Homeಮುಖಪುಟಜೈಪುರ್ ಪಿಂಕ್ ಪ್ಯಾಂಥರ್ಸ್‌ಗೆ ಸೋಲು: ಪ್ಲೇಆಫ್ ಹಂತ ತಲುಪಿದ ಬೆಂಗಳೂರು ಬುಲ್ಸ್

ಜೈಪುರ್ ಪಿಂಕ್ ಪ್ಯಾಂಥರ್ಸ್‌ಗೆ ಸೋಲು: ಪ್ಲೇಆಫ್ ಹಂತ ತಲುಪಿದ ಬೆಂಗಳೂರು ಬುಲ್ಸ್

- Advertisement -
- Advertisement -

ಪ್ರೊ ಕಬಡ್ಡಿ ಲೀಗ್‌ ಹಂತದ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು ಪುಣೇರಿ ಪಲ್ಟನ್ ವಿರುದ್ಧ 7 ಅಂಕಗಳ ಅಂತರದಿಂದ ಸೋಲುವುದರೊಂದಿಗೆ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ಲೇಆಫ್ ಸ್ಥಾನ ಖಚಿತವಾಗಿದೆ. ಈಗಾಗಲೇ ಬೆಂಗಳೂರು ಜೊತೆಗೆ ಪಟ್ನಾ ಪೈರೇಟ್ಸ್, ದಬಾಂಗ್ ಡೆಲ್ಲಿ ಮತ್ತು ಯು.ಪಿ ಯೋಧ ತಂಡಗಳು ಪ್ಲೇ-ಆಫ್‌ ಪ್ರವೇಶಿಸಿವೆ. ತೆಲುಗು ಟೈಟನ್ಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ ಮತ್ತು ತಮಿಳು ತಲೈವಾಸ್ ತಂಡಗಳು ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿವೆ.

ಪ್ಲೇ-ಆಫ್‌ ನ ಉಳಿದ ಎರಡು ಸ್ಥಾನಕ್ಕಾಗಿ ಪುಣೇರಿ ಪಲ್ಟನ್ (66 ಅಂಕ), ಜೈಪುರ್ ಪಿಂಕ್ ಪ್ಯಾಂಥರ್ಸ್(63 ಅಂಕ), ಹರಿಯಾಣ ಸ್ಟೀಲರ್ಸ್(63 ಅಂಕ), ಗುಜರಾತ್ ಜೈಂಟ್ಸ್ (62 ಅಂಕ) ಸೇರಿ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿವೆ.

ಅಂಕಪಟ್ಟಿ ಲೆಕ್ಕಾಚಾರ

ಕಬಡ್ಡಿ ಅಂಕಪಟ್ಟಿಯ ಮೊದಲ ನಾಲ್ಕು ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ (81 ಅಂಕ) ದಬಾಂಗ್ ಡೆಲ್ಲಿ(75 ಅಂಕ) ಮತ್ತು ಯುಪಿ ಯೋಧ (68 ಅಂಕ), ಬೆಂಗಳೂರು ಬುಲ್ಸ್ (66 ಅಂಕ) ಗಳೊಂದಿಗೆ ಈಗಾಗಲೇ ಪ್ಲೇ-ಆಫ್ ತಲುಪಿವೆ.

ಎರಡನೇ ಪಂದ್ಯ: ಗುಜರಾತ್ ಜೈಂಟ್ಸ್ v/s ಯು ಮುಂಬಾ 

ಗುಜರಾತ್ ಜೈಂಟ್ಸ್ 62 ಅಂಕ ಗಳಿಸಿದೆ. ಆದರೆ ಯು ಮುಂಬಾ ರೇಸ್‌ನಿಂದ ಹೊರಹೋಗಿದ್ದು ಕೊನೆಯ ಔಪಚಾರಿಕ ಲೀಗ್ ಪಂದ್ಯ ಆಡುತ್ತಿದೆ. ಇಲ್ಲಿ ಗುಜರಾತ್ ಅನ್ನು ಯು ಮುಂಬಾ ಮಣಿಸಿದರೆ ಗುಜರಾತ್ ಸಹ ಸ್ಪರ್ಧೆಯಿಂದ ಹೊರಗುಳಿಯುತ್ತದೆ.

ಮೂರನೇ ಪಂದ್ಯ: ಪಟ್ನಾ ಪೈರೇಟ್ಸ್ v/s ಹರ್ಯಾಣ ಸ್ಟೀಲರ್ಸ್

ಪಟ್ನಾ ಪೈರೇಟ್ಸ್ ಈಗಾಗಲೇ ಪ್ಲೆ ಆಫ್ ಪ್ರವೇಶಿಸಿ ಅಗ್ರಸ್ಥಾನದಲ್ಲಿಗೆ. ಮೊದಲ ಸ್ಥಾನದಲ್ಲಿರುವ ಕಾರಣ ನೇರವಾಗಿ ಸೆಮಿಫೈನಲ್ ತಲುಪಿದೆ. ಅದು ತನ್ನ ಕೊನೆಯ ಪಂದ್ಯವನ್ನು 63 ಅಂಕಗಳನ್ನು ಗಳಿಸಿರುವ  ಹರ್ಯಾಣ ಸ್ಟೀಲರ್ಸ್ ಎದರು ಆಡಲಿದೆ. ಇಲ್ಲಿ ಪಟ್ನಾ ಗೆದ್ದರೆ ಹರಿಯಾಣ ಹೊರಬೀಳುವ ಆತಂಕದಲ್ಲಿರುತ್ತದೆ.

ಪ್ಲೇಆಫ್ ಪಂದ್ಯಾವಳಿ

ಪ್ಲೇಆಫ್‌ನ ಮೊದಲೆರಡು ಸ್ಥಾನದಲ್ಲಿರುವ ಪಟ್ನಾ ಮತ್ತು ಡೆಲ್ಲಿ ನೇರವಾಗಿ ಸೆಮಿಫೈನಲ್ ತಲುಪಲಿವೆ. ಫೆಬ್ರವರಿ 21 ರಂದು 3 v/s 6 ನೇ ಸ್ಥಾನದ ತಂಡಗಳು ಮತ್ತು 4 v/s5 ನೇ ಸ್ಥಾನದ ತಂಡಗಳು ಎಲಿಮಿನೇಟರ್ ಪಂದ್ಯಗಳನ್ನು ಆಡಲಿವೆ. ಅಲ್ಲಿ ಗೆದ್ದವರು ಫೆಬ್ರವರಿ 23 ರಂದು ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಫೆಬ್ರವರಿ 25 ರಂದು ಫೈನಲ್ ಪಂದ್ಯ ನಡೆಯಲಿದೆ.


ಇದನ್ನೂ ಓದಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ 2023: ಎಚ್.ಡಿ ಕುಮಾರಸ್ವಾಮಿ V/S ಯೋಗೇಶ್ವರ್ ನಡುವೆ ಗೆಲುವು ಯಾರಿಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...