Homeಮುಖಪುಟಮಹಿಳೆಯರ ದೇಹದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ

ಮಹಿಳೆಯರ ದೇಹದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ

- Advertisement -
- Advertisement -

ತಮಿಳುನಾಡು ಚುನಾವಣೆಗೆ ಪ್ರಚಾರ ಮಾಡುತ್ತಿದ್ದ ಡಿಎಂಕೆ ಮುಖಂಡರೊಬ್ಬರು ಮಹಿಳೆಯರ ದೇಹದ ಬಗ್ಗೆ ಮಾತನಾಡುತ್ತಾ, “ವಿದೇಶಿ ಹಸುಗಳ ಹಾಲಿನಿಂದಾಗಿ ಮಹಿಳೆಯರು ಬ್ಯಾರೆಲ್‌ಗಳಾಗಿ ಪರಿವರ್ತನೆ ಆಗುತ್ತಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 6 ರಂದು ನಡೆಯಲಿರುವ ಚುನಾವಣೆಗೆ ಕೊಯಮತ್ತೂರಿನಲ್ಲಿ ಪ್ರಚಾರ ನಡೆಸುತ್ತಿರುವಾಗ ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಡಿಎಂಕೆಯ ಹಿರಿಯ ನಾಯಕ ದಿಂಡಿಗಲ್ ಲಿಯೋನಿ ಈ ಅಸೂಕ್ಷ್ಮ ಹೇಳಿಕೆಯನ್ನು ನೀಡಿದ್ದಾರೆ.

ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡುತ್ತಾ, “ಹಲವು ಬಗೆಯ ಹಸುಗಳಿವೆ. ಹೊಲಗಳಲ್ಲಿ ನೀವು ವಿದೇಶಿ ಹಸುಗಳನ್ನು ನೋಡುತ್ತಿದ್ದೀರಿ. ಜನರು ವಿದೇಶಿ ಹಸುಗಳ ಕೆಚ್ಚಲಿಗೆ ಹಾಲು ಕರೆಯುವ ಯಂತ್ರವನ್ನು ಬಳಸಿ, ಒಂದು ಗಂಟೆಯಲ್ಲಿ 40 ಲೀಟರ್ ಹಾಲು ತೆಗೆಯುತ್ತಾರೆ. ವಿದೇಶಿ ಹಾಲು ಕುಡಿದ ಪರಿಣಾಮವಾಗಿ, ‘ಎಂಟರ ಆಕಾರ’ದಲ್ಲಿದ್ದ ಮಹಿಳೆಯರ ಸೊಂಟವು ಉಬ್ಬಿಕೊಂಡು ಬ್ಯಾರೆಲ್‌ಗಳಾಗಿ ಮಾರ್ಪಟ್ಟಿದೆ. ಎಂಟರ ಆಕಾರದಲ್ಲಿದ್ದಾಗ ಸೊಂಟದ ಮೇಲೆ ಆರಾಮವಾಗಿ ಕುಳಿತುಕೊಳ್ಳುತ್ತಿದ್ದ ಮಕ್ಕಳು, ಈಗ ಬ್ಯಾರೆಲ್‌‌ನಂತಾದ ಸೊಂಟದಿಂದ ಜಾರುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂತ್ರಸ್ತ ಯುವತಿ ನನ್ನನ್ನು ಭೇಟಿಯಾಗಿಲ್ಲ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ದಿಂಡಿಗಲ್ ಲಿಯೋನಿ ಅವರು ತಮ್ಮ ಪಕ್ಷದ ಅಭ್ಯರ್ಥಿ ಕಾರ್ತಿಕೇಯ ಶಿವಸೇನಾಪತಿ ಪರ ಪ್ರಚಾರ ಮಾಡುತ್ತಿದ್ದರು. ಅವರು ಸ್ಥಳೀಯ ತಳಿ ಜಾನುವಾರುಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಎನ್‌ಜಿಒ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಡಿಂಡಿಗಲ್ ಲಿಯೋನಿ ಅವರು ಈ ಮಾತನ್ನು ಆಡುತ್ತಿರುವಾಗ ಅದನ್ನು ತಡೆದು ಇನ್ನೊಬ್ಬ ವ್ಯಕ್ತಿಯು ಪಡಿತರ ವ್ಯವಸ್ಥೆಯಲ್ಲಿ ಸಿಗುವ ಸರ್ಕಾರಿ ಅಕ್ಕಿ ಕುರಿತು ಗಮನ ಸೆಳೆದರಾದರೂ ಅವರು, ಅವರು ಮತ್ತೆ ಮಹಿಳೆಯ ದೇಹದ ಕುರಿತು ಮಾತು ಮುಂದುವರೆಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಸ್ಪರ್ಧಿ ಪಕ್ಷಗಳು, ಡಿಎಂಕೆಯ ಹಿರಿಯ ನಾಯಕಿ, ಸಂಸದೆ ಕನಿಮೋಳಿ ಅವರನ್ನು ಉಲ್ಲೇಖಿಸಿ ಪಕ್ಷವು ಲಿಯೋನಿ ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.

ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ತಮಿಳುನಾಡು ಮತದಾನ ನಡೆಯಲಿದೆ.

ಇದನ್ನೂ ಓದಿ: ಮತ ಹಾಕಿದ್ದು TMCಗೆ, ವಿವಿಪ್ಯಾಟ್‌ BJP ಚಿನ್ಹೆ ತೋರಿಸುತ್ತಿದೆ!: ಚುನಾವಣಾ ಆಯೋಗಕ್ಕೆ TMC ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...