Homeಅಂತರಾಷ್ಟ್ರೀಯನೇಪಾಳದಲ್ಲಿ ಭೂಕಂಪ: ಆರು ಮಂದಿ ಮೃತ | ದೆಹಲಿಯಲ್ಲೂ ಕಂಪನದ ಅನುಭವ!

ನೇಪಾಳದಲ್ಲಿ ಭೂಕಂಪ: ಆರು ಮಂದಿ ಮೃತ | ದೆಹಲಿಯಲ್ಲೂ ಕಂಪನದ ಅನುಭವ!

- Advertisement -
- Advertisement -

ನೇಪಾಳದ ದೋಟಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕಂಪದ ಪರಿಣಾಮ ಆರು ಜನರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದಿಂದಾಗಿ ಎಂಟು ವಸತಿ ಕಟ್ಟಡಗಳು ಮತ್ತು ಪೊಲೀಸ್ ಪೋಸ್ಟ್ ಕುಸಿದಿದ್ದು, ಭೂಕಂಪವೂ 6.3 ತೀವ್ರತೆಯಿತ್ತು ಎಂದು ಎಎನ್‌ಐ ವರದಿ ಮಾಡಿದೆ.

ಭೂಕಂಪದಿಂದಾಗಿ ಉಂಟಾದ ಮನೆ ಕುಸಿತದಿಂದಾಗಿ ಅಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೋಟಿಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಭೋಲಾ ಭಟ್ಟ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸ್ಥಳೀಯ ಸಮಯ ಬೆಳಿಗ್ಗೆ 2.12 ಕ್ಕೆ, ಭಾರತೀಯ ಕಾಲಮಾನ 1.57 ಕ್ಕೆ ಭೂಕಂಪ ಉಂಟಾಗಿದೆ. ಭಾರತದ ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ ಭೂಕಂಪದ ಆಳವು 10 ಕಿಲೋಮೀಟರ್ ಆಗಿತ್ತು. ದೋಟಿ ಜಿಲ್ಲೆಯ ಖಪ್ತದ್ ರಾಷ್ಟ್ರೀಯ ಉದ್ಯಾನವನ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.

ಗಂಭೀರ ಗಾಯಗೊಂಡ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫಣೀಂದ್ರ ಪೊಖರೆಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ; ಸೂಪರ್‌ಸಾನಿಕ್ ಬೂಮ್! ಭೂಕಂಪನವಲ್ಲ; ಸ್ಫೋಟವಲ್ಲ; ಏನಿದು ಶಬ್ದ? 

ಪೂರ್ವಿಚೌಕಿ ಪ್ರದೇಶದಲ್ಲಿ ಕುಸಿದ ಮನೆಯೊಂದರ ಅವಶೇಷಗಳಲ್ಲಿ ಮೂವರು ಸಿಲುಕಿದ್ದಾರೆ ಎಂದು ನಂಬಲಾಗಿದೆ ಎಂದು ನೇಪಾಳ ಸೇನೆಯ ವಕ್ತಾರ ನಾರಾಯಣ್ ಸಿಲ್ವಾಲ್ ಹೇಳಿದ್ದಾರೆ. ಸೇನೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ದೆಹಲಿ ಮತ್ತು ಸುತ್ತಮುತ್ತ ಇರುವ ಇತರ ನಗರಗಳಲ್ಲಿ ಕೂಡ ಬುಧವಾರ ತೀವ್ರವಾದ ಕಂಪನಗಳು ಅನುಭವಕ್ಕೆ ಬಂದಿವೆ ಎಂದು ವರದಿಯಾಗಿದ್ದು, ಯಾವುದೇ ಜೀವ ಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಭೂಮಿ ಕಂಪಿಸಿರುವ ಬಗ್ಗೆ ಹಲವಾರು ಜನರು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...