Homeಮುಖಪುಟಡಾರ್ಜಿಲಿಂಗ್: ಸ್ವಪಕ್ಷದ ಅಭ್ಯರ್ಥಿ ವಿರುದ್ಧ ಬಿಜೆಪಿ ಶಾಸಕ ಸ್ಪರ್ಧೆ

ಡಾರ್ಜಿಲಿಂಗ್: ಸ್ವಪಕ್ಷದ ಅಭ್ಯರ್ಥಿ ವಿರುದ್ಧ ಬಿಜೆಪಿ ಶಾಸಕ ಸ್ಪರ್ಧೆ

- Advertisement -
- Advertisement -

ಬಿಜೆಪಿಯ ಕುರ್ಸಿಯಾಂಗ್ ಶಾಸಕ ಬಿಷ್ಣು ಪ್ರಸಾದ್ ಶರ್ಮಾ ಅವರು ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಾಜು ಬಿಸ್ತಾ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ  ಘೋಷಿಸಿದ್ದಾರೆ.

ತಂತ್ರವಾಗಿ ಸ್ಪರ್ಧಿಸುವಾಗ ಬಿಜೆಪಿಯಲ್ಲೇ ಇರುತ್ತೇನೆ,  ಪಕ್ಷವು ಬಯಸಿದ ಯಾವುದೇ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಹುದು ಆದರೆ ಅವರು ಪಕ್ಷದೊಂದಿಗಿನ ಸಂಬಂಧವನ್ನು ಸ್ವಂತವಾಗಿ ಕಡಿದುಕೊಳ್ಳುವ ಉದ್ದೇಶವನ್ನು ಹೊಂದಿಲ್ಲ. ಬಿಸ್ತಾ ನಮ್ಮ ಅಭ್ಯರ್ಥಿ ಅಲ್ಲ. ನಮಗೆ ಹೊರಗಿನವರು ಬೇಡ. ಬಿಜೆಪಿಗೆ ಯಾವುದೇ ಮಣ್ಣಿನ ಮಗ ಸಿಗದಿರುವುದು ದುರದೃಷ್ಟಕರ ಎಂದು ಶರ್ಮಾ ಹೇಳಿದ್ದಾರೆ.

ಡಾರ್ಜಿಲಿಂಗ್ ಬೆಟ್ಟಗಳಿಂದ ಬಂದವರಲ್ಲದ ವ್ಯಕ್ತಿಯೊಬ್ಬರು ಬಿಜೆಪಿಯಿಂದ ನಾಮನಿರ್ದೇಶನಗೊಂಡಿರುವುದು ಇದು ನಾಲ್ಕನೇ ಬಾರಿಯಾಗಿದೆ ಮತ್ತು ಅಂತಹ ಅಭ್ಯರ್ಥಿಗಳು ಜನರ ನಿಜವಾದ ಸಮಸ್ಯೆಗಳ ಬಗ್ಗೆ ಧ್ವನಿ  ಎತ್ತುವುದಿಲ್ಲ. ಇದು ಡಾರ್ಜಿಲಿಂಗ್ ಬೆಟ್ಟಗಳಲ್ಲಿರುವ 17 ಲಕ್ಷ ಮತದಾರರಿಗೆ ಮಾಡಿದ ಕಪಾಳಮೋಕ್ಷವಾಗಿದೆ.

ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯದ ರಚನೆಯ ಧ್ವನಿಯನ್ನು ಬೆಂಬಲಿಸುವ ಕುರ್ಸಿಯಾಂಗ್‌ನ ಬಿಜೆಪಿ ಶಾಸಕರು, 2009ರಿಂದ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಐತಿಹಾಸಿಕ ಯಶಸ್ಸನ್ನು ಎತ್ತಿ ತೋರಿಸಿದ್ದಾರೆ. ಆದರೆ ಡಾರ್ಜಿಲಿಂಗ್ ಬೆಟ್ಟಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಅಭ್ಯರ್ಥಿಗಳನ್ನು ಪಕ್ಷವು ಸತತವಾಗಿ ಆಯ್ಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ, ರಾಜು ಬಿಸ್ತಾ ಅವರನ್ನು ಮರು ನಾಮನಿರ್ದೇಶನ ಮಾಡುವ ನಿರ್ಧಾರ ಅಂತಿಮವಾಗಿದ್ದು, ಈ ವಿಷಯದಲ್ಲಿ ಪಕ್ಷವು ಒಗ್ಗಟ್ಟಾಗಿದೆ. ಬಿಸ್ತಾ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಶರ್ಮಾ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಗೂರ್ಖಾಲ್ಯಾಂಡ್‌ನ ಬೇಡಿಕೆಯು ಒಂದು ಶತಮಾನದಷ್ಟು ಹಿಂದಿನದು ಆದರೆ ರಾಜ್ಯತ್ವ ಚಳುವಳಿಯು 1986 ರಲ್ಲಿ ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ (GNLF) ನಾಯಕ ಸುಭಾಷ್ ಘೀಸಿಂಗ್ ನೇತೃತ್ವದಲ್ಲಿ ವೇಗವನ್ನು ಪಡೆಯಿತು. ಈ ಚಳವಳಿಯು ಹಲವಾರು ಸಾವುಗಳಿಗೆ ಕಾರಣವಾಯಿತು ಮತ್ತು 1988ರಲ್ಲಿ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ರಚನೆಯೊಂದಿಗೆ ಉತ್ತುಂಗಕ್ಕೇರಿತು. ಈ ಪ್ರದೇಶವು ಅದರ ನಂತರ ಹಲವಾರು ಹಿಂಸಾತ್ಮಕ ಆಂದೋಲನಗಳಿಗೆ ಸಾಕ್ಷಿಯಾಗಿದೆ.

ಇದನ್ನು ಓದಿ: ‘ಅಲ್ಪಸಂಖ್ಯಾತರನ್ನು ರಕ್ಷಿಸುವವರಿಗೆ ಮತ ನೀಡಿ’: ಸಿರೊ ಮಲಬಾರ್ ಚರ್ಚ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...