Homeಚಳವಳಿನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ

ನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ

- Advertisement -
- Advertisement -

ರೈತ ವಿರೋಧಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಐತಿಹಾಸಿಕ ’ದೆಹಲಿ ಚಲೋ’ ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದ್ದು ಕೇಂದ್ರ ಸರ್ಕಾರದ ಷರತ್ತುಬದ್ದ ಮಾತುಕತೆಯನ್ನು ತಿರಸ್ಕರಿಸಿದ್ದಾರೆ. ಪ್ರತಿಭಟನೆಯನ್ನು ಬುರಾರಿಯ ನಿರಂಕಾರಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಕೇಳಿಕೊಂಡಿದ್ದ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ನಿರಾಕರಿಸಿರುವ ರೈತರು, ಅದೊಂದು ಕ್ರೀಡಾಂಗಣವಲ್ಲ, ತೆರೆದ ಬಂಧಿಖಾನೆಯೆಂದು ನಮಗೆ ತಿಳಿದೆ ಎಂದಿದ್ದಾರೆ.

ರೈತರ ಈ ಚಳವಳಿಯಲ್ಲಿ ಕರ್ನಾಟಕದ ಪ್ರತಿನಿಧಿಗಳು ಕೂಡಾ ಭಾಗವಹಿಸಿದ್ದು, ಕರ್ನಾಟಕ ಜನಶಕ್ತಿ ಸಂಘಟನೆಯ “ಶಿವಕುಮಾರ್ ಎಸ್ ಗುಳಘಟ್ಟ” ಹೋರಾಟದ ಬಗೆಗಿನ ತಮ್ಮ ಸಾಕ್ಷಾತ್ ಅನುಭವವನ್ನು ಬರೆದಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ: ‌ಅನ್ನದಾತರಿಗೆ ಆತಿಥ್ಯ ನೀಡಿದ ರಾಷ್ಟ್ರ ರಾಜಧಾನಿಯ 25 ಮಸೀದಿಗಳು

’ನಡೆದಷ್ಟು ಟ್ರಾಕ್ಟರ್‌ಗಳ ಸಾಲು’

ಕಳೆದ  3-4 ದಿನಗಳಿಂದ ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಗೆ ಹಲವು ರಾಜ್ಯಗಳಿಂದ ರೈತ ಹೋರಾಟಗಾರರು, ಜನಪರ ಸಂಘಟನೆಗಳು ಭಾರೀ ಪ್ರಮಾಣದಲ್ಲಿ ಬಂದು ಸೇರುತ್ತಿದ್ದಾರೆ. ಅದರೆ ದೆಹಲಿಯೊಳಗಡೆ ದೆಹಲಿ ಪೋಲಿಸರು ರೈತರನ್ನೂ ರೈತ ಹೋರಾಟಗಾರರನ್ನೂ ಪ್ರವೇಶಿಸಲು ಬಿಡುತ್ತಿಲ್ಲ. ಆದ ಕಾರಣ ಜನರು ರಸ್ತೆಯಲ್ಲೆ ಪ್ರತಿಭಟನೆ ನಿರತರಾಗಿದ್ದಾರೆ. ಅದೂ ದೆಹಲಿ ಒಳಗೆ ಬರುವ ಐದು ಕಡೆ ಹೆದ್ದಾರಿಯಲ್ಲೂ ಕೂಡ ಜನರು ರಸ್ತೆಯಲ್ಲೆ ಪ್ರತಿಭಟನೆಯ ಕೂಗು ಮೊಳಗಿಸುತ್ತಿದ್ದಾರೆ. ಅದೂ ಕೂಡ ದೊಡ್ಡ ಪ್ರಮಾಣದಲ್ಲಿ!

ರಸ್ತೆಯಲ್ಲೆ ಅಡುಗೆ ಮಾಡಿಕೊಂಡು ಅಲ್ಲೆ ಮಲಗಿಕೊಂಡು ಕಳೆದ ನಾಲ್ಕು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ.

ನಾವೂ ಕೂಡ ಈ ಹೋರಾಟದ ಭಾಗವಾಗಿ ಇದೇ ತಿಂಗಳು 22 ರಂದು ಬೆಂಗಳೂರಿನಿಂದ ಹೊರಟು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಪ್ರಚಾರ, ಸಭೆ ಹಾಗೂ ಪತ್ರಿಕಾಗೋಷ್ಠಿಗಳನ್ನೂ ನಡೆಸಿ 27 ರ ಮಧ್ಯರಾತ್ರಿ ದೆಹಲಿಯ ನಿರಂಕಾರಿ ಮೈದಾನವನ್ನೂ ತಲುಪಿದೆವು. ಪ್ರತಿಭಟನೆಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಬರುವ ಪ್ರತಿಭಟನಾಕಾರರಿಗೆ ಆಹಾರ, ಔಷಧ, ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಬಿಜೆಪಿ ಸರ್ಕಾರ-ಭಾರಿ ವಿರೋಧ

ದೆಹಲಿಯ ಸಿಂಗೂ ಬಾರ್ಡರ್‌ನಲ್ಲಿ ದೊಡ್ಡಪ್ರಮಾಣದಲ್ಲಿ ಅಂದರೆ ಕನಿಷ್ಠ 60-80 ಸಾವಿರ ಜನರು ಟ್ರಾಕ್ಟರ್‌ಗಳ ಮೂಲಕ ಜಮಾಯಿಸಿದ್ದಾರೆ. ಅದೂ ಯಾವ ಪ್ರಮಾಣದಲ್ಲಿ ಅಂದರೆ ಸುಮಾರು ಆರು ಕಿ.ಮೀ ತನಕ ಟ್ರಾಕ್ಟರ್‌ಗಳು! ಕನಿಷ್ಠವೆಂದರೂ ಐದು ಸಾವಿರಕ್ಕೂ ಹೆಚ್ವು ಟ್ರಾಕ್ಟರ್‌ಗಳು ಉದ್ದಕ್ಕೂ ರಸ್ತೆಯ ಎರಡು ಬದಿಗಳಲ್ಲೂ ನಿಂತಿವೆ. ಅಲ್ಲೆ ರೈತರು ಒಂದೊಂದು ಕಡೆ ಪ್ರತಿಭಟನೆ, ಧರಣಿ, ಮಾತುಕತೆ, ಹೋರಾಟದ ಹಾಡುಗಳು, ಈ ಮೂರು ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ಅಲ್ಲೇ ವೈದ್ಯರುಗಳು ಆರೋಗ್ಯ ತಪಾಸಣೆಯನ್ನೂ ಮಾಡಿ ಔಷಧೋಪಾಚಾರಗಳ ವ್ಯವಸ್ಥೆಯನ್ನು ಸಹಾ ಮಾಡುತ್ತಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರ ರೈತ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಗಳು ನಡೆಸುತ್ತಿವೆ. ಆದರೆ ಇದು ರೈತ ಕುಲದ ಅಳಿವು ಉಳಿವಿನ ಪ್ರಶ್ನೆಯಾಗಿರುವ ಕಾರಣ ಅದೂ ಅಷ್ಟು ಸುಲಭವಾಗಿ ಚಳುವಳಿಯನ್ನೂ ಹತ್ತಿಕ್ಕಲು ಸಾದ್ಯವಿಲ್ಲ.

ಸದ್ಯದ ಮಟ್ಟಿಗೆ ಈ ಚಳುವಳಿಯ ಸಂದರ್ಭದಲ್ಲಿ ಗಮನಿಸಬೇಕಾದ ಹಾಗೂ ಮನನ ಮಾಡಿಕೊಳ್ಳಲೇಬೇಕಾದ ಅಂಶವೆಂದರೆ ಹೆಣ್ಣುಮಕ್ಕಳು, ರೈತ ಮಹಿಳೆಯರು ಕಾಣದಿರುವುದು ದೊಡ್ಡ ದುರಂತವೇ ಸರಿ. ಪುರುಷನಷ್ಟೆ ಸರಿ ಸಮನಾಗಿ ಹೊಲಗದ್ದೆಗಳಲ್ಲಿ ದುಡಿಯುವ ಮಹಿಳೆಯರನ್ನೂ ಚಳುವಳಿಗಳಿಗೆ ಕರೆತರುವಲ್ಲಿ ವಿಫಲವಾಗಿರುವ ರೈತ ಚಳುವಳಿಗಳಿಗೆ ಬಹುಶಃ ಭವಿಷ್ಯ ಇಲ್ಲವೇನೋ ಎಂದು ನನ್ನ ಅಭಿಪ್ರಾಯ. ಯಾಕೆಂದರೆ ಹೆಣ್ಣುಮಕ್ಕಳನ್ನೂ, ಮಹಿಳೆಯರನ್ನೂ ಹೊರತಾದ ಯಾವುದೇ ಚಳುವಳಿ ದೀರ್ಘಕಾಲ ಉಳಿದು ಬೆಳೆಯದು.

ಇದನ್ನೂ ಓದಿ: ದೆಹಲಿ ಚಲೋ: ರೈತರನ್ನು ತಡೆದ ಪೊಲೀಸರು; ಬ್ಯಾರಿಕೇಡ್‌ಗಳನ್ನು ನದಿಗೆಸೆದ ರೈತರು! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...