡಾಡುವ ಕಾಲುದಾರಿಗಳಲ್ಲೆ ರಸ್ತೆ ದಾಟುವ ಮಾರ್ಗಗಳನ್ನಾಗಿಸಬೇಕು. ಆದರೆ ಹೈವೇ ಅಥಾರಿಟಿ ಇವುಗಳನ್ನು ಗಮನಿಸುವುದಿಲ್ಲ. ಇದರಿಂದಾಗಿ ಜನರು ಓಡಾಡಿದ ಹಳೆಯ ದಾರಿಗಳಲ್ಲೆ ರಸ್ತೆ ದಾಟಲು ಪ್ರಯತ್ನಿಸುತ್ತಾರೆ. ಇದು ಕೂಡ ಅಪಘಾತಕ್ಕೆ ಕಾರಣ ಎಂದು ರಂಗಸ್ವಾಮಿ ತನ್ನದೇ ಅನುಭವದಿಂದ ಸಮಸ್ಯೆಗಳನ್ನು ಗುರುತಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೀವಿನಿ ಬಳಗ ಸೂಚಿಸಿದ 96 ಅಪಘಾತ ಸಂಭವದ ಸ್ಥಳಗಳನ್ನು ಸಾರಿಗೆ ಇಲಾಖೆಯವರೂ ಮಾನ್ಯಮಾಡಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಅಣ್ಣ ಶಾಂತಕುಮಾರ್, ಬಿಇಡಿ ಮುಗಿಸಿದ ತಂಗಿ ಮತ್ತು ಅಪ್ಪ ಅಮ್ಮ ಇರುವ ಪುಟ್ಟ ಕುಟುಂಬ ರಾಮಸ್ವಾಮಿಯ ಕೆಲಸಕ್ಕೆ ಇದೀಗ ಬೆಂಬಲವಾಗಿದ್ದಾರೆ. ರಾಮಸ್ವಾಮಿಯ ನೂರಾರು ಗೆಳೆಯರ ಸ್ನೇಹಬಳಗ ಸಂಜೀವಿನಿಯನ್ನು ಜೀವಂತವಾಗಿಟ್ಟಿದೆ.

ಮುಂದೆ ಒಂದು ಟ್ರಸ್ಟ್ ಮಾಡಿ ರಾಜ್ಯವ್ಯಾಪಿ ಸಂಜೀವಿನಿ ಬಳಗವನ್ನು ವಿಸ್ತರಿಸುವ ಕನಸು ರಂಗಸ್ವಾಮಿಯದು. ಪ್ರಜಾವಾಣಿ 2020 ರ ಯುವ ಸಾಧಕರನ್ನು ಗುರುತಿಸುವಾಗ ರಂಗಸ್ವಾಮಿಯನ್ನು ಗುರುತಿಸಿ ಗೌರವಿಸಲಾಗಿದೆ. ಹಲವು ಸಂಘಸಂಸ್ಥೆಗಳು ರಂಗಸ್ವಾಮಿಯ ಕೆಲಸವನ್ನು ಮೆಚ್ಚಿ ಬೆಂಬಲಿಸಿವೆ. ಮೇಲುಜಾತಿಗಳಿಂದ ಮುಟ್ಟಿಸಿಕೊಳ್ಳದ ದಲಿತ ಸಮುದಾಯಕ್ಕೆ ಸೇರಿದ ರಂಗಸ್ವಾಮಿ ಸ್ವತಃ ಸಾವಿರಾರು ಜನರನ್ನು ಮುಟ್ಟಿ ಅವರುಗಳ ಜೀವ ಉಳಿಸಲು ಶ್ರಮಿಸುತ್ತಿರುವುದು ಜಾತಿವಾದಿ ರೋಗಿಷ್ಠ ಸಮಾಜಕ್ಕೆ ಮದ್ದಿನಂತೆ ಕಾಣುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...