Homeಮುಖಪುಟ2023ರಲ್ಲಿ ದೇಶದಾದ್ಯಂತ 24,678 ರೈಲ್ವೆ ಅಪಘಾತಗಳು, 21,803 ಜನರು ಸಾವು: ಎನ್‌ಸಿಆರ್‌ಬಿ ವರದಿ

2023ರಲ್ಲಿ ದೇಶದಾದ್ಯಂತ 24,678 ರೈಲ್ವೆ ಅಪಘಾತಗಳು, 21,803 ಜನರು ಸಾವು: ಎನ್‌ಸಿಆರ್‌ಬಿ ವರದಿ

- Advertisement -
- Advertisement -

2023ರಲ್ಲಿ ದೇಶದಲ್ಲಿ ನಡೆದ 24,678 ರೈಲ್ವೆ ಸಂಬಂಧಿತ ಅಪಘಾತಗಳಲ್ಲಿ 21,803 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಸಾವು ನೋವುಗಳು ವರದಿಯಾಗಿವೆ. 2023ರಲ್ಲಿ ನಡೆದ ಒಟ್ಟು ರೈಲ್ವೆ ಅಪಘಾತಗಳಲ್ಲಿ 56 ಪ್ರಕರಣಗಳು ಚಾಲಕನ ತಪ್ಪಿನಿಂದ ಉಂಟಾಗಿದ್ದರೆ, 43 ರೈಲು ಅಪಘಾತಗಳು ಕಳಪೆ ವಿನ್ಯಾಸ, ಹಳಿ ದೋಷಗಳು, ಸೇತುವೆ ಅಥವಾ ಸುರಂಗ ಕುಸಿತದಂತಹ ಯಾಂತ್ರಿಕ ದೋಷಗಳಿಂದ ಸಂಭವಿಸಿವೆ ಎಂದು ವರದಿ ವಿವರಿಸಿದೆ.

ರೈಲುಗಳಿಂದ ಜನರು ಬೀಳುವುದು, ಹಳಿಗಳಲ್ಲಿ ಜನರಿಗೆ ರೈಲು ಡಿಕ್ಕಿ ಹೊಡೆಯುವುದು ರೈಲ್ವೆ ಅಪಘಾತಗಳಲ್ಲಿ ಅತಿ ಹೆಚ್ಚು (ಶೇ.74.9ರಷ್ಟು ಅಥವಾ 24,678ರಲ್ಲಿ 18,480 ಪ್ರಕರಣಗಳು) ಸಂಭವಿಸಿದೆ. ರೈಲುಗಳಿಂದ ಬೀಳುವುದು ಅಥವಾ ಹಳಿಗಳಲ್ಲಿ ಜನರಿಗೆ ರೈಲುಗಳು ಡಿಕ್ಕಿ ಹೊಡೆಯುವುದರಿಂದ 15,878 ಜನರು ಸಾವನ್ನಪ್ಪಿದ್ದಾರೆ. ಇದು ರೈಲ್ವೆ ಅಪಘಾತಗಳ ಒಟ್ಟು ಸಾವುಗಳಲ್ಲಿ ಶೇ.72.8ರಷ್ಟು ಎಂದು ಎಂದು ವರದಿ ಬಹಿರಂಗಪಡಿಸಿದೆ.

ರೈಲಿನಿಂದ ಬೀಳುವುದು ಅಥವಾ ಹಳಿಯಲ್ಲಿ ರೈಲು ಡಿಕ್ಕಿ ಹೊಡೆದ ಒಟ್ಟು ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಶೇ. 29.8ರಷ್ಟು ಅಥವಾ 5,507 ಪ್ರಕರಣಗಳು ದಾಖಲಾಗಿವೆ.

ಒಟ್ಟು 24,678 ರೈಲ್ವೆ ಅಪಘಾತ ಪ್ರಕರಣಗಳು ವರದಿಯಾಗಿದ್ದು, 2022ಕ್ಕಿಂತ (23,139) 2023ರಲ್ಲಿ ಶೇ. 6.7ರಷ್ಟು ಹೆಚ್ಚಳವಾಗಿದೆ. ಅಪಘಾತಗಳ ಪರಿಣಾಮವಾಗಿ, 2023ರಲ್ಲಿ 3,014 ಜನರು ಗಾಯಗೊಂಡಿದ್ದಾರೆ ಮತ್ತು 21,803 ಜನರು ಸಾವನ್ನಪ್ಪಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ರೈಲ್ವೆ ಅಪಘಾತಗಳು (5,559 ಪ್ರಕರಣಗಳು) ವರದಿಯಾಗಿದ್ದು, ಉತ್ತರ ಪ್ರದೇಶ (ಶೇ. 13ರಷ್ಟು ಅಥವಾ 3,212 ಪ್ರಕರಣಗಳು) ಎರಡನೇ ಸ್ಥಾನದಲ್ಲಿದೆ.

ದತ್ತಾಂಶದ ವಿಶ್ಲೇಷಣೆಯು ಹೆಚ್ಚಿನ ರೈಲ್ವೆ ಅಪಘಾತಗಳು (3,771 ಪ್ರಕರಣಗಳು) ಸಂಜೆ 6 ರಿಂದ ರಾತ್ರಿ 9ರ ನಡುವೆ ಸಂಭವಿಸಿವೆ ಎಂದು ಬಹಿರಂಗಪಡಿಸುತ್ತದೆ. ಇದು ಒಟ್ಟು ರೈಲ್ವೆ ಅಪಘಾತಗಳ ಶೇ.15.3ರಷ್ಟಿದೆ. ಇನ್ನು ಶೇ.15ರಷ್ಟು ಅಥವಾ 3,693 ರೈಲ್ವೆ ಅಪಘಾತಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ನಡುವೆ ವರದಿಯಾಗಿವೆ.

ರೈಲ್ವೆ ಅಪಘಾತಗಳಿಗೆ ಚಾಲಕನ ತಪ್ಪು, ವಿಧ್ವಂಸಕ ಕೃತ್ಯ, ಸಿಗ್ನಲ್‌ಮನ್‌ಗಳ ದೋಷ, ಯಾಂತ್ರಿಕ ವೈಫಲ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಗರಿಷ್ಠ (ಶೇ.41.3 ಅಥವಾ 2,483 ಪ್ರಕರಣಗಳಲ್ಲಿ 1,025) ರೈಲ್ವೆ ಕ್ರಾಸಿಂಗ್ ಅಪಘಾತಗಳು ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ. 32.4ರಷ್ಟು ಅಥವಾ 805 ಪ್ರಕರಣಗಳು ಮತ್ತು ಮಧ್ಯಪ್ರದೇಶದಲ್ಲಿ ಶೇ.15.1 ಅಥವಾ 375 ಪ್ರಕರಣಗಳು) ವರದಿಯಾಗಿವೆ.

2023ರಲ್ಲಿ ರೈಲ್ವೆ ಕ್ರಾಸಿಂಗ್ ಅಪಘಾತಗಳಲ್ಲಿ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿದ ರಾಜ್ಯಗಳೆಂದರೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ. 2023ರಲ್ಲಿ ಈ ರಾಜ್ಯಗಳಲ್ಲಿ ಕ್ರಮವಾಗಿ ಶೇ. 44.9 ಅಥವಾ 2,242ರಲ್ಲಿ 1,007 ಸಾವುಗಳು), ಶೇ. 25.9 ಅಥವಾ 581 ಸಾವುಗಳು ಮತ್ತು ಶೇ. 16.7 ಅಥವಾ 375 ಸಾವುಗಳು ವರದಿಯಾಗಿವೆ.

2023ರಲ್ಲಿ ವರದಕ್ಷಿಣೆ ಪ್ರಕರಣಗಳು ಶೇ.14 ರಷ್ಟು ಹೆಚ್ಚಳ; 6,100ಕ್ಕೂ ಅಧಿಕ ಮಹಿಳೆಯರ ಸಾವು: ಎನ್‌ಸಿಆರ್‌ಬಿ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR : ಭಾಲ್ಕಿ, ಬೆಳಗಾವಿ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಅರ್ಹ ಮತಗಳ ಡಿಲೀಟ್‌ಗೆ ಯತ್ನ; ಅನ್ಯರು ಫಾರಂ-7 ಸಲ್ಲಿಸಿರುವುದು ಬಯಲು!

ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌)...

‘ದಿಮಾಗಿ ನಕ್ಸಲರು ಚುನಾವಣಾ ಆಯುಕ್ತರನ್ನು ಗುರಿಯಾಗಿಸಿಕೊಂಡಿದ್ದಾರೆ..’; ಗ್ಯಾನೇಶ್‌ ಕುಮಾರ್ ಬೆಂಬಲಕ್ಕೆ ನಿಂತ ಅಸ್ಸಾಂ ಸಿಎಂ

ಮುಖ್ಯ ಚುನಾವಣಾ ಆಯುಕ್ತರು ಇತರ ಚುನಾವಣಾ ಆಯುಕ್ತರನ್ನು ಸಂಪರ್ಕಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಯು ಇದು ರಾಜಕೀಯ ಪ್ರಚಾರ ಹಾಗೂ ವಿರೋಧ ಪಕ್ಷಗಳ...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: ಸಂಕಷ್ಟದಲ್ಲಿ ಲಕ್ಷಾಂತರ ‘Gen Z’ ಯುವಕರ ಮತದಾನದ ಹಕ್ಕು!

ಭಾರತೀಯ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಆಯುಕ್ತರ ನಡುವೆ ಉಂಟಾಗಿದೆ ಎನ್ನಲಾದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ, ದೇಶದ ನೂತನ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆ ಮಂದಗತಿಯಲ್ಲಿದೆ ಎಂಬ ವರದಿ...

‘ಅನ್ಯಾಯಯುತ’ ಚುನಾವಣೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು: ಪ್ರಿಯಾಂಕಾ ಗಾಂಧಿ

ವಯನಾಡ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ವಿಚಾರದ ನಡುವೆಯೇ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿ ಮತ್ತಷ್ಟು ತೀವ್ರಗೊಂಡಿದೆ. ಮತದಾರರ...

48 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ; ಗ್ಯಾನೇಶ್ ಕುಮಾರ್‌ಗೆ ಸಿಜೆಪಿ ಎಚ್ಚರಿಕೆ

ದೇಶದ ಅತ್ಯಂತ ದೊಡ್ಡ ರಾಷ್ಟ್ರದ್ರೋಹಿ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), "ಮತದಾರರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದ್ದಾರೆ" ಎಂದು ಆರೋಪಿಸಿ ಅವರ...

11 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸಲು ಒತ್ತಾಯಿಸಲಾಗದು: 24 ವಾರ ಮೀರಿದರೂ ಗರ್ಭಪಾತಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ಅನುಮತಿ

ಶ್ರೀನಗರ: ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವ 11 ವರ್ಷದ ಬಾಲಕಿಯನ್ನು ಕಾನೂನಿನಲ್ಲಿರುವ ನಿಗದಿತ ಅವಧಿಯನ್ನು ಮೀರಿದೆ ಎಂಬ ಕಾರಣಕ್ಕೆ ಗರ್ಭಧಾರಣೆಯನ್ನು ಪೂರ್ಣ ಅವಧಿಯವರೆಗೆ ಮುಂದುವರಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್...

6 ವರ್ಷದ ಮಲಮಗಳ ಅತ್ಯಾಚಾರ, ಹತ್ಯೆ ಪ್ರಕರಣ : ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದ ಸುಪ್ರೀಂ ಕೋರ್ಟ್

ಮಧ್ಯಪ್ರದೇಶದಲ್ಲಿ ತನ್ನ ಆರು ವರ್ಷದ ಮಲಮಗಳನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ವ್ಯಕ್ತಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಇಂದು (ಸೆ.24) ಬದಲಾಯಿಸಿದೆ. livelaw.in ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್...

ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ತನಿಖೆಗೆ ಸಮಿತಿ ರಚನೆ

ಬಿ.ಟೆಕ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಶಂಕಿತ ಆತ್ಮಹತ್ಯೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಬುಧವಾರ (ಸೆ.23) 10 ಸದಸ್ಯರ...

ಉತ್ತರ ಪ್ರದೇಶ| ಗೋಮಾಂಸ ಸಾಗಿಸುತ್ತಿರುವ ಶಂಕೆ; ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಗುಂಪು ಹಲ್ಲೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮೂವರು ಯುವಕರು ಮುಸ್ಲಿಂ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯಿಂದ ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಭಾನುವಾರ (ಸೆ. 20) ಈ...

ಟಿಎಂಸಿ ಹೆಸರು, ಚಿಹ್ನೆ ತಡೆ: ಅಂತಿಮ ನಿರ್ಧಾರದ ಕಾಲಮಿತಿ ಕೇಳಿದ ಸುಪ್ರೀಂ ಕೋರ್ಟ್; ಸೆ. 28ಕ್ಕೆ ವಿಚಾರಣೆ

ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮೂಲ ಹೆಸರು ಹಾಗೂ ‘ಜೋಡಾ ಘಾಸ್‌ಫುಲ್‌’ (Flowers & Grass) ಚುನಾವಣಾ ಚಿಹ್ನೆಯ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು...