Homeಆರೋಗ್ಯಭಯಪಡಬೇಕಿಲ್ಲ, ಇದು ಕೇವಲ ಜ್ವರದಂತೆ ಅಷ್ಟೇ: ಕೊರೊನಾ ವೈರಸ್‌ನಿಂದ ಗುಣಮುಖನಾದವನ ಅನುಭವ

ಭಯಪಡಬೇಕಿಲ್ಲ, ಇದು ಕೇವಲ ಜ್ವರದಂತೆ ಅಷ್ಟೇ: ಕೊರೊನಾ ವೈರಸ್‌ನಿಂದ ಗುಣಮುಖನಾದವನ ಅನುಭವ

- Advertisement -
- Advertisement -

ಕೊರೊನಾ ವೈರಸ್‌ ಬಗ್ಗೆ ಭಯಪಡಬೇಕಾಗಿಲ್ಲ. ಆರೋಗ್ಯವಂತ ವ್ಯಕ್ತಿಗಳಿಗೆ ಚಿಕಿತ್ಸೆಯು ತುಂಬಾ ಸುಗಮವಾಗಿರುತ್ತದೆ ಎಂದು ದೆಹಲಿಯಲ್ಲಿ ಕೊರೊನಾ ಬಾಧಿತನಾಗಿ ಚೇತರಿಸಿಕೊಂಡ 45 ವರ್ಷದ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಸಫ್ದರ್‌ ಜಂಗ್ ಆಸ್ಪತ್ರೆಯಲ್ಲಿ ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಅಲ್ಲಿನ ಸೌಲಭ್ಯಗಳನ್ನು ಶ್ಲಾಘಿಸಿದ್ದಾರೆ. “ಭಯಪಡುವ ಅಗತ್ಯವಿಲ್ಲ. ಇದು ಸಾಮಾನ್ಯ ಜ್ವರದಂತೆ. ಆರೋಗ್ಯವಂತ ವ್ಯಕ್ತಿಯು ವೈದ್ಯರನ್ನು ತಲುಪಿದರೆ, ಸುಲಭದಲ್ಲಿ ಗುಣಪಡಿಸಬಹುದು. ನಮ್ಮ ಆರೋಗ್ಯ ವ್ಯವಸ್ಥೆಯು ಉತ್ತಮವಾಗಿದೆ ಎಂದಿದ್ದಾರೆ.

ಭಾನುವಾರದಂದು ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾದ ಅವರು ತಮ್ಮ ಅನುಭವವನ್ನು ವಿವರಿಸುತ್ತಾ, ಆಸ್ಪತ್ರೆಯ ವೈದ್ಯರ ತಂಡವು ತುಂಬಾ ಧೈರ್ಯ ತುಂಬಿದೆ. ಇನ್ನೂ 14 ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

“ನಾನು ಫೆಬ್ರವರಿ 25ರಂದು ಯುರೋಪಿನಿಂದ ಮರಳಿದೆ ಮತ್ತು ಮರುದಿನ ನನಗೆ ಜ್ವರ ಬಂತು. ವೈದ್ಯರ ಬಳಿಗೆ ಹೋದೆ. ಇದು ಗಂಟಲಿನ ಸೋಂಕು ಎಂದು ಹೇಳಿದ ಅವರು ನನಗೆ ಮೂರು ದಿನಗಳ ಕಾಲ ಔಷಧಿ ನೀಡಿದರು. ನಾನು 28 ರಂದು ಚೇತರಿಸಿಕೊಂಡೆ. ಆದರೆ 29 ರಂದು ಮತ್ತೆ ಜ್ವರ ಬಂತು. ಆಗ ನಾನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಹೋದೆ. ಮಾರ್ಚ್ 1 ರಂದು ಕೊರೊನಾ ಪರೀಕ್ಷೆ ಮಾಡಿಸಿದಾಗ ಅದು ಇರುವುದು ಖಚಿತವಾಯಿತು” ಎಂದು ಅವರು ಹೇಳಿದರು.

“ಪ್ರಾಮಾಣಿಕವಾಗಿ, ನನಗೆ ಸೋಂಕು ತಗುಲಿದೆ ಎಂದು ಅವರು ಹೇಳಿದ ಸಮಯದಲ್ಲಿ ಮಾತ್ರ ಇದು ಕಷ್ಟವೆನಿಸಿತ್ತು. ಆದರೆ ಮರುದಿನ ನನ್ನನ್ನು ಸ್ಥಳಾಂತರಿಸಿದ ಸಫ್ದರ್ ಜಂಗ್‌ ವೈದ್ಯರ ತಂಡವು ನನ್ನನ್ನು ನೋಡಲು ಬಂದಾಗ, ಅವರು ನನ್ನನ್ನು ತುಂಬಾ ಆರಾಮದಾಯಕವಾಗಿಸಿದರು ‘ಇದು ಗುಣಪಡಿಸಬಹುದು , ನೀವು ಆರೋಗ್ಯವಂತ ವ್ಯಕ್ತಿ ಮತ್ತು ಅದು ಕೇವಲ ಶೀತ ಮತ್ತು ಕೆಮ್ಮು ಇದ್ದಷ್ಟೇ ಮಾತ್ರ. ಹಾಗಾಗಿ ಅದು ಹೋಗುತ್ತದೆ. ಇದು ಸಾಮಾನ್ಯ ಶೀತ ಮತ್ತು ಕೆಮ್ಮುಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ‘ಎಂದು ಅವರು ಹೇಳಿದರು.

“ನಾನು ವೈದ್ಯನಲ್ಲ. ಆದರೆ ಇದು ಸಾಮಾನ್ಯ ಶೀತ ಮತ್ತು ಕೆಮ್ಮುಗಿಂತ ಸ್ವಲ್ಪ ಭಿನ್ನವಾಗಿತ್ತು. ನಾನು ಸಫ್ದರ್ಜಂಗ್‌ನ ಪ್ರತ್ಯೇಕ ವಾರ್ಡ್‌ನಲ್ಲಿದ್ದೆ, ಇದಕ್ಕಾಗಿ ಭಾರತ ಸರ್ಕಾರವು ಕಲ್ಪಿಸಿರುವ ಸೌಲಭ್ಯಗಳು ತುಂಬಾ ಉತ್ತಮವಾಗಿವೆ, ಇದು ನಾನು ನೋಡಿದ ಅತ್ಯುತ್ತಮವಾದ ಆಸ್ಪತ್ರೆಯಾಗಿದೆ. ನಾನು ಸ್ನಾನಗೃಹದೊಂದಿಗೆ ಖಾಸಗಿ ಕೋಣೆಯನ್ನು ಹೊಂದಿದ್ದೆ” ಎಂದು ಅವರು ಹೇಳಿದರು.

ನಗರದಲ್ಲಿ ವರದಿಯಾದ ಏಳು ಸಕಾರಾತ್ಮಕ ಪ್ರಕರಣಗಳಲ್ಲಿ ದೆಹಲಿ ನಿವಾಸಿಯೂ ಸೇರಿದ್ದಾರೆ. ಈ ಪೈಕಿ ಈ ಹಿಂದೆ COVID-19 ಖಾಯಿಲೆ ಇದೆಯೆಂದು ಪರೀಕ್ಷೆಯಿಂದ ಖಚಿತವಾಗಿ ಆಸ್ಪತ್ರೆಗಳಿಗೆ ದಾಖಲಾಗಿರುವ ಇಬ್ಬರು ವ್ಯಕ್ತಿಗಳು ಗುಣಮುಖರಾಗಿದ್ದು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...