Homeಮುಖಪುಟಕುಡಿಯುವ ನೀರು ಪೋಲು; ಬೆಂಗಳೂರಿನ 22 ಕುಟುಂಬಗಳಿಗೆ ತಲಾ ₹5,000 ದಂಡ ವಿಧಿಸಿದ ಜಲ...

ಕುಡಿಯುವ ನೀರು ಪೋಲು; ಬೆಂಗಳೂರಿನ 22 ಕುಟುಂಬಗಳಿಗೆ ತಲಾ ₹5,000 ದಂಡ ವಿಧಿಸಿದ ಜಲ ಮಂಡಳಿ

- Advertisement -
- Advertisement -

ಕಾರುಗಳನ್ನು ತೊಳೆಯುವುದು ಮತ್ತು ತೋಟಗಾರಿಕೆಯಂತಹ ಅನಗತ್ಯ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುತ್ತಿದ್ದ 22 ಕುಟುಂಬಗಳ ವಿರುದ್ಧ ಕ್ರಮ ಕೈಗೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಒಟ್ಟು ₹1.1 ಲಕ್ಷ ದಂಡವನ್ನು ಸಂಗ್ರಹಿಸಿದೆ.

ರಾಜ್ಯದಲ್ಲಿ ತೀವ್ರ ನೀರಿನ ಅಭಾವದ ನಡುವೆ ಮಂಡಳಿ ಹೊರಡಿಸಿದ ಜಲ ಸಂರಕ್ಷಣಾ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ಕುಟುಂಬಕ್ಕೆ ₹5,000 ದಂಡ ವಿಧಿಸಲಾಗಿದೆ ಎನ್ನಲಾಗಿದೆ.

ಜಲ ಮಂಡಳಿ ಅಧಿಕಾರಿಗಳ ಪ್ರಕಾರ, ಮಾರ್ಚ್ 22 ರಂದು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಮತ್ತು ಮಾರ್ಚ್ 24 ರ ವೇಳೆಗೆ 22 ಉಲ್ಲಂಘನೆಗಳ ಪ್ರಕರಣಗಳನ್ನು ದಾಖಲಿಸಲಾಗಿದೆ. ಸ್ಥಳದಲ್ಲೇ ದಂಡವನ್ನು ಸಂಗ್ರಹಿಸಿ ರಸೀದಿಗಳನ್ನು ನೀಡಲಾಯಿತು. ನೀರು ಪೋಲು ಪಾಡಿದವರ ವಿರುದ್ಧ ಹೆಚ್ಚಿನ ದೂರುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚ್ ಎರಡನೇ ವಾರದಲ್ಲಿ, ಬಿಡಬ್ಲ್ಯೂಎಸ್‌ಎಸ್‌ಬಿ ನಗರದಲ್ಲಿ ಕುಡಿಯುವ ನೀರಿನಿಂದ ಸ್ವಚ್ಛಗೊಳಿಸುವುದು, ತೋಟಗಾರಿಕೆ, ನಿರ್ಮಾಣ ಕೆಲಸ, ಕಾರಂಜಿಗಳ ಕಾರ್ಯಾಚರಣೆ, ಮನರಂಜನಾ ಉದ್ದೇಶಗಳು, ಸಿನಿಮಾ ಹಾಲ್‌ಗಳು, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿತು. ಮಾಲ್‌ಗಳಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿ ಇತರ ಚಟುವಟಿಕೆಗಳನ್ನು ನಿರ್ಬಂಧ ವಿಧಿಸಿದೆ.

ಹೋಳಿ ಆಚರಣೆಗಳು ಸಮೀಪಿಸುತ್ತಿರುವುದರಿಂದ, ಪೂಲ್ ಪಾರ್ಟಿಗಳು ಮತ್ತು ಮಳೆ ನೃತ್ಯಗಳಿಗೆ ಕಾವೇರಿ ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ತಡೆಯುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಬೆಂಗಳೂರು ನಿವಾಸಿಗಳಲ್ಲಿ ಮನವಿ ಮಾಡಿದೆ. ಹೆಚ್ಚುವರಿಯಾಗಿ, ನೀರಿನ ಬಳಕೆಯನ್ನು ತಗ್ಗಿಸಲು ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಕೈಗಾರಿಕೆಗಳಲ್ಲಿ ಏರೇಟರ್‌ಗಳನ್ನು ಅಳವಡಿಸಲು ಮಂಡಳಿಯು ಪ್ರೋತ್ಸಾಹಿಸಿದೆ.

ಇದನ್ನೂ ಓದಿ; ಶಿವಮೊಗ್ಗ: ತಂದೆ-ತಾಯಿ ಜಗಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡನಾ 16 ವರ್ಷದ ಬಾಲಕ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...