Homeಮುಖಪುಟಹಿಬಾಬ್‌ಗೆ ನಿರಾಕರಣೆ: ಕಾಲೇಜು ಮಂಡಳಿಯ ಕಿರುಕುಳಕ್ಕೆ ಬೇಸತ್ತು ಪ್ರಾಂಶುಪಾಲೆ ರಾಜೀನಾಮೆ

ಹಿಬಾಬ್‌ಗೆ ನಿರಾಕರಣೆ: ಕಾಲೇಜು ಮಂಡಳಿಯ ಕಿರುಕುಳಕ್ಕೆ ಬೇಸತ್ತು ಪ್ರಾಂಶುಪಾಲೆ ರಾಜೀನಾಮೆ

- Advertisement -
- Advertisement -

ಹಿಜಾಬ್‌ ಪ್ರಕರಣ ಕಾಡ್ಗಿಚ್ಚಿನಂತೆ ಅಸಹನೆಯನ್ನು ಸೃಷ್ಟಿಸುತ್ತಿದ್ದು, ಶಿಕ್ಷಕಿಯರನ್ನು ಕಾಡುತ್ತಿರುವ ಬೆಳವಣಿಗೆಗಳಾಗುತ್ತಿವೆ. ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದ ಮುಸ್ಲಿಂ ಪ್ರಾಂಶುಪಾಲೆಯೊಬ್ಬರು ಕಿರುಕುಳ ತಾಳಲಾರದೆ ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ.

ಕಿರುಕುಳ ಧರಿಸಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ಪಾಲ್ಘಾರ್‌ ಜಿಲ್ಲೆಯ ಕಾನೂನು ಕಾಲೇಜಿನ ಪ್ರಾಂಶುಪಾಲೆ ಬತ್ತುಲ್‌ ಹಮ್ಮಿದ್‌ ರಾಜೀನಾಮೆ ಸಲ್ಲಿಸಿದ್ದಾರೆ. ಹಿಜಾಬ್‌ ಧರಿಸುವ ಉಂಟಾಗಿರುವ ಉಸಿರುಗಟ್ಟಿಸುವ ಭಾವನೆಯಿಂದಾಗಿ ಹುದ್ದೆಯನ್ನು ತೊರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

2019ರ ಜುಲೈನಲ್ಲಿ ವಿರಾರ್​​ನಲ್ಲಿರುವ ವಿವಾ ಕಾನೂನು ಕಾಲೇಜ್​ ಪ್ರಾಂಶುಪಾಲೆಯಾಗಿ ಬತ್ತುಲ್ ಹಮೀದ್​ ನೇಮಕವಾಗಿದ್ದರು.

ತಮ್ಮ ರಾಜೀನಾಮೆ ಪತ್ರದಲ್ಲಿ ಬತ್ತುಲ್‌ ಹಮ್ಮಿದ್‌, “ಹಿಜಾಬ್‌ ಧರಿಸುವುದು ಹಿಂದೆ ಯಾವತ್ತೂ ಸಮಸ್ಯೆಯಾಗಿರಲಿಲ್ಲ. ಆದರೆ ಕರ್ನಾಟಕದಲ್ಲಿ ವಿವಾದದ ಬಳಿಕ ಇದೀಗ ದೊಡ್ಡದಾಗಿ ಪರಿಣಾಮ ಬೀರುತ್ತಿವೆ. ತನ್ನೊಂದಿಗೆ ಸಹಕರಿಸದಂತೆ ಇತರ ಸಿಬ್ಬಂದಿಗೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದ್ದು, ನಮ್ಮ ಆಪ್ತ ಸಹಾಯಕರು ಕೂಡ ದಿನನಿತ್ಯದ ಕೆಲಸದಲ್ಲಿ ಸಹಾಯ ಮಾಡುತ್ತಿಲ್ಲ” ಆರೋಪಿಸಿದ್ದಾರೆ.

ಆದರೆ ಕಾಲೇಜು ಆಡಳಿತ ಮಂಡಳಿ ಆರೋಪಗಳನ್ನು ತಳ್ಳಿಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಥಾಣೆ ಜಿಲ್ಲೆಯ ಭಿವಂಡಿಯ ಶಾಲೆಯೊಂದರ ಇಬ್ಬರು ಶಿಕ್ಷಕಿಯರನ್ನು ಹಿಜಾಬ್‌ ಧರಿಸಿ ಕೆಲಸಕ್ಕೆ ಬಾರದಂತೆ ತಡೆದಿದ್ದ ಘಟನೆ ಈ ಹಿಂದೆ ವರದಿಯಾಗಿತ್ತು. ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದರು.

ಇದನ್ನೂ ಓದಿರಿ: ಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿದ ಭಕ್ತಾದಿಗಳು!

ಹಿಜಾಬ್ ಧರಿಸಿದರೆ ಪರೀಕ್ಷೆಗೆ ಅನುಮತಿ ನಿರಾಕರಣೆ ಕುರಿತು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಿಜಾಬ್ ಧರಿಸಿದರೆ ಎಸ್ಸೆಸೆಲ್ಸಿ ಪರೀಕ್ಷೆಗೆ ಅವಕಾಶವಿಲ್ಲ ಎಂದಿರುವ ಕರ್ನಾಟಕ ರಾಜ್ಯ ಸರಕಾರದ ಆದೇಶದ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ತಂದೆ-ತಾಯಿ ಇರಬಹುದು, ಸರಕಾರ ಇರಬಹುದು ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ.

ಮಕ್ಕಳು ತಪ್ಪು ಮಾಡಬಹುದು, ಅವರಿಗೆ ಹಠ ಇರಬಹುದು. ಹಾಗಂತ ಅವರ ಭವಿಷ್ಯ ಹಾಳಾಗಲು ಉತ್ತೇಜನ ಕೊಡಬಾರದು. ಕೂತುಕೊಂಡು ಅವರತ್ರ ಮಾತಾಡಿ ಮನವೊಲಿಸಬೇಕು. ಧರ್ಮಗುರುಗಳು, ತಂದೆ-ತಾಯಂದಿರು, ಶಿಕ್ಷಕರನ್ನು ಬಳಸಿ, ಅವರಿಗೂ ಮನದಟ್ಟು ಮಾಡಿಕೊಟ್ಟು, ಮಕ್ಕಳಿಗೆ ತಿಳಿ ಹೇಳಿಸಬೇಕು. ಏಕೆಂದರೆ ಮಕ್ಕಳು ಶಿಕ್ಷಕರ ಮಾತನ್ನು ಗೌರವ ಕೊಟ್ಟು ಕೇಳುತ್ತಾರೆ. ತಾಯಿ ಮೊದಲ ಗುರು. ಶಿಕ್ಷಕರು ಎರಡನೇ ಗುರು. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕೋ ಅದನ್ನು ಮಾಡಬೇಕು ಎಂದು ತಿಳಿಸಿದ್ದಾರೆ.

ಶಾಲಾ ಮಕ್ಕಳಿಗೆ ದುಪ್ಪಟ್ಟ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಬಗ್ಗೆ ಮಾತನಾಡಿದ ಅವರು, ಸಂವಿಧಾನ ಏನೆಲ್ಲಾ ಹೇಳುತ್ತಾದೋ, ಅಧಿಕಾರ, ಅವಕಾಶ ನೀಡಿದೆಯೋ ಅದರ ಪರವಾಗಿ ಕಾಂಗ್ರೆಸ್ ಇರುತ್ತದೆ. ನಮಗೆ ಅದೇ ಬೈಬಲ್, ಅದೇ ಖುರಾನ್, ಅದೇ ಭಗವದ್ಗೀತೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ ಎಂದು ತಿಳಿಸಿದ್ದಾರೆ.

ಈಗ ಕೋರ್ಟ್ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ. ಕೆಲವರು ಅದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟಗೂ ಹೋಗಬಹುದು. ಇವತ್ತಲ್ಲ ನಾಳೆ ಜಡ್ಜ್ಮೆಂಟ್ ಬಂದು ಎಲ್ಲ ಸರಿಯಾಗುತ್ತದೆ. ನ್ಯಾಯಾಲಯದ ತೀರ್ಪು ಸರಿ ಇಲ್ಲ ಅಂತ ನಾನು ಹೇಳೋಕೆ ರೆಡಿ ಇಲ್ಲ. ತೀರ್ಪು ತೀರ್ಪೆ. ಯಾರು ಬೇಕಾದರೂ ಹೋಗಿ ಅವರ ವಿಚಾರವನ್ನು ಮಂಡನೆ ಮಾಡಬಹುದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ಉಡುಪಿ: ಹಿಜಾಬ್‌ ತೀರ್ಪಿನ ಬಳಿಕ 400ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ತರಗತಿಯಿಂದ ಹೊರಕ್ಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಜೀವನ ಪರ್ಯಂತ ಹೀಗೇ ಇದ್ದು ಬಿಡಿ ತಾಯಿ ,ಮತ್ತೇ ಕಾಲೇಜಿಗೆ ಹೋಗಬೇಡಿ ತಾಯಿ ,ಉಡುಪಿ ಹಿಜಾಬ್ ವಿದ್ಯಾರ್ಥಿಗಳಿಗೂ ಹೀಗೇ ಮಾಡಲೂ ಹೇಳಿ ,ನಗರ ನಕ್ಸಲರೇ

  2. Bihind Hijab issue is …there is RSS which well plans Bjp election religious issues , Next year Karnataka elections are there , So from Now only devide Hindu and Muslims . So Muslims please over look any of such issues , take Intelligent decision … Always keep in mind Majahub Nahi sikatha Aapas me bair rakhana..

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...