Homeಆರೋಗ್ಯದೆಹಲಿಯಲ್ಲಿ ಮತ್ತೊಮ್ಮೆ ದಾಖಲೆ ಬರೆದ ಡೆಂಘೀ: ಒಂದೇ ವಾರದಲ್ಲಿ 189 ಪ್ರಕರಣ ದಾಖಲು

ದೆಹಲಿಯಲ್ಲಿ ಮತ್ತೊಮ್ಮೆ ದಾಖಲೆ ಬರೆದ ಡೆಂಘೀ: ಒಂದೇ ವಾರದಲ್ಲಿ 189 ಪ್ರಕರಣ ದಾಖಲು

- Advertisement -
- Advertisement -

ಸುರಿಯುತ್ತಿರುವ ಮಳೆ, ಅಲ್ಲಲ್ಲಿ ನಿಂತ ನೀರು, ಮನೆಯ ಸುತ್ತಮುತ್ತ ಇರದ ಸ್ವಚ್ಛತೆ, ಪರಿಸರ ಮಾಲಿನ್ಯ, ಸ್ವಚ್ಛತೆ ಬಗ್ಗೆ ಇರದ ಕಾಳಜಿ ಇದೆಲ್ಲವೂ ಅನಾರೋಗ್ಯವನ್ನು ನಾವೇ ಆಹ್ವಾನಿಸಿದಂತೆ. ಡೆಂಘೀ, ಮಲೇರಿಯಾ, ಚಿಕೂನ್‌ಗುನ್ಯಾ ಕಾಯಿಲೆಗಳ ಹೆಚ್ಚಳಗೊಳ್ಳುತ್ತಲೇ ಇವೆ. ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ವಹಿಸುವುದು ತುಂಬಾ ಅತ್ಯಗತ್ಯ. ಅದರಲ್ಲೂ ದೆಹಲಿ, ಮುಂಬೈ ಸೇರಿದಂತೆ ಬೃಹತ್ ನಗರಗಳಲ್ಲಿ ಕಾಯಿಲೆಯ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಯಾಗಿದೆ.

ಹೌದು… ಡೆಂಘೀ ಕಾಯಿಲೆಯಲ್ಲಿ ದೆಹಲಿ ಮತ್ತೊಮ್ಮೆ ದಾಖಲೆ ಮಾಡಿದೆ. ಒಂದೇ ವಾರದಲ್ಲಿ ಸುಮಾರು ೧೮೯ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ೨೦೧೯ರ ವರ್ಷದ ಆರಂಭದಿಂದ ಇಲ್ಲಿಯವರೆಗೆ ೮೩೩ ಪ್ರಕರಣಗಳು ಕಂಡು ಬಂದಿವೆ ಎಂದು ವರದಿಯೊಂದು ಹೇಳಿದೆ.

ಇದನ್ನೂ ಓದಿ: ಡೆಂಘೀ ವಿರುದ್ಧದ ಅಭಿಯಾನಕ್ಕೆ ವೀರೇಂದ್ರ ಸೆಹ್ವಾಗ್ ಬೆಂಬಲಕ್ಕೆ ಕೇಜ್ರಿವಾಲ್ ಹರ್ಷ..

ದೆಹಲಿಯಲ್ಲಿ ಡೆಂಘೀ ಕಾಯಿಲೆ ಹೆಚ್ಚುತ್ತಿದೆ. ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ಕಡಿಮೆಯಾಗಿವೆ. ಒಂದು ವಾರಕ್ಕೆ ೩೯ ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿವೆ. ೨೦೧೯ರ ವರ್ಷದಿಂದ ಇಲ್ಲಿಯವರೆಗೆ ೫೭೪ ಪ್ರಕರಣಗಳು ಕಂಡು ಬಂದಿವೆ.

ಇನ್ನು ಚಿಕೂನ್‌ಗುನ್ಯಾ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿವೆ. ಒಂದು ವಾರಕ್ಕೆ ಕೇವಲ ೯ ಪ್ರಕರಣಗಳು ದಾಖಲಾಗಿದ್ದರೆ, ೨೦೧೯ರ ವರ್ಷದ ಆರಂಭದಿಂದ ಇಲ್ಲಿಯವರೆಗೆ ೧೩೨ ಪ್ರಕರಣಗಳು ಕಂಡು ಬಂದಿವೆ.

ಆದರೆ ದೆಹಲಿಯಲ್ಲಿ ಡೆಂಘಿ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಡೆಂಘೀ ಹೆಚ್ಚುತ್ತಿದ್ದು, ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೆಹಲಿಯಲ್ಲಿ ಅಕ್ಟೋಬರ್‌ ೧೪ರವರೆಗೆ ೧೧೧ ಹೊಸ ಡೆಂಘೀ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...