Homeಮುಖಪುಟಕುರಾನ್ ಸುಡುವುದನ್ನು ತಡೆಗಟ್ಟುವ ಮಸೂದೆಗೆ ಡೆನ್ಮಾರ್ಕ್ ಸಂಸತ್ ಅನುಮೋದನೆ

ಕುರಾನ್ ಸುಡುವುದನ್ನು ತಡೆಗಟ್ಟುವ ಮಸೂದೆಗೆ ಡೆನ್ಮಾರ್ಕ್ ಸಂಸತ್ ಅನುಮೋದನೆ

- Advertisement -
- Advertisement -

ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವುದನ್ನು ಕಾನೂನು ಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ತು ಅಂಗೀಕರಿಸಿದೆ.

ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾಗಿರುವ ಕುರಾನ್‌ ಅನ್ನು ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಡೆನ್ಮಾರ್ಕ್‌ ಮತ್ತು ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಹೆಚ್ಚಾದ ನಂತರ ಸಂಸತ್‌ನಲ್ಲಿ ಮಸೂದೆ ಅಂಗೀಕಾರಗೊಂಡಿದೆ.

ಒಟ್ಟು 179 ಸದಸ್ಯರ ‘ಫೋಲ್ಕೆಟಿಂಗ್’ಎಂದೂ ಕರೆಯಲ್ಪಡುವ ಡ್ಯಾನಿಶ್ ಸಂಸತ್ತಿನಲ್ಲಿ ಮಸೂದೆಯ ಪರವಾಗಿ 94 ಮತಗಳು ಚಲಾವಣೆಯಾಗಿದ್ದು, ವಿರುದ್ಧ 77 ಮತಗಳು ಬಿದ್ದಿವೆ.

ಮಸೂದೆಯ ಪ್ರಕಾರ, ಸಾರ್ವಜನಿಕವಾಗಿ ಧಾರ್ಮಿಕ ಪಠ್ಯಗಳನ್ನು ಸುಡುವುದು, ಹರಿದು ಹಾಕುವುದು ಅಥವಾ ಅಪವಿತ್ರಗೊಳಿಸಿದರೆ ತಪ್ಪಿತಸ್ಥರಿಗೆ ಒಂದು ಅಥವಾ ಎರಡು ವರ್ಷಗಳವರೆಗೆ ಜೈಲು ಅಥವಾ ದಂಡವನ್ನು ವಿಧಿಸಬಹುದು. ವಿಡಿಯೋದಲ್ಲಿ ಪವಿತ್ರ ಪಠ್ಯವನ್ನು ನಾಶಪಡಿಸುವುದು ಮತ್ತು ನಂತರ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದು ಕೂಡಾ ಅಪರಾಧ. ಇದಕ್ಕೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಡೆನ್ಮಾರ್ಕ್ ಮತ್ತು ಸ್ವೀಡನ್‌ನಲ್ಲಿ ಈ ವರ್ಷ ಹಲವು ಸಾರ್ವಜನಿಕ ಪ್ರತಿಭಟನೆಗಳು ನಡೆದಿತ್ತು. ಇಸ್ಲಾಂ ವಿರೋಧಿ ಗುಂಪು ಕುರಾನ್‌ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು. ಮುಸ್ಲಿಮರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ಕುರಾನ್ ಪ್ರತಿಗಳನ್ನು ಸುಡುವುದನ್ನು ಸರ್ಕಾರ ನಿಷೇಧಿಸಬೇಕು ಎಂದು ಮುಸ್ಲಿಮರು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆ, ಮುಸ್ಲಿಮರ ಭಾವನೆಯನ್ನು ಗೌರವಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಂಸತ್‌ನಲ್ಲಿ ಮಸೂದೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ.

ಇದನ್ನೂ ಓದಿ : ಬೈರುತ್ ಅನ್ನು ಗಾಝಾದಂತೆ ಮಾಡುತ್ತೇವೆ: ನೆತನ್ಯಾಹು ಯುದ್ದೋನ್ಮಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...