ಕೊರೊನಾ 2ನೇ ಅಲೆಯಲ್ಲಿ ತತ್ತರಿಸಿದ್ದ ದೆಹಲಿ 3ನೇ ಅಲೆಯನ್ನು ಎದುರಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೆಹಲಿಯಲ್ಲಿ ವೈದ್ಯರು ಮತ್ತು ನರ್ಸ್‌ಗಳಿಗೆ ಸಹಾಯ ಮಾಡಲು 5,000 ಯುವಜನರಿಗೆ ವೈದ್ಯಕೀಯ ತರಬೇತಿ ನೀಡಲು ಮುಂದಾಗಿದೆ.

ವೈದ್ಯಕೀಯ ತರಬೇತಿಗಾಗಿ ಯುವಜನರನ್ನು 500 ಅಭ್ಯರ್ಥಿಗಳ ತಂಡಗಳಾಗಿ ವಿಂಗಡಿಸಿ ಜೂನ್‌ 28ರಿಂದ ತರಬೇತಿಯನ್ನು ಪ್ರಾರಂಭಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ತಿಳಿಸಿದ್ದಾರೆ.  ಆರೋಗ್ಯ ಸಹಾಯಕರು ಅಥವಾ ಸಮುದಾಯ ಶುಶ್ರೂಷಾ ಸಹಾಯಕರನ್ನಾಗಿ ಕೆಲಸ ಮಾಡಲು ಯುವಜನರಿಗೆ ಎರಡು ವಾರಗಳ ಕಾಲ ನರ್ಸಿಂಗ್ ಮತ್ತು ಜೀವ ರಕ್ಷಣೆಯ ಮೂಲ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

“ಸರ್ಕಾರದ ಈ ಕ್ರಮವು ಕೊರೊನಾ ಮೂರನೇ ಅಲೆಯನ್ನು ಎದುರಿಸಲು ನಮ್ಮ ಸಿದ್ಧತೆಯನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಮೂರನೇ ಅಲೆ ಆರಂಭವಾಗಿರುವ ಇಂಗ್ಲೆಂಡ್‌ನಂತಹ ದೇಶಗಳ ಅನುಭವಗಳಿಂದ ಕಲಿಯುವುದು ಮತ್ತು ಸಂಪೂರ್ಣವಾಗಿ ಸಿದ್ಧವಾಗುವುದು ನಮ್ಮ ಉದ್ದೇಶ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ:  ಶಾಲಾ ಶುಲ್ಕ ವಿಚಾರ: ಸಮಸ್ಯೆ ಬಗೆಹರಿಸುವಂತೆ ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವವರು 12ನೇ ತರಗತಿ ಉತೀರ್ಣರಾಗಿರಬೇಕು ಮತ್ತು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು. ಜೂನ್‌ 17ರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಈ 5,000 ಯುವಜನರಿಗೆ ಮೂಲಭೂತ ಶುಶ್ರೂಷೆ, ಅರೆವೈದ್ಯಕೀಯ, ಜೀವ ಉಳಿಸುವಿಕೆ ಪ್ರಥಮ ಚಿಕಿತ್ಸಾ, ಮನೆ ಆರೈಕೆ, ಮಾದರಿ ಸಂಗ್ರಹ, ಆಮ್ಲಜನಕ ಮತ್ತು ಸಿಲಿಂಡರ್‌ಗಳ ಕಾರ್ಯಾಚರಣೆ ಮತ್ತು ಇತರ ವೈದ್ಯಕೀಯ ಕಾರ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಕೆಲಸ ಮಾಡುವ ದಿನಗಳವರೆಗೆ ವೇತನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ನಾವು ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ಅನುಭವಿಸಿದ್ದೇವೆ. ಅದನ್ನು ಗಮನದಲ್ಲಿಟ್ಟುಕೊಂಡು 3ನೇ ಅಲೆ ಎದುರಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ತರಬೇತಿಯನ್ನು ಇಂದ್ರಪ್ರಸ್ಥ ವಿಶ್ವವಿದ್ಯಾಲಯ (ಐಪಿ) ಮತ್ತು ದೆಹಲಿಯ ಒಂಬತ್ತು ವೈದ್ಯಕೀಯ ಸಂಸ್ಥೆಗಳು ನೀಡಲಿವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಮುಂಬೈ :ಏಷ್ಯಾದ ಅತಿ ದೊಡ್ಡ ಸ್ಲಂ ಧಾರಾವಿಯಲ್ಲಿ 2ನೇ ದಿನವು ಕೊರೊನಾ ಪ್ರಕರಣಗಳಿಲ್ಲ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here