Homeಮುಖಪುಟವಿಚಾರವಾದಿ ದಾಭೋಲ್ಕರ್ ಹತ್ಯೆ: ಪಿಸ್ತೂಲ್ ಪತ್ತೆ

ವಿಚಾರವಾದಿ ದಾಭೋಲ್ಕರ್ ಹತ್ಯೆ: ಪಿಸ್ತೂಲ್ ಪತ್ತೆ

- Advertisement -
- Advertisement -

ಆಗಸ್ಟ್ 2013ರಂದು ಪುಣೆಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ವಿಚಾರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಲ್ಲಿ ಸಿಬಿಐ ಮಹತ್ವದ ಪ್ರಗತಿ ಸಾಧಿಸಿದೆ. ಕೇಂದ್ರ ತನಿಖಾ ದಳವು ಹತ್ಯೆಯಲ್ಲಿ ಬಳಸಿರಬಹುದಾದ ಪಿಸ್ತೂಲ್ ಅನ್ನು  ಅರೇಬಿಯನ್ ಸಮುದ್ರದಿಂದ ನಾರ್ವೇಜಿಯನ್ ಆಳ ಸಮುದ್ರ ಪರಿಶೋಧಕರು ಮತ್ತು ತಂತ್ರಜ್ಞಾನದ ಸಹಾಯದಿಂದ ವಶಪಡಿಸಿಕೊಂಡಿದೆ ಎಂದು “ಹಿಂದುಸ್ತಾನ್ ಟೈಮ್ಸ್” ವರದಿಮಾಡಿದೆ .

ಶಸ್ತ್ರಾಸ್ತ್ರವನ್ನು ದಬೋಲ್ಕರ್ ಹತ್ಯೆಯಲ್ಲಿ ಬಳಸಲಾಗಿದೆಯೆ ಎಂದು ತಿಳಿಯಲು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಶಸ್ತ್ರಾಸ್ತ್ರವನ್ನು ಹುಡುಕಲು ಥಾಣೆ ಬಳಿಯ ಖರೆಗಾಂವ್ ಕೊಲ್ಲಿಯನ್ನು ಸೋಸುವ ಅಗತ್ಯವಿದೆ ಎಂದು ಸಿಬಿಐ, ಆಗಸ್ಟ್ 2019 ರಲ್ಲಿ ಪುಣೆ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕ ವೀರೇಂದ್ರ ತಡೆ, ವಕೀಲ ಸಂಜೀವ್ ಪುಣಲೇಕರ್, ವಿಕ್ರಮ್ ಭಾವೆ, ಶರದ್ ಕಲಾಸ್ಕರ್ ಮತ್ತು ಸಚಿನ್ ಅಂಡುರೆ ಸೇರಿದಂತೆ ಏಳು ಜನರನ್ನು ಸಿಬಿಐ ಪ್ರಮುಖ ಆರೋಪಿಗಳೆಂದು ಹೆಸರಿಸಿದೆ.

“ನಾವು ಹಲವಾರು ದಿನಗಳ ಹುಡುಕಾಟದ ನಂತರ ಪಿಸ್ತೂಲ್ ಅನ್ನು ಕಂಡುಕೊಂಡಿದ್ದೇವೆ. ಬ್ಯಾಲಿಸ್ಟಿಕ್ಸ್ ತಜ್ಞರು ಈಗ ಅದನ್ನು ದಾಭೋಲ್ಕರ್ ಅವರ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಿರುವ ಬುಲೆಟ್ ಗಾತ್ರ ಹಾಗೂ ಪ್ರಕಾರದೊಂದಿಗೆ ಪರಿಶೀಲಿಸುತ್ತಾರೆ ”ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿದ್ದಾರೆ.

ತನಿಖೆಯಲ್ಲಿ ಬಳಸುವ ನಾರ್ವೇ ತಂತ್ರಜ್ಞಾನಕ್ಕೆ ಸಿಬಿಐ, ಕರ್ನಾಟಕ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಗಳು (ಎಟಿಎಸ್) ಜಂಟಿಯಾಗಿ ವೆಚ್ಚವನ್ನು ಭರಿಸಲಿದೆ. ಪುಣೆಯ ದಾಭೋಲ್ಕರ್, ಮತ್ತು ಕರ್ನಾಟಕದ ಗೌರಿ ಲಂಕೇಶ್ ಮತ್ತು ಎಂಎಂ ಕಲ್ಬುರ್ಗಿ ಹೀಗೆ ಎರಡು ರಾಜ್ಯಗಳ ಮೂರು ಕೊಲೆ ಪ್ರಕರಣಗಳು ಒಂದಕ್ಕೊಂದು ಸಂಬಂಧ ಹೊಂದಿವೆ.

ದಾಬೋಲ್ಕರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಸತ್ಯರಂಜನ್ ಧರ್ಮಧಿಕಾರಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.

ಆಗಸ್ಟ್ 20, 2013 ರಂದು ಬೆಳಿಗ್ಗೆ 7.30 ರ ಸುಮಾರಿಗೆ ಪುಣೆಯ ಓಂಕಾರೇಶ್ವರ ಸೇತುವೆಯಲ್ಲಿ ದಾಭೋಲ್ಕರ್ ಅವರನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದರ ತನಿಖೆಯನ್ನು 2014 ರಲ್ಲಿ ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...