Homeಮುಖಪುಟಮಾಧ್ಯಮಗಳ ವಿರುದ್ಧ ಹರಿಹಾಯ್ದ ಧೋನಿ ಪತ್ನಿ ಸಾಕ್ಷಿ ಸಿಂಗ್‌

ಮಾಧ್ಯಮಗಳ ವಿರುದ್ಧ ಹರಿಹಾಯ್ದ ಧೋನಿ ಪತ್ನಿ ಸಾಕ್ಷಿ ಸಿಂಗ್‌

- Advertisement -
- Advertisement -

ಈ ರೀತಿಯ ಸೂಕ್ಷ್ಮ ಸಮಯಗಳಲ್ಲಿ ಸುಳ್ಳು ಸುದ್ದಿಗಳನ್ನು ನೀಡುವುದನ್ನು ನಿಲ್ಲಿಸುವಂತೆ ನಾನು ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ವಿನಂತಿಸುತ್ತೇನೆ! ನಿಮಗೆ ನಾಚಿಕೆಯಾಗಬೇಕು ! ಜವಾಬ್ದಾರಿಯುತ ಪತ್ರಿಕೋದ್ಯಮ ಎಲ್ಲಿ ಕಣ್ಮರೆಯಾಯಿತು ಎಂದು ನಾನು ಆಶ್ಚರ್ಯ ಪಡುತ್ತೇನೆ!

ಇದು ಭಾರತ ಕ್ರಿಕೆಟ್‌ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್‌ರವರ ಟ್ವೀಟ್‌. ಏಕೆ ಇವರು ಹೀಗೆ ಟ್ವೀಟ್‌ ಮಾಡಿದ್ದರು? ಇದ್ದಕ್ಕಿದ್ದಂತೆ ಮಾಧ್ಯಮಗಳ ಮೇಲೇಕೆ ಇವರಿಗೆ ಕೋಪ? ಅವರೇಕೆ ಯಾರನ್ನು ಸರಿಯಾಗಿ ಉಲ್ಲೇಖಿಸಿಲ್ಲ?

ಸಾಕ್ಷಿ ಸಿಂಗ್‌ರವರು ಯಾವ ವಿಷಯಕ್ಕೆ ಯಾರ ವಿರುದ್ಧ ಕೋಪ ತೀರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಯಬೇಕಾದರೆ ನೀವೊಮ್ಮೆ ಈ ಕೆಳಗಿನ ಟ್ವೀಟ್‌ಗಳನ್ನು ಗಮನಿಸಿ..

ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಮಹೇಂದ್ರ ಸಿಂಗ್‌ ಧೋನಿಯವರು ಒಂದು ಲಕ್ಷ ದೇಣಿಗೆ ಕೊಟ್ಟಿದ್ದಕ್ಕೆ ಹಲವಾರು ಜನ ಶ್ಲಾಘಿಸಿದರೆ, ಅದು ಬಹಳ ಕಡಿಮೆ ಮೊತ್ತ ಎಂದು ಬಹಳಷ್ಟು ಜನ ಧೋನಿಯನ್ನು ಟ್ರೋಲ್‌ ಮಾಡಿದ್ದರು. ಹಲವು ಎಕಾನಾಮಿಕ್ಸ್‌ ಟೈಮ್ಸ್‌ ಸೇರಿದಂತೆ ಹಲವು ಮಾಧ್ಯಮಗಳು ಸಹ ಧೋನಿ ಒಂದು ಲಕ್ಷ ದೇಣಿಗೆ ನೀಡಿದ್ದಾರೆ ಎಂತಲೇ ಬರೆದಿದ್ದವು. ಹಾಗಾಗಿ ಸಾಕ್ಷಿ ಸಿಂಗ್‌ರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೂ ಸಾಕ್ಷಿ ಸಿಂಗ್‌ ಧೋನಿಯವರು ಇಷ್ಟು ದೇಣಿಗೆ ಕೊಟ್ಟಿದ್ದಾರೆ ಅಥವಾ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿಲ್ಲ. ಆದರೆ ಕೆಲವು ಧೋನಿ ಅಭಿಮಾನಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಲುವಾಗಿ ಕ್ರೌಡ್ ಫಂಡಿಂಗ್ ವೆಬ್‌ಸೈಟ್ ಕೆಟ್ಟೊ ಮೂಲಕ ಪುಣೆಯ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‌ಗೆ ಮುಕುಲ್ ಮಾಧವ್ ಫೌಂಡೇಶನ್‌ಗೆ ಧೋನಿ ಒಂದು ಲಕ್ಷ ದೇಣಿಗೆ ನೀಡಿದ್ದಾರೆ. ಅದು ಕೇವಲ ಒಂದು ಸಂಸ್ಥೆಗೆ ಮಾತ್ರ ಅವರ ದೇಣಿಗೆಯಾಗಿದೆ. ಅದನ್ನು ಟೀಕೆ ಮಾಡುತ್ತಿರುವವರು ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ವಿಪರ್ಯಾಸ ಎಂದರೆ ಧೋನಿ ಮತ್ತು ಸಾಕ್ಷಿ ಸಿಂಗ್‌ 20 ಕೋಟಿ ದೇಣಿಗೆ ನೀಡಿದ್ದಾರೆಂದು ಅಭಿಮಾನಿಯೊಬ್ಬ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾನೆ. ಆದರೆ ಅದಕ್ಕೆ ಯಾವುದೇ ದಾಖಲೆಯನ್ನು ಆತ ನೀಡಿಲ್ಲ.

ಒಟ್ಟಿನಲ್ಲಿ ಕೊರೊನಾ ಕಾಲದಲ್ಲಿ ಸುಳ್ಳು ಸುದ್ದಿಗಳ ಕಾರುಬಾರು ಜೋರಾಗಿದೆ ಅಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...