Homeಮುಖಪುಟದೆಹಲಿ ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್‌ ನಾಯಕಿಯನ್ನು ವಶಕ್ಕೆ ಪಡೆದ ಇಡಿ ಅಧಿಕಾರಿಗಳು

ದೆಹಲಿ ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್‌ ನಾಯಕಿಯನ್ನು ವಶಕ್ಕೆ ಪಡೆದ ಇಡಿ ಅಧಿಕಾರಿಗಳು

- Advertisement -
- Advertisement -

ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕವಿತಾ ಅವರ ಹೈದರಾಬಾದ್ ನಿವಾಸದ ಮೇಲೆ ದಾಳಿ ನಡೆದ ಗಂಟೆಗಳ ನಂತರ ದೆಹಲಿ ಅಬಕಾರಿ ನೀತಿ ತನಿಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿದೆ. ಕವಿತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಡಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಕವಿತಾ ಅವರ ಹೈದರಾಬಾದ್ ನಿವಾಸದಲ್ಲಿ ಬಿಆರ್‌ಎಸ್ ಬೆಂಬಲಿಗರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಬಿಆರ್‌ಎಸ್‌ ನಾಯಕಿಯನ್ನು ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾದ ನಂತರ ಆಕೆಯ ಸಹೋದರ ಮತ್ತು ತೆಲಂಗಾಣ ಮಾಜಿ ಸಚಿವ ಕೆಟಿ ರಾಮರಾವ್ ಅವರು ಕವಿತಾ ಅವರ ನಿವಾಸಕ್ಕೆ ಆಗಮಿಸಿದರು. ಆದಾಗ್ಯೂ ಕವಿತಾ ಅವರನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಆದರೆ, ಇಡಿ ಮೂಲಗಳು ಕವಿತಾಳನ್ನು ದೆಹಲಿಗೆ ಕರೆದೊಯ್ಯುವುದಾಗಿ ಖಚಿತಪಡಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

‘ನಿಮ್ಮನ್ನು (ಕವಿತಾ) ರಾತ್ರಿ 8.45 ರ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಅವರು ಮನೆಯಲ್ಲಿ ನಮಗೆ ತಿಳಿಸಿದ್ದರು. ಅವರು ಇಲ್ಲಿಗೆ ಬರುವ ಮುನ್ನವೇ ಆಕೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಕವಿತಾಗೆ ವಿಮಾನ ಟಿಕೆಟ್ ಅನ್ನು ಸಹ ಬುಕ್ ಮಾಡಿದ್ದಾರೆ ಎಂದು ತೋರುತ್ತದೆ’ ಎಂದು ಬಿಆರ್‌ಎಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಪ್ರಶಾಂತ್‌ ರೆಡ್ಡಿ ಬಿಆರ್‌ಎಸ್‌ ಎಂಎಲ್‌ಸಿ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ದೆಹಲಿ ಮದ್ಯ ನೀತಿ ಪ್ರಕರಣಕ್ಕೂ ಕೆ ಕವಿತಾಗೂ ಸಂಬಂಧವೇನು?

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿನಲ್ಲಿರುವ ಪ್ರಕರಣವೂ ಇದೇ ಆಗಿದೆ. ಆರೋಪಗಳ ಪ್ರಕಾರ, ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ‘ಸೌತ್ ಕಾರ್ಟೆಲ್’ ಭಾಗಿಯಾಗಿತ್ತು. ಇದರಲ್ಲಿ ಕೆ ಕವಿತಾ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರ್ಟೆಲ್‌ನಲ್ಲಿರುವ ಇತರರು ಹೈದರಾಬಾದ್ ಉದ್ಯಮಿ ಶರತ್ ರೆಡ್ಡಿ, ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಅವರ ಮಗ ರಾಘವ್ ಮಾಗುಂಟ ರೆಡ್ಡಿ. ಈ ಸೌತ್ ಕಾರ್ಟೆಲ್ ಅನ್ನು ಉದ್ಯಮಿ ಅರುಣ್ ಪಿಳ್ಳೈ ಮತ್ತು ಅಭಿಷೇಕ್ ಬೋಯಿನ್ಪಲ್ಲಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಇದ್ದಾರೆ ಎಂಬ ಆರೋಪವಿದೆ.

ಕವಿತಾ ಅವರನ್ನು ವಿಚಾರಣೆಗಾಗಿ ಹಲವು ಬಾರಿ ಕರೆಸಲಾಯಿತು ಮತ್ತು ಅವರು ಇತ್ತೀಚಿನ ಎರಡು ಸಮನ್ಸ್‌ಗಳನ್ನು ತಪ್ಪಿಸಿದ್ದರು. ಕಳೆದ ವರ್ಷ ಈ ಪ್ರಕರಣದಲ್ಲಿ ಆಕೆಯನ್ನು ಮೂರು ಬಾರಿ ವಿಚಾರಣೆಗೊಳಪಡಿಸಲಾಗಿತ್ತು ಮತ್ತು ಕೇಂದ್ರ ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಪ್ರಕರಣದಲ್ಲಿ ಎಎಪಿ-ಸಂಬಂಧಿತ ಆರೋಪಿ ವಿಜಯ್ ನಾಯರ್, ಈ ದಕ್ಷಿಣ ಕಾರ್ಟೆಲ್‌ಗೆ ದೆಹಲಿ ಮದ್ಯ ವ್ಯವಹಾರದಲ್ಲಿ ಪಾಲನ್ನು ನೀಡುವುದಾಗಿ ಭರವಸೆ ನೀಡಿದರು. ಈಗ ರದ್ದಾದ ದೆಹಲಿ ಮದ್ಯ ನೀತಿಯಲ್ಲಿ ಹೆಚ್ಚಿನ ಪರವಾನಗಿಗಳನ್ನು ಹೊಂದಲು ಅನುಮತಿಸಲಾಗಿದೆ.

ಕೆ. ಕವಿತಾ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನಡುವೆ ರಾಜಕೀಯ ಪಾಲುದಾರಿಕೆ ಇತ್ತು. ಆ ಪ್ರಕ್ರಿಯೆಯಲ್ಲಿ, ಕೆ ಕವಿತಾ ಅವರು 2021 ರ ಮಾರ್ಚ್ 19-20 ರಂದು ವಿಜಯ್ ನಾಯರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಬುಚ್ಚಿಬಾಬು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ; ಇಡಿ-ಐಟಿ ಬಾಗಿಲು ತಟ್ಟಿದ ನಂತರ ಚುನಾವಣಾ ಬಾಂಡ್‌ ಖರೀದಿಸಿದ್ದ 3 ಮಂದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...