Homeಮುಖಪುಟದೆಹಲಿ: ಡೆಂಗ್ಯೂ ಏಕಾಏಕಿ ಏರಿಕೆ; ಸಾವಿರದ ಗಡಿ ತಲುಪುತ್ತಿರುವ ಪ್ರಕರಣಗಳು

ದೆಹಲಿ: ಡೆಂಗ್ಯೂ ಏಕಾಏಕಿ ಏರಿಕೆ; ಸಾವಿರದ ಗಡಿ ತಲುಪುತ್ತಿರುವ ಪ್ರಕರಣಗಳು

- Advertisement -
- Advertisement -

ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ಸೋಂಕು ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 28ರವರೆಗೆ ಒಟ್ಟು 693 ಮಂದಿಯಲ್ಲಿ ಡೆಂಗ್ಯೂ ಸೊಂಕಿರುವುದು ಪತ್ತೆಯಾಗಿದೆ. ಈ ಕುರಿತು ವರದಿ ಬಿಡುಗಡೆ ಮಾಡಿರುವ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ (ಎಂಸಿಡಿ), ಡೆಂಗ್ಯೂ ತಡೆಗೆ ಹೊಸ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿಕೊಂಡಿದೆ.

ಈ ವರ್ಷ ಸೊಳ್ಳೆಗಳಿಂದ ಹರಡುವ ಎಲ್ಲ ಸೋಂಕುಗಳನ್ನು ಪರಿಗಣಿಸಿದರೆ, ಸೆಪ್ಟೆಂಬರ್ ಅಂತ್ಯದವರಗೆ ದಾಖಲಾದ ಒಟ್ಟು ಪ್ರಕಣಗಳ ಸಂಖ್ಯೆ 937 ಏರಿದೆ. ಈ ಪಟ್ಟಿಗೆ ಆಗಸ್ಟ್‌ನ 75 ಪ್ರಕರಣಗಳು ಸೇರಿಕೊಂಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೆಪ್ಟೆಂಬರ್ 28ರವರೆಗೆ ಒಟ್ಟು 125 ಮಲೇರಿಯಾ, 23 ಚಿಕುನ್ ಗೂನ್ಯಾ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿವೆ. ಹೆಚ್ಚಿನ ತಲೆನೋವು, ದದ್ದುಗಳು, ಸ್ನಾಯು ಮತ್ತು ಕೀಲುನೋವು ಅಥವಾ ಕೋವಿಡ್ ಹೋಲುವ ಲಕ್ಷಣಗಳು ಡೆಂಗ್ಯೂ ಮತ್ತು ಮಲೇರಿಯಾ ರೋಗಿಗಳಲ್ಲಿ ಕಂಡುಬರುತ್ತವೆ.

ಡೆಂಗ್ಯೂ ಮತ್ತು ಮಲೇರಿಯಾ ಹರಡುವ ಪ್ರಮಾಣ ಸಾಮಾನ್ಯವಾಗಿ ಜುಲೈ ಮತ್ತು ನವೆಂಬರ್ ತಿಂಗಳುಗಳಲ್ಲಿ ಹೆಚ್ಚಾಗಿರುತ್ತದೆ. ಕೆಲವು ಬಾರಿ ಡಿಸೆಂಬರ್ ಮಧ್ಯದವರೆಗೆ ಸೋಂಕಿನ ಪ್ರಕರಣಗಳು ವರದಿಯಾಗುತ್ತವೆ. ಆದರೆ, ಈ ಬಾರಿ ಸೆಪ್ಟೆಂಬರ್‌ನಲ್ಲೇ ಸೋಂಕು ಹೆಚ್ಚಿರುವುದು ದೆಹಲಿ ಆರೋಗ್ಯ ಇಲಾಖೆಗೆ ತಲೆಬಿಸಿಯಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶ | ಬೆಡ್‌ ಇಲ್ಲದೆ ಬಾಲಕಿಗೆ ನೆಲದ ಮೇಲೆ ಕೂರಿಸಿ ಚಿಕಿತ್ಸೆ; ಹದಗೆಟ್ಟ ಆರೋಗ್ಯ ವ್ಯವಸ್ಥೆ?

ನಗರದಲ್ಲಿ 2015ರಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏಕಾಏಕಿ ಏರಿಕೆ ಕಂಡಿತ್ತು. ಆ ವರ್ಷದ ಅಕ್ಟೋಬರ್‌ನಲ್ಲಿ ಸೋಂಕಿತರ ಸಂಖ್ಯೆ 10,600ರ ಗಡಿ ದಾಟಿತ್ತು. ಹಾಗಾಗಿ, 1996ರ ನಂತರ ದೆಹಲಿಯಲ್ಲಿ ಉಂಟಾದ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಸನ್ನಿವೇಶ ಎಂದು 2015ನೇ ವರ್ಷವನ್ನು ಕರೆಯಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...