ಜನವರಿ 26 ರಂದು ನಿಗದಿಯಾಗಿರುವ ಟ್ರಾಕ್ಟರ್ ರ್‍ಯಾಲಿಯ ವಿರುದ್ಧ ತಡೆಯಾಜ್ಞೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ತೆರಳಿತ್ತು. ಇಂದು ಮನವಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಕೇಂದ್ರದ ಮನವಿಯ ಮೇರೆಗೆ ರ್‍ಯಾಲಿಯ ಬಗ್ಗೆ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ಹೇಳಿದೆ.
ಪ್ರತಿಭಟನೆ ನಡೆಸುವುದು, ದೆಹಲಿಗೆ ಯಾರನ್ನು ಅನುಮತಿಸಬೇಕು ಎಂಬುದು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿದ್ದು, ಅದನ್ನು ಪೊಲೀಸರು ನಿರ್ವಹಿಸಬೇಕೇ ಹೊರತು ನ್ಯಾಯಾಲಯವಲ್ಲ ಎಂದೂ ಸುಪ್ರೀಂಕೋರ್ಟ್ ಹೇಳಿದೆ. ಈ ನಡುವೆ ಕಾನೂನುಗಳನ್ನು ರದ್ದು ಬೇಕೆಂದು ರೈತರು ಪಟ್ಟುಹಿಡಿದಿದ್ದು, ಗಣರಾಜ್ಯೋತ್ಸವದಂದು ಉದ್ದೇಶಿತ ಟ್ರ್ಯಾಕ್ಟರ್ ರ್‍ಯಾಲಿಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈತ ಮಹಿಳಾ ದಿನ: IMF, WTO ಪ್ರತಿಕೃತಿ ಸುಟ್ಟು ಪ್ರತಿಭಟಿಸಿದ ರೈತ ಮಹಿಳೆಯರು
ಕೆಎಂಪಿ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿಭಟನೆ ನಡೆಸುವಂತೆ ಮತ್ತು ರ್‍ಯಾಲಿಯು ಕಿಸಾನ್ ಘಾಟ್ ಹಾಗೂ ಇತರ ಮಾರ್ಗಗಳ ಮೂಲಕ ಸಾಗಬಾರದು ಎಂದು ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ರೈತರು ಪೊಲೀಸರ ಮನವಿಯನ್ನು ಒಪ್ಪಿಕೊಳ್ಳಲಿಲ್ಲ.
ರೈತರ ಆಂದೋಲನವು ತನ್ನ 56 ನೇ ದಿನಕ್ಕೆ ಕಾಲಿಡುತ್ತಿದೆ. ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯ ಜೊತೆಗಿನ ಮಾತುಕತೆ ಮಂಗಳವಾರ(ನಿನ್ನೆ) ಯೋಜಿಸಲಾಗಿತ್ತು. ಆದರೆ ಅದನ್ನು ಮುಂದೂಡಿದ್ದು ಇಂದು ಮಾತುಕತೆ ನಡೆಯಲಿದೆ.
ಇದನ್ನೂ ಓದಿ: ಕೃಷಿ ನೀತಿ ವಿರೋಧಿ ಹೋರಾಟ: ಪೆರು ದೇಶದ ರೈತ ಹೋರಾಟಕ್ಕೆ ಜಯ
