Homeಮುಖಪುಟ4 ದಶಕಗಳಲ್ಲಿ ಕರಾಳ ಆರ್ಥಿಕ ವರ್ಷ: ಜಿಡಿಪಿ ಕುಸಿತಕ್ಕೆ ಚಿದಂಬರಂ ಕಿಡಿ

4 ದಶಕಗಳಲ್ಲಿ ಕರಾಳ ಆರ್ಥಿಕ ವರ್ಷ: ಜಿಡಿಪಿ ಕುಸಿತಕ್ಕೆ ಚಿದಂಬರಂ ಕಿಡಿ

- Advertisement -
- Advertisement -

ಸೋಮವಾರ ಸರ್ಕಾರ ಬಿಡುಗಡೆ ಮಾಡಿದ ಜಿಡಿಪಿ ಅಂಕಿಅಂಶಗಳು ಆರ್ಥಿಕತೆಯು ಈ ವರ್ಷ ಶೇಕಡಾ 7.3 ರಷ್ಟು ಕುಗ್ಗಿದೆ ಎಂದು ತೋರಿಸಿವೆ. ನಾಲ್ಕು ದಶಕಗಳಲ್ಲಿ ಇದು ಕೆಟ್ಟ ಸಾಧನೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

‘2020-21ರ ಆರ್ಥಿಕ ವರ್ಷವು, ನಾಲ್ಕು ದಶಕಗಳಲ್ಲಿ ಆರ್ಥಿಕತೆಯ ಕರಾಳ ವರ್ಷ. ಇದು ದಾಖಲೆಯ ಋಣಾತ್ಮಕ ಬೆಳವಣಿಗೆಗೆ ಕಾರಣವಾಗಿದೆ ಮತ್ತು ಎರಡು ವರ್ಷಗಳ ಹಿಂದೆ ಇದ್ದ ಬಡ ಭಾರತೀಯರಿಗಿಂತ ಹೆಚ್ಚಿನ ಭಾರತೀಯರನ್ನು ಬಡವರನ್ನಾಗಿ ಮಾಡಿದೆ” ಎಂದು ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ..

ಚಿದಂಬರಂ ಅವರು ಜನರನ್ನು ದಾರಿತಪ್ಪಿಸಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “2020-21 ನಾಲ್ಕು ದಶಕಗಳಲ್ಲಿ ಆರ್ಥಿಕತೆಯ ಕರಾಳ ವರ್ಷವಾಗಿದೆ. ನಾಲ್ಕು ತ್ರೈಮಾಸಿಕಗಳಲ್ಲಿನ ಸಾಧನೆ ಈ ಕಥೆಯನ್ನು ಹೇಳುತ್ತದೆ. ಮೊದಲ ಎರಡು ತ್ರೈಮಾಸಿಕಗಳು ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗಿವೆ (ಶೇಕಡಾ -24.4 ಮತ್ತು -7.4). ಮೂರನೆಯ ಮತ್ತು ನಾಲ್ಕನೇ ತ್ರೈಮಾಸಿಕಗಳು ಚೇತರಿಕೆಗೆ ಕಾರಣವಾಗಲಿಲ್ಲ” ಎಂದು ಚಿದಂಬರಂ ಹೇಳಿದ್ದಾರೆ.

“ಅಲ್ಪ ಪ್ರಮಾಣದ” ಸಕಾರಾತ್ಮಕ 3ನೇ ತ್ರೈಮಾಸಿಕ ಮತ್ತು 4ನೇ ತ್ರೈಮಾಸಿಕ ದರಗಳನ್ನು (ಶೇ.-0.5 ಮತ್ತು 1.6) ಹಿಂದಿನ ವರ್ಷದ ತ್ರೈಮಾಸಿಕಗಳ ದರಗಳ (ಶೇ.3.3 ಮತ್ತು 3.0) ಹಿನ್ನೆಲೆಯಲ್ಲಿ ನೋಡಬೇಕು’ ಎಂದು ಅವರು ಹೇಳಿದ್ದಾರೆ.

ಸೋಮವಾರ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿದ ಜಿಡಿಪಿ ಸಂಖ್ಯೆಗಳು ಆರ್ಥಿಕತೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 7.3 ರಷ್ಟು ಕುಗ್ಗಿದೆ ಎಂದು ತೋರಿಸಿದೆ. ಇದು 40 ವರ್ಷಗಳ ಅವಧಿಯಲ್ಲಿ ಮಾಡಿದ ಅತಿ ಕೆಟ್ಟ ಸಾಧನೆಯಾಗಿದೆ.

“ಕಳೆದ ವರ್ಷ ಸಾಂಕ್ರಾಮಿಕ ರೋಗದ ಮೊದಲ ಅಲೆ ಕಡಿಮೆಯಾದಾಗ, ಸರ್ಕಾರದ ಹಣಕಾಸು ಸಚಿವರು ಮತ್ತು ಅವರ ಮುಖ್ಯ ಆರ್ಥಿಕ ಸಲಹೆಗಾರ (ಕೆ ಸುಬ್ರಮಣಿಯನ್) ಚೇತರಿಕೆಯ ಕಥೆಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಇದು ಸುಳ್ಳು ಕಥೆ ಮತ್ತು ನಾವು ಇದಕ್ಕೆ ನಮ್ಮ ಬಲವಾದ ಪ್ರತಿರೋಧವನ್ನು ವ್ಯಕ್ತಪಡಿಸಿದ್ದೇವೆ, ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ ಎಂದು ಆಗಲೇ ಎಚ್ಚರಿಸಿದ್ದೇವೆ. ಬಡವರಿಗೆ ನೇರ ಹಣ ವರ್ಗಾವಣೆ ಸೇರಿದಂತೆ ಆರ್ಥಿಕತೆಗೆ ಬಲವಾದ ಪ್ರಚೋದನೆಯ ಅಗತ್ಯವಿದೆ ಎಂದು ನಾವು ಗಮನ ಸೆಳೆದಿದ್ದೇವೆ. ಉಚಿತ ಪಡಿತರ ವಿತರಣೆ ಮಾಡಬೇಕೆಂದು ಆಗ್ರಹಿಸಿದ್ದೇವೆ. ಆದರೆ ನಮ್ಮ ಮನವಿ ಕಿವುಡ ಸರ್ಕಾರಕ್ಕೆ ಕೇಳಲಿಲ್ಲ ಮತ್ತು ಇದರ ಫಲಿತಾಂಶವು ನಕಾರಾತ್ಮಕ ಬೆಳವಣಿಗೆಯಾಗಿದೆ” ಎಂದು ಅವರು ಹೇಳಿದ್ದಾರೆ.

‘ತಲಾ ಜಿಡಿಪಿ ಕಳೆದ ವರ್ಷಕ್ಕಿಂತ ಶೇಕಡಾ 8.2 ರಷ್ಟು ಕುಸಿತ ಕಂಡಿದೆ. ಇದರಿಂದ ಎರಡು ವರ್ಷಗಳ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಭಾರತೀಯರು ಈಗ ಬಡವರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಚಿದಂಬರಂ ಅವರು ನಿರುದ್ಯೋಗದ ಬಗ್ಗೆ CMIE ವರದಿಯನ್ನು ಎತ್ತಿ ತೋರಿಸಿದ್ದಾರೆ. ಎರಡನೇ ಕೋವಿಡ್ ಅಲೆಯಿಂದಾಗಿ ಒಂದು ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳುತ್ತದೆ. ಕಳೆದ ವರ್ಷ ಜನವರಿಯಲ್ಲಿ ಸಾಂಕ್ರಾಮಿಕ ರೋಗವು ಭಾರತವನ್ನು ಅಪ್ಪಳಿಸಿದ ನಂತರ 97 ಪ್ರತಿಶತದಷ್ಟು ಕುಟುಂಬಗಳ ಆದಾಯ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

“ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ದುಸ್ಥಿತಿ ಸಹಜ. ಆದರೆ ಇದು ಬಿಜೆಪಿ ನೇತೃತ್ವದ ಎನ್‌ಡಿಎಯ ಕೆಟ್ಟ ಆರ್ಥಿಕ ನಿರ್ವಹಣೆಯಿಂದ ಇನ್ನಷ್ಟು ಹೆಚ್ಚಾಗಿದೆ” ಎಂದು ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.

‘ಸರ್ಕಾರವು ಎಚ್ಚರಗೊಳ್ಳಬೇಕು, ಅದರ ದೋಷಗಳನ್ನು ಒಪ್ಪಿಕೊಳ್ಳಬೇಕು, ಅದರ ನೀತಿಗಳನ್ನು ಹಿಂಪಡೆಯಬೇಕು ಮತ್ತು ಅರ್ಥಶಾಸ್ತ್ರಜ್ಞರು ಮತ್ತು ಪ್ರತಿಪಕ್ಷಗಳ ಸಲಹೆಯನ್ನು ಗಮನಿಸಬೇಕು” ಎಂದು ಅವರು ಎಚ್ಚರಿಸಿದ್ದಾರೆ.


ಇದನ್ನೂ ಓದಿ: 2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...