Homeಮುಖಪುಟಬೈರುತ್ ಅನ್ನು ಗಾಝಾದಂತೆ ಮಾಡುತ್ತೇವೆ: ನೆತನ್ಯಾಹು ಯುದ್ದೋನ್ಮಾದ

ಬೈರುತ್ ಅನ್ನು ಗಾಝಾದಂತೆ ಮಾಡುತ್ತೇವೆ: ನೆತನ್ಯಾಹು ಯುದ್ದೋನ್ಮಾದ

- Advertisement -
- Advertisement -

ಇಸ್ರೇಲ್-ಹಮಾಸ್‌ ನಡುವಿನ ಕದನಕ್ಕೆ ಕೈ ಹಾಕಿದರೆ ಬೈರುತ್ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ವಿನಾಶ ಸಂಭವಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಜ್ಬುಲ್ಲಾ ಗುಂಪಿಗೆ ಬೆದರಿಕೆ ಹಾಕಿದ್ದಾರೆ.

ಹಿಜ್ಬುಲ್ಲಾ ತಾನಾಗಿಯೇ ಹಮಾಸ್ ಜೊತೆ ಕೈ ಜೋಡಿಸಿ ನಮ್ಮ ಜೊತೆ ಯುದ್ಧಕ್ಕೆ ಬಂದರೆ ಬೈರುತ್ ಮತ್ತು ದಕ್ಷಿಣ ಲೆಬನಾನ್ ಅನ್ನು ಗಾಜಾ ಮತ್ತು ಖಾನ್ ಯೂನಿಸ್ ಆಗಿ ಪರಿವರ್ತಿಸುತ್ತೇವೆ. ಆ ಪ್ರದೇಶಗಳು ಗಾಝಾದಿಂದ ಬಹಳ ದೂರವೇನಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ.

ಗುರುವಾರ ಇಸ್ರೇಲ್ ರಕ್ಷಣಾ ಪಡೆಗಳ ಉತ್ತರ ಕಮಾಂಡ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆತನ್ಯಾಹು ಹಿಜ್ಬುಲ್ಲಾಗೆ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಗುಂಪು ಇಸ್ರೇಲ್‌ ಮೇಲೆ ದಾಳಿ ಮಾಡಿದ ನಂತರ ಲೆಬನಾನ್‌ನ ಗಡಿಯಲ್ಲಿ ಇಸ್ರೇಲ್ ಸೇನೆ ಮತ್ತು ಹಿಜ್ಬುಲ್ಲಾ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಗಳು ಹೇಳಿವೆ. ನಮ್ಮ ಸೇನೆ ದಾಳಿಗೆ ಸನ್ನದ್ದವಾಗಿದೆ ಎಂದು ನೆತನ್ಯಾಹು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಹಿಜ್ಬುಲ್ಲಾ ಈಗಾಗಲೇ ಹಮಾಸ್ ಗುಂಪಿಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಆದರೆ, ಅದು ನೇರವಾಗಿ ಇಸ್ರೇಲ್ ಜೊತೆ ಕಾದಾಟಕ್ಕೆ ಇಳಿದಿಲ್ಲ. ಹಿಜ್ಬುಲ್ಲಾ ಸಂಘರ್ಷದಲ್ಲಿ ಸೇರಿಕೊಂಡರೆ ಯುದ್ಧ ಲೆಬನಾನ್‌ಗೆ ವಿಸ್ತಾರಣೆಗೊಂಡು ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವ ಆತಂಕವಿದೆ.

ನಾಲ್ಕು ದಿನಗಳ ಯುದ್ಧ ವಿರಾಮದ ಬಳಿಕ ಗಾಝಾ ಮೇಲಿನ ಇಸ್ರೇಲ್ ದಾಳಿ ಮುಂದುವರಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಗಾಝಾದ ಇತ್ತೀಚಿನ ಪರಿಸ್ಥಿತಿ ಕುರಿತು ಬೆಂಜಮಿನ್ ನೆತನ್ಯಾಹು ಮತ್ತು ಜೋರ್ಡಾನ್‌ ರಾಜ ಅಬ್ದುಲ್ಲಾ II ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.

ಅ.7ರಿಂದ ಪ್ರಾರಂಭವಾದ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಗಾಝಾದ ಸುಮಾರು 17 ಸಾವಿರಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಇಲಾಖೆ ತಿಳಿಸಿದೆ. ಇಸ್ರೇಲ್‌ನಲ್ಲಿ 1,200 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಿಜ್ಬುಲ್ಲಾ ಎಂದರೆ ಯಾರು?

ಹರಾಕತ್ ಹಿಜ್ಬುಲ್ಲಾ ಅಲ್- ನುಜಾಬಾ (ನುಜಾಬಾ ಚಳವಳಿ) ವಿಶೇಷವಾಗಿ ಸಿರಿಯಾ ಮತ್ತು ಇರಾಕ್‌ನಲ್ಲಿ ಸಕ್ರಿಯವಾಗಿರುವ ಶಿಯಾ ಅರೆಸೈನಿಕ ಗುಂಪು . ಇಸ್ಲಾಮಿ ಬಂಡುಕೋರರ ವಿರುದ್ಧ ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಅನ್ನು ಬೆಂಬಲಿಸಲು ಅಕ್ರಂ ಅಲ್-ಕಾಬಿ ಇದನ್ನು 2013 ರಲ್ಲಿ ಸ್ಥಾಪಿಸಿದರು.

ಇದನ್ನೂ ಓದಿ: ಪೆಟ್ರೋಲ್ ಕಂಪನಿ ಮುಖಸ್ಥ ಹವಾಮಾನ ಶೃಂಗಸಭೆ ಉಸ್ತುವಾರಿ: ಗೊಂದಲಗಳ ನಡುವೆ COP28

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read