Homeಮುಖಪುಟ2023ರಲ್ಲಿ ವರದಕ್ಷಿಣೆ ಪ್ರಕರಣಗಳು ಶೇ.14 ರಷ್ಟು ಹೆಚ್ಚಳ; 6,100ಕ್ಕೂ ಅಧಿಕ ಮಹಿಳೆಯರ ಸಾವು: ಎನ್‌ಸಿಆರ್‌ಬಿ ವರದಿ

2023ರಲ್ಲಿ ವರದಕ್ಷಿಣೆ ಪ್ರಕರಣಗಳು ಶೇ.14 ರಷ್ಟು ಹೆಚ್ಚಳ; 6,100ಕ್ಕೂ ಅಧಿಕ ಮಹಿಳೆಯರ ಸಾವು: ಎನ್‌ಸಿಆರ್‌ಬಿ ವರದಿ

- Advertisement -
- Advertisement -

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಸೆಪ್ಟೆಂಬರ್ 30ರಂದು ಪ್ರಕಟಿಸಿದ ವರದಿಯ ಪ್ರಕಾರ, ವರದಕ್ಷಿಣೆ ಸಂಬಂಧಿತ ಅಪರಾಧಗಳ ಪ್ರಕರಣಗಳು 2023ರಲ್ಲಿ ಶೇ. 14ರಷ್ಟು ಹೆಚ್ಚಾಗಿದ್ದು, ದೇಶದಾದ್ಯಂತ 15,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು ಒಂದು ವರ್ಷದಲ್ಲಿ 6,100ಕ್ಕೂ ಅಧಿಕ ಮಹಿಳೆಯರ ಸಾವುಗಳು ವರದಿಯಾಗಿವೆ.

ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ- 2023’ ವರದಿಯು 2023ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ 15,489 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ. ಈ ಕಾಯ್ದೆ ಅಡಿ 2022ರಲ್ಲಿ 13,479 ಮತ್ತು 2021ರಲ್ಲಿ 13,568 ಪ್ರಕರಣಗಳು ದಾಖಲಾಗಿದ್ದವು.

ಕಾಯ್ದೆಯಡಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 7,151 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಬಿಹಾರ (3,665) ಮತ್ತು ಕರ್ನಾಟಕ (2,322) ಇವೆ.

ಪಶ್ಚಿಮ ಬಂಗಾಳ, ಗೋವಾ, ಅರುಣಾಚಲ ಪ್ರದೇಶ, ಲಡಾಖ್ ಮತ್ತು ಸಿಕ್ಕಿಂ ಸೇರಿದಂತೆ ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗ 2023ರಲ್ಲಿ ಶೂನ್ಯ ವರದಕ್ಷಿಣೆ ಪ್ರಕರಣಗಳನ್ನು ವರದಿ ಮಾಡಿವೆ.

2023ರಲ್ಲಿ ವರದಕ್ಷಿಣೆ ಸಂಬಂಧಿತ ಪ್ರಕರಣಗಳಲ್ಲಿ ಒಟ್ಟು 6,156 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.

2,122 ಸಾವು ಪ್ರಕರಣಗಳೊಂದಿಗೆ ಇದರಲ್ಲೂ ಉತ್ತರ ಪ್ರದೇಶದ ಮೊದಲ ಸ್ಥಾನದಲ್ಲಿದೆ. 1,143 ಸಾವು ಪ್ರಕರಣಗಳೊಂದಿಗೆ ಬಿಹಾರ ಎರಡನೇ ಸ್ಥಾನದಲ್ಲಿದೆ. 2023ರಲ್ಲಿ ದೇಶದಾದ್ಯಂತ ನಡೆದ ಒಟ್ಟು ಕೊಲೆ ಪ್ರಕರಣಗಳಲ್ಲಿ 833 ಕೊಲೆಗಳಿಗೆ ವರದಕ್ಷಿಣೆ ಕಾರಣ ಎಂದು ವರದಿ ಹೇಳಿದೆ.

ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ, 2023ರಲ್ಲಿ 83,327 ಪ್ರಕರಣಗಳು ವಿಚಾರಣೆಗೆ ಬಂದಿದ್ದು, ಹಿಂದಿನ ವರ್ಷಗಳ 69,434 ಪ್ರಕರಣಗಳನ್ನು ಮುಂದುವರಿಸಲಾಗಿದೆ. ಇದೇ ವರ್ಷ ಕಾಯ್ದೆಯಡಿಯಲ್ಲಿ 22,316 ಪುರುಷರು ಮತ್ತು 4,838 ಮಹಿಳೆಯರು ಸೇರಿ 27,154 ಜನರನ್ನು ಬಂಧಿಸಲಾಗಿದೆ.

ಗುಜರಾತ್| ದಲಿತ ಯುವತಿಯನ್ನು ಗರ್ಬಾ ಕಾರ್ಯಕ್ರಮದಿಂದ ಹೊರಗೆ ಕಳಿಸಿ ಅವಮಾನ; ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ; ಅನ್ಯರು ಫಾರಂ-7 ಸಲ್ಲಿಸಿರುವುದು ಬಯಲು!

ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌)...

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: ಸಂಕಷ್ಟದಲ್ಲಿ ಲಕ್ಷಾಂತರ ‘Gen Z’ ಯುವಕರ ಮತದಾನದ ಹಕ್ಕು!

ಭಾರತೀಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಆಯುಕ್ತರ ನಡುವೆ ಉಂಟಾಗಿದೆ ಎನ್ನಲಾದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ದೇಶದ ನೂತನ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆ ಮಂದಗತಿಯಲ್ಲಿದೆ ಎಂಬ ವರದಿ...

‘ಅನ್ಯಾಯಯುತ’ ಚುನಾವಣೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಪ್ರಿಯಾಂಕಾ ಗಾಂಧಿ

ವಯನಾಡ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ವಿಚಾರದ ನಡುವೆಯೇ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿದೆ. ಮತದಾರರ...

48 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ; ಗ್ಯಾನೇಶ್ ಕುಮಾರ್‌ಗೆ ಸಿಜೆಪಿ ಎಚ್ಚರಿಕೆ

ದೇಶದ ಅತ್ಯಂತ ದೊಡ್ಡ ರಾಷ್ಟ್ರದ್ರೋಹಿ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), "ಮತದಾರರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿ ಅವರ...

11 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸಲಾಗದು: 24 ವಾರ ಮೀರಿದರೂ ಗರ್ಭಪಾತಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ಅನುಮತಿ

ಶ್ರೀನಗರ: ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವ 11 ವರ್ಷದ ಬಾಲಕಿಯನ್ನು ಕಾನೂನಿನಲ್ಲಿರುವ ನಿಗದಿತ ಅವಧಿಯನ್ನು ಮೀರಿದೆ ಎಂಬ ಕಾರಣಕ್ಕೆ ಗರ್ಭಧಾರಣೆಯನ್ನು ಪೂರ್ಣ ಅವಧಿಯವರೆಗೆ ಮುಂದುವರಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್...

6 ವರ್ಷದ ಮಲಮಗಳ ಅತ್ಯಾಚಾರ, ಹತ್ಯೆ ಪ್ರಕರಣ : ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದ ಸುಪ್ರೀಂ ಕೋರ್ಟ್

ಮಧ್ಯಪ್ರದೇಶದಲ್ಲಿ ತನ್ನ ಆರು ವರ್ಷದ ಮಲಮಗಳನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ವ್ಯಕ್ತಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಇಂದು (ಸೆ.24) ಬದಲಾಯಿಸಿದೆ. livelaw.in ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್...

ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ತನಿಖೆಗೆ ಸಮಿತಿ ರಚನೆ

ಬಿ.ಟೆಕ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಶಂಕಿತ ಆತ್ಮಹತ್ಯೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಬುಧವಾರ (ಸೆ.23) 10 ಸದಸ್ಯರ...

ಉತ್ತರ ಪ್ರದೇಶ| ಗೋಮಾಂಸ ಸಾಗಿಸುತ್ತಿರುವ ಶಂಕೆ; ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಗುಂಪು ಹಲ್ಲೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮೂವರು ಯುವಕರು ಮುಸ್ಲಿಂ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯಿಂದ ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಭಾನುವಾರ (ಸೆ. 20) ಈ...

ಟಿಎಂಸಿ ಹೆಸರು, ಚಿಹ್ನೆ ತಡೆ: ಅಂತಿಮ ನಿರ್ಧಾರದ ಕಾಲಮಿತಿ ಕೇಳಿದ ಸುಪ್ರೀಂ ಕೋರ್ಟ್; ಸೆ. 28ಕ್ಕೆ ವಿಚಾರಣೆ

ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮೂಲ ಹೆಸರು ಹಾಗೂ ‘ಜೋಡಾ ಘಾಸ್‌ಫುಲ್‌’ (Flowers & Grass) ಚುನಾವಣಾ ಚಿಹ್ನೆಯ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು...