Homeಮುಖಪುಟದೂರದರ್ಶನದ ಲೋಗೋ ಬಣ್ಣ ಬದಲಾವಣೆ ಕೇಸರೀಕರಣದ ಭಾಗ: ಎಂಕೆ ಸ್ಟಾಲಿನ್

ದೂರದರ್ಶನದ ಲೋಗೋ ಬಣ್ಣ ಬದಲಾವಣೆ ಕೇಸರೀಕರಣದ ಭಾಗ: ಎಂಕೆ ಸ್ಟಾಲಿನ್

- Advertisement -
- Advertisement -

ದೂರದರ್ಶನದ ಲೋಗೋವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸಿರುವುದನ್ನು ಟೀಕಿಸಿರುವ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಎಲ್ಲವನ್ನೂ ಕೇಸರಿಮಯಗೊಳಿಸುವ ಬಿಜೆಪಿಯ ಪಿತೂರಿಯ ಪೂರ್ವಭಾವಿ ಪ್ರಯತ್ನ ಎಂದು ಹೇಳಿದ್ದಾರೆ.

ದೂರದರ್ಶನದ ಲೋಗೋ ಬದಲಾವಣೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಎಂ ಕೆ ಸ್ಟಾಲಿನ್, ದೂರದರ್ಶನಕ್ಕೆ ‘ಕೇಸರಿ ಕಲೆ’ ನೀಡಲಾಗಿದೆ. ಎಲ್ಲವನ್ನೂ ಕೇಸರಿಮಯಗೊಳಿಸುವ ಬಿಜೆಪಿಯ ಷಡ್ಯಂತ್ರ ಇದು ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿರುವ ಹೇಳಿಕೆಯನ್ನು ಸ್ಟಾಲಿನ್‌ ಉಲ್ಲೇಖಿಸಿದ್ದಾರೆ. ಲೋಗೋ ಬದಲಾವಣೆಯಂತಹ ಕ್ರಮಗಳು ಕೇಸರೀಕರಣದ ಪೂರ್ವಭಾವಿಯಾಗಿವೆ. 2024ರ ಲೋಕಸಭಾ ಚುನಾವಣಾ ಫಲಿತಾಂಶವು ಅಂತಹ ಫ್ಯಾಸಿಸಂ ಶಕ್ತಿಗಳ ವಿರುದ್ಧ ಸಾರ್ವಜನಿಕ ಪ್ರತಿರೋಧವನ್ನು ತೋರಿಸಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ತಮಿಳು ಸಂತ ಕವಿ ತಿರುವಳ್ಳುವರ್ ಅವರನ್ನು ‘ಕೇಸರಿಮಯ’ಗೊಳಿಸಿದ್ದನ್ನು ಸ್ಮರಿಸಿದ ಅವರು, ತಮಿಳುನಾಡಿನ ಮಹಾನ್ ನಾಯಕರ ಪ್ರತಿಮೆಗಳಿಗೆ ಕೇಸರಿ ಬಣ್ಣವನ್ನು ಸುರಿಯಲಾಗಿತ್ತು ಎಂದು ಹೇಳಿದ್ದಾರೆ.

ಸರಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್ ಡಿಡಿ ಲೋಗೋ ಬಣ್ಣ ಬದಲಾವಣೆಯು ಕಾನೂನುಬಾಹಿರ ಎಂದು ಪ್ರತಿಪಕ್ಷಗಳು ಈಗಾಗಲೇ ಟೀಕಿಸಿವೆ. ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸುದ್ದಿ ದೂರದರ್ಶನ ಚಾನೆಲ್ ಡಿಡಿ ನ್ಯೂಸ್‌ನ ಲೋಗೋವನ್ನು ಕೆಂಪು ಬಣ್ಣದಿಂದ- ಕೇಸರಿ ಬಣ್ಣಕ್ಕೆ ಮರುಬ್ರಾಂಡ್ ಮಾಡಲಾಗಿದೆ. ಡಿಡಿ ನ್ಯೂಸ್‌ನ ಅಧಿಕೃತ ಎಕ್ಸ್  ಹ್ಯಾಂಡಲ್ ಮೂಲಕ ಬದಲಾವಣೆ ಬಗ್ಗೆ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ನಮ್ಮ ಮೌಲ್ಯಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ, ಆದರೆ ನಾವು ಈಗ ಹೊಸ ಅವತಾರದಲ್ಲಿ ಲಭ್ಯವಿದ್ದೇವೆ ಎಂದು ಪೋಸ್ಟ್‌ ಮೂಲಕ ದೂರದರ್ಶನ ಮಾಹಿತಿ ನೀಡಿತ್ತು.

ದೂರದರ್ಶನದ ಲೋಗೋ ಬದಲಾವಣೆಯ ಬಗ್ಗೆ ರಾಜ್ಯಸಭಾ ಸದಸ್ಯ ಮತ್ತು ಪ್ರಸಾರ ಭಾರತಿಯ ಮಾಜಿ ಸಿಇಒ ಜವಾಹರ್ ಸಿರ್ಕಾರ್ ಅವರು ಟೀಕಿಸಿದ್ದಾರೆ. ದೂರದರ್ಶನವು ತನ್ನ ಬಣ್ಣವನ್ನು ಕೇಸರಿಗೆ ಬದಲಿಸಿಕೊಂಡಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ದೂರದರ್ಶನದಲ್ಲಿ ಆಗುತ್ತಿರುವ ಕೇಸರೀಕರಣದ ಬದಲಾವಣೆಯನ್ನು ನೋಡಿಕೊಂಡು ಬರುತ್ತಿದ್ದೇನೆ. ಪ್ರಸಾರ ಭಾರತಿ ಈಗ ಹಿಂದಿನ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ. ಈಗ, ಅದು ಪ್ರಚಾರ ಭಾರತಿ ಆಗಿದೆ ಎಂದು ಜವಾಹರ್ ಸಿರ್ಕಾರ್ ಹೇಳಿದ್ದರು.

2012ರಿಂದ 2014ರ ಅವಧಿಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಕಾಂಗ್ರೆಸ್‌ನ ಮನೀಶ್ ತಿವಾರಿ, ದೂರದರ್ಶನದ ಲೋಗೋ ಬಣ್ಣ ಬದಲಾವಣೆಯು ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನದ ಒಂದು ಭಾಗವಾಗಿದೆ ಎಂದು ಆರೋಪಿಸಿದ್ದರು.

ಇದನ್ನು ಓದಿ: ಕನ್ನಡಿಗರಿಗೆ ಕೊಟ್ಟ ‘ಖಾಲಿ ಚೊಂಬಿ’ಗೆ ಕನ್ನಡಿಗರಿಂದ ‘ಖಾಲಿ ಕುರ್ಚಿ’ಯ ಉತ್ತರ: ಮೋದಿ ಸಭೆಯಲ್ಲಿ ಕುರ್ಚಿಗಳು ಖಾಲಿ-ಖಾಲಿ; ವಿಡಿಯೋ ಹಂಚಿಕೊಂಡ ಕಾಂಗ್ರೆಸ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...